ಪ್ರಚಲಿತ

ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡ ರಮ್ಯಾಳಿಗೆ ಕನ್ನಡಿಗರೇ ಮಹಾ ಮಂಗಳಾರತಿ ಮಾಡಿದ್ದಾರೆ!!

ಪಾಕಿಸ್ತಾನವನ್ನು “ಸ್ವರ್ಗ” ಎಂದು ಬಿಂಬಿಸಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ!! ಸಾಮಾಜಿಕ ಜಾಲತಾಣದ ಮುಖಾಂತರ ವಾರ್ ನಡೆಸುತ್ತಿರುವ ರಮ್ಯಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ಪದೇ ಪದೆ ಸದ್ದು ಮಾಡುತ್ತಿದ್ದಾರೆ. ಆದರೆ ಇದೀಗ ಕಾವೇರಿ ವಿಚಾರವಾಗಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿರುವ ಮಾಜಿ ಸಂಸದೆ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಟ್ವಿಟರ್ನಲ್ಲಿ ಫೇಕ್ ರಮ್ಯಾಗೆ ಮಹಾ ಮಂಗಳಾರತಿ ಮಾಡಿದ್ದಾರೆ.

ಹೌದು… ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‍ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವ ರಮ್ಯಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತ ಸುದ್ದಿಯಾಗುತ್ತಲೇ ಇದ್ದಾರೆ!! ಇತ್ತೀಚೆಗಷ್ಟೇ ಪ್ರಧಾನಿಯನ್ನು ಕೆಣಕುವಂಥ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದ ರಮ್ಯಾ ವಿರುದ್ಧ ಕೆರಳಿರೋ ಜಗ್ಗೇಶ್ ` ವಿಶ್ವದ ಹಲವಾರು ದೇಶದ ನಾಯಕರೇ ಮೋದಿಯವರನ್ನು ಮೆಚ್ಚಿಕೊಂಡಿದ್ದಾರೆ. ದೊಡ್ಡವರ ಬಗ್ಗೆ ಮಾತಾಡುವಾಗ ತಿಳುವಳಿಕೆ ಬೇಕಾಗುತ್ತದೆ. ಇಂಥಾ ತಿಳುವಳಿಕೆ, ಅನುಭವದಿಂದ ಚರ್ಚೆ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳುತ್ತಾರೆ. ಆದರೆ ಮೋದಿ ವಿರುದ್ಧ ಮಾತಾಡಲು ಈಕೆ ಯಾರು? ಇವರ ಸಾಧನೆ ಏನು? ಅಂತೆಲ್ಲ ತೀಕ್ಷ್ಣವಾಗಿಯೇ ಪ್ರಶ್ನಿಸಿ ಭರ್ಜರಿಯಾಗಿಯೇ ಕಾಲೆಳೆದಿದ್ದರು!!

ಆದರೆ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಮಾಡಿರುವ ಟ್ವೀಟ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆಗೆ ತಮಿಳುನಾಡು ಪಟ್ಟು ಹಿಡಿದ ಕುರಿತು ಅಲ್ಲಿನ ಚಿತ್ರರಂಗದ ಗಣ್ಯರೂ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ. ಈ ಹೋರಾಟದ ‘ಬಿಸಿ’ ರಾಜ್ಯಕ್ಕೂ ತಟ್ಟಿದ್ದು, ಇಂಥಹ ಸೂಕ್ಷ್ಮ ಸಂದರ್ಭದಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮೀಡಿಯಾ ಮುಖ್ಯಸ್ಥೆಯಾಗಿರುವ ರಮ್ಯಾ ತಮಿಳುನಾಡು ಪರ ಟ್ವೀಟ್ ಮಾಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಅಷ್ಟಕ್ಕೂ ಟ್ವೀಟ್ ನಲ್ಲೇನಿದೆ ಗೊತ್ತೇ??

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆಯೇ ಚೆನ್ನೈನ ಡಿಫೆನ್ಸ್ ಎಕ್ಸ್ ಪೊ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಿಳುನಾಡಿಗೆ ಆಗಮಿಸಿದ್ದ ವೇಳೆ ಕಾವೇರಿ ನಿರ್ವಣಾ ಮಂಡಳಿ ರಚಿಸುವಂತೆ ತಮಿಳುನಾಡಿನ ಅನೇಕ ಸಂಘಟನೆಗಳು ಮೋದಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಮೋದಿ ವಿರುದ್ಧ “ಗೋ ಬ್ಯಾಕ್ ಮೋದಿ” ಎಂದು ಘೋಷಣೆ ಕೂಡ ಕೂಗಿದ್ದರು.

ಆದರೆ ಪ್ರಧಾನಿ ಭೇಟಿ ವಿರೋಧಿಸಿ ತಮಿಳುನಾಡಿನಲ್ಲಿ ಗುರುವಾರ ನಡೆದ “ಗೋ ಬ್ಯಾಕ್ ಮೋದಿ” ಹೋರಾಟ ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ಇದೀಗ ಕನ್ನಡಿಗರ ವಿರೋಧಿ ನಿಲುವು ತಳೆದ ಆರೋಪಕ್ಕೆ ನಟಿ ರಮ್ಯಾ ಅವರು ಗುರಿಯಾಗಿದ್ದಾರೆ. ಹೌದು… “ಗೋ ಬ್ಯಾಕ್ ಮೋದಿ” ಎನ್ನುವ ಸುದ್ದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ “ಗೋ ಬ್ಯಾಕ್ ಮೋದಿ” ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ “ಗಟ್ಟಿ ಮತ್ತು ಸ್ಪಷ್ಟ ಧ್ವನಿಯಲ್ಲಿ ವಿರೋಧಿಸಿ” ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು.

ತಮಿಳುನಾಡಿನಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ ಮತ್ತು ಟ್ವಿಟ್ಟಿಗರ ಆಕ್ರೋಶ, ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸಬೇಕೆನ್ನುವುದು!! ಆದರೆ ಈ ಮಂಡಳಿ ರಚನೆಗೆ ಕನ್ನಡಿಗರ ತೀವ್ರ ವಿರೋಧವಿದೆ ಎನ್ನುವುದನ್ನು ಅರಿತೂ, ಮಂಡ್ಯದವರಾಗಿರುವ ರಮ್ಯಾ ಅವರ ಈ ನಡೆ ವ್ಯಾಪಕ ಟೀಕೆಗೊಳಗಾಗಿದೆ.

ಟ್ವೀಟರ್ ಮೂಲಕವೇ ರಮ್ಯಾ ವಿರುದ್ಧ ಕನ್ನಡಿಗರ ಆಕ್ರೋಶ!!

ಇನ್ನು ಈ ಬಗ್ಗೆ ವ್ಯಾಪಕವಾಗಿ ಟೀಕೆಗೆ ಒಳಗಾಗಿರುವ ರಮ್ಯಾಗೆ ಕನ್ನಡಿಗರೇ ಸಖತ್ ಆಗಿ ಟ್ವೀಟ್ವರ್ ಮೂಲಕ ಜಡಿದಿದ್ದು, “ರಾಜಕುಮಾರ್ ನಿಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅವರ ಪುಣ್ಯದಿನದಂದೇ ಕನ್ನಡಿಗರ ವಿರುದ್ದ ಮಾತನಾಡುತ್ತಿದ್ದೀರಾ? ಕುಡಿಯುವ ನೀರಿನಲ್ಲೂ ರಾಜಕೀಯ ಮಾಡುವ ನಿಮಗೆ ನಾಚಿಕೆಯಾಗಬೇಕು. ಮೋದಿ ಮಾನ ಕಳೆಯೋದರಲ್ಲೇ ಕಾಲ ಕಳೆಯುತ್ತಿದ್ದೀರಾ? ಮೋದಿಗೆ ಸರಿಸಾಟಿಯಾಗುವಷ್ಟು ಮೊದಲು ತಯಾರಿ ಮಾಡಿಕೋ” ಎಂದು ಟ್ವೀಟರ್ ನಲ್ಲಿ ಕೆಲವರು ಟ್ವೀಟ್ ದಾಳಿ ನಡೆಸಿದ್ದಾರೆ!!

ಈ ಬಗ್ಗೆ ಟ್ವಿಟ್ಟರ್‍ನಲ್ಲೇ ಕಿಡಿಕಾರಿರುವ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ, “ಕಾಂಗ್ರೆಸ್‍ನ ನಿಜ ಬಣ್ಣ ಈಗ ಬಯಲಾಗಿದೆ. ಕನ್ನಡಿಗರೇ, ಮಂಡ್ಯದ ಕಾವೇರಿ ತಾಯಿಯ ಮಕ್ಕಳೇ, ಕಾವೇರಿ ನಿರ್ವಹಣಾ ಮಂಡಳಿ ಬೇಕೆಂಬ ತಮಿಳರ ಹೋರಾಟಕ್ಕೆ ಬೆಂಬಲ ನೀಡಿದ ರಮ್ಯಾ ಮತ್ತು ಕಾಂಗ್ರೆಸ್ ನಮ್ಮ ರಾಜ್ಯಕ್ಕೆ ಬೇಕಾ” ಎಂದು ಪ್ರಶ್ನಿಸಿದ್ದಾರೆ.

ಇನ್ನು, “ಮತ್ತೊಂದು ಫೇಕ್ ಅಕೌಂಟ್. ನಿಮ್ಮ ಈ ಟ್ಟೀಟ್ ನಿಂದ ತಿಳಿಯಿತು, ಕಾಂಗ್ರೆಸ್ ನವರಿಗೆ ಸಿ.ಡಬ್ಲ್ಯು.ಎಮ್.ಬಿ ರಚನೆಯಾಗಬೇಕು ಅಂತ. ತಮಿಳುನಾಡಿನ ಪರವಾಗಿ ನಿಂತ ದಿವ್ಯ ಸ್ಪಂದನ ಕಾಂಗ್ರೆಸ್ ನಿಂದ ಕರ್ನಾಟಕಕ್ಕೆ ದ್ರೋಹ. ಕನ್ನಡ ದ್ರೋಹಿ ರಮ್ಯಾ ಗೆ ಧಿಕ್ಕಾರ”…. ಈ ರೀತಿಯ ಟ್ವೀಟ್ ನ ಸರಮಾಲೆಯೇ ಹರಿದು ಬಂದಿದೆ!!

ಒಟ್ಟಿನಲ್ಲಿ, ತಮಿಳರ ಪ್ರತಿಭಟನೆಗೆ ಬೆಂಬಲಿಸುವ ಮೂಲಕ, ಕನ್ನಡಿಗರ ಸ್ವಾಭಿಮಾನಕ್ಕೆ ರಮ್ಯಾ ಧಕ್ಕೆ ತಂದಿದ್ದು, ಇವರು ತಮಿಳರ ಪರ ಅಥವಾ ಕನ್ನಡಿಗರ ವಿರೋಧಿ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಮೂಲಕ, ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಮತ್ತೆ ರಮ್ಯಾ ಎಡವಟ್ಟು ಮಾಡಿಕೊಂಡಿದ್ದಂತೂ ಅಕ್ಷರಶಃ ನಿಜ.

ಮೂಲ: ಕನ್ನಡ ಪ್ರಭ

– ಅಲೋಖಾ

Tags

Related Articles

Close