ಪ್ರಚಲಿತ

ದೇಶದ ಮಹಿಳೆಯರ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?

ಪ್ರಸ್ತುತ ಭಾರತದಲ್ಲಿ ಮಹಿಳೆಯರು ಹೆಚ್ಚು ಸಶಕ್ತರಾಗುತ್ತಿದ್ದಾರೆ. ಮಹಿಳೆ ಅಬಲೆಯಲ್ಲ ಸಬಲೆ ಎಂಬ ಮಾತು ನಿಜವಾಗುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ತ್ರೀಯರ ಸಾಧನೆ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತಿದೆ ಎಂದರೆ ತಪ್ಪಾಗಲಾರದು. ಮನೆವಾರ್ತೆಯಿಂದ ಹಿಡಿದು, ಚಂದ್ರನಲ್ಲಿಗೆ ನೌಕೆ ಕಳುಹಿಸುವಲ್ಲಿಯ ವರೆಗೆ ಭಾರತದ ಮಹಿಳೆಯರ ಶಕ್ತಿ ಪ್ರದರ್ಶನವಾಗುತ್ತಿದೆ ಎನ್ನುವುದು ಅಕ್ಷರಶಃ ಸತ್ಯ.

ಮಹಿಳೆಯರಿಗೆ ಸಂಬಂಧಿಸಿದ ಹಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದ್ದು, ಸ್ತ್ರೀ ಸಬಲೀಕಕಣಕ್ಕೆ ಸಂಬಂಧಿಸಿದ ಹಾಗೆ ಪ್ರಪಂಚಕ್ಕೆ ಭಾರತ ಮಾದರಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಪ್ರಾಧಾನ್ಯತೆ, ಪ್ರಾಮುಖ್ಯತೆ ಸಿಕ್ಕರೆ ಅವರಿಗೆ ಗಂಡಸರನ್ನೂ ಮೀರಿಸಿ ತಮ್ಮ ಸಾಧನೆಯನ್ನು ತೋರ್ಪಡಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಪ್ರಸ್ತುತ ನಮ್ಮ ದೇಶ ಮಹಿಳೆಯರನ್ನು ಸಹ ತನ್ನ‌‌ ಸಶಸ್ತ್ರ ಪಡೆಗಳ ಖಾಯಂ ಆಯೋಗಕ್ತೆ ಸೇರಿಸಿಕೊಂಡಿವೆ. ಕೆಲ ವರ್ಷಗಳ ಹಿಂದೆ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬಂತಿದ್ದ ಹಲವು ಕ್ಷೇತ್ರಗಳಲ್ಲಿ ಪ್ರಸ್ತುತ ಮಹಿಳೆಯರ ಸಾಧನೆ ಜಗತ್ತಿಗೆ ಗೋಚರವಾಗುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಮುಂದಿನ ಕೆಲ ವರ್ಷಗಳಲ್ಲಿ ಮಹಿಳೆಯರ ಸಕ್ರಿಯವಾದ ಭಾಗವಹಿಸುವಿಕೆಯಲ್ಲಿ ವಿಶ್ವದ ಮುಖ್ಯ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ಜೊತೆಗೆ 2024 ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿಯೂ ಭಾರತ ಹೊರಹೊಮ್ಮಲಿದೆ. ಭಾರತದಲ್ಲಿ ನೂರಾರು ನಲವತ್ತು ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 45% ಗಳಷ್ಟು ಮಹಿಳೆಯರು ಇದ್ದು, ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲ ಮಹಿಳಾ ಸಬಲೀಕರಣ ಬಹಳ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಮಹಿಳೆಯರು ಯಾವ ಕ್ಷೇತ್ರದಲ್ಲೇ ಕಾರ್ಯ ನಿರ್ವಹಿಸಿದರೂ, ಆ ಕ್ಷೇತ್ರದಲ್ಲಿನ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಭಾರತದ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಸರಿಯಾದ ಅವಕಾಶ, ತರಬೇತಿ ದೊರೆತಲ್ಲಿ ಈ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಬಹುದು ಎಂಬುದು ಸ್ಪಷ್ಟ.

Tags

Related Articles

Close