ಪ್ರಚಲಿತ

ಹೆಂಡತಿ, ಸತ್ತ ಮಗನನ್ನು ನೆನೆದು ಮೋದಿ ವಿರುದ್ಧ ಬೊಬ್ಬಿರಿದ ಪ್ರಕಾಶ್ ರೈ..! ರಾಹುಲ್ ತಂದೆ ಗುಂಡೇಟಿಗೆ ಬಲಿಯಾದರೆ ಪ್ರಶ್ನಿಸುವಂತಿಲ್ವಾ? ಪ್ರಕಾಶ್ ರೈ ಕ್ರೈಸ್ತನೋ ಹಿಂದೂನೋ..?

 ಸದಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ತೆಗಳುವ ಪ್ರಕಾಶ್ ರೈ ಇದೀಗ ಕಾಂಗ್ರೆಸ್ ಪಕ್ಷದ ಪರವಾಗಿ ಅಧಿಕೃತ ಪ್ರಚಾರಕ್ಕೆ ಇಳಿದಿದ್ದಾರೆ. ಕಳೆದೊಂದು ವರ್ಷದಿಂದ ಕಾಂಗ್ರೆಸ್ ಏಜೆಂಟನಂತೆ ಗುರುತಿಸಿಕೊಂಡು ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಸಂಬದ್ದ ಮಾತುಗಳನ್ನು ಆಡುತ್ತಾ ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದ ಖಳನಟ ಪ್ರಕಾಶ್ ರೈ ಇದೀಗ ಮತ್ತೆ ಕಾಂಗ್ರೆಸ್ ಪರ ಪ್ರಚಾರಕ್ಕಿಳಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ. 
ಬಿಜೆಪಿಗರು ಹೆಂಡತಿ ಮಗನ ಹಿಂದೆ ಬಿದ್ದಿದ್ದಾರೆಂದ ರೈ..!
 ನನ್ನ ಹೆಂಡತಿ ಹಾಗೂ ಸತ್ತ ಮಗನ ಬಗ್ಗೆ ಭಾರತೀಯ ಜನತಾ ಪಕ್ಷದವರು ಮಾತನಾಡುತ್ತಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಶ್ ರೈ ತನ್ನ ಮಗನ ಸಾವು ಸಂಭವಿಸಿದಾಗ ತನ್ನ ಹೆಂಡತಿಯ ಕಣ್ಣೀರನ್ನು ಒರೆಸುವುದು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿ ಹೋಗಿದ್ದ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಆಪಾದಿಸುತ್ತಿರುತ್ತಾರೆ. ಹೀಗಾಗಿ ಬಿಜೆಪಿಗರು ನನ್ನ ಹೆಂಡತಿ ಹಾಗೂ ಸತ್ತ ಮಗನ ಹಿಂದೆ ಬಿದ್ದಿದ್ದಾರೆ ಎಂದು ಬೊಬ್ಬಿರಿದಿದ್ದಾರೆ. ಬಿಜೆಪಿಗರಿಗೆ ನನ್ನ ಹೆಂಡತಿ ಮಗನ ವಿಷಯ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ಈ ಪ್ರಕಾಶನಿಗೆ ಮೋದಿ ಹಾಗೂ ಯೋಗಿಯ ವ್ಯಯಕ್ತಿಕ ವಿಚಾರ ಯಾಕೆ ಎನ್ನುವ ಪ್ರಶ್ನೆಯನ್ನೂ ಎತ್ತಬೇಕಾಗುತ್ತದೆ ಎಂದೂ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದರು.
 “ಭಾರತೀಯ ಜನತಾ ಪಕ್ಷದವರು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನಾನು ಕ್ರೈಸ್ತ ಎಂದೆಲ್ಲಾ ಹೇಳುತ್ತಿದ್ದಾರೆ. ಇದರಿಂದ ನನ್ನ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ” ಎಂದು ಹೇಳಿದ್ದಾರೆ. ಪ್ರಕಾಶ್ ಅನೇಕ ಬಾರಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ನಾಸ್ತಿಕತೆಯನ್ನು ಮೆರೆದವರು. ಹೀಗಾಗಿ ಅವರನ್ನು ಹಿಂದೂಗಳು ಪದೇ ಪದೇ ಕಾಲೆಳೆಯುತ್ತಿದ್ದರು. ಮಾತ್ರವಲ್ಲದೆ ಸಿನಿಮಾದಲ್ಲಿ ಅವರು ಪ್ರಕಾಶ್ ರಾಜ್ ಹಾಗೂ ಸಾಮಾಜಿಕ ಜೀವನದಲ್ಲಿ ತಾನು ಪ್ರಕಾಶ್ ರೈ ಎಂದು ಹೇಳಿಕೊಳ್ಳುತ್ತಿದ್ದರೆ. ಒಮ್ಮೆ ತಾನು ಹಿಂದೂ ಧರ್ಮದವನು ಎಂದರೆ ಮತ್ತೊಮ್ಮೆ ನಾನು ಹಿಂದೂನೆ ಅಲ್ಲ ಎಂದು ಹೇಳಿಕೆಯನ್ನು ನೀಡುತ್ತಾರೆ.
ರಾಹುಲ್ ಗಾಂಧಿಯ ಬಗ್ಗೆ ಮಮಕಾರವೇಕೆ ಪ್ರಕಾಶ್ ರೈ..?
ಭಾರತೀಯ ಜನತಾ ಪಕ್ಷವನ್ನು ತೆಗಳುತ್ತಲೇ ಕಾಂಗ್ರೆಸ್ ಪರ ಮಾತನಾಡುವ ಚಾಳಿಯನ್ನು ಪ್ರಕಾಶ್ ರೈ ಎಲ್ಲೂ ಬಿಟ್ಟಿಲ್ಲ. ರಾಹುಲ್ ಗಾಂಧಿ ಓರ್ವ ಸಣ್ಣ ಹುಡುಗನಂತೆ. ರಾಹುಲ್ ಗಾಂಧಿಯ ಅಪ್ಪ ಗುಂಡೇಟಿಗೆ ಬಲಿಯಾಗಿದ್ದಾರಂತೆ. ಈ ಕಾರಣಕ್ಕಾಗಿ ಮೋದಿಯವರು ಹಾಗೂ ಭಾರತೀಯ ಜನತಾ ಪಕ್ಷದವರು ರಾಹುಲ್ ಗಾಂಧಿಯ ವಿರುದ್ಧ ಮಾತನಡಬಾರದಂತೆ. ರಾಹುಲ್ ಗಾಂಧಿಯ ತಂದೆ ಗುಂಡೇಟಿಗೆ ಬಲಿಯಾದರೆ ರಾಹುಲ್ ಗಾಂಧಿಯನ್ನು ಪ್ರಶ್ನಿಸುವಂತಿಲ್ವಾ..?
ಈ ಪ್ರಕಾಶ್ ರೈಗೆ ತಲೆ ನೆಟ್ಟಗೆ ಇದೆ ಎಂದು ತಲೆಯಲ್ಲಿ ಬುದ್ಧಿ ಇದ್ದವರು ಹೇಳಿಯಾರೇ…? ರಾಹುಲ್ ಗಾಂಧಿಗೆ 47 ವರ್ಷಗಳಾಗಿವೆ. ಅದೊಂದು ಇಟಲಿಯ ಟೊಮೆಟೋ. ಹಾಗೂ ಮಂದ ಬುದ್ಧಿಯ ನಾಯಕ. ಹಾಗಾಗಿ ಆ ರೀತಿ ಕಾಣಿಸುತ್ತಾರೆ. ಅದಕ್ಕೆ ಮೋದಿ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಬಾರದೇ..? ರಾಹುಲ್ ಗಾಂಧಿ ಓರ್ವ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ. ಮಂದ ಬುದ್ಧಿಯ ಇಂತಹಾ ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷನ ಹುದ್ದೆಯನ್ನು ಕಾಂಗ್ರೆಸ್‍ನಲ್ಲಿ ನೀಡಬಹುದಂತೆ, ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದವರು ರಾಹುಲ್ ಗಾಂಧಿಯನ್ನು ಪ್ರಶ್ನಿಸಬಾರದಂತೆ. ರಾಹುಲ್ ಗಾಂಧಿ ಸಣ್ಣ ಹುಡುಗ ಅವರನ್ನು ಪ್ರಶ್ನಿಸಬಾರದಂತೆ ಆದರೆ ಆ ಪುಟ್ಟ ಹುಡುಗನಿಗೆ ಕಾಂಗ್ರೆಸ್ ಅಧ್ಯಕ್ಷನ ಪಟ್ಟ ಕಟ್ಟಬಹುದಂತೆ..!!!
ಸಿದ್ದರಾಮಯ್ಯರ 10% ಕಮಿಷನ್‍ಗೆ ಸಾಕ್ಷಿ ಬೇಕಂತೆ..!
ಒಮ್ಮೆ ತಾನು ಕಾಂಗ್ರೆಸ್ ಪಕ್ಷದ ಪರ ಮಾತನಾಡುವುದಿಲ್ಲ ಎಂದು ಮಾತನಾಡಿದರೆ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪಕ್ಷವೇ ನಾಚುವಂತೆ ಪ್ರಶ್ನಿಸುತ್ತಾರೆ. ಪ್ರಕಾಶ್ ರೈ ಅವರ ಇಂತಹಾ ತಿಕ್ಕಲುತನ ಇಂದು ಮತ್ತೆ ಬಟಬಯಲಾಗಿದೆ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಚುನಾವಣಾ ಪ್ರಚಾರದ ನಿಮಿತ್ತ ಪರಿವರ್ತನಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾತಿನ ಪ್ರಹಾರವನ್ನೇ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ 10% ಆಡಳಿತವನ್ನು ನಡೆಸುತ್ತಿದ್ದಾರೆ. ಪ್ರತಿ ಕೆಲಸಕ್ಕೂ 10%ಗೂ ಅಧಿಕ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪ್ರಧಾನಿ ಮೋದಿಯವರ ಈ ಆರೋಪಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪುಷ್ಟಿ ನೀಡುವಂತಹಾ ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ ಮಾಧ್ಯಮಗಳಿಗೆ “ಹಾಗೆಲ್ಲಾ ಲೆಕ್ಕ ಕೊಡೋಕ್ಕೆ ಆಗುತ್ತಾ” ಎಂದು ಅಡ್ಡ ಗೋಡೆಯ ಮೇಲೆ ದೀಪವಿಡುವಂತಹಾ ಹೇಳಿಕೆಯನ್ನು ನೀಡಿದ್ದರು. ಆಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಳಮುಖ ಅನಾವರಣವಾಗಿತ್ತು.
ಆದರೆ ಇದೀಗ ಖಳನಟನ ಖಳಮುಖವನ್ನು ಸಮಾಜದ ಮುಂದೆ ಪ್ರದರ್ಶನ ಮಾಡಿದ್ದಾರೆ. ಸ್ವತಃ ಕಾಂಗ್ರೆಸ್ ನಾಯಕರೇ ನಾಚುವಂತೆ ಪ್ರಕಾಶ್ ರೈ ಹೇಳಿಕೆಯನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 10% ಕಮಿಷನ್ ದಂಧೆಯನ್ನು ನಡೆಸುತ್ತಿದೆ ಎನ್ನುವ ಮೋದಿ ಆರೋಪಕ್ಕೆ ಸಾಕ್ಷಿ ಏನಿದೆ ಎಂದು ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಾನೊಬ್ಬ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ಛೇಲಾ ಎಂಬುವುದನ್ನು ಸಾಭೀತುಗೊಳಿಸಿದ್ದಾರೆ.
ಅದ್ಯಾವಾಗ ಕಾಂಗ್ರೆಸ್ ಸರ್ಕಾರದ ಪರವಾಗಿ ಪ್ರಕಾಶ್ ರೈ ಬ್ಯಾಟಿಂಗ್ ಮಾಡಲು ಆರಂಭಿಸಿದರೋ ಅಂದಿನಿಂದ ಪ್ರಶಸ್ತಿಗಳು ಹಾಗೂ ಬೆಂಗಳೂರಿನಲ್ಲಿ ಸೈಟ್ ಗಿಫ್ಟ್‍ಗಳು ಎಲ್ಲಾ ಬರಲಾರಂಭಿಸಿದವು. ಹೀಗಾಗಿ ಮತ್ತೆ ಕಾಂಗ್ರೆಸ್ ಸರ್ಕಾರದ ಪರವಾಗಿ ಪ್ರಕಾಶ್ ರೈ ಬ್ಯಾಟಿಂಗ್ ಮಾಡಲು ಆರಂಭಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಗಲಭೆಗಳು ಸಂಭವಿಸಿದರೆ ಅಲ್ಲಿ ಸರ್ಕಾರವನ್ನು ದೂರುತ್ತಾರೆ, ಮತ್ತೆಲ್ಲೋ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಅವಾಂತರ ನಡೆದರೆ ಅಲ್ಲಿನ ಬಿಜೆಪಿ ನಾಯಕರನ್ನು ಹಾಗೂ ಅಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ದೂರುತ್ತಾರೆ. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಅಷ್ಟೂ ಕೊಲೆ, ಅತ್ಯಾಚಾರಗಳ ಬಗ್ಗೆ ಪ್ರಧಾನಿ ಮೋದಿಯನ್ನು ದೂರುತ್ತಾರೆ. ಇಂತಹಾ ತಿಕ್ಕಲು ಪ್ರಕಾಶ್ ರೈಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಗೌರಿ ಲಂಕೇಶ್ ಹತ್ಯೆ ಸಂಭವಿಸಿ ಒಂದು ವರ್ಷಕ್ಕೆ ಹತ್ತಿರವಾಗುತ್ತಿದೆ. ಇಲ್ಲಿಯವರೆಗೂ ಗೌರಿ ಹಂತಕರನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಸಫಲವಾಗಿಲ್ಲ. ಆದರೆ ಪ್ರಕಾಶ್ ರೈ ಮಾತ್ರ ಗೌರಿ ಹತ್ಯೆಯ ವಿರುದ್ಧ ಹೋರಾಟ ಮಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ತೆಗಳುತ್ತಾರೆ. ಮೋದಿ ಸರಿ ಇಲ್ಲ, ಯೋಗಿ ಸರಿ ಇಲ್ಲ ಎಂದು ವೃತಾ ಆರೋಪ ಮಾಡುತ್ತಾರೆ.
ಸಿನಿಮಾದಲ್ಲಿ ಆಫರ್ ಕಡಿಮೆಯಾದ ನಂತರ ಪಾರ್ಟ್ ಟೈಮ್ ರಾಜಕಾರಣ ಮಾಡುತ್ತಿರುವ ಖಳಮುಖದ ಖಳನಟ ಪ್ರಕಾಶ್ ರೈ ಇಂದು ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸುವ ಮೂಲಕ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದಾರೆ. ಆದರೆ ಪ್ರಕಾಶ್ ರೈ ಅವವರ ಈ ಮಾತುಗಳು ಮೇ 15ಕ್ಕೆ ಬಂದ್ ಆಗುತ್ತದೆ ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಯಾಕೆಂದರೆ ಅವರೇ ನಂಬಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಮನೆಗೆ ಹೋಗುವುದು ಖಂಡಿತಾ.
-ಸುನಿಲ್ ಪಣಪಿಲ
Tags

Related Articles

Close