ಪ್ರಚಲಿತ

ಗ್ಯಾನವ್ಯಾಪಿ ಮಸೀದಿ ಜಾಗದಲ್ಲಿ ಶಿವ ಮಂದಿರ ನಿರ್ಮಾಣದ ದಿನ ದೂರವಿಲ್ಲ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮುಸಲ್ಮಾನರದ್ದಲ್ಲ. ಅದು ಹಿಂದೂಗಳ ಪವಿತ್ರ ಸ್ಥಳ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಅಲ್ಲಿ ಭವ್ಯ ರಾಮಾಲಯ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಈ ಭವ್ಯ ಆಲಯ ಲೋಕಾರ್ಪಣೆಯೂ ಆಗಲಿದೆ.

ರಾಮ ಜನ್ಮ ಭೂಮಿಯ ತೀರ್ಪಿನ ಬಳಿಕ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅಕ್ರಮವಾಗಿ ವಶಕ್ಕೆ ಪಡೆದು ಅಲ್ಲಿ ಮುಸಲ್ಮಾನರು ತಮ್ಮ ಪ್ರಾರ್ಥನಾಲಯಗಳನ್ನು ನಿರ್ಮಾಣ ಮಾಡಿದ ಹಲವಾರು ಘಟನೆಗಳು ಕೋರ್ಟ್ ಮೆಟ್ಟಿಲೇರಿರುವ ಸಂಗತಿ ಎಲ್ಲರಿಗೂ ಸಂಗೀತ. ಇದರಲ್ಲಿ ಅಲಹಾಬಾದ್‌ನ ಗ್ಯಾನವ್ಯಾಪಿ ಸಹ ಒಂದು. ಹೌದು ಸದ್ಯ ಗ್ಯಾನವ್ಯಾಪಿ ಮಸೀದಿಯ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಈ ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಸಂಬಂಧಿಸಿದಂತೆ ಐವರು ಹಿಂದೂ ಮಹಿಳೆಯರು ಅಲಹಾಬಾದ್ ಕೋರ್ಟ್‌‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಹಾಗೆಯೇ, ಈ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಕಾಶಿಯ ವಿಶ್ವನಾಥನ ಮಂದಿರವನ್ನು ಕೆಡವಿ ಆ ಜಾಗದಲ್ಲಿ ಗ್ಯಾನವ್ಯಾಪಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಈ ಜಾಗ ದಲ್ಲಿರುವ ಹಿಂದೂ ದೇವರ ಆರಾಧನೆಗೆ ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದ್ದು ಇದು ಹಿಂದೂಗಳಿಗೆ ಸಿಕ್ಕ ಗೆಲುವಾಗಿದೆ. ಈ ಪ್ರದೇಶದಲ್ಲಿ ಮತ್ತೆ ಭವ್ಯ ಶಿವ ಮಂದಿರ ಕಟ್ಟುವ ದಿನ ದೂರವಿಲ್ಲ ಎಂದು ಹಿಂದೂಗಳ ಪರ ವಾದ ಮಂಡಿಸುತ್ತಿರುವ ವಕೀಲ ಹರಿ ಶಂಕರ್ ಜೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags

Related Articles

Close