ಪ್ರಚಲಿತ

ಪ್ರಭು ಶ್ರೀರಾಮ ಭಾರತದ ಆತ್ಮ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ರಾಷ್ಟ್ರ ಮಂದಿರ ಕಳೆದ ಜನವರಿ 22 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿದೆ. ಬಾಲ ಕಾಮ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆದ ದಿನದಂದು ಇಡೀ ದೇಶಕ್ಕೆ ದೇಶವೇ ಹಬ್ಬ ಆಚರಿಸಿತ್ತು. ಜಾತಿ, ಮತ, ಧರ್ಮಗಳನ್ನು ‌ಮೀರಿ ಪ್ರಭು ಶ್ರೀರಾಮ ಅಯೋಧ್ಯೆಯ ಮಂದಿರವನ್ನು ಸೇರಿದ್ದು ಕೋಟ್ಯಾಂತರ ಭಕ್ತರ ಪಾಲಿಗೆ ಸಂಭ್ರಮವನ್ನು ತಂದುಕೊಟ್ಟಿತ್ತು ಎನ್ನುವುದು ನಿರ್ವಿವಾದ.

ಇನ್ನು ಐನೂರು ವರ್ಷಗಳ ಹಿಂದಿನಿಂದ ಶ್ರೀರಾಮ ಜನ್ಮ ಭೂಮಿಯ ಹಕ್ಕು ಹಿಂದೂಗಳಿಂದ ತಪ್ಪಿ ಹೋಗಿತ್ತು‌. ಅಲ್ಪಸಂಖ್ಯಾತರು ಅಯೋಧ್ಯೆಯ ಜನ್ಮ ಭೂಮಿಯಲ್ಲಿ ಮಂದಿರವನ್ನು ಕೆಡಹಿ, ಮಸೀದಿಯನ್ನು ಕಟ್ಟಿದ್ದರು. ಇದನ್ನು 1990 ರ ಅವಧಿಯಲ್ಲಿ ರಾಮಭಕ್ತರು ಮಸೀದಿಗೆ ಹಾನಿ ಮಾಡಿ, ಅಲ್ಲಿ ಮತ್ತೆ ಮಂದಿರವಾಗಬೇಕು ಎಂದು ಪಟ್ಟು ಹಿಡಿದು ಕುಳಿತಿದ್ಜರು‌. ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿತ್ತು.

ಪ್ರಧಾನಿ ಮೋದಿ ಅವರು ಹತ್ತು ವರ್ಷಗಳ ಹಿಂದೆ ತನ್ನ ಸರ್ಕಾರ ರಚನೆಯಾದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಕೇಂದ್ರದಲ್ಲಿ ಪ್ರಧಾನಿಯಾಗಿ ಮೋದಿ ಅವರಿಗೆ ಆಡಳಿತ ದೊರೆೊಕಿತು. ಅವರು ಚುನಾವಣಾ ಪೂರ್ವದಲ್ಲಿ ನುಡಿದಂತೆ ಅಯೋಧ್ಯೆಯಲ್ಲಿ ಮತ್ತೆ ರಾಮನನ್ನು ಕಾಣುವ ಭಾಗ್ಯವನ್ನು ಬಹುಕೋಟಿ ಭಕ್ತರಿಗೆ, ಜೊತೆಗೆ ವಿರೋಧಿಗಳಿಗೂ ಮಾಡಿ‌ ಕೊಟ್ಟಿದ್ದಾರೆ.

ಸಂಸತ್ತಿನಲ್ಲಿ ರಾಮ ಮಂದಿರ ಪ್ರಸ್ತಾವನೆಗೆ ಸಂಬಂಧಿಸಿದ ವಿಚಾರ ಚರ್ಚೆಗೆ ಬಂದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಅಯೋಧ್ಯೆಯಲ್ಲಿ ಪ್ರಭು ರಾಮನ ಆಗಮನವಾದ ಬಳಿಕ ದೇಶ ಹೊಸ ಪ್ರಯಾಣವನ್ನು ಆರಂಭ ಮಾಡಿದೆ ಎಂದು ಹೇಳಿದ್ದಾರೆ.

ಮುಂದಿನ ಹತ್ತು ಸಾವಿರಕ್ಕೂ ಅಧಿಕ ವರ್ಷಗಳ ಕಾಲ ನೆ ನರಿ ಆಡುವ ಇತಿಹಾಸ 2024 ರ ಜನವರಿ 22 ರಂದು ನಡೆದಿದೆ. ರಾಮನ ಹೊರತಾದ‌ ದೇಶವನ್ನು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವಿಷಯ ಅದೃಷ್ಟದ ವಿಷಯವಾಗಿದ್ದು, ಈ ಅದೃಷ್ಟ ನಮ್ಮ ಪೀಳಿಗೆಗೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ ಜನ್ಮಭೂಮಿಗೆ ಸಂಬಂಧಿಸಿದ ಹಾಗೆ ಸುಮಾರು ಐನೂರು ವರ್ಷಗಳ ಬಳಿಕ ಕಾನೂನು ಹೋರಾಟ ಪೂರ್ಣವಾಗಿದೆ. ಪ್ರಧಾನಿ ಮೋದಿ ಅವರ ಕಾಲದಲ್ಲಿ ಈ ಪುಣ್ಯ ಕಾರ್ಯದ ಕನಸು ನನಸಾಗಬೇಕಿತ್ತು. ಆಗಿದೆ. ಪ್ರಭು ಶ್ರೀರಾಮನ ಮಂದಿರದ ವಿಷಯ ಧರ್ಮಾತೀತವಾದದ್ದು. ಶ್ರೀರಾಮ ಈ ದೇಶದ ಆತ್ಮ. ರಾಮಾಯಣವನ್ನು ಹಲವು ದೇಶಗಳು ಒಪ್ಪಿಕೊಂಡಿವೆ. ಈ ಸಂದರ್ಭದಲ್ಲಿ ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ಲಾ ಯೋಧರನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

Tags

Related Articles

Close