ಪ್ರಚಲಿತ

ಕಮ್ಯುನಿಸ್ಟರ ನಾಡಿನಲ್ಲಿಯೇ ಕಮ್ಯುನಿಸ್ಟರನ್ನು ಬಗ್ಗು ಬಡಿಯಲು ಮುಂದಾದ ಆರ್.ಎಸ್.ಎಸ್!! ಅಷ್ಟಕ್ಕೂ ಆರ್.ಎಸ್.ಎಸ್ ಮಾಡಿದ್ದೇನು ಗೊತ್ತೇ?!

ಈಗಾಗಲೇ ಮುಸ್ಲಿಂ ಭಯೋತ್ಪಾದಕರಿಗಿಂತಲೂ ಕಮ್ಮಿ ಇಲ್ಲದಂತೆ ನೂರಾರು ಹಿಂದೂಗಳನ್ನು ಕೊಂದ, ಮುಸ್ಲಿಂ ಮತೀಯವಾದಿಗಳಿಗೆ ಬಹಿರಂಗ ವಾಗಿಯೇ ಬೆಂಬಲ ನೀಡುತ್ತಿದ್ದು, ದೇಶದಲ್ಲೆಲ್ಲಾ ದೊಂಬಿ, ಗಲಾಟೆ, ಹಿಂಸಾಚಾರ ನಡೆಸುತ್ತಿದ್ದ ಕಮ್ಯುನಿಸ್ಟ್ ಪಕ್ಷ ಇಂದು ಅಸ್ತಿತ್ವದಲ್ಲಿರುವುದು ಕೇರಳದಲ್ಲಿ ಮಾತ್ರ!! ಆದರೆ ಕಮ್ಯುನಿಸ್ಟರ ಭದ್ರಕೋಟೆಯಲ್ಲಿರುವ ಕೇರಳದಲ್ಲಿ ಇನ್ನು ಕಮ್ಯುನಿಸ್ಟರನ್ನು ಬಗ್ಗು ಬಡಿಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮುಂದಾಗಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!! ಅಷ್ಟಕ್ಕೂ ಕಮ್ಯೂನಿಸ್ಟರ ನಾಡಾಗಿರುವ ಕೇರಳದಲ್ಲಿ ಆರ್.ಎಸ್.ಎಸ್ ಮಾಡಿದ್ದಾದರೂ ಏನು ಗೊತ್ತೇ??

ಒಂದು ಕಾಲದಲ್ಲಿ ಶಾಂತಿಯ ಭೂಮಿಯಾಗಿದ್ದ ಕೇರಳ ಇಂದು ರಾಜಕೀಯ ಹತ್ಯೆಗಳಿಂದಾಗಿ ರಕ್ತಪಾತ ಹರಿಯುವಂತಾಗಿದೆ. ಎಡಪಕ್ಷಗಳು ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜಕೀಯ ಪ್ರೇರಿತ ಹತ್ಯೆಗಳು ದಿನೇ ದಿನೇ ಹೆಚ್ಚಾಗಿವೆಯಲ್ಲದೇ ಆರ್.ಎಸ್.ಎಸ್ ಕಾರ್ಯಕರ್ತರನ್ನು ಮಚ್ಚು, ಲಾಂಗುಗಳಿಂದ ಬೆದರಿಸಲಾಗದಿದ್ದರೆ ಬಾಂಬ್ ಪ್ರಯೋಗಕ್ಕೂ ಮುಂದಾಗಿದ್ದ ಕೇರಳದ ಕಮ್ಯುನಿಸ್ಟ್ ಸರ್ಕಾರ ಮಾಡಿದ ಅನಾಚಾರಗಳು ಮಾತ್ರ ಅಷ್ಟಿಷ್ಟಲ್ಲ!!

ಕೇರಳದಲ್ಲಿ ಪಿನರಾಯಿ ಅಧಿಕಾರಕ್ಕೆ ಬಂದ ನಂತರ ಕೇರಳದಲ್ಲಿ ಅನೇಕ ಸಂಘಿಗಳ ಮಾರಣಹೋಮಗಳೇ ನಡೆದು ಹೋಯಿತು ಎನ್ನಬಹುದು!! ಯಾಕೆಂದರೆ ಪಿನರಾಯ್ ಅಧಿಕಾರಕ್ಕೆ ಬಂದ ನಂತರ 50ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆದಿದ್ದು, ಇದರಲ್ಲಿ ಅತಿ ಹೆಚ್ಚು ನಡೆದಿರುವುದು ಕಣ್ಣೂರಿನಲ್ಲಿ. ಇದುವರೆಗೆ 280ಕ್ಕೂ ಹೆಚ್ಚು ಮಂದಿ ಸಂಘಪರಿವಾರದವರು ಕೇರಳದಲ್ಲಿ ಬಲಿಯಾಗಿದ್ದೇ ಕಮ್ಯುನಿಸ್ಟರ ದುರಾಡಳಿತಕ್ಕೆ ನೈಜ ಉದಾಹರಣೆಯಾಗಿದೆ!! ಮಾನವ ಹಕ್ಕುಗಳ ಕುರಿತಾಗಿ ದೊಡ್ಡ ಭಾಷಣ ಬಿಗಿಯುವವರು ಕೇರಳದ ವಿಷಯದಲ್ಲಿ ಮಾತ್ರ ಜಾಣ ಕುರುಡರಂತೆ ವರ್ತಿಸುವುದನ್ನು ನೋಡಿದರೆ ನಿಜಕ್ಕೂ ಕೂಡ ಬೇಸರ ತರುತ್ತೆ!!

ಹಾಗಾಗಿ, ಇದೀಗ ಕಮ್ಯುನಿಸ್ಟರ ನಾಡಿನಲ್ಲಿಯೇ ಕಮ್ಯುನಿಸ್ಟರನ್ನು ಬಗ್ಗು ಬಡಿಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮುಂದಾಗಿದ್ದು, ಕಮ್ಯುನಿಸ್ಟರಿಗೆ ಗುನ್ನಾ ನೀಡಲಿರುವುದಂತೂ ಅಕ್ಷರಶಃ ನಿಜ!! ಹೌದು…. ದೇಶಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಬಲವಾಗುತ್ತಿರುವ ಬೆನ್ನಲ್ಲೇ, ಇದೀಗ ಕಮ್ಯುನಿಸ್ಟರ ನಾಡಾದ ಕೇರಳದಲ್ಲೂ ಆರ್.ಎಸ್.ಎಸ್ ತನ್ನ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸಿ, ಕಮ್ಯುನಿಸ್ಟರನ್ನು ಕೇರಳದಲ್ಲಿಯೂ ಬಗ್ಗುಬಡಿಯಲು ಮುಂದಾಗಿದೆ.

ಹೀಗಾಗಿ ಕೇರಳದಲ್ಲಿ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ದ ಕಾರ್ಯಕರ್ತರ ಮೇಲೆ ಕಮ್ಯುನಿಸ್ಟರು ಹಲ್ಲೆ, ಹತ್ಯೆ ನಡೆಸುತ್ತಿರುವ ನಡುವೆಯೂ ಆರ್.ಎಸ್.ಎಸ್ ತನ್ನ ಬಲವನ್ನು ವ್ಯಾಪಿಸಿದೆ ಎಂದರೆ ನಂಬ್ತೀರಾ?? ಆದರೆ ಇದನ್ನೂ ನಂಬಲೇ ಬೇಕು!! ಯಾಕೆಂದರೆ, ಒಂದೇ ವರ್ಷದಲ್ಲಿ ರಾಜ್ಯದಲ್ಲಿ 7000 ಸದಸ್ಯರ ನೋಂದಣಿಯಾಗಿರುವ ಮೂಲಕ ತನ್ನ ಬಲವನ್ನು ವ್ಯಾಪಿಸಿಕೊಂಡಿರುವುದೇ ಇದಕ್ಕೆ ಜಲ್ವಂತ ಸಾಕ್ಷಿಯಾಗಿದೆ!! ಈ ಕುರಿತು ಆರೆಸ್ಸೆಸ್ ಪ್ರಾಂತ ಕಾರ್ಯವಾಹ ಪಿ.ಗೋಪಾಲಕುಟ್ಟಿ ಮಾಹಿತಿ ನೀಡಿದ್ದು, ಕಳೆದ ಒಂದು ವರ್ಷದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಸೇರ್ಪಡೆ ಸಂಖ್ಯೆಯಲ್ಲಿ ಶೇ.7ರಷ್ಟು ಜಾಸ್ತಿಯಾಗಿದ್ದು ಸುಮಾರು 7 ಸಾವಿರಕ್ಕೂ ಅಧಿಕ ಸದಸ್ಯರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ, ರಾಜ್ಯದಲ್ಲಿನ ಕಾರ್ಯಕರ್ತರ ಸಂಖ್ಯೆಯನ್ನು 9 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದ ಆರ್.ಎಸ್.ಎಸ್!!

ಹೌದು… ಈ ಹಿಂದೆ, ಕೇರಳದಲ್ಲಿ ಕಾರ್ಯ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್), 2019ರ ವೇಳೆಗೆ ರಾಜ್ಯದಲ್ಲಿನ ಕಾರ್ಯಕರ್ತರ ಸಂಖ್ಯೆಯನ್ನು 9 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿತ್ತು!! ಆದರೆ ಆರ್.ಎಸ್.ಎಸ್ ಕಾರ್ಯಕರ್ತರ ಮೇಲಿನ ಹಲ್ಲೆ ಹೆಚ್ಚಾಗಿ ಹೋಗಿದ್ದರೂ ಕೂಡ ಈ ವಿಚಾರ ಸಂಘದ ಚಟುವಟಿಕೆ ಮೇಲೆ ಪ್ರಭಾವ ಬೀರಿಲ್ಲ. ಇದು ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಆರ್.ಎಸ್.ಎಸ್ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಆರ್.ಎಸ್.ಎಸ್ ಹಿರಿಯ ಸಂಘಟಕ ಜೆ. ನಂದಕುಮಾರ್ ಹೇಳಿದ್ದರು!!

ಅಷ್ಟೇ ಅಲ್ಲದೇ, “ಈಗಾಗಲೇ ಕೇರಳದಲ್ಲಿ 5 ಸಾವಿರ ಆರ್.ಎಸ್.ಎಸ್ ಶಾಖೆಗಳಿದ್ದು, ದಿನದಿಂದ ದಿನಕ್ಕೆ ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿದಿನ ಬೆಳಗಿನ ಸಭೆಗಳನ್ನು ಇಲ್ಲಿ ನಡೆಸಲಾಗುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಶಾಖೆಗಳ ಸಂಖ್ಯೆಗಳನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 7000 ಸದಸ್ಯರ ನೋಂದಣಿ ಮಾಡುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ತನ್ನ ಬಲವನ್ನು ಹೆಚ್ಚಿಸಿಕೊಂಡಿದ್ದು ಮಾತ್ರ ಅಕ್ಷರಶಃ ನಿಜ.

ಸಿಪಿಎಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಆರ್.ಎಸ್.ಎಸ್ ಹವಾದೊಂದಿಗೆ “ಆರ್.ಎಸ್.ಎಸ್ ಸೇರಿ” ಎನ್ನುವ ಅಭಿಯಾನ ಆರಂಭ!!

ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಸೇರ್ಪಡೆ ಸಂಖ್ಯೆಯಲ್ಲಿ ಶೇ.7ರಷ್ಟು ಜಾಸ್ತಿಯಾಗಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ಸದಸ್ಯರನ್ನುನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಕಾರ್ಯವಾಹ ಪಿ.ಗೋಪಾಲಕುಟ್ಟಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ದಿನೇದಿನೆ ಆರ್.ಎಸ್.ಎಸ್ ಬಲಗೊಳುತ್ತಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಪ್ರತಿದಿನ 3000 ಸಾವಿರ ಸ್ಥಳಗಳಲ್ಲಿ ಸುಮಾರು 4,105 ಶಾಖೆಗಳನ್ನು ನಡೆಸುತ್ತಿದ್ದೇವೆಯಲ್ಲದೇ, “ಆರ್.ಎಸ್.ಎಸ್ ಸೇರಿ” ಎನ್ನುವ ಅಭಿಯಾನ ನಡೆಸುತ್ತಿದ್ದು, ಇದಕ್ಕೆ ಈಗಾಗಲೇ ಅಧಿಕ ಸಂಖ್ಯೆಯ ಜನ ಬೆಂಬಲ ಸೂಚಿಸುತ್ತಿದ್ದಾರೆ. ಆಸಕ್ತಿ ಇರುವ ಎಲ್ಲರನ್ನೂ ಸಂಘಟನೆಗೆ ಸ್ವಾಗತಿಸಲಾಗುತ್ತಿದೆ ಎಂದು ವಿವರಿಸಿರುವ ಇವರು, ಕಣ್ಣೂರಿನಂತಹ ಹಲವು ಸಿಪಿಎಂ ಪ್ರಾಬಲ್ಯವಿರುವ ಪ್ರದೇಶಗಳಲ್ಲೇ ನಮ್ಮ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಹಿಂದಿನಿಂದಲೂ ಸಿಪಿಎಂ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದು, ಅದನ್ನು ತಡೆಯಲು ನಮ್ಮ ಸಂಘಟನೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಸಂಖ್ಯೆ ಹೆಚ್ಚಳಗೊಂಡಿದ್ದು ಇದರಲ್ಲಿ ಒಟ್ಟು 1,503 ಮಂಡಲಗಳಿವೆ!! ಇದರಲ್ಲಿ 1,426 ಮಂಡಲಗಳಲ್ಲಿ ಆರ್.ಎಸ್.ಎಸ್ ಸಕ್ರೀಯ ಚಟುವಟಿಕೆ ನಡೆಸುತ್ತಿದೆ. ಇನ್ನು, ಇದರಲ್ಲಿ 56 ಮಂಡಲಗಳಲ್ಲಿ ಹೊಸದಾಗಿ ಚಟುವಟಿಕೆಯನ್ನು ಆರ್.ಎಸ್.ಎಸ್ ಆರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ ಕೇರಳದಲ್ಲಿ 4,105 ಶಾಖೆಗಳಿದ್ದು, 58,962 ಶಾಖೆಗಳನ್ನು ಹೊಂದಿರುವ ಕೇರಳ- ತಮಿಳುನಾಡು ಸಹಿತ ದಕ್ಷಿಣ ಕ್ಷೇತ್ರಕ್ಕೆ ಸಂಘಚಾಲಕರಾಗಿ ಡಾ. ಆರ್.ವನ್ನಿಯ ರಾಜರನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾ ಆಯ್ಕೆ ಮಾಡಿದೆ. ಇನ್ನು, ಭಯ್ಯಾಜಿ ಜೋಷಿ (ಸುರೇಶ್ ಜೋಷಿ) ಅವರು ಆರ್.ಎಸ್.ಎಸ್ ಸಹಕಾರ್ಯವಾಹ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಮ್ಯುನಿಸ್ಟರ ಹಾವಳಿಗಳಿಂದಾಗಿ ಕೇರಳದ ಮಲಬಾರ್, ಕಣ್ಣೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಕೆಂಪು ಉಗ್ರರ ರಕ್ತದಾಹಕ್ಕೆ ಸುಮಾರು 70ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಹಳಷ್ಟು ಮಂದಿ ತಮ್ಮ ಕೈಕಾಲುಗಳನ್ನೇ ಕಳೆದುಕೊಂಡಿದ್ದಾರೆ ಎಂದರೆ ಇಂತಹಾ ಹೇಯ ಕೃತ್ಯದ ಮುನ್ನುಡಿ ಬರೆದವರೇ ಪಿನರಾಯ್ ವಿಜಯನ್.!! ಆದರೆ ಇದೀಗ ಎಡಪಕ್ಷ ದುರ್ಬಲಗೊಳ್ಳುತ್ತಿದ್ದು, ಜನರು ಆರ್.ಎಸ್.ಎಸ್ ಸೇರ್ಪಡೆಯಾಗುತ್ತಿದ್ದಾರಲ್ಲದೇ ರಾಷ್ಟ್ರೀಯತೆ ಪ್ರತಿಪಾದಿಸುವ ಸಂಘದ ಬಗ್ಗೆ ರಾಜ್ಯದ ಯುವಕರಲ್ಲಿ ಉತ್ತಮ ಅಭಿಪ್ರಾಯವಿರುವುದೇ ಇಂದು ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

– ಅಲೋಖಾ

Tags

Related Articles

Close