ಪ್ರಚಲಿತ

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ತಯಾರಿರುವ ರಣೋತ್ಸಾಹಿ ದೇಶಪ್ರೇಮಿಗಳ ಸ್ವಯಂ ಸೇವಕ ಸಂಘದ ಹಿಂದಿನ ಕತೃ ಡಾ. ಕೆ.ಬಿ.ಹೆಡ್ಗೆವಾರ್ ಅವರ ಪುಣ್ಯ ತಿಥಿಯಂದು ಭಾವಪೂರ್ಣ ಶೃದ್ದಾಂಜಲಿ…

 

ಮನಗಳಲ್ಲಿ ತುಂಬಿದ್ದ ಗುಲಾಮಗಿರಿಯ ಕಷ್ಮಲಗಳಿಗೆ ಸರ್ಜರಿ ಮಾಡಿ, ರಾಷ್ಟ್ರವಾದವೆಂಬ ಬೀಜ ಬಿತ್ತಿ, ರಾಷ್ಟ್ರಕಾಗಿ ಪ್ರಾಣಾರ್ಪಣೆ ಮಾಡಲು ಸದಾ ಸಿದ್ದರಿರುವ ರಣೋತ್ಸಾಹೀ ಯುವಕರ ತಂಡ ಕಟ್ಟಿದ ಪುಣ್ಯಾತ್ಮ, ಸಂಘದ ಜನಕ, ಡಾ. ಕೆ.ಬಿ.ಹೆಡ್ಗೆವಾರ್ ಅವರ ಪುಣ್ಯ ತಿಥಿ ಜೂನ್ 21. ಡಾ.ಹೆಡ್ಗೆವಾರ್ ಅವರು ಭೌತಿಕವಾಗಿ ನಮ್ಮನ್ನಗಲಿ 78 ವರ್ಶಗಳು ಸಂದಿರಬಹುದು ಆದರೆ ಅವರು ಮಾನಸಿಕವಾಗಿ ಕಳೆದ 93 ವರ್ಷಗಳಿಂದ ನಮ್ಮ ಜೊತೆಗಿದ್ದಾರೆ. ಅವರು ತಮ್ಮ ಕೈಯಾರೆ ನೆಟ್ಟ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಎನ್ನುವ ಪುಟ್ಟ ಸಸಿಯೊಂದು ಇಂದು ಹೆಮ್ಮರವಾಗಿ ಬೆಳೆದು, ವಿದೇಶಗಳಲ್ಲೂ ತನ್ನ ಶಾಖೆಯನ್ನು ಹರವಿಕೊಂಡಿದೆ ಎಂದರೆ ಹೆಮ್ಮೆ ಎನಿಸುತ್ತದೆ.

ಸಂಘ ತಯಾರಾದ ಮತ್ತು ಬೆಳೆದು ಬಂದ ಪರಿ ಎಂಥವರನ್ನೂ ದಿಘ್ಮೂಢನ್ನಾಗಿಸುತ್ತದೆ. ಒಂದು ಕಟ್ಟಡವಿರಲಿಲ್ಲ, ಒಂದು ಮೂಲಭೂತ ಸೌಕರ್ಯವಿರಲಿಲ್ಲ, ಇದ್ದದ್ದು ಒಂದು ದೊಡ್ಡ ಮೈದಾನ ಮತ್ತು ಡಾ.ಹೆಡ್ಗೆವಾರ್ ಅವರ ಅದಮ್ಯ ಇಛ್ಚಾ ಶಕ್ತಿ ಮತ್ತು ದೂರದರ್ಶಿತ್ವ! ಹಾಗೆಯೆ 1925ರಲ್ಲಿ ತಯಾರಾಯಿತು ಇಂದು ಪ್ರಪಂಚದ ಅತ್ಯಂತ ದೊಡ್ಡ ಸಂಘಟನೆಯಿನಿಕೊಂಡ ಆರ್.ಎಸ್.ಎಸ್ ಎಂಬ ದೇಶ ಪ್ರೇಮಿ ಸಂಘಟನೆ.

ನೆರೆಹೊರೆಯಲ್ಲಿರುವ ಕೆಲವು ಹುಡುಗರಿಗೆ ಪ್ರತಿದಿನ ಒಂದು ಗಂಟೆಯ ಕಾಲ ಒಟ್ಟಾಗಿ ಒಂದೇ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಬೇಕೆಂದು ಡಾ. ಹೆಡ್ಗೆವಾರ್ ಹೇಳುತ್ತಾರೆ. ಪ್ರತಿದಿನ ಈ ಯುವಕರು ಕೆಲವು ಭೌತಿಕ ವ್ಯಾಯಾಮಗಳನ್ನು ಮಾಡುತ್ತಾರೆ, ಕೆಲವು ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾರೆ, ಕಬಡ್ಡಿಯನ್ನು ಆಡುತ್ತಾರೆ ಮತ್ತು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಯಾವುದೇ ಸದಸ್ಯತ್ವ ಇರಲಿಲ್ಲ, ಯಾವುದೇ ಹಾಜರಾತಿ ಇರಲಿಲ್ಲ, ಹೆಚ್ಚಿನ ಮೂಲಭೂತ ಸೌಕರ್ಯಗಳ ಅಗತ್ಯವಿರಲಿಲ್ಲ. ಮುಂದೊಂದು ದಿನ ಈ ಯುವಕರು, ವಿವಿಧ ಕ್ಷೇತ್ರಗಳಲ್ಲಿ ಶಕ್ತಿಶಾಲಿಗಳಾಗಿ ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡುತ್ತಾರೆ ಎಂದು ಭವಿಷ್ಯ ನುಡಿಯುತ್ತಾರೆ ಡಾ.ಹೆಡ್ಗೆವಾರ್!!

ಬಹುಶಃ ಅಂದು ಇದು ಜನರಿಗೆ ಹಾಸ್ಯಾಸ್ಪದವಾಗಿ ಕಂಡಿರಬಹುದು. ಕೆಲವೊಂದು ಹುಡುಗರು ಒಟ್ಟು ಸೇರುವುದು, “ಚಡ್ಡಿ” ಹಾಕಿಕೊಂಡು ಕಬಡ್ಡಿ ಆಡುವುದು, ಮತ್ತೆ ರಾಷ್ಟ ಭಕ್ತಿಯ ಗೀತೆಗಳನ್ನು ಹಾಡುವುದು, ಮನೆಗೆ ಹೋಗುವುದು ತಿರುಗಾ ಮರುದಿನ ಬರುವುದು… ಇದೆಲ್ಲಾ ಆಗ ಹಾಸ್ಯಾಸ್ಪದ ಆಗಿದ್ದಿರಬಹುದು ಆದರೆ ಈಗ? ಅದೆ ಹುಡುಗರ ಗುಂಪಿಂದ ತಯಾರಾದ ಸಂಘ, ಪ್ರಪಂಚದ ಅತ್ಯಂತ ಬಲಿಷ್ಟ ಮತ್ತು ಅತಿ ದೊಡ್ಡ ಸಂಘಟನೆ!! ನಂಬಲು ಅಸಾಧ್ಯ ಆದರೆ ಇದು ಸತ್ಯ. ಹುಡುಗರು ಬಂದರು; ಆಡಿದರು, ನಂತರ ಅವರು ಚೆದುರಿದರು. ಆದರೆ ಅವರು ಒಂದು ಜಾಲ ತಯಾರಿಸಿದರು; ಅವರು ಕವಲೊಡೆದರು; ಅವರು ಬೆಳೆದರು, ಬೃಹದಾಕಾರವಾಗಿ ಬೆಳೆದರು!! ಇವತ್ತಿಗೂ ಸಂಘದ ಬಳಿ ಕಟ್ಟಡಗಳಿಲ್ಲ, ಸಂಘಕ್ಕೆ ಸೇರಲು ಹಣ ಕೊಡಬೇಕಿಲ್ಲ, ಬೇಕಿರುವುದು ಒಂದು ಮೈದಾನ ಮತ್ತು ಸಮವಸ್ತ್ರ!! ಭಾರತದ ಮೂಲೆ ಮೂಲೆಯಲ್ಲೂ ಸಂಘದ ಶಾಖೆಗಳಿವೆ ಹಾಗಾಗಿ ಎಲ್ಲಿ ಏನೇ ಅವಘಡ ನಡೆಯಲಿ ಅಲ್ಲಿ ಸಂಘ ಸೇವೆಗೆ ಸಿದ್ದ!! ಹೇಗೆ ಸಾಧ್ಯ ಇದು?

ಬಿಕ್ಕಟ್ಟಿನ ಮೇಲೆ ಬಿಕ್ಕಟ್ಟನ್ನು ಎದುರಿಸುತ್ತಾ ಸಂಘ ಬೆಳೆಯುತ್ತಾ ಹೋಯಿತು. ನಾಗಪುರದಲ್ಲಿಂದು ಹೆಡ್ಗೆವಾರ್ ಅವರ ಭೌತಿಕ ಅಸ್ತಿತ್ವಗಳಿಲ್ಲದಿರಬಹುದು ಆದರೆ ಸಂಘದ ಪ್ರತಿ ಕಾರ್ಯಕರ್ತನ ಹೃದಯದಲ್ಲೂ ಬಿಕ್ಕಟ್ಟಿನ ನಡುವೆಯೂ ಸಂಘಕ್ಕೆ ಮಾರ್ಗದರ್ಶನ ನೀಡಿದ ಸಂಸ್ಥಾಪಕನ ದೃಷ್ಟಿಯ ಅನುರಣನವಿದೆ. ಹೆಡ್ಗೆವಾರ್ ನಮ್ಮನ್ನು ಎಂದೂ ಅಗಲಿ ಹೋಗಿಲ್ಲ, ಅವರ ತತ್ವಾದರ್ಶಗಳು ನಮ್ಮ ಜೊತೆಗಿದೆ. ಹೆಡ್ಗೆವಾರ್ ಅವರ ಮರಣದ ನಂತರವೂ ಹಿಂದೂ ಸಮಾಜವನ್ನು ಏಕಛತ್ರದಡಿ ಬೆಸೆದಿಟ್ಟಿರುವ ಆರ್.ಎಸ್.ಎಸ್ ನೊಳಗೆ ಈಗಲೂ ಹೆಡ್ಗೆವಾರ್ ಅವರ ಆತ್ಮ ಇದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಜಾತಿ ವ್ಯವಸ್ಥೆಗೆ ತಿಲಾಂಜಲಿ ಇತ್ತ ಹೆಡ್ಗೆವಾರ್ ಸಂಘವನ್ನು ಸಂಸ್ಥಾಪನೆ ಮಾಡಿ ಸಮಾಜವನ್ನು ಒಗ್ಗೂಡಿಸಿದರು. ತಿಲಕ್ ,ಗಾಂಧಿ, ಶಂಕರಾಚಾರ್ಯರಂತಹವರೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದ ಕಾಲದಲ್ಲಿ ಹೆಡ್ಗೆವಾರ್ ಅವರಿಗಿಂತ ಭಿನ್ನವಾಗಿ ಯೋಚಿಸಿ ಸಂಘವನ್ನು ಸ್ಥಾಪಿಸಿ ಹಿಂದೂ ಏಕತೆಯನ್ನು ಸಾರಿದರು. ಜಾತಿ ವ್ಯವಸ್ಥೆಯಲ್ಲಿ ಸಮತ್ವ ಮತ್ತು ಸಮಾನತೆಯನ್ನು ಸಾರುವ ಸಲುವಾಗಿಯೆ ಅವರು ಸಂಘದ ಕಾರ್ಯಕರ್ತರಿಗೆ ಒಂದೇ ರೀತಿಯ ಸಮವಸ್ತ್ರವನ್ನು ಉಡುವಂತೆ ಪ್ರೇರೇಪಿಸಿದರು. ಅಂದಿಗೂ ಇಂದಿಗೂ ಎಂದೆಂದಿಗೂ ಸಂಘದಲ್ಲಿ ಸರ್ವರೂ ಸಮಾನರು!

ಡಾ. ಹೆಡ್ಗೇವಾರ್ ಧರ್ಮವನ್ನು ಸಾರ್ವಜನಿಕವಾಗಿ ಚರ್ಚಿಸಲಿಲ್ಲ ಅಥವಾ ಬಹಿರಂಗಪಡಿಸಲಿಲ್ಲ. ಅಸಮಾನತೆಯ ಆಧಾರದ ಮೇಲೆ ಅವರು ಧಾರ್ಮಿಕ ಆಚರಣೆಗಳನ್ನು ಸಂಘಕ್ಕೆ ತರಲಿಲ್ಲ. ಚತುರ್ವಣಾಶ್ರಮವನ್ನು ಆಧರಿಸಿದ ಧರ್ಮವನ್ನು ಪುನರುಜ್ಜೀವನಗೊಳಿಸುವುದೇ ಸಂಘದ ಗುರಿ ಎಂದು ಅವರು ಎಂದಿಗೂ ಹೇಳಲಿಲ್ಲ. ಅಂತಹ ಸಿದ್ಧಾಂತವನ್ನು ಅವರು ಸಂಘಕ್ಕೆ ತಂದೇ ಇಲ್ಲ. ಅವರ ಬರಹಗಳಲ್ಲಿ ಮನುಸ್ಮೃತಿಗೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖ ಕಾಣುವುದಿಲ್ಲ. ಅವರು ಹೇಳುತ್ತಿದ್ದುದು ಒಂದೆ “ನಾವು ಎಲ್ಲ ಸಹೋದರರು. ಸಮಗ್ರ ಮತ್ತು ಏಕೀಕೃತ ಸಮಾಜವನ್ನು ನಾವು ನಿರ್ಮಿಸಬೇಕಾಗಿದೆ. ನಾವು ಪ್ರಬಲರಾಗಬೇಕಾಗಿದೆ “ ಎಂತಹ ಸಮಭಾವ!! ಎಂತಹ ದೂರದೃಷ್ಟಿ!! ಇಂತಹ ಮಗನ ಪಡೆದ ಭಾರತಾಂಬೆ ಪುಣ್ಯವತಿ, ಇಂತಹ ಗುರುವಿನ ಮಾರ್ಗದಶನದಲ್ಲಿ ಬೆಳೆಯುತ್ತಿರುವ ಸಂಘದ ಕಾರ್ಯಕರ್ತರು ಪುಣ್ಯವಂತರು.

ಭವಿಷ್ಯವನ್ನು ನಿಚ್ಚಳವಾಗಿ ನೋಡಬಲ್ಲವರಾಗಿದ್ದ ಹೆಡ್ಗೆವಾರ್ ಅವರ ಸಂಘದ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಂಬೇಡ್ಕರ್, ಸಂಘದಲ್ಲಿ ಪರಿಶಿಷ್ಟ ಜಾತಿಯವರೂ ಇರುವುದನ್ನು ಮತ್ತು ಅವರೂ ಇತರರಂತೆಯೆ ಸಮಾನತೆಯ ಭಾವವನ್ನು ಹೊಂದಿರುವುದನ್ನು ಕಂಡು ದಂಗಾಗಿದ್ದರಂತೆ! ಇದು ಸಂಘದ ಹೆಗ್ಗಳಿಕೆ. ಇದು ಹೆಡ್ಗೆವಾರ್ ಅವರು ಪ್ರತಿಪಾದಿಸಿದ ನಿಜವಾದ ಹಿಂದುತ್ವ! ಒಂದು ಸರಿ ‘ ಹಿಂದೂ ಕಾಲೊನಿ’ ಎಂಬ ಹೆಸರಿನ ಪ್ರದೇಶದ ಹೆಸರನ್ನು ನೋಡಿ “ಹಿಂದೂಗಳು ತಮ್ಮ ದೇಶದಲ್ಲಿ ಹೇಗೆ ಕಾಲೋನಿಯನ್ನು ಹೊಂದಬಹುದು ಇದು ಕೇವಲ ವಿದೇಶದಲ್ಲಿ ಮಾತ್ರ ಸಾಧ್ಯ” ಎಂದು ಅವರು ಪ್ರತಿಕ್ರಿಯಿಸುತ್ತಾರೆ. ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳು ಭಾರತದಲ್ಲಿ ಸಮುದಾಯವಾಗಿದ್ದರೆ, “ಹಿಂದೂಗಳು ರಾಷ್ಟ್ರ” ಎನ್ನುವುದು ಅವರ ಮಾತಿನ ಒಳನೋಟವಾಗಿತ್ತು. ಹಿಂದುಸ್ತಾನದಲ್ಲಿ ಹಿಂದೂ ಎನ್ನುವುದು ಒಂದು ‘ಸಮುದಾಯವಲ್ಲ’ ಅದು ‘ರಾಷ್ಟ್ರ’ ಎನ್ನುವ ಅವರ ಮಾತನ್ನು ಪ್ರತಿ ಹಿಂದೂವೂ ನೆನಪಿಟ್ಟುಕೊಳ್ಳಬೇಕು.

 

ರಿಷಿ ಕೇಶವ ಬಾಲಿರಾಮ್ ಹೆಡ್ಗೇವಾರ್ ಹೇಳುತ್ತಿದ್ದಂತೆ “ತತ್ ತ್ವಂ ಅಸಿ ಸ್ವಯಂ ಸೇವಕಾ”, ಪ್ರತಿ ಹಿಂದೂವಿನ ಅಂತರಾಳದಲ್ಲಿ ಮಹಾನ್ ರಾಷ್ಟ್ರದ ಭವಿಷ್ಯದ ವೈಭವ ಅಡಗಿದೆ ಎನ್ನುವುದನ್ನು ನೆನಪಿಡಿ. ಭಾರತ ಮಾತೆಯ ಹೆಮ್ಮೆಯ ಸುಪುತ್ರ ಸಂಘ ಸಂಸ್ಥಾಪಕ ಡಾ. ಕೇಶವ ಬಾಲಿರಾಮ್ ಹೆಡ್ಗೇವಾರ್ ಚರಣಗಳಿಗೆ ಕೋಟಿ ಕೋಟಿ ನಮನಗಳು…ಮತ್ತು ಭಾವಪೂರ್ಣ ಶೃದ್ದಾಂಜಲಿ…

-ಶಾರ್ವರಿ

Tags

Related Articles

Close