ಪ್ರಚಲಿತ

ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಪ್ರಧಾನಿ ಮೋದಿ

ಜಗತ್ತಿಗೆ ಅಹಿಂಸೆಯನ್ನು ಸಾರಿದ ಅನೇಕ ಮಹಾತ್ಮರು ಹುಟ್ಟಿದ ನಾಡು ಭಾರತ. ಯೋಗ ಸೇರಿದಂತೆ ಹಲವಾರು ಮಾದರಿ ವಿಷಯಗಳನ್ನು ಜಾಗಕ್ಕೆ ತಿಳಿಸಿಕೊಟ್ಟ ಕೀರ್ತಿ ಭಾರತೀಯರದ್ದು ಎಂದರೆ ಅದು ಅತಿಶಯವಾಗಲಾರದು.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದೆಹಲಿಯಲ್ಲಿ ನಡೆದ ಭಗವಾನ್ ಮಹಾವೀರರ 2,550 ನೇ ನಿರ್ವಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಪ್ರಪಂಚದ ಹಲವಾರು ದೇಶಗಳು ಯುದ್ಧದ ಮನಸ್ಥಿತಿಗೆ‌ ಜಾರುತ್ತಿವೆ. ಇಂತಹ ಹಿಂಸಾತ್ಮಕ ಸನ್ನಿವೇಶದಲ್ಲಿ ಭಾರತದ ತೀರ್ಥಂಕರರ ಬೋಧನೆಗಳು ಮತ್ತು ಅಂಹಿಸೆಯ ಸಂದೇಶಗಳು ಹೆಚ್ಚು ಪ್ರಸ್ತುತವಾಗುತ್ತಿವೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿ ಪ್ರತ್ಯೇಕತಾ ಭಾವನೆಗಳು ಬೇರನ್ನು ಬಿಡುತ್ತಿರುವ‌ ಈ ಸಂದರ್ಭದಲ್ಲಿ ಭಾರತ ವಿಶ್ವಕ್ಕೆ ಬಂಧುವಿನ ಸ್ಥಾನದಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ.

ಪ್ರಸ್ತುತ ಪ್ರಪಂಚ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಎಲ್ಲಾ ಸಂಕಷ್ಟಗಳಿಗೂ ಸತ್ಯ ಮತ್ತು ಅಹಿಂಸೆಯ ತತ್ವಗಳೇ ಸೂಕ್ತ ಪರಿಹಾರದಂತೆ ಕಾಣುತ್ತಿದೆ. ಈಗ ಜಗತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಿದ್ದು, ಜಗತ್ತಿಗೆ ನೆರವು ನೀಡುವ ಸ್ನೇಹಿತನ ಹಾಗೆ ಪರಿಣಮಿಸಿದೆ. ಭಾರತದ ಸಾಂಸ್ಕೃತಿಕ ವರ್ಚಸ್ಸು ಈ ನಿಟ್ಟಿನಲ್ಲಿ ಮಹತ್ವದ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಅವರು ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ದೇಶದ ಸ್ಥಿತಿಗತಿಯ ಬಗೆಗೂ ಮಾತನಾಡಿದ್ದಿ, ಭಾರತವು 2014 ರಲ್ಲಿ ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹತಾಶಾ ಮನೋಭಾವದಲ್ಲಿ ಇತ್ತು. ಆದರೆ ಕಳೆದ ಹತ್ತು ವರ್ಷಗಳ ನಮ್ಮ ಆಡಳಿತದಲ್ಲಿ ದೇಶ ಬದಲಾವಣೆಯ ಪರ್ವಕ್ಕೆ ಒಳಗಾಗಿದೆ. ಈಗ ನಾವು ದೇಶದಲ್ಲಿ ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಹೆಚ್ಚಿನ ಉತ್ತೇಜನ ನೀಡುತ್ತಿದ್ದೇವೆ. ಹಾಗೆಯೇ ಯೋಗ, ಆಯುರ್ವೇದ ಚಿಕಿತ್ಸೆ ಗೂ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Tags

Related Articles

Close