ದೇಶಪ್ರಚಲಿತ

ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ಕತ್ತಲಿನಿಂದ ಬೆಳಕಿನೆಡೆಗೆ ಬಂದ ವಿಶ್ವಪ್ರಸಿದ್ದ ದ್ವೀಪಕ್ಕೆ ಮೋದಿಯ ಕೊಡುಗೆ ಏನು ಗೊತ್ತೇ?? “ಅಚ್ಛೇ ದಿನ್ ಆನೇವಾಲೆ ಹೈ ” !!

“ಅಭಿವೃದ್ಧಿ” ಮತ್ತು “ಅಚ್ಛೇ ದಿನ್ ಆನೇವಾಲೆ ಹೈ” (ಒಳ್ಳೆಯ ದಿನಗಳು ಬರಲಿವೆ) ಎಂಬ ಬಿಜೆಪಿಯ ಚುನಾವಣಾ ಘೋಷಣೆಗಳ ನಿಜವಾದ ಅರ್ಥ ಅನಾವರಣಗೊಳ್ಳುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಿದ ನಂತರ ದೇಶದ ಆರ್ಥಿಕ ವ್ಯವಸ್ಥೆ ಉತ್ತಮಗೊಂಡಿರುವುದೇ ಇದಕ್ಕೆ ಒಂದು ಉತ್ತಮ ನಿದರ್ಶನ ಎಂದು ಹೇಳಬಹುದು. ಅಷ್ಟೇ ಅಲ್ಲದೇ ಈಡೀ ದೇಶವು ಕತ್ತಲೆಯಿಂದ ಬೆಳಕಿನೆಡೆಗೆ ಪಯಾಣ ಬೆಳೆಸುತ್ತಿರುವುದಲ್ಲದೇ, ಭಾರತವು ವಿಶ್ವದ ಏಳನೇಯ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿಯೂ ಹೊರಹೊಮ್ಮುತ್ತಿದೆ!!

ಈಗಾಗಲೇ ದೀನ್ ದಯಾಳ್ ಉಪಧ್ಯಾಯ ಯೋಜನೆಯಡಿ ಪ್ರಾರಂಭಿಸಲಾದ ಗ್ರಾಮೀಣ ವಿದ್ಯುತೀಕರಣ ಅಭಿಯಾನದಲ್ಲಿ ಬೆಳಕು ಪಡೆದ ನೂರಾರು ಗ್ರಾಮಗಳು ಕತ್ತಲಿನಿಂದ ಬೆಳಕಿನಡೆಗೆ ಬಂದಿದ್ದು, ದೇಶದ ಮೂಲೆ ಮೂಲೆಗೂ ತಲುಪುತ್ತಿದೆ ಕೂಡ!! ಆದರೆ ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದ್ವೀಪಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಕೂಡ ಕತ್ತಲಿನಿಂದ ಬೆಳಕಿನೆಡೆಗೆ ಬರಬೇಕಾದರೆ ಮೋದಿ ಸರ್ಕಾರ ಬರಬೇಕಾಯಿತು.

ಹೌದು…. ವಿಶ್ವ ಪ್ರಸಿದ್ಧ ಎಲೆಫೆಂಟಾ ಗುಹೆಗಳನ್ನು ಹೊಂದಿರುವ, ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಘರಪುರಿ ದ್ವೀಪಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದೇಶಾದ್ಯಂತ ವಿದ್ಯುತ್ ತಲುಪಿರದ ಗ್ರಾಮಗಳಿಗೆ ವಿದ್ಯುತ್ ಒದಗಿಸಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಸಹಯೋಗದಲ್ಲಿ ದ್ವೀಪಕ್ಕೆ ವಿದ್ಯುತ್ ಕಲ್ಪಿಸಲಾಗಿದೆ.

ಈಗಾಗಲೇ ಉತ್ತರಪ್ರದೇಶದ ಲಕ್ನೋದಿಂದ ಕೇವಲ 25 ಕಿಲೋ ಮಿಟರ್ ದೂರದಲ್ಲಿರುವ ಮೋಹನ್‍ಲಾಲ್ ಗಂಜ್‍ನಲ್ಲಿರುವ ಸಣ್ಣ ಹಳ್ಳಿ ಶೀತಲ್‍ಖೇರಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ವಿದ್ಯುತನ್ನೇ ಕಂಡಿರಲಿಲ್ಲ. ಅಷ್ಟೇ ಅಲ್ಲದೇ, ವಿದ್ಯುತ್ ದೀಪ, ಟಿವಿ, ಪ್ರಿಡ್ಜ್, ಫ್ಯಾನ್ ಇವೆಲ್ಲವೂ ಈ ಹಳ್ಳಿಗರ ಪಾಲಿಗೆ ಗಗನ ಕುಸುಮವಾಗಿಯೇ ಇತ್ತು. ಆದರೆ ಈಗ ಅದೆಲ್ಲವನ್ನು ಹೊಂದುವ ಭಾಗ್ಯ ಅವರಿಗೆ ನರೇಂದ್ರ ಮೋದಿ ಸರ್ಕಾರದಿಂದ ದೊರೆತಿದ್ದು, ಉತ್ತರಪ್ರದೇಶದಲ್ಲಿ ಒಟ್ಟು 3 ಸಾವಿರ ಹಳ್ಳಿಗಳನ್ನು ಗುರಿಯಾಗಿರಿಸಿ ಗ್ರಾಮೀಣ ವಿದ್ಯುತೀಕರಣ ಅಭಿಯಾನವನ್ನೂ ಆರಂಭಿಸಲಾಗಿತ್ತು. ಅಷ್ಟೇ ಅಲ್ಲದೆ, ಈ ಅಭಿಯಾನ ಆರಂಭಗೊಂಡ 100 ದಿನಗಳಲ್ಲೇ ಒಟ್ಟು 1,900 ಹಳ್ಳಿಗಳು ವಿದ್ಯುತೀಕರಣ ಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

ಆದರೆ ಇದೀಗ ವಿಶ್ವಪ್ರಸಿದ್ಧ ಎಲೆಫೆಂಟಾ ಗುಹೆಗಳನ್ನು ಹೊಂದಿರುವ, ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಘರಪುರಿ ದ್ವೀಪಕ್ಕೆ ವಿದ್ಯುತ್ತನ್ನು ಕಲ್ಪಿಸಬೇಕಾದರೆ ನರೇಂದ್ರ ಮೋದಿ ಸರ್ಕಾರ ಬರಬೇಕಾಯಿತು. ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಕೂಡ ಯಾವುದೇ ಸರ್ಕಾರ ಮಾಡದ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದ್ದು, ವಿಶ್ವಪ್ರಸಿದ್ಧ ದ್ವೀಪಕ್ಕೆ ಬೆಳಕನ್ನು ನೀಡಿದ ಹಿರಿಮೆ ಇವರದ್ದಾಗಿದೆ.

ದೇಶದ ವಾಣಿಜ್ಯ ನಗರಿ ಮುಂಬೈನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ದ್ವೀಪವು ಇತಿಹಾಸ ಪ್ರಸಿದ್ಧ ದ್ವೀಪವಾಗಿದ್ದಲ್ಲದೇ, ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿರುವ ಸುಂದರವಾದ ದ್ವೀಪಗಳಲ್ಲಿ ಒಂದಾಗಿದೆ. ಆದರೆ ಕತ್ತಲಿನಲ್ಲಿ ಇದರ ಸೌಂದರ್ಯವನ್ನು ಕಾಣಲಾಗದೇ ಅದೆಷ್ಟೋ ಪ್ರವಾಸಿಗರು ಒದ್ದಾಡುತ್ತಿದ್ದು, ಇದೀಗ ಸರ್ಕಾರದ ವಿಶೇಷ ಕಾಳಜಿ, ಸರ್ವರಿಗೂ ವಿದ್ಯುತ್ ದೊರೆಯಬೇಕು ಎಂಬ ಉದ್ದೇಶದಿಂದ ಈ ದ್ವೀಪಕ್ಕೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಹಾಗಾಗಿ ಈ ದ್ವೀಪಕ್ಕೆ ವಿದ್ಯುತ್ ಪೂರೈಸಲು ಸಮುದ್ರದಲ್ಲಿ 7.5 ಕಿಲೋ ಮೀಟರ್ ಉದ್ದದ ಕೇಬಲ್ ಸಂಪರ್ಕ ನಿರ್ಮಿಸಲಾಗಿದ್ದು, ಯಾರೋ ಕೂಡ ಮಾಡದ ಸಾಧನೆಯನ್ನು ಇದೀಗ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಭಾರತದಲ್ಲಿ ಇಷ್ಟು ವರ್ಷಗಳ ಕಾಲ ನೆಹರೂ ಮನೆತನ ದೇಶವಾಳಿದರೂ ಕೂಡ ಈಡೀ ಗ್ರಾಮಗಳಿಗೆ ಬಿಡಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದೇ ಹೇಳಲಾಗುವ ‘ಎಲಿಫಾಂಟಾ ಗುಹೆ’ಗಳಿಗೆ ವಿದ್ಯುತ್ ಪೂರೈಕೆಯನ್ನೂ ಮಾಡಲು ಇವರಿಗೆ ಸಾಧ್ಯವಾಗಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ವರ್ಷಗಳಲ್ಲಿ ಅದೆಷ್ಟೋ ಗ್ರಾಮಗಳಿಗೆ ಬೆಳಕನ್ನು ಚೆಲ್ಲುವ ಕಾರ್ಯವನ್ನು ಮಾಡಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಗ್ರೇಟ್!!

ಗೇಟ್ ವೇ ಆಫ್ ಇಂಡಿಯಾದಿಂದ 12 ಕಿಲೋ ಮೀಟರ್ ಗಳಷ್ಟು ದೂರದಲ್ಲಿ ಎಲಿಫಾಂಟಾ ಗುಹೆಯನ್ನು ಇಲ್ಲಿದ್ದ ಪರ್ವತಗಳನ್ನು ಕತ್ತರಿಸುವ ಮೂಲಕ ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಈ ದ್ವೀಪದಲ್ಲಿ ಸುಮಾರು 7 ಗುಹೆಗಳನ್ನು ನಾವು ಕಾಣಬಹುದಾಗಿದ್ದು, ಈ ಗುಹೆಯಲ್ಲಿ ನಟರಾಜ ಗಮನಾರ್ಹ ಚಿತ್ರಗಳು ಇವೆಯಲ್ಲದೇ, ಅರ್ಧನೇರಿಶ್ವರ, ಶಿವ, ರಾವಣ ಮತ್ತಿತ್ತರರು ದೇವತೆಗಳ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದಿರುವ ಈ ದ್ವೀಪದಲ್ಲಿರುವ ಗುಹೆಗಳು ಹಲವು ವರ್ಷಗಳಿಂದಲೂ ಕೂಡ ಬಾನಂಗಳದಲ್ಲಿರುವ ಸೂರ್ಯ ಮಾಯವಾದರೆ ಇತ್ತ ದ್ವೀಪದಲ್ಲಿರುವ ಅತ್ಯದ್ಭುವಾಗಿರುವ ಈ ಎಲಿಫೆಂಟಾ ಗುಹೆಗಳಿಗೂ ಕೂಡ ಕತ್ತಲೆ ಆವರಿಸುತ್ತಿತ್ತು. ಆದರೆ ಮೋದಿ ಸರ್ಕಾರವು ಕೈಗೊಂಡ ದಿಟ್ಟ ನಿರ್ಧಾರದಿಂದ ಇಂದು ಈ ಗುಹೆಗೆ ವಿದ್ಯುತ್ ಪೂರೈಕೆಗೊಳ್ಳುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ.

“ಇದೊಂದು ಐತಿಹಾಸಿಕ ದಿನ ವಾಗಿದ್ದು, ದೊಡ್ಡಮಟ್ಟದ ಕೇಬಲ್ ಗಳನ್ನು ಅರೇಬಿಯನ್ ಸಮುದ್ರದಲ್ಲಿ ವಿದ್ಯುತ್ ಪೂರೈಸಲು ಬಳಸಿರುವುದು ಇದೇ ಮೊದಲ ಬಾರಿಗೆ” ಎಂದು ನವಿಕರಿಸಬಹುದಾದ ಇಂಧನ ಮೂಲಗಳ ಸಚಿವ ಚಂದ್ರಶೇಖರ್ ಬಾವಾಂಕುಲೆ ತಿಳಿಸಿದ್ದಾರೆ. ಬೃಹತ್ ಲಯವನ್ನು ಬಳಸಿಕೊಂಡು ಅರಬ್ಬಿ ಸಮುದ್ರದಲ್ಲಿ ವಿದ್ಯುತ್ ಸರಬರಾಜು ಮಾಡಿರುವುದು ಇದೇ ಮೊದಲಾಗಿದ್ದು, ಸರ್ಕಾರದ ಈ ಕ್ರಮ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ. ಅಷ್ಟೇ ಅಲ್ಲದೇ, ವಿಶ್ವ ಪಾರಂಪರಿಕ ತಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇನ್ನು ಮುಂದೆ ಮತ್ತಷ್ಟು ಹೆಚ್ಚಲಿದ್ದು, ಮೋದಿ ಸರ್ಕಾರದ ಈ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ದ್ವೀಪದ ವಿದ್ಯುದ್ದೀಕರಣ ವೆಚ್ಚವು 25 ಕೋಟಿ ರೂಪಾಯಿಗಳಷ್ಟಾಗಲಿದ್ದು, ಈ ಯೋಜನೆ ಪೂರ್ಣಗೊಳ್ಳಲು ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಮೂರು ಹಳ್ಳಿಗಳಲ್ಲಿ ಆರು ಬೀದಿ ದೀಪಗಳ ಗೋಪುರವೂ 13 ಮೀಟರ್ ಇದ್ದು, ಆರು ಶಕ್ತಿಶಾಲಿ ಎಲ್ ಇಡಿ ಬಲ್ಪ್ ಗಳನ್ನು ಅಳವಡಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿಯ ಪ್ರಾದೇಶಿಕ ನಿರ್ದೇಶಕ ಸತೀಶ್ ಕರ್ಪೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ 200 ಮನೆಗಳಿದ್ದು, ಕೆಲವು ಗ್ರಾಹಕರಿಗೆ ವಿದ್ಯುತ್ ಸಂಪರ್ಕಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ವಿಶ್ವಪಾರಂಪರಿಕ ತಾಣಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರಲಿದ್ದು, ರಾಜ್ ಬಂದೇರ್, ಮೋರಾ ಬಂದೇರ್, ಶೆಟ್ ಬಂದೇರ್ ಗ್ರಾಮಗಳಿಗೆ ಅನುಕೂಲವಾಗಲಿದೆ. ಮೂರು ದಶಕಗಳಿಂದ ಎಲೆಫೆಂಟಾ ಗುಹೆಗಳು ಮತ್ತು ಮೂರು ಗ್ರಾಮಗಳಲ್ಲಿ ಜನರೇಟರ್ ನಿಂದ ವಿದ್ಯುತ್ ಬಳಸಲಾಗುತ್ತಿದ್ದು, ಇದೀಗ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರೆ ನರೇಂದ್ರ ಮೋದಿ ಸರ್ಕಾರವು ನೀಡಿದ ಈ ಕೊಡುಗೆ ಅಚ್ಚೇ ದಿನ್ ಅಲ್ಲದೇ ಮತ್ತೇನು ಅಲ್ವೇ??

– ಅಲೋಖಾ

Tags

Related Articles

Close