ಪ್ರಚಲಿತ

ಕೇಂದ್ರ ಸರಕಾರಿ ನೌಕರರಿಗೆ ಮೋದಿಯಿಂದ ಶಾಕಿಂಗ್ ನ್ಯೂಸ್!! ಓವರ್ ಟೈಮ್ ಭತ್ಯೆ ಪಡೆಯುವುದೂ ಇನ್ನುಮುಂದೆ ಕಷ್ಟ!!

ಇತ್ತೀಚೆಗಷ್ಟೇ ನರೇಂದ್ರ ಮೋದಿ ಸರಕಾರವು ಸರಕಾರಿ ಉದ್ಯೋಗಿ ಆಕಾಂಕ್ಷಿಗಳಿಗೆ, ಸರಕಾರಿ ಉದ್ಯೋಗ ಬೇಕೇ ಹಾಗಾದರೆ ಭಾರತೀಯ ಸೇನೆಯಲ್ಲಿ ಐದು ವರ್ಷ ಸೇವೆ ಮಾಡುವುದು ಅತ್ಯಗತ್ಯ ಎಂದು ಹೇಳುವ ಮೂಲಕ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದರು!! ಆದರೆ ಇದೀಗ ಪ್ರತಿ ಬಾರಿಯೂ ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡುತ್ತಲೇ ಬರುತ್ತಿರುವ ನರೇಂದ್ರ ಮೋದಿ ಸರಕಾರವು ಇದೀಗ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. 

ಈಗಾಗಲೇ ಸರಕಾರಿ ನೌಕರರು 60ರ ಹರೆಯದಲ್ಲಿ ನಿವೃತ್ತರಾದ ಬಳಿಕ ಅವರನ್ನು ಕೆಲವೊಂದು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಮಹತ್ತರ ಯೋಜನೆಯನ್ನು ಕೇಂದ್ರ ಸರಕಾರ ಕೈಗೊಂಡಿದ್ದಲ್ಲದೇ, ಹರೆಯದಲ್ಲಿ ಅವರು ಅನುಭವಸ್ಥರೂ, ಸಾಮರ್ಥ್ಯವಂತರೂ, ಶಕ್ತಿವಂತರೂ ಆಗಿದ್ದಾಗ, ಅವರನ್ನು ಹೊಸ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಜೀವನದಲ್ಲಿ ಅವರಿಗೆ ಹೊಸ ಇನ್ನಿಂಗ್ಸ್ ಆರಂಭಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಚಿವ ಜಿತೇಂದ್ರ ಸಿಂಗ್ ಈ ಹಿಂದೆಯಷ್ಟೇ ತಿಳಿಸಿರುವ ವಿಚಾರ ಗೊತ್ತೇ ಇದೆ!!

ಆದರೆ ಇದೀಗ ಕೇಂದ್ರದ ನೌಕರರಿಗೆ ಓವರ್ ಟೈಮ್ ಭತ್ಯೆ ನೀಡದೇ ಇರುವ ನಿರ್ಧಾರವನ್ನು ಕೈಗೊಳ್ಳುವ ಮೂಲಕ ನರೇಂದ್ರ ಮೋದಿ ಸರಕಾರವು ಕೇಂದ್ರ ಸರಕಾರಿ ನೌಕರರಿಗೆ ಶಾಕಿಂಗ್ ನೀಡಿದೆ. ಅಷ್ಟೇ ಅಲ್ಲದೇ, ಈ ವಿಚಾರವನ್ನು, 7 ನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ!!

ಏಪ್ರಿಲ್ ತಿಂಗಳಿನಲ್ಲಿ ಶುಭ ಸುದ್ದಿ ನೀಡಿದ್ದ ಕೇಂದ್ರ!!

ಈ ಹಿಂದೆಯಷ್ಟೇ, ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆಯನ್ನು ಶೇ.2 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿತ್ತು!! ಅಷ್ಟೇ ಅಲ್ಲದೇ, 48.1 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 61.17 ಲಕ್ಷ ಪಿಂಚಣಿದಾರರು ಇದರ ಅನುಕೂಲ ಪಡೆಯಲಿದ್ದಾರೆ ಎನ್ನುವ ಸಿಹಿ ಸುದ್ದಿಯೊಂದನ್ನು ನೀಡುವ ಮೂಲಕ ಕೇಂದ್ರ ನೌಕರರಿಗೆ ಮೋದಿ ಸರಕಾರವು ಶುಭ ಸುದ್ದಿಯನ್ನು ನೀಡಿದ್ದರು!!

ಈಗಾಗಲೇ ವರದಿಯಾದಂತೆ ಏಪ್ರಿಲ್ ತಿಂಗಳಿನಿಂದ ಕೇಂದ್ರ ಸರಕಾರಿ ನೌಕರರ ಸಂಬಳ ಏರಿಕೆಯಾಗಲಿದ್ದು, ಲಕ್ಷಾಂತರ ಮಂದಿಗೆ ನರೇಂದ್ರ ಮೋದಿ ಸರಕಾರ ಸಂತಸದ ಸುದ್ದಿ ಕೊಟ್ಟಿದೆ. ಇನ್ನು, 7ನೇ ವೇತನ ಆಯೋಗ ಶಿಫಾರಸ್ಸಿನ ಅನ್ವಯ ಹೊಸ ವೇತನ ದರ ಪಟ್ಟಿ ಜಾರಿಗೆ ಬರಲಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಕೂಡ 2016ರಲ್ಲೇ ಒಪ್ಪಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲದೇ, ನೌಕರರಿಗೆ ಶುಭಸಿದ್ದಿ ಸಿಗುವ ನಿರೀಕ್ಷೆ ಕೆಳ ಹಂತದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕನಿಷ್ಟ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. 7 ನೇ ವೇತನ ಆಯೋಗ ಮಾಡಿರುವ ಶಿಫಾರಸ್ಸು ಮೀರಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರು.

Image result for modi

ಆದರೆ ಇದೀಗ ಕೇಂದ್ರದ ನೌಕರರಿಗೆ ಓವರ್ ಟೈಮ್ ಭತ್ಯೆ ನೀಡದೇ ಇರುವ ನಿರ್ಧಾರ ಕೈಗೊಳ್ಳುವ ಮೂಲಕ ನರೇಂದ್ರ ಮೋದಿ ಸರಕಾರವು ಕೇಂದ್ರ ನೌಕರರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲದೇ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತುಪಡಿಸಿದರೆ ಇತರ ಯಾವುದೇ ಉದ್ಯೋಗಿಗೂ ಓವರ್ ಟೈಮ್ ಭತ್ಯೆ ನೀಡದೇ ಇರಲು 7 ನೇ ವೇತನ ಆಯೋಗದ ಶಿಫಾರಸಿನಂತೆ ತೀರ್ಮಾನಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗಣನೀಯ ವೇತನ ಏರಿಕೆಯಾಗಿದ್ದು, ಇದನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಅಷ್ಟೇ ಅಲ್ಲದೇ, ಭಾರತ ಸರಕಾರದ ಎಲ್ಲ ಸಚಿವಾಲಯಗಳು, ಹಾಗೂ ಕಚೇರಿಗಳಲ್ಲಿ ಈ ನಿರ್ಣಯ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ!!

ಅಷ್ಟಕ್ಕೂ ಓವರ್ ಟೈಮ್ ಭತ್ಯೆ ಪಡೆಯಲು ಯಾರು ಅರ್ಹರು ಗೊತ್ತೇ??

ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತು ಪಡಿಸಿದರೆ ಇತರ ಯಾವುದೇ ಉದ್ಯೋಗಿಗೂ ಓವರ್ ಟೈಮ್ ಭತ್ಯೆ ನೀಡದೇ ಇರಲು 7 ನೇ ವೇತನ ಆಯೋಗದ ಶಿಫಾರಸಿನಂತೆ ತೀರ್ಮಾನಿಸಲಾಗಿದೆ!! ಆದರೆ ಈ ವಿಭಾಗದ ನೌಕರರ ಓವರ್ ಟೈಂ ಕೆಲಸವನ್ನು ಬಯೋಮೆಟ್ರಿಕ್ ಜತೆಗೆ ಲಿಂಕ್ ಮಾಡಲು ನಿರ್ಧರಿಸಲಾಗಿದೆ.

ಹೌದು…. ಓವರ್ ಟೈಮ್ ಭತ್ಯೆ ಪಡೆಯಬೇಕೆಂದರೆ, ಹಿರಿಯ ಅಧಿಕಾರಿ ತುರ್ತು ಕೆಲಸದ ನಿಮಿತ್ತ ಇವರನ್ನು ಹೆಚ್ಚಿನ ಅವಧಿಗೆ ಕೆಲಸ ಮಾಡಿಸಿಕೊಳ್ಳಲಾಗಿದೆ ಎಂದು ಲಿಖಿತವಾಗಿ ನೀಡಬೇಕು. ಆಗ ಮಾತ್ರ ಒ.ಟಿ. ಭತ್ಯೆ ಪಡೆಯಲು ನೌಕರರು ಅರ್ಹರು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಆದರೆ ಈಗಾಗಲೇ, ಕೇಂದ್ರ ಸರಕಾರಿ ನೌಕರರು ತಾವಿರುವ ನಗರಗಳ ಆಧಾರದ ಮೇಲೆ ಶೇ. 45 ರವರೆಗೆ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರಲ್ಲದೇ, 47 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ, 53 ಲಕ್ಷ ಕೇಂದ್ರದ ಪಿಂಚಣಿದಾರರು, ಸೇನಾ ವಲಯದ 14 ಲಕ್ಷ ಸಿಬ್ಬಂದಿಗೆ ಇದರ ಲಾಭಗಳಾಗಿದ್ದಂತೂ ಅಕ್ಷರಶಃ ನಿಜ. ಈ ಕಾರಣದಿಂದಾಗಿ, ಕೇಂದ್ರ ಸರಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 30,748 ಕೋಟಿ ರೂಪಾಯಿ ಹೊರೆ ಬೀಳಲಿರುವ ಕಾರಣ ಕೇಂದ್ರ ಸರಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿರುವುದು ತಿಳಿದು ಬಂದಿದೆ!!

ಮೂಲ:
https://kannada.asianetnews.com/news/no-ot-for-most-of-central-govt-employees-paytr6

– ಅಲೋಖಾ

Tags

Related Articles

Close