ಪ್ರಚಲಿತ

ರಾಜ್ಯದಲ್ಲಿ ಸ್ಪೋಟ ನಡೆಸಲು ಉಗ್ರರಿಗೆ ವಿದೇಶದಿಂದ ಹಣ: ದಾಖಲೆ‌ ಸಮೇತ ಪ್ರಕರಣ ಬೇಧಿಸಿದ ಸಿಸಿಬಿ ಅಧಿಕಾರಿಗಳು

ಆಂತರಿಕ, ಬಾಹ್ಯ ಉಗ್ರಗಾಮಿಗಳ ಸಂಚು, ದಾಳಿ ಇದೆಲ್ಲವೂ ‌ಬಹಳ‌ ಹಿಂದಿನಿಂದಲೇ ಭಾರತ ಎದುರಿಸುತ್ತಿರುವ ಸಮಸ್ಯೆ. ಪ್ರಸ್ತುತ ಪ್ರಧಾನಿ ಮೋದಿ ಅವರು ಈ ದೇಶದ ಆಡಳಿತ ವಹಿಸಿಕೊಂಡ ಬಳಿಕ ಉಗ್ರವಾದ ಮತ್ತು ಉಗ್ರಗಾಮಿಗಳ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ದೇಶದ ಭದ್ರತಾ ವ್ಯವಸ್ಥೆ, ರಕ್ಷಣಾ ಪಡೆಗಳಿಗೆ ಶಕ್ತಿ ತುಂಬುವ ಕೆಲಸವನ್ನು, ಸ್ವಾತಂತ್ರ್ಯವನ್ನು ನೀಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.

ಪ್ರಧಾನಿ ಮೋದಿ ಅವರು ಉಗ್ರರ ವಿರುದ್ಧ ತೆಗೆದುಕೊಂಡ ದಿಟ್ಟ ನಿಲುವುಗಳ‌ ಕಾರಣಕ್ಕೆ ದೇಶದ ಹೊರಗಿನ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕಲು ನಮ್ಮ ಸೇನೆ ಸಫಲವಾಗಿದೆ. ಹಾಗೆಯೇ, ದೇಶದೊಳಗೆ ಇದ್ದು ದೇಶ ವಿರೋಧಿ ಕೃತ್ಯಗಳನ್ನು ‌ನಡೆಸುತ್ತಿದ್ದ, ಉಗ್ರರೊಂದಿಗೆ ಕೈಜೋಡಿಸುವ ಮೂಲಕ ದೇಶಕ್ಕೆ ಅಪಾಯಕಾರಿಯಾಗಿರುವ, ಭಾರತದೊಳಗೆಯೇ ಅಡಗಿಕೊಂಡಿರುವ ಆಂತರಿಕ ಉಗ್ರವಾದಿಗಳೂ ಬಿಲದಿಂದ ಹೊರ ಬರುತ್ತಿರುವುದು ಸಂತಸದ ವಿಷಯ. ಅಂತಹ ಅಪಾಯಕಾರಿ ಕ್ರಿಮಿಗಳಿಗೆ ಆರ್ಥಿಕ ಮತ್ತು ಇತರೆಲ್ಲಾ ವಿಷಯಗಳಲ್ಲಿ ಬೆಂಬಲ ಸೂಚಿಸುತ್ತಿರುವ ‌ದೊಡ್ಡ ದೊಡ್ಡ ಕ್ರಿಮಿಗಳ ಆಟವೂ ಬಯಲಾಗುತ್ತಿರುವುದು ದೇಶದ ರಕ್ಷಣಾ ದೃಷ್ಟಿಯಿಂದಲೂ ಉತ್ತಮ ಎನ್ನಬಹುದು.

ಅಂದ ಹಾಗೆ ಸದ್ಯ ಭಯೋತ್ಪಾದಕರಿಗೆ ಸಂಬಂಧಿಸಿದ ಹಾಗೆಯೇ ಸ್ಪೋಟಕ ಮಾಹಿತಿಯೊಂದು ಬಯಲಾಗಿದ್ದು, ಕರ್ನಾಟಕದ ಮಂಗಳೂರು ಮತ್ತು ಬೆಂಗಳೂರು, ಮತ್ತಿತರ ನಗರಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲು ವಿದೇಶದಿಂದ ಸುಮಾರು 15 ಲಕ್ಷ ರೂ. ಗಳು ಶಂಕಿತ ಭಯೋತ್ಪಾದಕರಿಗೆ ರವಾನೆಯಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ಸಿಸಿಬಿ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಈ ಹಣ ದುಬೈ ಹಾಗೂ ಇತರ ದೇಶಗಳಿಂದ ಈ ಪ್ರಕರಣದ ಮುಖ್ಯ ಆರೋಪಿ ಜುನೈದ್ ಅಹಮ್ಮದ್‌ನ ಮೂಲಕ ಶಂಕಿತ‌ ಭಯೋತ್ಪಾದಕರ ಖಾತೆಗೆ ಜೆ ಮಾಡಲಾಗಿದೆ. ಸಿಸಿಬಿ ಪೊಲೀಸರು ಇದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗೊಲ ವಿವರವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಯಾರು ಈ ಮೊತ್ತವನ್ನು ನೀಡಿದ್ದಾರೆ?, ಅವರ ಉದ್ದೇಶವೇನು? ಎಂಬುದನ್ನು ತಿಳಿದುಕೊಂಡು, ಕ್ರಮ ಜರುಗಿಸುವ ಉದ್ದೇಶದಿಂದ ಪ್ರಕರಣದ ತನಿಖೆಯನ್ನು ಸಹ‌ ಚುರುಕುಗೊಳಿಸಿದ್ದಾರೆ. ಭಯೋತ್ಪಾದಕರಾದ ಶಾಂತಿ ದೂತ‌ ಸಮುದಾಯದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ, ಮಹಮ್ಮದ್ ಫೈಲ್ ರಬ್ಬಾನಿ, ಮಹಮ್ಮದ್ ಉಮರ್ ಎಂಬವರ ಖಾತೆಗೆ ಹಣ ವರ್ಗಾವಣೆ ಆಗಿರುವುದಕ್ಕೆ ಸಾಕ್ಷ್ಯಗಳು ದೊರೆತಿವೆ ಎಂಬುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಆರೋಪಿಗಳು ಜೈಲಿನಲ್ಲಿದ್ದುಕೊಂಡೇ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದವರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದ ಹಾಗೆ ಪ್ರಮುಖ ಆರೋಪಿಯಾದ ಟಿ. ನಾಸಿರ್ ಜೈಲಿನಲ್ಲಿದ್ದಾನೆ. ಹಾಗೆಯೇ ಕೊಲೆ ಪ್ರಕರಣವೊಂದರ ಆರೋಪಿಗಳಾಗಿರುವ ಜುನೈದ್ ಮತ್ತು ಇತರರು ಸಹ ಜೈಲು ಸೇರಿದ್ದಾರೆ. ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿಯೇ ಇವರೆಲ್ಲರಿಗೂ ಉಗ್ರ ನಾಸಿರ್‌ನ ಸಂಪರ್ಕ ಏರ್ಪಟ್ಟಿದೆ. ನಾಸಿರ್ ಇವರೆಲ್ಲರಿಗೂ ಬಾಂಬ್ ಸ್ಪೋಟ ಮಾಡಿ, ಧರ್ಮ ರಕ್ಷಣೆ ಮಾಡಿ ಎಂದು ಬ್ರೈನ್ ವಾಷ್ ಮಾಡಿದ್ದ‌. ಹಾಗೆಯೇ ಇದಕ್ಕಾಗಿ ಅವರೆಲ್ಲರಿಗೂ ಹಣದ ಆಮಿಷ ಸಹ ಒಡ್ಡಿದ್ದ. ಅದಾದ ಬಳಿಕ ಉಗ್ರ ಖಾತೆಗಳಿಗೆ ವಿದೇಶಿ ವ್ಯಕ್ತಿಗಳಿಂದ ಹಣ ಜಮೆಯಾಗಿದೆ. ಈ ಹಣದ ಮೂಲವನ್ನು ಪತ್ತೆ ಮಾಡುವ ಕೆಲಸವನ್ನು ಸದ್ಯ ಸಿ ಸಿ ಬಿ ಮಾಡುತ್ತಿದೆ.

ಭಾರತದಲ್ಲಿ ಅಶಾಂತಿ ಸೃಷ್ಟಿಸಲು ವಿದೇಶಿಯರು ಈ ಸಂಚು ರೂಪಿಸಿ, ಭಾರತೀಯ ಮೂಲದ ಉಗ್ರಗಾಮಿಗಳಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಹಣ ಪಡೆದ ಇಪ್ಪತ್ತು ಖಾತೆಗಳ ವಿವರವನ್ನು ಸಿ ಸಿ ಬಿ ಪಡೆದಿದೆ. ಈ ಖಾತೆಗಳು ಮೇಲೆ ಹೆಸರಿಸಿದ ಐವರು ಉಗ್ರರಿಗೆ ಸೇರಿದ್ದಾಗಿದೆ. ಒಟ್ಟು ಇಪ್ಪತ್ತ ಮೂರು ಲಕ್ಷ ಹಣ ಈ ಉಗ್ರರ ಖಾತೆಗಳಿಗೆ ಜಮೆ ಆಗಿದ್ದು, ಇದರಲ್ಲಿ ಹದಿನೈದು ಲಕ್ಷ ರೂ. ಗಳು ವಿದೇಶಿಗರಿಂದ ‌ಸಂದಾಯವಾಗಿದೆ. ಇದರಲ್ಲಿ ಹೆಚ್ಚಿನ ಮೊತ್ತವನ್ನು ಉಗ್ರರು ಈಗಾಗಲೇ ಡ್ರಾ ಮಾಡಿರುವುದಾಗಿಯೂ ತಿಳಿದು ಬಂದಿದೆ. ಹಾಗೆಯೇ ಬಾಂಬ್ ಸ್ಪೋಟ ಕಾರ್ಯವನ್ನು ಶೀಘ್ರವಾಗಿ ಮುಗಿಸಬೇಕು ಎನ್ನುವುದಾಗಿಯೂ ವಿದೇಶಿ ಭಯೋತ್ಪಾದಕರು ಪದೇ‌ ಪದೇ‌ ಸೂಚಿಸುತ್ತಿದ್ದರು ಎನ್ನುವುದಾಗಿಯೂ ಶಂಕಿತ ಭಯೋತ್ಪಾದಕರು ಸಿ ಸಿ ಬಿ ಅಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾರೆ. ಹಾಗೆಯೇ ಈ ಕುಕೃತ್ಯಕ್ಕೆ ಸ್ಥಳೀಯ ಉಗ್ರ ಬೆಂಬಲಿಗರು ಸಹ ಎಂಟು ಲಕ್ಷ ರೂ. ಗಳಷ್ಟು ಹಣ ನೀಡಿದ್ದಾರೆ ಎಂಬುದಾಗಿ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಗ್ರ ನಾಸಿರ್‌ನನ್ನು ಸಿ ಸಿ ಬಿ ಪೊಲೀಸರು ಎಂಟು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯಲು ವಿದೇಶಿಗರ ಜೊತೆಗೆ ಭಾರತೀಯ ಕೆಲವರೇ ಕೈ ಜೋಡಿಸುತ್ತಿರುವುದು ಖೇದಕರ. ಅಶಾಂತಿದೂತರೇ ಇಂತಹ ಭಯೋತ್ಪಾದಕ ಕೃತ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿರುವುದು, ಆ ಸಮುದಾಯದ ಸಜ್ಜನರನ್ನು ಸಹ ಸಂದೇಹದ ದೃಷ್ಟಿಯಿಂದಲೇ ‌ನೋಡುವಂತಾಗಿದೆ ಎನ್ನುವುದು ದುರಂತ.‌ ಹಾಗೆಯೇ ಇಂತಹ ದೇಶ ವಿದ್ರೋಹಿ, ಜಿಹಾದಿ ಕೃತ್ಯದಲ್ಲಿ ಆ ಸಮುದಾಯದ ಕೆಲ ಮಹಿಳೆಯರೂ ಸಹ ಭಾಗಿಗಳಾಗುತ್ತಿದ್ದಾರೆ. ಭಾರತದ ಸೌಹಾರ್ದಯುತ ಸಮಾಜದ ಶಾಂತಿ ಕದಡಲು ಕಾರಣೀಕರ್ತರಾಗುತ್ತಿದ್ದಾರೆ ಎನ್ನುವುದು ನೋವಿನ ವಿಚಾರ.

Tags

Related Articles

Close