ಪ್ರಚಲಿತ

ಪ್ರಧಾನಿ ಮೋದಿ ಬಗ್ಗೆ ಅಪಪ್ರಚಾರ: ಪ್ರಿಯಾಂಕಾ ಗಾಂಧಿ, ಅರವಿಂದ ಕೇಜ್ರಿವಾಲ್‌ಗೆ ಚುನಾವಣಾ ಆಯೋಗದಿಂದ ಶೊಕಾಸ್ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಏನು ಬೇಕಾದರೂ ಹೇಳಬಹುದು. ಬಾಯಿಗೆ ಬಂದ ಹಾಗೆ ದೂಷಿಸಬಹುದು, ತೆಗಳಬಹುದು, ವ್ಯಂಗ್ಯ ಅಪಹಾಸ್ಯ ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡ ಕೆಲ ಲದ್ದಿಜೀವಿಗಳು ನಮ್ಮಲ್ಲಿದ್ದಾರೆ. ಇನ್ನು ಕೆಲವರಿಗೆ ಪ್ರಧಾನಿ ಮೋದಿ ಅವರನ್ನು ದೂಷಿಸುವುದೇ ಅನ್ನ ಹುಟ್ಟುವ ದಾರಿ, ಪ್ರಚಾರ ಪಡೆಯುವ ದಾರಿಯಾಗಿ ಬಿಟ್ಟಿದೆ.

ದೇಶದಲ್ಲಿ ಏನೇ ನಕಾರಾತ್ಮಕ ವಿಚಾರಗಳು ನಡೆದರೂ, ಅದನ್ನು ಪ್ರಧಾನಿ ಮೋದಿ ಅವರ ತಲೆಗೆ ಕಟ್ಟಿ, ಏನೇನೋ ಪಿ ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸಲು ಹೊರಡುವ ವಿರೋಧಿಗಳಿಗೂ ನಮ್ಮ ದೇಶದಲ್ಲೇನೂ ಕಮ್ಮಿ ಇಲ್ಲ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಸಕಾರಾತ್ಮಕ ರಾಜಕಾರಣ ಸಹಿಸದ ಭ್ರಷ್ಟರು ಅವರ ವಿರುದ್ಧ ಅವಹೇಳನ ಮಾಡಿ ಮಾತನಾಡುವುದನ್ನೇ ಕಾಯಕ ಮಾಡಿಕೊಂಡು ಬಿಟ್ಟಿದ್ದಾರೆ.

ಪ್ರಧಾನಿ ಮೋದಿ ಅವರ ಬಗ್ಗೆ ಸುಳ್ಳು ಮಾತನಾಡಿದ ಆರೋಪದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರಿಬ್ಬರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಮತ್ತು ಎಎಪಿ ಯ ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿರುವುದಾಗಿದೆ. ಪ್ರಧಾನಿ ಮೋದಿ ಬಗ್ಗೆ ಅನಧಿಕೃತ ಮತ್ತು ಸುಳ್ಳು ಬಿತ್ತುವ ಮೂಲಕ ಸಮಾಜದ ದಾರಿ ತಪ್ಪಿಸಲು ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ಈ ನೊಟೀಸು ಜಾರಿಯಾಗಿದೆ.

ಸಾಮಾಜಿಕ ಜಾಲತಾಣ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಧಾನಿ ಮೋದಿ ಅವರ ವಿರುದ್ಧ ಅಪಪ್ರಚಾರ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಮಾಡಿದ ಹಿನ್ನೆಲೆಯಲ್ಲಿಯೂ ಈ ನೊಟೀಸ್ ಜಾರಿಯಾಗಿರುವುದಾಗಿದೆ.

ಇನ್ನೇನು ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ಅವರ ಬಗ್ಗೆ ಅನಧಿಕೃತ ಮತ್ತು ಸುಳ್ಳು ಬಿತ್ತುವ ಕಾರ್ಯ ಮಾಡಿದ್ದಾಗಿ ಬಿಜೆಪಿ ಆರೋಪಿಸಿತ್ತು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರನ್ನು ಸಹ ನೀಡಿತ್ತು‌. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಕೇಜ್ರಿವಾಲ್‌ಗೂ ನೊಟೀಸು ಜಾರಿಯಾಗಿರುವುದಾಗಿದೆ.

Tags

Related Articles

Close