ಪ್ರಚಲಿತ

ರಾಷ್ಟ್ರವಾದಕ್ಕೆ ಪ್ರೇರಣೆಯಾಯ್ತು ರೈಫ಼ಲ್ ಮ್ಯಾನ್ ಔರಂಗಜೇಬ್ ನ ಬಲಿದಾನ!! ಅಂತ್ಯಕ್ರಿಯೆಯ ವೇಳೆ ಪಾಕಿಸ್ತಾನ ವಿರೋಧೀ ಘೋಷಣೆ ಕೂಗಿ ರಾಷ್ಟ್ರ ಭಕ್ತಿ ಮೆರೆದ ನೂರಾರು ಜನ!!

ರಣ ಹೇಡಿ ಪಾಕಿಸ್ತಾನ ರಮ್ಜಾನ್ ನ ಪವಿತ್ರ ತಿಂಗಳಿನಂದೂ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿ, ಭಾರತೀಯ ಸೇನೆಯ, 44 ರಾಷ್ಟ್ರೀಯ ರೈಫಲ್ಸ್ ನ ರೈಫ಼ಲ್ ಮ್ಯಾನ್ ಔರಂಗಜೇಬ್ ನನ್ನು ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿರುವುದಕ್ಕೆ ದೇಶದೆಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ತನ್ನ ಪರಿವಾರದ ಜೊತೆ ರಮ್ಜಾನ್ ಹಬ್ಬ ಆಚರಿಸಲು ರಜೆಯ ಮೇಲೆ ತೆರಳಿದ್ದ ಔರಂಗಜೇಬ್ ನನ್ನು ಹೇಡಿ ಪಾಪಿಸ್ತಾನ ಹತ್ಯೆಗೈದಿತ್ತು. ಔರಂಗಜೇಬ್ ನ ಬಲಿದಾನ ದೇಶಾದ್ಯಂತ ರಾಷ್ಟ್ರವಾದದ ಕಿಚ್ಚು ಹತ್ತಿಸಿದೆ. ಇದಕ್ಕೆ ಅವರ ಅಂತ್ಯಕ್ರಿಯೆ ಸಾಕ್ಷಿಯಾಯಿತು.

ಔರಂಗಜೇಬ್ ನ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು ಮಾತ್ರವಲ್ಲ, ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿ ಭಾರತದ ಪರವಾಗಿ ಧ್ವನಿಗೂಡಿಸಿದರು ಎಂದು ವರದಿಯಾಗಿದೆ. ಔರಂಗಜೇಬ್ ನ ಮೃತ ದೇಹವನ್ನು ಅವರ ಹುಟ್ಟೂರಾದ ಸಲಾನಿಗೆ ತರಲಾಯಿತು. ಸಲಾನಿಯಲ್ಲಿ ಹೆಚ್ಚಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರು ವಾಸವಾಗಿದ್ದಾರೆ. ಸೈನಿಕನ ದೇಹವನ್ನು ಮೊದಲು ಹೆಲಿಕಾಪ್ಟರ್ ಮೂಲಕ ಸಾಗ್ರಾ ಹೆಲಿಪ್ಯಾಡ್ ಗೆ ತರಲಾಯಿತು. ಅಲ್ಲಿಂದ ಸಲಾನಿಗೆ ಕೊಂಡೊಯ್ಯಲಾಯಿತು. ತ್ರಿವರ್ಣ ಧ್ವಜದಲ್ಲಿ ಸುತ್ತಲಾದ ಔರಂಗಜೇಬನ ಶವ ಪೆಟ್ಟಿಗೆಯನ್ನು ಸಲಾನಿಯ ಸರ್ಪದಂತೆ ಅಡ್ಡಾದಿಡ್ಡಿ ಚಲಿಸುವ ಬೆಟ್ಟ ಗುಡ್ಡಗಳ ಮಾರ್ಗದಲ್ಲಿ ಸೈನಿಕರು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ತಂದ ಬಳಿಕ ಆತನಿಗೆ ಶೃದ್ದಾಂಜಲಿ ಅರ್ಪಿಸಲು ಜನಸಾಗರವೆ ಹರಿದು ಬಂತು.

ಶನಿವಾರದಂದು ಇಡಿಯ ದೇಶವೆ ಈದ್ ಹಬ್ಬ ಆಚರಿಸುತ್ತಿದ್ದಾಗ, ಔರಂಗಜೇಬ್ ನ ಮನೆಯಲ್ಲಿ ದುಖ ಮಡುಗಟ್ಟಿತ್ತು. ವೀರ ಸೈನಿಕನ ಕೊನೆಯ ಪ್ರಯಾಣದಲ್ಲಿ ನೂರಾರು ಜನರು ಸೇರಿಕೊಂಡರು, ಮಾತ್ರವಲ್ಲ ದೇಶಭಕ್ತಿಯ ಘೋಷಣೆಗಳನ್ನು ಕೂಗಿದರು ಮತ್ತು ಸೇನೆಯು ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಔರಂಗಜೇಬ್ ನ ಹೆತ್ತವರು, ಐದು ಸಹೋದರಿ ಮತ್ತು ಸಹೋದರರು ತಮ್ಮ ಮನೆ ಮಗನ ಮೃತ್ಯುವಿಗೆ ಕಣ್ಣೀರಾದರು. ಭಾರತ ಸರಕಾರ ಮತ್ತು ಭಾರತೀಯ ಸೇನೆ ತನ್ನ ಮಗನ ಹತ್ಯೆಯ ಪ್ರತಿಶೋಧವನ್ನು 72 ಗಂಟೆಗಳೊಳಗಾಗಿ ತೆಗೆದುಕೊಳ್ಳಬೇಕು ಎಂದು ಔರಂಗಜೇಬ್ ಅವರ ತಂದೆ ಮೊಹಮ್ಮದ್ ಹನೀಫ್ ಪ್ರಧಾನ ಮಂತ್ರಿಗೆ ಮನವಿ ಮಾಡಿದರು.

“ಕಾಶ್ಮೀರ ನಮ್ಮದು ಅಲ್ಲೇಕೆ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ? ಕಾಶ್ಮೀರದ ಮೂಲೆ ಮೂಲೆಯಲ್ಲೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕು” ಎಂದು ಮೊಹಮ್ಮದ್ ಹನೀಫ್ ಹೇಳಿದರು. ನಿಶಸ್ತ್ರನಾದ ತನ್ನ ಮಗನ ಮೇಲೆ ಗುಂಡು ಹಾರಿಸಿ ಕೊಂದ ಪಾಕಿಗಳು ಹೇಡಿಗಳು ಎಂದು ಪಾಕಿಸ್ತಾನದ ಮೇಲೆ ಕಿಡಿಕಾರಿದರು. ಕಾಶ್ಮೀರದ ಈ ಸ್ಥಿತಿಗೆ ಅಲ್ಲಿನ ರಾಜಕಾರಣಿಗಳೇ ಕಾರಣ ಎಂದೂ ಅವರು ಆರೋಪಿಸಿದರು. ಔರಂಗಜೇಬ್ ಕೇವಲ ಅವರ ಮಗ ಮಾತ್ರ ಅಲ್ಲ, ಆತ ದೇಶದ ಮಗ. ಆತನ ಬಲಿದಾನ ವ್ಯರ್ಥವಾಗಲಾರದು. ತನ್ನ ಮನೆ ಮಗನ ಹತ್ಯೆಗೈದ ರಣ ಹೇಡಿಗಳಿಗೆ ಮೋದಿ ಸರಕಾರ ತಕ್ಕ ಪಾಠ ಕಲಿಸಿಯೆ ಕಲಿಸುತ್ತದೆ. ಇದರ ಅಂಗವಾಗಿ ಈಗಾಗಲೇ ಕದನ ವಿರಾಮವನ್ನು ಹಿಂಪಡೆಯುವ ನಿರ್ಧಾರ ಮಾಡಿದೆ ಕೇಂದ್ರ ಗೃಹ ಸಚಿವಾಲಯ.

ಇನ್ನೇನಿದ್ದರೂ ಶೂಟ್ ಎಟ್ ಸೈಟ್ ಆರ್ಡರ್ ಅಷ್ಟೆ. ರಮ್ಜಾನ್ ನಂತಹ ಪವಿತ್ರ ತಿಂಗಳಿನಲ್ಲೂ ಸೈನಿಕನ ಹತ್ಯೆಗೈದ ಪಾಪಿಸ್ತಾನದ ಕೊನೆಯ ದಿನಗಳು ಹತ್ತಿರ ಬರುತ್ತಿವೆ. ಔರಂಗಜೇಬ್ ನ ಹತ್ಯೆ ಮಾಡಿ ತನಗೆ ತಾನೇ ಗುಂಡಿ ತೋಡಿಕೊಂಡಿದೆ ಪಾಕಿಸ್ತಾನ.

-ಶಾರ್ವರಿ

Tags

Related Articles

Close