ಪ್ರಚಲಿತ

ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಸ್ವಾಮೀಜಿ!!

ಗುಜರಾತ್‍ನಲ್ಲಿ ಪಟೇಲ್ ಜನಾಂಗದವರನ್ನು ಎತ್ತಿಕಟ್ಟಿ ಕಾಂಗ್ರೆಸ್ ಯಾವ ರೀತಿ ನೆಲಕಚ್ಚಿತೋ ಅದೇ ಪರಿಸ್ಥಿತಿ ಕರ್ನಾಟಕದಲ್ಲೂ ಬಂದೊದಗುವ ಸಾಧ್ಯತೆ ಇದೆ. ಯಾಕೆಂದರೆ ಲಿಂಗಾಯತ ಸ್ವತಂತ್ರ ಧರ್ಮ ಎಂದು ಮಾನ್ಯತೆ ಮಾಡಲು ಹೋದ ಸಿದ್ದರಾಮಯ್ಯ ವೀರಶೈವ-ಲಿಂಗಾಯಿತರ ಕೋಪಕ್ಕೆ ತುತ್ತಾಗಿದ್ದು, ಧರ್ಮ ಒಡೆದ ಸಿದ್ದರಾಮಯ್ಯ ಎನ್ನುವ ಸಿಟ್ಟು ಮಡುಗಟ್ಟುವ ಸಾಧ್ಯತೆಯೇ ಹೆಚ್ಚಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ವೀರಶೈವ ಹಾಗೂ ಲಿಂಗಾಯತರನ್ನು ಪ್ರತ್ಯೇಕಿಸಲು ಸಿದ್ದಾರಮಯ್ಯ ಮುಂದಾಗಿರುವುದು ವೀರಶೈವರು ಹಾಗೂ ಲಿಂಗಾಯತರು ಹೀಗೆ ಇಬ್ಬರ ಕೆಂಗಣ್ಣಿಗೂ ಗುರಿಯಾದಂತಾಗಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಎಂಬ ಮಾನ್ಯತೆಗಾಗಿ ಈಗಾಗಲೇ ಸಿದ್ದರಾಮಯ್ಯನವರು ಕೇಂದ್ರಕ್ಕೆ ಶಿಫಾರಸ್ಸನ್ನು ಸಲ್ಲಿಸಿದ್ದಾರೆ. ಇದು ಹಲವಾರು ಸ್ವಾಮೀಜಿಗಳ ಹಾಗೂ ಜನಸಾಮಾನ್ಯರ ಕೋಪಕ್ಕೆ ತುತ್ತಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಾಗಲಕೋಟೆಯ ಶಿವಯೋಗಮಂದಿರದ ಟ್ರಸ್ಟ್ ಅಧ್ಯಕ್ಷ್ಯ ಸಂಗನಬಸವ ಸ್ವಾಮೀಜಿ ಈಗಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸ್ಸನ್ನು ತಿರಸ್ಕರಿಸಬೇಕು, ಮಾನ್ಯ ಮಾಡಬಾರದು ಎಂದು ಅಮಿತ್ ಷಾ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ಬಾಗಲಕೋಟೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಈಗಾಗಲೇ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ವೀರಶೈವ-ಲಿಂಗಾಯತ ಒಂದೇ ಎಂಬುವುದು ನಮ್ಮ ನಿಲುವು ಎಂದಿದ್ದಾರೆ. ಸ್ವಾಮೀಜಿಯವರ ಅವರ ಷಾ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಸಿದ್ದು ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಇದು ವೇದಿಕೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿಬಂದಿದೆ.

ಸಿಎಂ ಸಿದ್ದರಾಮಯ್ಯ ಅವರು ಶಿವಯೋಗ ಮಂದಿರ ಇರುವ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಶೀ ಜಗದ್ಗುರುಗಳು ಮುಖ್ಯಮಂತ್ರಿಗಳು ಧರ್ಮವನ್ನು ಒಡೆದಿದ್ದಾರೆ. ಈ ಬಗ್ಗೆ ರಾಜ್ಯದ ಜನರಿಗೆ ಆಕ್ರೋಶವಿದ್ದು, ಪ್ರಜಾಪ್ರಭುಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು, ಧರ್ಮವನ್ನು ಒಡೆದದ್ದು ಸರಿಯಲ್ಲ ಎಂದು ಜನರಿಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮುಂಚೆ ಅಮಿತ್ ಷಾ ಅವರು 250 ಸ್ವಾಮೀಜಿಗಳ ಜೊತೆ ಸಂವಾದ ನಡೆಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ರಾಜ್ಯ ಸರಕಾರದ ನಿರ್ಧಾರ ಸರಕಾರಕ್ಕೆ ತಲೆನೋವಾಗುವ ಸಾಧ್ಯತೆ ಇದೆ. ಧರ್ಮ ಒಡೆದ ಸಿದ್ದರಾಮಯ್ಯ ಎನ್ನುವ ವಿಚಾರ ಚಾಲ್ತಿಗೆ ಬಂದು, ಇದು ಚುನಾವಣೆಯಲ್ಲಿ ಸಿದ್ದರಾಮಯ್ಯ ಪರ ಅನುಕಂಪಕ್ಕೆ ಬದಲಾಗಿ ಧರ್ಮ ಒಡೆದ ಸಿದ್ದರಾಮಯ್ಯ ಎನ್ನುವ ಸಿಟ್ಟು ಉಂಟಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

source: http://vijayavani.net/sanganabasava-swamiji-bagalkot-lingayat-separate-religion-amit-shah-state-tour-kashi-jagadguru/

ಚೇಕಿತಾನ

Tags

Related Articles

Close