ಪ್ರಚಲಿತ

ಕಾಂಗ್ರೆಸ್ ಜನ ಹಿತ ಮರೆತಿದೆ: ಪ್ರಧಾನಿ ಮೋದಿ

ದೇಶದ ಸ್ವಲ್ಪ ಸಮಾಜವನ್ನು ಹಾಳು ಮಾಡಿದ ಕೀರ್ತಿ ಕಾಂಗ್ರೆಸ್‌ ಪಕ್ಷದ್ದು ಎನ್ನುವುದು ಎಲ್ಲರಿಗೂ ಸಂಗೀತ. ಭ್ರಷ್ಟಾಚಾರವೇ ಮನೆ ದೇವರು ಎಂಬಂತಿರುವ ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ‌.

ಕರ್ನಾಟಕದ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್ ಪಕ್ಷ ನಾಡಪ್ರಭು ಕೆಂಪೇಗೌಡ ಅವರ ಆಶಯಗಳನ್ನು ಹಾಳು ಮಾಡಿದೆ. ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಸುದ್ದಿ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದವರ ಗಮನ ಇರುವುದು ಭ್ರಷ್ಟಾಚಾರದ ಕಡೆಗೆ. ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಆಧುನಿಕ ತಂತ್ರಜ್ಞಾನ ವಿರೋಧಿಯಾಗಿದೆ. ಅವರು ಹಿಂದೆ ಆರ್, ಜನ್ ಧನ್ ಖಾತೆ ಎಲ್ಲವನ್ನೂ ವಿರೋಧಿಸಿದ್ದರು. ಕೊರೋನಾ ಅವಧಿಯಲ್ಲಿ ಅವರು ಕೊರೋನಾ ಲಸಿಕೆಯನ್ನು ಸಹ ವಿರೋಧಿಸಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಸೋಲಿಸುವುದೇ ಇಂಡಿ ಒಕ್ಕೂಟದ ಪ್ರಮುಖ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷವು ಯುವ ಜನತೆಯ ವಿರೋಧಿ, ಹೂಡಿಕೆಯ ವಿರೋಧಿ ಸಹ ಹೌದು. ಕಾಂಗ್ರೆಸ್‌ ಉದ್ಯಮ ವಿರೋಧಿ ಪಕ್ಷ ಎಂದೂ ಅವರು ಆರೋಪಿಸಿದ್ದಾರೆ. ಜನತೆ ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಕಾಂಗ್ರೆಸ್ ಅವಧಿಯಲ್ಲಿ ಬಾಂಬ್ ಸ್ಪೋಟ ನಡೆಯುತ್ತದೆ. ಯುವತಿಯರ ಕೊಲೆ ನಡೆಯುತ್ತಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ರೈತ ವಿರೋಧಿ ಕಾಂಗ್ರೆಸ್ ಪಕ್ಷ ರೈತರಿಗೆ ಅನ್ಯಾಯ ಎಸಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ರೈತರ ಉತ್ಪಾದನೆಯನ್ನು ಶೇಖರಣೆ ಮಾಡಲು ಗೋದಾಮು ನಿರ್ಮಾಣ ಮಾಡುತ್ತಿದೆ. ನಾವು ರಾಗಿಯನ್ನು ವಿಶ್ವದ ಹಲವಾರು ರಾಷ್ಟ್ರಗಳಿಗೆ ಪರಿಚಯ ಮಾಡಿದ್ದೇವೆ. ರಾಜ್ಯದ ಜನರ ಕನಸುಗಳ ಈಡೇರಿಕೆಗೆ ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಲಿದೆ. ಗರಿಷ್ಟ ಮತದಾನ ಮಾಡಿ, ಬಿಜೆಪಿ ಗೆಲ್ಲಿಸುವಂತೆಯೂ ಅವರು ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.

ಬುಲೆಟ್‌ ರೈಲು ಕರ್ನಾಟಕಕ್ಕೂ ಬರಲಿದೆ. ಹೊಸ ಉದ್ಯೋಗವಕಾಶಗಳು ಹುಟ್ಟಲಿವೆ. ಡಿಜಿಟಲ್ ಇಂಡಿಯಾದ ಮೂಲಕವೂ ನಾವು ಉದ್ಯೋಗ ಸೃಷ್ಟಿ ಮಾಡಿದ್ದೇವೆ. ಕಾಂಗ್ರೆಸ್ ಇದನ್ನೆಲ್ಲಾ ಮಾಡಲು ಸಾಧ್ಯವಿತ್ತೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಬಡವರ ಆರೋಗ್ಯ ಸುಧಾರಿಸಲು, ಅವರಿಗೆ ವೈದ್ಯಕೀಯ ನೆರವು ನೀಡಲು ನಮ್ಮ ಸರ್ಕಾರ ಆಯುಷ್ಮಾನ್ ಕಾರ್ಡ್ ಜಾರಿಗೆ ತಂದಿದೆ. ಈ ಯೋಜನೆ ಹಿರಿಯ ನಾಗರಿಕರ ವರೆಗೂ ವಿಸ್ತರಿಸಿದೆ. ಭಾರತೀಯ ಜನತಾ ಪಕ್ಷವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ ನಡೆದಿದ್ದು, ಹಳದಿ ಲೈನ್ ಸಹ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.

ಕಾಂಗ್ರೆಸ್ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಜನರ ಹಿತವನ್ನು ‌ಸಂಪೂರ್ಣ ಮರೆತಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close