ಪ್ರಚಲಿತ

ಭಾರತದ ವಿರುದ್ಧ ಚೀನಾ ಸಂಚು: ಎಸ್ ಜೈಶಂಕರ್ ಏನಂದ್ರು ಗೊತ್ತಾ?

ಭಾರತದ‌ ಸಾಂಪ್ರದಾಯಿಕ ಶತ್ರು ರಾಷ್ಟ್ರಗಳ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಚಾನ್‌ ರಾಷ್ಟ್ರಗಳು ಅಗ್ರಗಣ್ಯ. ಸದಾ ಕಾಲ ಭಾರತಕ್ಕೆ ಯಾವೆಲ್ಲಾ ರೀತಿಯಲ್ಲಿ ಆಪತ್ತು ತಂದೊಡ್ಡಬಹುದು ಎಂದೇ ಯೋಚನೆ ಮಾಡುತ್ತಿರುತ್ತವೆ. ಜೊತೆಗೆ ಒಂಟಿಯಾಗಿ ಸಾಧ್ಯವಾಗದೆ ಹೋದರೆ ಎರಡೂ ಶತ್ರು ರಾಷ್ಟ್ರಗಳು ಒಗ್ಗಟ್ಟಾಗಿ, ಕುತಂತ್ರದಿಂದ ಭಾರತದ ವಿರುದ್ಧ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಆಲೋಚಿಸುತ್ತವೆ.

ಇದೀಗ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಚೀನಾದ ಕುರಿತಂತೆ ಮಾತನಾಡಿದ್ದು, ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ನಿರ್ಬಂಧಿಸುವ ಚೀನಾದ ಸಂಚಿನ ಬಗ್ಗೆ, ಕುತಂತ್ರಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.

ಅವರು ದೆಹಲಿಯಲ್ಲಿ ನಡೆದ ರೈಸಿನಾ 2024 ನ ಎರಡನೇ ದಿನದಂದು ಮಾತನಾಡಿ, ಎರಡೂ ದೇಶಗಳ ನಡುವಿನ ಸಂಬಂಧವನ್ನು ಸಮ ಸ್ಥಿತಿಗೆ ತರುವುದಕ್ಕ, ಲಭ್ಯವಿರುವ ಜಾಗತಿಕ ಅವಕಾಶಗಳ ಬಗ್ಗೆ ಮಾತನಾಡಿದರು. ಜೊತೆಗೆ ಇದರೊಂದಿಗೆ ಇನ್ನೂ ಹಲವಾರು ಲಭ್ಯ ಅವಕಾಶಗಳನ್ನು ಭಾರತ ಬಿಟ್ಟು ಕೊಡಬಾರದು ಎಂದು ತಿಳಿಸಿದ್ದಾರೆ.

ಪೂರ್ವ ಲಡಾಕ್ ಗಡಿ ವಿವಾದವನ್ನು ಪ್ರಚೋದಿಸಿದ 1980 ರ ದಶಕದಲ್ಲಿ ಜಾರಿಗೆ ಬಂದ ಗಡಿ ಒಪ್ಪಂದ ಗಳಿಂದ ಹೊರಗುಳಿದ ಚೀನಾದ ನಿಲುವನ್ನು ಪ್ರತಿಪಾದಿಸಿದ ಅವರು, ಸಮತೋಲನ ಸಾಧಿಸುವುದು ಮತ್ತು ಅದನ್ನು ಕಾಪಾಡಿಕೊಳ್ಳುವುದು ಎರಡೂ ರಾಷ್ಟ್ರಗಳಿಗೆ ಸವಾಲಿನ ಕೆಲಸವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಚೀನಾ ಗಡಿ ಒಪ್ಪಂದಗಳಿಂದ ದೂರ ಸರಿದಿದ್ದು, ಇದು ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವಾದಗಳನ್ನು ಕೇವಲ ಭಾರತ ಮತ್ತು ಚೀನಾಕ್ಕೆ ಮಾತ್ರ ಸಂಬಂಧಿಸಿದ್ದು ಎನ್ನುವ ಹಾಗೆ ಇತರ ದೇಶಗಳೆದುರು ಚೀನಾ ಬಿಂಬಿಸುತ್ತದೆ. ಆ ಮೂಲಕ ಇತರ ರಾಷ್ಟ್ರಗಳನ್ನು ಈ ವಿಚಾರದಿಂದ ಹೊರಗಿಡಲು ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಇತರ ರಾಷ್ಟ್ರಗಳಿಗೆ ಸಂಬಂಧ ಇಲ್ಲ ಎಂದು ಹೇಳಿತ್ತಿದೆ. ಇದು ಚೀನಾ ಸಂಚಿನ ಭಾಗ. ಎರಡೂ ದೇಶಗಳ ಸಂಬಂಧಗಳ ಸುಧಾರಣೆಗೆ ಜಾಗತಿಕ ಪರಿಹಾರಗಳನ್ನು ಬಳಸಿಕೊಳ್ಳಬೇಕು. ನಾವು ಆ ಹಕ್ಕನ್ನು ಏಕೆ ತ್ಯಜಿಸುವುದು ಎಂದು ಪ್ರಶ್ನಿಸಿದ್ದಾರೆ.

Tags

Related Articles

Close