ಪ್ರಚಲಿತ

ಕಾಂಗ್ರೆಸ್ಸೇ ಆಯ್ಕೆ ಮಾಡಿದ ಕ್ರಿಕೆಟ್ ದೇವರು ಮೋದಿಯನ್ನು ಯಾವ ರೀತಿ ಅಪ್ಪಿಕೊಂಡಿದ್ದಾರೆ ಗೊತ್ತಾ?! ಮೋದಿ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ ಸಚಿನ್!!

ರಾಜ್ಯಸಭೆಗೆ ಆಯ್ಕೆಯಾಗಿದ್ದ ಕ್ರಿಕೆಟ್ ದೇವರೆಂದೇ ತನ್ನ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ರವರು ಸರಿಯಾಗಿ ಸಂಸತ್ತಿಗೆ ಹಾಜರಾಗುವುದಿಲ್ಲ ಎಂಬ ಟೀಕೆಗಳು ಹಾಗು ವಿರೋಧಗಳು ಕೇಳಿ ಬಂದಿತ್ತು!! ಸಚಿನ ತೆಂಡುಲ್ಕರ್ ಅವರನ್ನು ಕಾಂಗ್ರೆಸ್ ತನ್ನ ಪಕ್ಷ ತನ್ನ ಲಾಭಕ್ಕಾಗಿಯೇ ರಾಜ್ಯ ಸಭೆಗೆ ಆಯ್ಕೆ ಮಾಡುತ್ತಾರೆ!! ಸಚಿನ್ ತೆಂಡುಲ್ಕರ್‍ರನ್ನು ಆಯ್ಕೆ ಮಾಡಿದರೆ ಮುಂದೆ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ಸಿಗರಿಗೆ ಲಾಭವಾಗಬಹುದು ಎಂದು ಕನಸು ಕಂಡಿದ್ದರು!! ಸಚಿನ್ ತೆಂಡುಲ್ಕರ್‍ರವರು ಯಾವಾಗಲೂ ಮೋದಿಜೀಯ ಹಾದಿಯನ್ನು ಹಿಡಿದಿದ್ದರು.. ಮೋದಿಜೀ ಕನಸಿನಂತೆ ದೇಶದ ಪ್ರಗತಿಗೆ ಸಚಿನ್ ತೆಂಡುಲ್ಕರ್ ಕೂಡಾ ಈಗ ಮೋದಿಯನ್ನು ಅಪ್ಪಿಕೊಂಡಿದ್ದಾರೆ!! ಈ ಸುದ್ದಿ ಕೇಳುತ್ತಿದ್ದಂತೆಯೇ ಕಾಂಗ್ರೆಸ್ಸಿಗರಿಗೆ ನಡುಕ ಶುರುವಾಗಿದೆ!!

ವೇತನ ಮತ್ತು ಭತ್ಯೆಯನ್ನು ಸಂಪೂರ್ಣವಾಗಿ ದೇಣಿಗೆ ನೀಡಿದ ಕ್ರಿಕೆಟ್ ದೇವರು..!!

ವಿಶ್ವ ಕ್ರಿಕೆಟ್‍ನ ದಿಗ್ಗಜ ಬ್ಯಾಟ್ಸ್‍ಮನ್ ಸಚಿನ್ ತೆಂಡುಲ್ಕರ್ ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ತಮ್ಮ ಆರು ವರ್ಷಗಳ ಸದಸ್ಯತ್ವ ಅವಧಿಯನ್ನು ಪೂರ್ಣಗೊಳಿಸಿದರು. ರಾಜ್ಯಸಭೆಯ ಸಂಸದರಾಗಿದ್ದ ಕಾರಣಕ್ಕೆ ಬಂದ ಅಷ್ಟೂ ವೇತನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದಾನ ಮಾಡುವ ಮೂಲಕ ಸಚಿನ್ ಮಾದರಿಯಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್‍ರ ಈ ನಿರ್ಧಾರವನ್ನು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಶ್ಲಾಘಿಸಿದೆ.

 

2012ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದ ಸಚಿನ್ ತೆಂಡುಲ್ಕರ್, 6 ವರ್ಷಗಳಲ್ಲಿ 90 ಲಕ್ಷ ರೂಪಾಯಿಗೂ ಅಧಿಕ ವೇತನ ಹಾಗೂ ಪ್ರತಿ ತಿಂಗಳ ಭತ್ಯೆಯನ್ನು ಪಡೆದಿದ್ದರು. ಸಚಿನ್ ಸಂಸತ್ತಿಗೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ಟೀಕೆಗಳು ಬಂದಿದ್ದವು. ಆದರೆ, ಸಂಸದರ ನಿಧಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದ ಸಚಿನ್ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು.

ಸಚಿನ್‍ರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟು 185 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ತಮಗೆ ನೀಡಿದ್ದ 30 ಕೋಟಿ ರೂ. ಅನುದಾನದ ಪೈಕಿ 7.4 ಕೋಟಿ ರೂ. ಮೊತ್ತವನ್ನು ಶಿಕ್ಷಣ ಹಾಗೂ ರಚನಾತ್ಮಕ ಅಭಿವೃದ್ಧಿ, ಶಾಲಾ ಕೊಠಡಿಗಳ ನವೀಕರಣಗಳಿಗೆ ಬಳಕೆ ಮಾಡಲಾಗಿದೆ.

ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ..!!

ಪ್ರಧಾನಮಂತ್ರಿ ಕಚೇರಿಯೂ ಈ ಬಗ್ಗೆ ಅಂಗೀಕಾರ ಪತ್ರವೊಂದನ್ನು ಹೊರಡಿಸಿದ್ದು, `ಈ ಚಿಂತನಾಶೀಲ ನಡೆಯನ್ನು ಪ್ರಧಾನಮಂತ್ರಿಗಳು ಒಪ್ಪಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ಕೊಡುಗೆಯು ತೊಂದರೆಗೊಳಗಾಗುವವರಿಗೆ ನೆರವಾಗಲು ಅಪಾರವಾದ ಸಹಾಯ ನೀಡುತ್ತದೆ’ ಎಂದು ತಿಳಿಸಿದೆ.

Related image

2 ಗ್ರಾಮ ದತ್ತು ಸ್ವೀಕಾರ

ಪ್ರಧಾನಿ ಮೋದಿ ಆರಂಭಿಸಿದ್ದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಸಚಿನ್ ತೆಂಡುಲ್ಕರ್ ಎರಡು ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದರು. ಆಂಧ್ರದ ಪುಟ್ಟಂ ರಾಜು ಕಂಡ್ರಿಗಾ ಹಾಗೂ ಮಹಾರಾಷ್ಟ್ರದ ಡೊಂಜಾ ಗ್ರಾಮಗಳ ದತ್ತು ಪಡೆದಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು.

ಸ್ವಚ್ಛ ಭಾರತವನ್ನು ಕೊಂಡಾಡಿದ್ದ ಸಚಿನ್!!

ಪ್ರಧಾನಿ ನರೇಂದ್ರ ಮೋದಿವರ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಸ್ವತಃ ತಾನೇ ಪೊರಕೆ ಹಿಡಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು!! ಹೀಗೆ ಪ್ರಧಾನಿ ನರೇಂದ್ರ ಮೋದಿಯು ದೇಶದ ಅಭಿವೃದ್ಧಿಗಾಗಿ ಯಾವ ರೀತಿಯ ಕೆಲಸಗಳನ್ನು ಮಾಡಿದರೂ ಅದಕ್ಕೆ ಮೆಚ್ಚಗೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ ಈ ಕ್ರಿಕೆಟ್ ಮಾಂತ್ರಿಕ!! ಅದಲ್ಲದೆ ಸೈನಿಕರಿಗೆ ಪ್ರಧಾನಿ ಮೋದಿಯವರು ನೀಡುತ್ತಿರುವ ಸವಲತ್ತುಗಳಿಗೂ ಇವರು ಹಲವಾರು ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ!!

Image result for sachin with modi swachh bharat

ಒಟ್ಟಾರೆಯಾಗಿ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿಯನ್ನು ಹೊಂದಿರುವಂತಹ ಸಚಿನ್ ತನಗೆ ರಾಜ್ಯ ಸಭೆಯಲ್ಲಿ ಬಂದ ಎಲ್ಲಾ ವೇತನವನ್ನು ಪ್ರಧಾನ ಮಂತ್ರಿ ದೇಣಿಗೆಗೆ ನೀಡುವ ಮೂಲಕ ತಾನು ಮೋದಿಯನ್ನು ಅಪ್ಪಿಕೊಂಡದ್ದನ್ನು ಇಡೀ ಜನತೆಗೆ ತಿಳಿಸುತ್ತಾರೆ!!

ಪವಿತ್ರ

Tags

Related Articles

Close