ಪ್ರಚಲಿತ

ಧರ್ಮ ವಿಭಜನೆಯ ಕೊಡುಗೆ ನೀಡಿದ ಸಿದ್ದರಾಮಯ್ಯನವರು ಲಿಂಗಾಯತರ ಬೆನ್ನಿಗೆ ಚೂರಿ ಹಾಕಿದ್ದೇಗೆ ಗೊತ್ತಾ..?!

ವಾಹ್..! ರಾಜಕೀಯ ಆಟ ಅಂದರೆ ಈ ರೀತಿಯೇ ಇರಬೇಕು ಎಂದು ಪಾಠ ಕಲಿಯುವಂತಾಗಿದೆ. ಕಾಂಗ್ರೆಸ್ ನ ರಾಜಕೀಯ ಆಟ ಹೇಗಿರುತ್ತದೆ ಎಂದರೆ ಯಾರೂ ಊಹಿಸಲೂ ಸಾಧ್ಯವಿಲ್ಲ, ಆ ರೀತಿಯಲ್ಲಿ ಗೇಮ್ ಪ್ಲಾನ್ ಮಾಡಿ ಚುನಾವಣಾ ತಂತ್ರ ರೂಪಿಸಿದೆ. ಧರ್ಮ ಒಡೆದು ರಾಜಕೀಯ ಬೇಳೆ ಬೇಯಿಸಲು ನೋಡಿ ಇಡೀ ರಾಜ್ಯದಲ್ಲಿ ಜಾತಿಯ ಕಿಚ್ಚು ಹಚ್ಚಿಸಿ ಖುಷಿ ಪಡುತ್ತಿದ್ದ ಕಾಂಗ್ರೆಸ್ ಧರ್ಮ ವಿಭಜನೆಗೆ ಸಂತೋಷ ಪಟ್ಟು ಕುಣಿದಾಡಿದವರ ಬೆನ್ನಿಗೆ ಚೂರಿ ಹಾಕಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ತಂತ್ರ ರೂಪಿಸಿದ ಕಾಂಗ್ರೆಸ್ ಲಿಂಗಾಯತ ಮತ್ತು ವೀರಶೈವ ಧರ್ಮದ ವಿಭಜನೆ ಮಾಡಿ ದೊಡ್ಡ ಪ್ರಮಾಣದ ಮತವನ್ನು ಕಲೆ ಹಾಕಬಹುದು ಎಂಬ ಉಪಾಯ ಹೂಡಿದ್ದ ಸಿದ್ದರಾಮಯ್ಯನವರು ಭಾರೀ ತಂತ್ರ ರೂಪಿಸಿದ್ದರು. ಚುನಾವಣಾ ಹೊಸ್ತಿಲಲ್ಲೇ ಈ ರೀತಿಯ ಬೆಳವಣಿಗೆ ಕಂಡುಬಂದಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿತ್ತು. ಆದರೆ ಇದೀಗ ಸಿದ್ದರಾಮಯ್ಯನವರೇ ಲಿಂಗಾಯತ ಮತ್ತು ವೀರಶೈವ ಧರ್ಮದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೋಸ..!

ಇತ್ತೀಚೆಗಷ್ಟೇ ಧರ್ಮ ವಿಭಜನೆಗೆ ಶಿಫಾರಸ್ಸು ನೀಡಿ ಗಾಳದಿಂದ ತಪ್ಪಿಸಿಕೊಂಡಿದ್ದ ಸಿದ್ದರಾಮಯ್ಯನವರು ಭಾರೀ ಚಾಣಾಕ್ಷತನ ಮೆರೆದಿದ್ದರು. ಧರ್ಮ ವಿಭಜನೆ ಆಗಲೇಬೇಕೆಂದು ಪಟ್ಟು ಹಿಡಿದಿದ್ದ ಕೆಲ ಮುಖಂಡರು ಸರಕಾರಕ್ಕೆ ಸವಾಲೊಡ್ಡಿದ್ದರು.‌ ಇದರಿಂದ ಕಂಗಾಲಾದ ರಾಜ್ಯ ಸರಕಾರ ಬೀಸುವ ದೊಡ್ಡ ಯಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿ, ಶಿಫಾರಸ್ಸು ನೀಡಿ ಕೇಂದ್ರದ ಅಂಗಳಕ್ಕೆ ಕಳುಹಿಸಿತ್ತು. ಇದರಿಂದ ಲಿಂಗಾಯತ ಮತ್ತು ವೀರಶೈವ ಜನರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಆಸೆಯನ್ನೂ ಕಾಂಗ್ರೆಸ್ ಹುಟ್ಟಿಸಿತ್ತು. ಆದರೆ ಇದೀಗ ಟಿಕೆಟ್ ವಿಚಾರವಾಗಿ ಲಿಂಗಾಯತರಿಗೆ ಯಾವುದೇ ಕ್ಷೇತ್ರದಲ್ಲೂ ಟಿಕೆಟ್ ನೀಡದೆ ಕಾಂಗ್ರೆಸ್ ಅನ್ಯಾಯ ಎಸಗಿದೆ.‌

೩೮ ಕ್ಷೇತ್ರದಲ್ಲೂ ಲಿಂಗಾಯತರ ನಿರ್ಲಕ್ಷ್ಯ..!

ಹೆಸರಿಗಷ್ಟೇ ಪ್ರತ್ಯೇಕ ಧರ್ಮ ಮಾಡಿ ಹಿಂದೂ ಧರ್ಮವನ್ನು ಒಡೆವುವ ತಂತ್ರ ರೂಪಿಸಿದ್ದ ರಾಜ್ಯ ಸರಕಾರ , ಟಿಕೆಟ್ ನೀಡುವಾಗ ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ೨೮ ಕ್ಷೇತ್ರಗಳಲ್ಲೂ ಲಿಂಗಾಯತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಲಿಂಗಾಯತ ಮತ್ತು ವೀರಶೈವ ಧರ್ಮವನ್ನು ವಿಭಜನೆಗೊಳಿಸುವ ಮೂಲಕ ತಾವು ಈ ಎರಡೂ ಧರ್ಮದ ಪರವಾಗಿ ನಿಂತಿರುವುದಾಗಿ ತೋರ್ಪಡಿಸಿಕೊಂಡಿದ್ದರು. ಆದರೆ ಚುನಾವಣೆಯ ವಿಚಾರವಾಗಿ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಭರದಲ್ಲಿ ಲಿಂಗಾಯತರನ್ನು ಕಾಂಗ್ರೆಸ್ ಸಂಪೂರ್ಣವಾಗಿ ಮರೆತಂತಿದೆ. ಈ ಮೂಲಕ ತೋರ್ಪಡಿಕೆಗಾಗಿ ಧರ್ಮ ವಿಭಜನೆಯ ಕೊಡುಗೆ ನೀಡಿದ್ದ ಸಿದ್ದರಾಮಯ್ಯನವರು ಯಾವುದೇ ಆದ್ಯತೆ ನೀಡದೆ ಅವಮಾನಿಸಿದೆ.!

ರಾಜಕೀಯದಲ್ಲಿ ಇಂತಹ ಆಟಗಳಿಂದ ಗೆಲ್ಲಬಹುದು ಎಂಬ ಆಲೋಚನೆ ಕಾಂಗ್ರೆಸ್ ಗೆ ಇದ್ದಿರಬಹುದು. ಆದರೆ ಜನತೆ ಮೂರ್ಖರಲ್ಲ , ಇದಕ್ಕೆ ತಕ್ಕ ಉತ್ತರ ಒದಗಬೇಕಾದರೆ ಚುನಾವಣೆಯ ಫಲಿತಾಂಶ ಹೊರಬೀಳಬೇಕಿದೆ. ಅಲ್ಲಿಯವೆರೆಗೆ ಕಾಂಗ್ರೆಸ್ ನ‌ ಇಂತಹ ಆಟಗಳನ್ನು ನೋಡುತ್ತಲೇ ಇರಬೇಕು ಅಷ್ಟೇ..!!!

–ಅರ್ಜುನ್

 

Tags

Related Articles

Close