ಪ್ರಚಲಿತ

ಮಹಿಳಾ ಶಕ್ತಿ ಅನಾವರಣಕ್ಕೆ ಕ್ಷಣಗಣನೆ ಆರಂಭ!! ನೂತನ ಪ್ರಯೋಗಕ್ಕೆ ಸಾಕ್ಷಿಯಾದ ಮುಂಬಯಿ ಪೊಲೀಸ್!!

ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಮಹಿಳೆಯರಿಗೆ ನಾನಾ ಕ್ಷೇತ್ರಗಳಲ್ಲಿ ನೂತನ ಅವಕಾಶಗಳನ್ನು ಕಲ್ಪಿಸುವ ಮೂಲಕ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿರುವ ವಿಚಾರ ಗೊತ್ತೇ ಇದೆ!! ಈಗಾಗಲೇ ನರೇಂದ್ರ ಮೋದಿ ಸರ್ಕಾರವು ತಮ್ಮ ಸಚಿವ ಸಂಪುಟದಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದಲ್ಲದೇ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಶತಾಬ್ದಿ ಎಕ್ಸಪ್ರೆಸ್ ರೈಲಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಸುದ್ದಿಯಾಗಿದ್ದ ಇವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ!!

ಕಳೆದ ನಾಲ್ಕು ವರ್ಷಗಳಿಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಕೇಂದ್ರ ಸರ್ಕಾರವು, ಮಹಿಳಾ ಸಬಲೀಕರಣಕ್ಕೆ ಎಲ್ಲೆಲ್ಲಿ ಅಗತ್ಯವೋ ಅಲ್ಲಲ್ಲಿ ನಿಗದಿತ ಮತ್ತು ನಿಶ್ಚಿತ ಮಧ್ಯಪ್ರವೇಶದ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದು, ಇದು ಪ್ರತಿ ಕ್ಷೇತ್ರದಲ್ಲೂ ಮಹಿಳಾ ನಾಯಕರು ಹೊರಹೊಮ್ಮುವುದಕ್ಕೆ ಅವಕಾಶವಾಗಿದೆಯಲ್ಲದೆ, ಮಹಿಳಾ ಸಾಧಕರನ್ನು ಗುರುತಿಸುವುದಕ್ಕೂ ಇದು ಸಾಧ್ಯವಾಗಿರುವುದಂತೂ ಅಕ್ಷರಶಃ ನಿಜ!! ಆದರೆ ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿ ಇದೀಗ ಸುದ್ದಿಯಲ್ಲಿದ್ದು 8 ಮಹಿಳಾ ನೇತೃತ್ವದ ಪೊಲೀಸ್ ಅಧಿಕಾರಿಗಳನ್ನು ಹೊಂದಿರುವಂತಹ ಏಕೈಕ ನಗರವಾಗಿ ಹೊರಹೊಮ್ಮಿದೆ!!

ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ “ಬೇಟಿ ಪಡವೋ ಬೇಟಿ ಬಚಾವೋ” ಹಾಗೂ “ಸುಕನ್ಯಾ ಸಮೃದ್ಧಿ” ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಆಗಿವೆ. ಅಷ್ಟೇ ಅಲ್ಲದೇ, ಮಹಿಳಾ ಸಬಲೀಕರಣಕ್ಕೆ ಕೌಶಲ್ಯ ತರಬೇತಿ ಅಗತ್ಯವಾಗಿದ್ದು ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಪರಿಣಾಮಕಾರಿ ಯೋಜನೆ ರೂಪಿಸಿ ಹೊಸ ಭರವಸೆಯನ್ನೂ ನೀಡುತ್ತಿದೆ. ಇದರೊಂದಿಗೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸುವಲ್ಲಿ ಶ್ರಮ ವಹಿಸುತ್ತಿರುವ ಕೇಂದ್ರ ಸರ್ಕಾರವು ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಮಿಂಚುವಂತೆ ಮಾಡುತ್ತಿದೆ!!

ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈ ಅಹಮದಾಬಾದ್ ಶತಾಬ್ದಿ ಎಕ್ಸಪ್ರೆಸ್ ರೈಲಿನಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸುವ ಮೂಲಕ ಹೊಸ ಇತಿಹಾಸವನ್ನೇ ನರೇಂದ್ರ ಮೋದಿ ಸರ್ಕಾರ ಸೃಷ್ಟಿಸಿದ್ದು!! ಅಷ್ಟೇ ಯಾಕೆ?? ದೇಶದ ಮೊದಲ ಪೂರ್ಣಕಾಲಿಕ ಮಹಿಳಾ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ನಂತರ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿರುವ ವಿಚಾರವೂ ತಿಳಿದೆ ಇದೆ!!

ಇನ್ನು ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆಯಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಇವರು, ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿಯಾಗಿದ್ದಲ್ಲದೇ ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುವ ಜೊತೆಗೆ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಆದರೆ ಇದೀಗ ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿನಲ್ಲಿ 8 ಮಹಿಳಾ ನೇತೃತ್ವದ ಪೊಲೀಸ್ ಸ್ಟೇಶನ್‍ಗಳನ್ನು ಹೊಂದಿರುವ ದೇಶದ ಏಕೈಕ ನಗರ ಎಂದೆನಿಸಿಕೊಂಡಿದೆ. ಅಷ್ಟೇ ಅಲ್ಲದೇ ಮಹಿಳಾ ಅಧಿಕಾರಿಗಳು ಈ ಪೊಲೀಸ್ ಸ್ಟೇಶನ್ ಗಳ ನೇತೃತ್ವವನ್ನು ವಹಿಸಿಕೊಂಡಿರುವುದೇ ಹೆಮ್ಮೆಯ ವಿಚಾರವಾಗಿದೆ!! ಮುಂಬರುವ ದಿನಗಳಲ್ಲಿ ಇನ್ನಷ್ಟು ಪೊಲೀಸ್ ಸ್ಟೇಶನ್ ಗಳಿಗೆ ಮಹಿಳಾ ನಾಯಕತ್ವ ಸಿಗುವ ನಿರೀಕ್ಷೆ ಇದ್ದು, ಮುಂಬಯಿಯ 8 ಪೊಲೀಸ್ ಸ್ಟೇಶನ್ ಗೆ ಮಹಿಳಾ ಉಸ್ತುವಾರಿಗಳು ಕಾರ್ಯನಿರ್ವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ!!

ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿಯ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿರುವ ಮೂಲಕ ಇದು ದೇಶದಲ್ಲೇ ಪ್ರಥಮವಾಗಿದೆ!! ಈ ಬಗ್ಗೆ ಟ್ವೀಟ್ ಮಾಡಿರುವ ಮುಂಬಯಿ ಪೊಲೀಸ್, “8 ಮಹಿಳಾ ಉಸ್ತುವಾರಿ ಸ್ಟೇಶನ್ ಹೊಂದಿರುವ ಪ್ರಥಮ ನಗರ ಮುಂಬಯಿ. ನಿತ್ಯ ನಗುವಿನೊಂದಿಗೆ ಒಳ್ಳೆಯತನವನ್ನು ಕಾಪಾಡುತ್ತಾ ದುಷ್ಟತನವನ್ನು ಸೆ ಬಡಿಯುತ್ತಿದ್ದಾರೆ” ಎಂದಿದೆ!!

ದೇಶದಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನವನ್ನು ಕಲ್ಪಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಈಗಾಗಲೇ ನಾನಾ ರೀತಿಯ ಯೋಜನೆಗಳನ್ನು ಜಾರಿ ತಂದಿದ್ದು, ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸಿಕೊಡುತ್ತಿರುವುದಂತೂ ಅಕ್ಷರಶಃ ನಿಜ!! ಒಟ್ಟಿನಲ್ಲಿ ಭಾರತದಲ್ಲಿ ನಾರಿಮಣಿಯರ ಶಕ್ತಿ ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರೂ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರವೇ ಕಾರಣವಾಗಿದೆ!!

source: http://www.financialexpress.com/india-news/proud-mumbai-moment-first-indian-city-with-8-women-police-station-in-charge-twitterati-pour-hearts-in-praise/1117670/

 

– ಅಲೋಖಾ

 

Tags

Related Articles

Close