ಪ್ರಚಲಿತ

ಬಿಗ್ ಬ್ರೇಕಿಂಗ್! ಬಜೆಟ್ ಕ್ಯಾನ್ಸಲ್.! ಸಿಎಂ ಕುಮಾರಸ್ವಾಮಿ ವಿರುದ್ಧವೇ ಸಿಡಿದೆದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.!

ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡ ದಿನದಿಂದಲೇ ಕಿತ್ತಾಟಗಳು ಆರಂಭವಾಗಿದ್ದು, ಸರಕಾರ ರಚನೆಯಾಗಿ ೧೫ ದಿನ ಕಳೆದರೂ ಕೂಡ ಇನ್ನೂ ಈ ಎರಡೂ ಪಕ್ಷಗಳ ಕಚ್ಚಾಟ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಜೆಡಿಎಸ್‌ ಜೊತೆ ಕಾಂಗ್ರೆಸ್ ಕೈಜೋಡಿಸಿಕೊಂಡಿತ್ತೇ ವಿನಃ , ಕುಮಾರಸ್ವಾಮಿಗೆ ಅಧಿಕಾರ ನೀಡಲು ಕಾಂಗ್ರೆಸಿಗರಿಗೆ ಒಂಚೂರು ಇಷ್ಟವಿರಲಿಲ್ಲ. ಆದರೂ ಬೇರೆ ದಾರಿ ಇಲ್ಲದೇ ಇರುವುದರಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ತಾವೂ ರಾಜ್ಯಭಾರ ಮಾಡಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡೇ ಕಾಂಗ್ರೆಸ್ ಕೂಡ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿತ್ತು‌. ಆದರೆ ಇದೀಗ ಎರಡೂ ಪಕ್ಷಗಳ ಮುಖಂಡರ ವೈಮನಸ್ಸು ಹೆಚ್ಚಾಗುತ್ತಲೇ ಇದ್ದು, ಇದೀಗ ಬಜೆಟ್ ಮಂಡನೆ ವಿಚಾರದಲ್ಲಿ ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ವಾಕ್ಸಮರ ಉಂಟಾಗಿದೆ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಕುಮಾರಸ್ವಾಮಿ ಅವರ ವಿರುದ್ಧ ಕೆಂಡಕಾರುತ್ತಿದ್ದು, ಮೈತ್ರಿ ಮಾಡಿಕೊಳ್ಳಲು ಯಾವುದೇ ಇಚ್ಚೆ ಇಲ್ಲದೇ ಇದ್ದರೂ ಕೂಡ ಹೈಕಮಾಂಡ್ ಆದೇಶದ ಮೇರೆಗೆ ಒಪ್ಪಿಕೊಳ್ಳಲೇಬೇಕಾಯಿತು. ಆದರೂ ತೆರೆಮರೆಯಲ್ಲಿ ಕತ್ತಿಮಸಿಯುತ್ತಿರುವ ಸಿದ್ದರಾಮಯ್ಯನವರು ಈಗಾಗಲೇ ತಮ್ಮ ಬೆಂಬಲಿತ ಶಾಸಕರನ್ನು ಉಪಯೋಗಿಸಿಕಂಡು ತಂತ್ರ ರೂಪಿಸಲು ಪ್ರಯತ್ನಿಸಿದ್ದರು. ಇದೀಗ ಸಿಎಂ ಕುಮಾರಸ್ವಾಮಿ ವಿರುದ್ಧವೇ ಸಿಡಿದೆದ್ದ ಸಿದ್ದರಾಮಯ್ಯನವರು ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕೊಂಡಿದ್ದಾರೆ.!

ಸಮ್ಮಿಶ್ರ ಸರ್ಕಾರಕ್ಕೆ ಹೊಸ ಬಜೆಟ್ ಬೇಡ..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ, ಸಮ್ಮಿಶ್ರ ಸರಕಾರಕ್ಕೆ ಹೊಸ ಬಜೆಟ್ ಮಂಡನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕಾಂಗ್ರೆಸ್ ಸರಕಾರ ರೂಪಿಸಿದ ಬಜೆಟ್‌ನಲ್ಲೇ ಮುಂದುವರಿಯುವುದು ಸೂಕ್ತ, ಯಾವುದೇ ಕಾರಣಕ್ಕೂ ಬಜೆಟ್ ಮಂಡನೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಬಜೆಟ್ ರೂಪಿಸಲಾಗುವುದು ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರು ಖಡಾಖಂಡಿತವಾಗಿ ಬಜೆಟ್ ಮಾಡುವ ಅಗತ್ಯವಿಲ್ಲ ಎಂದು ಹೇಳಿರುವುದರಿಂದ, ಸಮ್ಮಿಶ್ರ ಸರಕಾರದ ಮಧ್ಯೆ ಭಾರೀ ಬಿರುಕು ಉಂಟಾಗಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಹಿಂದಿನಿಂದಲೂ ಬದ್ಧ ವೈರಿಗಳು, ಆದರೆ ಇತ್ತೀಚಿನ ಕೆಲ ದಿನಗಳಿಂದ ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದರೂ ಕೂಡ , ಇನ್ನೂ ವೈಮನಸ್ಸು ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದಲೇ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವುದಾಗಿ ಹೇಳಿಕೊಂಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವಾಗಿ ವಿರೋಧಿಸಿದ್ದಾರೆ.!

ಸಿದ್ದರಾಮಯ್ಯನವರನ್ನು ಈಗಾಗಲೇ ಜೆಡಿಎಸ್‌-ಕಾಂಗ್ರೆಸ್ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಸಮ್ಮಿಶ್ರ ಸರಕಾರದಲ್ಲಿ ಪುನಃ ಹೊಸ ಬಜೆಟ್ ಮಂಡನೆ ಮಾಡುವುದು ಬೇಡ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಆದರೆ ಕಾಂಗ್ರೆಸ್ ರೂಪಿಸಿದ್ದ ಬಜೆಟ್ ನಲ್ಲಿ ರಾಜ್ಯದ ಹಿತ ದೃಷ್ಟಿಯಿಂದ ಯಾವುದೇ ಯೋಜನೆಗಳು ಇಲ್ಲದೇ ಇರುವುದರಿಂದ ಹೊಸ ಬಜೆಟ್ ಮಂಡನೆಯಾದರೆ ಉತ್ತಮ. ಆದರೆ ಸಿದ್ದರಾಮಯ್ಯನವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇಬ್ಬರ ನಡುವೆಯೂ ಭಾರೀ ಪೈಪೋಟಿ ಉಂಟಾಗಿದೆ.!

ಬಜೆಟ್ ಮಂಡನೆ ಮಾಡದೇ ರಾಜ್ಯದ ಜನರಿಗೆ ಏನೆಂದು ಉತ್ತರಿಸಲಿ..!

ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುವುದಕ್ಕಿಂತ ವಿರೋಧ ವ್ಯಕ್ತಪಡಿಸುತ್ತಿದ್ದು, ಸಮ್ಮಿಶ್ರ ಸರಕಾರಕ್ಕೆ ಹೊಸ ಬಜೆಟ್ ಅಗತ್ಯವಿಲ್ಲ, ಬೇಕಾದರೆ ಪೂರಕ ಬಜೆಟ್ ಮಂಡಿಸಲಿ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೊಸ ಸರಕಾರ ಬಜೆಟ್ ಮಂಡಿಸದೇ ಇದ್ದರೆ ರಾಜ್ಯದ ಜನರಿಗೆ ಯಾವ ರೀತಿ ಉತ್ತರಿಸಲಿ ಎಂದು ಹೇಳಿಕೊಂಡಿದ್ದು, ಯಾರೇ ವಿರೋಧ ಮಾಡಿದರೂ ಬಜೆಟ್ ಮಂಡನೆ ಮಾಡಿಯೇ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಖಡಕ್ಕಾಗಿ ಉತ್ತರಿಸಿದ್ದಾರೆ. ಹೊಸ ಬಜೆಟ್ ಮಂಡನೆ ಮಾಡುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುತ್ತಾರಾ ಅಥವಾ ಸಿದ್ದರಾಮಯ್ಯನವರ ಮಾತಿಗೆ ತಲೆ ಬಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ..!

ಈ ನಡುವೆಯೇ ಕುಮಾರಸ್ವಾಮಿ ಅವರಿಗೆ ಷರತ್ತು ರೀತಿಯಲ್ಲಿ ಸೂಚನೆ ನೀಡಿದ ಸಿದ್ದರಾಮಯ್ಯ, ಬಜೆಟ್ ಮಂಡನೆ ಮಾಡುವುದಾದರೆ ಈ ಹಿಂದಿನ ಕಾಂಗ್ರೆಸ್ ಸರಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸಲೇ ಬೇಕು, ಮತ್ತು ಬಜೆಟ್ ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

–ಅರ್ಜುನ್

Tags

Related Articles

Close