ಪ್ರಚಲಿತ

ಸನಾತನ ಸಂಸ್ಕೃತಿ ಉಳಿವಿಗೆ ಹಿಂದೂಗಳೇ ಎಚ್ಚೆತ್ತುಕೊಳ್ಳಬೇಕು… ಇಲ್ಲವಾದರೆ!!!

ನಮ್ಮ ದೇಶದ ಮೂಲವೇ ಸನಾತನ ಹಿಂದುತ್ವ. ಈ ಬೇರಿನ ರಸ ಹೀರಿ ಅನೇಕ ಧರ್ಮಗಳು ಇಂದು ಭಾರತದಲ್ಲಿ ತಮ್ಮ ಬುಡ ಗಟ್ಟಿ ಮಾಡಿಕೊಂಡಿವೆ ಎಂದರೆ ತಪ್ಪಾಗಲಾರದು. ಕ್ರೈಸ್ತ, ಮುಸಲ್ಮಾನ ಸೇರಿದಂತೆ ಇನ್ನೂ ಹಲವಾರು ಧರ್ಮಗಳಿಗೆ ಈ ಮಣ್ಣಲ್ಲಿ ಉಳಿಯಲು, ಬೆಳೆಯಲು ಹಿಂದೂ ಧರ್ಮ ಉದಾರ ಅವಕಾಶ ನೀಡಿದೆ. ಆದರೆ ಈ ಉದಾರತ್ವವೇ ಹಿಂದೂ‌ಗಳ ಪಾಲಿಗೆ ಉರುಳಾಗುತ್ತಿರುವುದೇನೋ ಎಂಬ ಹಾಗೆ, ಅನೇಕ ಧರ್ಮಗಳು ಹಿಂದೂ ಧರ್ಮವನ್ನು ನಾಶ ಮಾಡುವ ದುರುದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ದೊರೆಯುತ್ತಿವೆ.

ಅಂದ ಹಾಗೆ ಕಳೆದ ಎರಡು ದಿನಗಳಲ್ಲಿ ಮಂಗಳೂರಿನ ಶಾಲೆಯೊಂದರಲ್ಲಿ ಕ್ರೈಸ್ತ ಮತಕ್ಕೆ ಸೇರಿದ ಶಿಕ್ಷಕಿಯೊಬ್ಬಳ ಅನಾಚಾರ ಬೆಳಕಿಗೆ ಬಂತು. ಮಂಗಳೂರಿನ ಜೆಪ್ಪುವಿನ ಸಂತ ಜೆರೊಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಿಸ್ಟರ್ ಪ್ರಭಾ ಎಂಬಾಕೆ ತರಗತಿಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವುದು ಬಿಟ್ಟು ತನ್ನ ಧರ್ಮ ಪ್ರಚಾರ ಕಾರ್ಯ ಮಾಡುತ್ತಿದ್ದಳು‌. ಜೊತೆಗೆ ಹಿಂದೂ ಧರ್ಮಕ್ಕೆ, ದೇವರುಗಳಿಗೆ ಅವಮಾನ ಮಾಡುವುದು, ಹಿಂದೂ ವಿದ್ಯಾರ್ಥಿಗಳ ಬ್ರೈನ್ ವಾಷ್ ಮಾಡುವುದು ಮೊದಲಾದ ದುರ್ಬುದ್ಧಿ ತೋರಿಸುತ್ತಿದ್ದಳು. ಪುಟಾಣಿ ಮಕ್ಕಳ ಮನಸ್ಸನ್ನು ಕೆಡಿಸಿ, ಅವರಿಗೆ ಹಿಂದೂ ಧರ್ಮದ ಮೇಲೆ ಅಪನಂಬಿಕೆ ಬಿತ್ತುವ ಕೆಲಸವನ್ನು ಮಾಡಿ, ಸಂಬಳ ತೆಗೆದುಕೊಳ್ಳುತ್ತಿದ್ದಳು‌.

ಐದರಿಂದ ಏಳನೇ ತರಗತಿಯ ಮಕ್ಕಳ ಮುಂದೆ ಅವಳ ಈ ನಾಟಕ ನಡೆಯುತ್ತಿತ್ತು. ಹಿಂದೂಗಳ ದೇವರನ್ನು ಅಪಮಾನಿಸುವುದು, ಹಿಂದೂ ಧರ್ಮ ಧರ್ಮವೇ ಅಲ್ಲ ಎನ್ನುವುದು ಇತ್ಯಾದಿಗಳನ್ನು ಮಕ್ಕಳಿಗೆ ಬೋಧಿಸುತ್ತಿದ್ದಳು. ಈಕೆಯ ನಿತ್ಯ ರೋಧನೆಗೆ ರೋಸಿ ಹೋದ ಮಕ್ಕಳು ತಮ್ಮ ಹೆತ್ತವರ ಗಮನಕ್ಕೆ ಆ ವಿಷಯವನ್ನು ತಲುಪಿಸಿದ್ದಾರೆ. ಪೋಷಕರು ಅದನ್ನು ಗಂಭೀರವಾಗಿ ತೆಗೆದುಕೊಂಡು, ಮಕ್ಕಳ ಜೊತೆಗೆ ಸೇರಿ ಶಾಲೆಗೆ ಬಂದು ಪ್ರತಿಭಟಿಸಿದ್ದಾರೆ. ಪರಿಣಾಮ ಸಿಸ್ಟರ್ ಪ್ರಭಾ‌ಳಿಗೆ ಸಸ್ಪೆಂಡ್ ಭಾಗ್ಯ ನೀಡಿ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ಪ್ರಭಾವ ಪ್ರಭಾವಳಿಯಿಂದ ಸಂತ್ರಸ್ಥರಾದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕ್ರೈಸ್ತ ಧರ್ಮೀಯರು ನಿರ್ಮಾಣ ಮಾಡಿದ ಕ್ರಿಶ್ಚಿಯನ್ ಎಜುಕೇಶನ್ ಸೆಂಟರ್ ಭಯಭೀತವಾಗಿದ್ದಂತೂ ಸುಳ್ಳಲ್ಲ. ಹಿಂದೂಗಳು ತಿರುಗಿ ಬಿದ್ದರೆ ಉಳಿಗಾಲ ಇಲ್ಲ ಎನ್ನುವುದನ್ನು ಮಂಗಳೂರಿನ ಈ ವಿದ್ಯಾರ್ಥಿಗಳ ಶಕ್ತಿ ಮಾಡಿ ತೋರಿಸಿದೆ. ಶಿಕ್ಷಕಿಗೆ ಶಾಲಾ ಆಡಳಿತ ಮಂಡಳಿ ಟಾಟಾ ಬೈ ಬೈ ಹೇಳುತ್ತಿದ್ದಂತೆ, ಇತ್ತ ಮಕ್ಕಳು ಜೈ ಶ್ರೀರಾಮ್ ಘೋಷಣೆ ಗಳ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕತ್ ವೈರಲ್ ಆಗಿದ್ದು, ಹಿಂದೂಗಳು ತಿರುಗಿ ಬಿದ್ದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿ ಸಮೇತ ಉತ್ತರ ದೊರಕಿದ ಹಾಗಾಗಿದೆ.

ಘಟನೆ ಹಾಗಿರಲಿ‌. ಹಲವಾರು ಕ್ರೈಸ್ತ ಮಿಷನರಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಬೆಳಕಿಗೆ ಬರುತ್ತಿಲ್ಲ ಎನ್ನುವುದು ಸತ್ಯ. ಇದಕ್ಕೆ ಆ ಧರ್ಮದ ಮತ ಪ್ರಚಾರಕರನ್ನು ಮಾತ್ರ ಗುರಿ ಪ್ರಯೋಜನ ಇಲ್ಲ. ಬದಲಾಗಿ ಹಿಂದೂಗಳಾದ ನಾವು ಎಲ್ಲಿ ಎಡವಿದ್ದೇವೆ?, ಎಲ್ಲಿ ತಪ್ಪು ಮಾಡಿದ್ದೇವೆ? ಮಾಡುತ್ತಿದ್ದೇವೆ? ಎನ್ನುವುದರ ಪರಾಮರ್ಶೆ ಮತ್ತು ಅದನ್ನು ತಿದ್ದಿಕೊಳ್ಳುವ ಮೂಲಕ ಹಿಂದುತ್ವಕ್ಕೆ ಇತರ ಧರ್ಮೀಯರಿಂದ ಆಗುತ್ತಿರುವ ಸಮಸ್ಯೆಯ ವಿರುದ್ಧ ಸೆಟೆದು ನಿಲ್ಲಬೇಕಿದೆ.

ಕ್ರಿಶ್ಚಿಯನ್ ಮಿಷನರಿಗಳಿಗೆ ನಮ್ಮ ಮಕ್ಕಳು ಹೋದರೆ ಅಲ್ಲಿ ನಮ್ಮ ಸ್ಟ್ಯಾಂಡರ್ಡ್ ಹೆಚ್ಚುತ್ತದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತದೆ, ನಮ್ಮ ಮಕ್ಕಳ ಇಂಗ್ಲೀಷ್ ನಾಲೆಡ್ಜ್ ಹೆಚ್ಚುತ್ತದೆ ಎನ್ನುವ ನಾವು ಹಿರಿಯರು ಮಕ್ಕಳನ್ನು ಅವರ ಧರ್ಮದ ಶಾಲೆಗಳಿಗೆ ಅಂದರೆ ಕ್ರೈಸ್ತ ಕಾನ್ವೆಂಟ್‌ಗಳಿಗೆ ಸೇರಿಸುತ್ತೇವೆ. ಜೊತೆಗೆ ಅದನ್ನು ನಮ್ಮ ಹಿರಿಮೆ ಎಂದುಕೊಂಡು ಇನ್ನಿತರ ಮುಂದೆ ಕೊಚ್ಚಿಕೊಳ್ಳುತ್ತೇವೆ. ಆದರೆ, ನಾವು ಸೇರಿಸಿದ ಶಿಕ್ಷಣ ಸಂಸ್ಥೆ ನಮ್ಮ ಮಕ್ಕಳನ್ನು ನಮ್ಮ ಮಾತೃ ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದೆ, ಅವರಲ್ಲಿ ಹಿಂದೂ ಧರ್ಮದ ಕುರಿತ ವಿಷ ಬೀಜ ಬಿತ್ತುತ್ತಿದೆ ಎನ್ನುವುದನ್ನು ಮರೆಯುತ್ತಿದ್ದೇವೆ. ಆದರೆ ನಾವು ಮಾತ್ರ ನನ್ನ ಮಗ/ಳು ಕಾನ್ವೆಂಟ್‌ನಲ್ಲಿ ಕಲಿಯುವುದಾಗಿ ಮೆರೆಯುತ್ತಿರುವುದು ದುರಾದೃಷ್ಟ.

ಅಲ್ಲಿಗೆ ಸೇರಿದ ಮಕ್ಕಳು ಹಿಂದೂ ಸಂಪ್ರದಾಯಗಳನ್ನು ತ್ಯಜಸುತ್ತಾರೆ. ಇಂಗ್ಲೀಷ್ ಅರಳು ಹುರಿದಂತೆ ಮಾತನಾಡಲು ಕಲಿಯುವಾಗ ಇತ್ತ ಕೈಗೆ ಹಾಕುವ ಬಳೆ, ತಲೆಗೆ ಮಾಡಿರುವ ಹೂವು, ಹಣೆಬೊಟ್ಟು, ದೇವರ ಹಣೆಬೊಟ್ಟು ಇತ್ಯಾದಿಗಳನ್ನು ತ್ಯಜಿಸುತ್ತಾರೆ. ಇವೆಲ್ಲವೂ ಫ್ಯಾಶನ್ ಎಂಬ ವಿಷಯಕ್ಕೆ ಬರುವುದಿಲ್ಲ ಎಂದು ಭಾವಿಸುತ್ತಾರೆ. ಹಿಂದೂ ಸಾಂಪ್ರದಾಯಿಕ ಉಡುಪುಗಳ ಸ್ಥಾನವನ್ನು ವಿದೇಶಿ ವಸ್ತ್ರಗಳು ತುಂಬಿವೆ. ಹಾಗೆಯೇ, ಹಿಂದೂ ಆಚರಣೆಗಳು ಹಳ್ಳ ಹಿಡಿದಿವೆ. ನಮ್ಮ ಮಕ್ಕಳು ಹೀಗೆಲ್ಲಾ ಬದಲಾದರೂ ನಾವು ಮಾತ್ರ ಯಾವುದನ್ನೂ ಗಮನಿಸುತ್ತಿಲ್ಲ.

ಹಲವು ಬಾರಿ ನಾವು ಗಮನಿಸದೇ ಇರುವುದೇ ಮುಂದೆ ಹಿಂದೂ ಧರ್ಮವನ್ನು ಇತರರು ಅವಹೇಳನ ಮಾಡುವುದು, ನಮ್ಮ ಧರ್ಮದ ಮೇಲೆ ಸವಾರಿ ಮಾಡುವುದು ಮಾಡುತ್ತಾರೆ. ನಾವು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಈ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಾದ ನಾವೇ ಅಲ್ಪಸಂಖ್ಯಾತರಾಗುತ್ತೇವೆ ಎನ್ನುವುದು ನಾವು ಅರಿಯಬೇಕಾದ ಸತ್ಯ. ನಮ್ಮ ಬದಲಾವಣೆಯಲ್ಲಿ, ಧರ್ಮದ ಮೇಲಿನ ಒಲವಿನಲ್ಲೇ ಹಿಂದುತ್ವದ ಅಳಿವು – ಉಳಿವಿನ ಪ್ರಶ್ನೆ ಇದೆ.

ನಮ್ಮ ಮಕ್ಕಳನ್ನು ನಮ್ಮ ಸಂಸ್ಕೃತಿ, ಧರ್ಮವನ್ನು ಸಾರುವ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸುವುದು, ನಮ್ಮ ಆಚಾರ, ವಿಚಾರ, ಪದ್ಧತಿ, ಸಂಸ್ಕೃತಿ, ಸಂಪ್ರದಾಯಗಳನ್ನು ಅವರಿಗೆ ತಿಳಿಸುವ, ಅವರ ಅರಿವಿನ ಮಸ್ತಕದಲ್ಲಿ ತುಂಬಿದಲ್ಲಿ ಮಾತ್ರ ನಮ್ಮ ಧರ್ಮದ ಉಳಿವು ಸಾಧ್ಯ. ನಮ್ಮ ಧರ್ಮದ ಉಳಿವು ನಮ್ಮ ಕೈಯಲ್ಲೇ. ನಮ್ಮಲ್ಲಿ ಧರ್ಮ ಜಾಗೃತಿ ಜಾಗೃತವಾಗಿದ್ದಲ್ಲಿ ನಮ್ಮನ್ನು ಅಲ್ಲಾಡಿಸುವುದು ಯಾರಿಂದಲೂ ಸಾಧ್ಯವಿಲ್ಲ.

Tags

Related Articles

Close