ಪ್ರಚಲಿತ

ಮೊದಲ ಬಾರಿಗೆ ಶಾಸಕನಾದ ಸಾಮಾನ್ಯ ವ್ಯಕ್ತಿಗೆ “ರಾಜ” ಸ್ಥಾನ ಪಟ್ಟ ಕಟ್ಟಿದ ಬಿಜೆಪಿ!

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕಾವು ಒಂದೆಡೆಯಾದರೆ, ಚುನಾವಣೆ ನಡೆದು ಫಲಿತಾಂಶ ಹೊದ ಬಿದ್ದ ಬಳಿಕ‌ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಭಾರೀ‌ ಕುತೂಹಲ ಎದ್ದಿದ್ದು ಒಂದೆಡೆ, ಇನ್ನೊಂದೆಡೆ ಬಿಜೆಪಿಯ ಹೈಕಮಾಂಡ್ ನಿರ್ಧಾರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ‌ಯಾವ ಕ್ಷಣದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಊಹಸಲು ಅಸಾಧ್ಯ.‌

ಪಂಚರಾಜ್ಯಗಳ ಚುನಾವಣಾ ಪೈಕಿ‌ ಮೂರು ರಾಜ್ಯಗಳನ್ನು ಗೆದ್ದು ಬೀಗಿದ ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮಧ್ಯ ಪ್ರದೇಶದಲ್ಲಿ ಯಾದವ ಸಮುದಾಯದ ವ್ಯಕ್ತಿಗೆ ಪಟ್ಟ ಕಟ್ಟಿದ ಬಿಜೆಪಿ, ಇತ್ತ ರಾಜಸ್ಥಾನದಲ್ಲಿ ಶಾಕಿಂಗ್ ನಿರ್ಧಾರದೊಂದಿಗೆ ಮುಖ್ಯಮಂತ್ರಿ ಆಯ್ಕೆ ಮಾಡಿದೆ.‌
ಭಜನ್ ಲಾಲ್ ಶರ್ಮಾ ಅವರಿಗೆ ಬಿಜೆಪಿ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ನೀಡಿದೆ ಎಂಬುದು ನಂಬಲಸಾಧ್ಯ. ಯಾಕೆಂದರೆ ಭಜನ್ ಲಾಲ್ ಅವರು ಮೊದಲ ಬಾರಿಗೆ ಆಯ್ಕೆಯಾದ ಸಾಮಾನ್ಯ ಶಾಸಕ,ಅವರನ್ನು ತಂದು ರಾಜಸ್ಥಾನದಂತಹ ದೊಡ್ಡ ರಾಜ್ಯದ ಜವಾಬ್ದಾರಿ ನೀಡಿ ಗೌರವಿಸಿದೆ. ಇದು ಅಚ್ಚರಿಯ ಸಂಗತಿ ಎಂಬುದು ಒಂದೆಡೆಯಾದರೆ, ಇತ್ತ ದೊಡ್ಡ ದೊಡ್ಡ ನಾಯಕರನ್ನು ತಣ್ಣಗಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಒಟ್ಟಾರೆಯಾಗಿ ಬಿಜೆಪಿಯ ಸದ್ಯದ ಹೈಕಮಾಂಡ್ ನಿರ್ಧಾರ ಎಲ್ಲರ ಹುಬ್ಬೇರಿಸಿರುವುದು ಸತ್ಯ.

Tags

Related Articles

Close