ಪ್ರಚಲಿತ

ಸಿಎಂ ವಿರುದ್ಧ ಸಿಂಧೂರಿಗೆ ಭರ್ಜರಿ ಜಯ!! ಮಹಿಳಾ ಅಧಿಕಾರಿ ಎದುರು ಮಂಡಿಯೂರಿದ ಕಾಂಗ್ರೆಸ್!!

ಹೌದಲ್ಲಾ ಮತ್ತೆ. ಇದೇ ಕಾರಣಕ್ಕೆ ಈ ದೇಶದಲ್ಲಿ ಇನ್ನೂ ಕಾನೂನಿನ ಮೇಲೆ ಗೌರವ ಉಳಿದುಕೊಂಡಿದೆ. ಅಂದು ಡಾ.ಬಿ.ಆರ್.ಅಂಬೆಡ್ಕರ್ ರಚಿಸಿದ್ದ ಸಂವಿಧಾನ ಹಾಗೂ ಅದರಂತೆ ನಡೆದುಕೊಂಡು ಬರುತ್ತಿರುವ ಕಾನೂನು ಈ ದೇಶವನ್ನು ಮತ್ತಷ್ಟು ಸಧೃಢವಾಗಿ ನಿಲ್ಲುವಂತೆ ಮಾಡಿದೆ. ದೇಶದಲ್ಲಿ ಅದೆಷ್ಟೇ ಶ್ರೀಮಂತನಾಗಿರಲಿ, ಅವನು ತಪ್ಪು ಮಾಡಿದರೆ ಆತ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳೋಕ್ಕೆ ಸಾಧ್ಯನೇ ಇಲ್ಲ. ಸದ್ಯ ಇದು ಮತ್ತೆ ಸಾಭೀತಾಗಿದ್ದು ರಾಜ್ಯದಲ್ಲಿ ಮತ್ತೆ ದಕ್ಷ ಅಧಿಕಾರಿಗೆ ಭಾರೀ ಜಯ ಲಭಿಸಿದೆ.

ಹೈಕೋರ್ಟ್‍ನಲ್ಲಿ ರೋಹಿನಿ ಸಿಂಧೂರಿಗೆ ಭರ್ಜರಿ ಜಯ!

ಹೌದು. ಅವಧಿ ಪೂರ್ವ ವರ್ಗಾವಣೆಯನ್ನು ಪ್ರಶ್ನಿಸಿ ದಕ್ಷ ಜಿಲ್ಲಾಧಿಕಾರಿ ಎಂದೆನಿಸಿಕೊಂಡಿದ್ದ ಐಎಎಸ್ ಅಧಿಕಾರಿ ರೋಹಿನಿ ಸಿಂಧೂರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಬೇಳೆ ಬೇಯಿಸಲೋಸ್ಕರ ದಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದರ ವಿರುದ್ಧವಾಗಿ ಸಿಡಿದೆದ್ದ ಲೇಡಿ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದರು. ತನ್ನನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರದ ವಿರುದ್ದ ಸಿಎಟಿ ಮೊರೆ ಹೋಗಿದ್ದ ರೋಹಿನಿ ಸಿಂಧೂರಿಗೆ ಭಾರೀ ಬೆಂಬಲ ವ್ಯಕ್ತವಾಗಿರಲಿಲ್ಲ. ಸರ್ಕಾರದ ಪಕ್ಷಪಾತ ಧೋರಣೆ ಸಿಂಧೂರಿಗೆ ಹಿನ್ನೆಡೆಯಾಗುವ ಲಕ್ಷಣಗಳು ಗೋಚರಿಸಿದ್ದವು. ಹೀಗಾಗಿಯೇ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿಯವರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ವಿಚಾರಣೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿ ರೋಹಿನಿ ಸಿಂಧೂರಿಗೆ ನ್ಯಾಯವನ್ನು ನೀಡಿದೆ.

ವರ್ಷದೊಳಗೇ ವರ್ಗಾವಣೆ..!

ದಕ್ಷ ಜಿಲ್ಲಾಧಿಕಾರಿ ಎನಿಸಿಕೊಂಡಿದ್ದ ರೋಹಿನಿ ಸಿಂಧೂರಿಯವರನ್ನು ಒಂದು ವರ್ಷದ ಒಳಗೇ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ನಿಯಮದ ಪ್ರಕಾರ ಓರ್ವ ಜಿಲ್ಲಾಧಿಕಾರಿಗೆ ಕನಿಷ್ಟ 2 ವರ್ಷ ಒಂದು ಕಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಇದೆ. ಜುಲೈ 14 ,2017ರಂದು ಹಾಸನ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಸೇವೆ ಆರಂಭಿಸಿದ ರೋಹಿನಿ ಸಿಂಧೂರಿ ತನ್ನ ಸೇವೆಯ ಒಂದು ವರ್ಷದ ಅವಧಿಗೂ ಮುನ್ನವೇ ವರ್ಗಾವಣೆಯ ಆದೇಶಕ್ಕೆ ಗುರಿಯಾಗಿದ್ದರು. ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೋಹಿನಿ ಸಿಂಧೂರಿ ಸ್ಥಳೀಯ ಜನಪ್ರತಿನಿಧಿಗಳನ್ನು ಸದೆಬಡಿದಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಕಂಗೆಟ್ಟು ಹೋಗುವಂತೆ ಮಾಡಿತ್ತು. ಹಾಸನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಲು ಹೊರಡಿದ್ದ ರೋಹಿನಿ ಸಿಂಧೂರಿಯವರನ್ನು ಎತ್ತಂಗಡಿ ಮಾಡಬೇಕು ಎನ್ನುವ ಉದ್ಧೇಶವನ್ನು ಇಟ್ಟುಕೊಂಡು ಸ್ಥಳೀಯ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡವನ್ನು ಹೇರಿದ್ದರು. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು ರೋಹಿನಿ ಸಿಂಧೂರಿಯವರನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶವನ್ನು ಲೆಕ್ಕಿಸದ ರೋಹಿನಿ ಸಿಂಧೂರಿ ಆದೇಶದ ಪ್ರತಿಯನ್ನು ಹರಿದು ಕಸದ ಬುಟ್ಟಿಗೆ ಹಾಕಿದ್ದರು.

ಸರ್ಕಾರಕ್ಕೆ ಹೈಕೋರ್ಟ್ ಕಪಾಳ ಮೋಕ್ಷ!

ರೋಹಿನಿ ಸಿಂಧೂರಿ ವರ್ಗಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದ ರೋಹಿನಿ ಸಿಂಧೂರಿಗೆ ಭಾರೀ ಜಯ ಲಭಿಸಿದೆ. ಮಾತ್ರವಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಸಿಎಟಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ್ದು ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸುವಂತೆ ನಿರ್ಧೇಶನ ನೀಡಿದೆ. ಸಿಎಟಿ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್ ರೋಹಿನಿ ಸಿಂಧೂರಿ ಅವರ ಅರ್ಜಿಯ ವಿಚಾರಣೆಯನ್ನು ಪುನಃ ನಡೆಸಬೇಕೆಂದು ಸೂಚಿಸಿದೆ.

ಮಾತ್ರವಲ್ಲದೆ ಏಪ್ರಿಲ್ 2ರಂದು ರೋಹಿನಿ ಸಿಂಧೂರಿ ಅವರ ಪರ ವಕೀಲರು ಸಿಎಟಿ ಮುಂದೆ ವಾದ ಮಂಡನೆ ಮಾಡಬೇಕು. ಮುಂದಿನ ಆದೇಶದ ತನಕ ಯತಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಖಡಕ್ ಆದೇಶ ನೀಡಿದೆ.

ಸಿಎಟಿ ಮಾಡಿದ್ದೇನು ಗೊತ್ತಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಸನ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿಯವರನ್ನು ಕೆಲ ಕಾಂಗ್ರೆಸ್ ನಾಯಕರ ಒತ್ತಡದ ಮೇರೆಗೆ ವರ್ಗಾವಣೆ ಮಾಡಿತ್ತು. ಆದರೆ ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಸಿಂಧೂರಿ ಸಿಎಟಿ ಮೊರೆ ಹೋಗಿದ್ದರು. ಮಾರ್ಚ್ 7ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಾರ್ಚ್ 8ರಂದು ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ಆದರೆ ಈ ಬಗ್ಗೆ ಸೂಚನೆ ನೀಡಿದ ಸಿಎಟಿ ವರ್ಗಾವಣೆ ತಕರಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಎಂದು ಹೇಳಿತ್ತು. ಆದರೆ ಇದನ್ನು ಒಪ್ಪಲು ರೋಹಿನಿ ಸಿಂಧೂರಿ ಸಿದ್ದರಿರಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸಿಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು ಸಿಎಟಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

ರೋಹಿನಿ ಸಿಂಧೂರಿ. ದಕ್ಷ ಜಿಲ್ಲಾಧಿಕಾರಿ. ಲೇಡಿ ಫೈರ್ ಬ್ರಾಂಡ್ ಎಂದೇ ಖ್ಯಾತಿಯನ್ನು ಪಡೆದಿರುವ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಿರುಕುಳವನ್ನು ಅನುಭವಿಸುತ್ತಲೇ ಬಂದವರು. ಹಾಸನ ಜಿಲ್ಲಾಧಿಕಾರಿಯಾಗಿರುವ ರೋಹಿನಿ ಸಿಂಧೂರಿಯವರು ಆರಂಭದಿಂದಲೂ ಕಾಂಗ್ರೆಸ್ ಸರ್ಕಾರದಿಂದ ಒಂದಲ್ಲಾ ಒಂದು ಕಿರಿ ಕಿರಿಯನ್ನು ಅನುಭವಿಸುತ್ತಲೇ ಬಂದವರಾಗಿದ್ದಾರೆ. ದರೆ ದಕ್ಷ ಜಿಲ್ಲಾಧಿಕಾರಿಯಾಗಿದ್ದ ರೋಹಿನಿ ಸಿಂಧೂರಿಯವರು ಸರ್ಕಾರದ ವಿರುದ್ಧವೇ ಸದಾ ತೊಡೆ ತಟ್ಟಿ ಜಿದ್ದಿಗೆ ಬಿದು ಕೆಲಸ ಮಾಡುತ್ತಿದ್ದುದು ಸರ್ಕಾರಕ್ಕೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನಡೆಸುತ್ತಿದ್ದ ಕುತಂತ್ರಕ್ಕೆ ಪ್ರತಿಯಾಗಿ ತನ್ನದೇ ಶೈಲಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದರು ಹಾಸನ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ.

ಅವಧಿಗೂ ಮುನ್ನ ವರ್ಗಾವಣೆಗೆ ಸಿಂಧೂರಿ ಗರಂ..!

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದಾಗಿ ಹಾಗೂ ಇದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ನ್ಯಾಯದ ಮೊರೆ ಹೋಗಿದ್ದರು. ದಕ್ಷ ಜಿಲ್ಲಾಧಿಕಾರಿ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದ ರೋಹಿನಿ ಸಿಂಧೂರಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಕಾನೂನು ಸಮರವನ್ನು ಮುಂದುವರೆಸುತ್ತಾರೆ. ಈ ಬಗ್ಗೆ ಸಿಎಟಿ ಬಳಿ ನ್ಯಾಯವನ್ನು ಕೇಳಿದ್ದು ಸಿಎಟಿ ರೋಹಿನಿ ಸಿಂಧೂರಿಯವರ ವರ್ಗಾವಣೆಯನ್ನು ತಡೆ ಹಿಡಿದಿತ್ತು.

ಹೈಕೋರ್ಟ್ ಗೆ ನೀಡಿದ್ದ ಅರ್ಜಿಯಲ್ಲೇನಿದೆ…?

ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ ಅರ್ಜಿಯಲ್ಲಿ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿಯವರು ಸರ್ಕಾರದ ನೀತಿಗಳನ್ನು ಖಂಡಿಸಿದೂದಾರೆ. ”ಓರ್ವ ಜಿಲ್ಲಾಧಿಕಾರಿಗೆ ಕನಿಷ್ಠ ಎರಡು ವರ್ಷ ಒಂದೇ ಕಡೆಯಲ್ಲಿ ಕಾರ್ಯನಿರೂವಹಿಸುವುದು ಕಾನೂನು ಪ್ರಕಾರದ್ದಾಗಿದೆ. ಆದರೆ ಕರ್ನಾಟಕ ಸರಕಾರ ಮತ್ರ ತನ್ನನ್ನು ಅವಧಿಪೂರ್ವವಾಗಿಯೇ ವರ್ಗಾವಣೆಯನ್ನು ಮಾಡುತ್ತಿದೆ. ತಾನು ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಆಗಿದೆಯಷ್ಟೇ. ಆದರೆ ಅವಧಿಗಿಂತಲೂ ಮುನ್ನವೇ ಸರ್ಕಾರ ತನ್ನನ್ನು ವರ್ಗಾವಣೆಯನ್ನು ಮಾಡುತ್ತಿದೆ. ಸರ್ಕಾರ ಯಾವುದೇ ಕಾನೂನು ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ತಾರತಮ್ಯ ವ್ಯಕ್ತಪಡಿಸುತ್ತಿದೆ. ಇದಕ್ಕೆ ತಾನು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದೂ ಕಾರಣವಾಗಿದೆ. ಇದೀಗ ಅವಧಿಪೂರ್ವ ವರ್ಗಾವಣೆಗೆ ಆದೇಶಗಳು ಬರುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಒತ್ತಡವೇ ಕಾರಣ” ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಸಲ್ಲಿಸಿದ್ದ ಅರ್ಜಿಯಲ್ಲಿ ನೇರವಾಗಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮಂತ್ರಿಗಳನ್ನೇ ಸಿಂಧೂರಿ ಟಾರ್ಗೇಟ್ ಮಾಡಿದ್ದಾರೆ.

ಮಹಾ ಮಜ್ಜನವೇ ಕಾರಣವಾಯ್ತಾ..?

ಹೌದು. ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ತೆರೆ ಮರೆಯಲ್ಲಿ ಸರ್ಕಸ್ ನಡೆಯುತ್ತಿದ್ದ ಗುದ್ದಾಟ ಭುಗಿಲೆದ್ದಿದ್ದೇ ಹಾಸನದಲ್ಲಿ ನಡೆದಿದ್ದ ಮಹಾಮಜ್ಜನ ಕಾರ್ಯಕ್ರಮದಲ್ಲಿ. ಆವರೆಗೂ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮಹಾ ಮಜ್ಜನ ಕಾರ್ಯಕ್ರಮಕ್ಕೂ ಮುನ್ನ ಸ್ಪೋಟಕೊಂಡಿತ್ತು.

ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಎ.ಮಂಜು ಮಹಾಮಜ್ಜನ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಂದಿದ್ದ ಅನುದಾನದಲ್ಲಿ ಕಮಿಷನ್ ಕೇಳಿದ್ದರು ಎನ್ನಲಾಗಿದೆ. ಬರೋಬ್ಬರಿ 300ಕೋಟಿಗೂ ಅಧಿಕ ಅನುದಾನಗಳಿಂದ ಕಮಿಷನ್ ಕೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ದಕ್ಷ ಜಿದ್ಲಾಧಿಕಾರಿ ರೋಹಿನಿ ಸಿಂಧೂರಿ ಸಿಡಿದೆದ್ದಿದ್ದರು. ಯಾವುದೇ ಕಾರಣಕ್ಕೂ ಕಮಿಷನ್ ವ್ಯವಹಾರ ನಡೆಸಲು ತಾನು ಬಿಡೋದಿಲ್ಲ ಎಂಬ ಹಠವನ್ನು ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ತಳೆದಿದ್ದರು. ಈ ಕಾರಣಕ್ಕಾಗಿಯೇ ಎ ಮಂಜು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಡ ಹೇರಿದ್ದರು. ಈ ಒತ್ತಡದ ಅನುಸಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಹಿನಿ ಸಿಂಧೂರಿಯವರನ್ನು ಎರಡೆರಡು ಬಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಸರ್ಕಾರ ಹೇಳಿದ ಮಾತ್ರಕ್ಕೆ ಓಡಿ ಹೋಗಲು ತಾನು ಉಳಿದ ಜಿಲ್ಲಾಧಿಕಾರಿಗಳ ಹಾಗೆ ಅಲ್ಲ ಎಂಬ ಸಂದೇಶವನ್ನೂ ರೋಹಿನಿ ಸಿಂಧೂರಿಯವರು ನೀಡಿದ್ದಾರೆ.

ಒಟ್ಟಾರೆ ದಕ್ಷ ಅಧಿಕಾರಿಗಳಿಗೆ ವರ್ಗಾವಣೆಯಂತಹ ಕಿರುಕುಳವನ್ನು ನೀಡುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಆದೇಶದಿಂದ ತೀವ್ರ ಮುಖಭಂಗವಾಗಿದ್ದು ಮಾತ್ರವಲ್ಲದೆ ಸರ್ಕಾರ ತನ್ನ ದುರಹಂಕಾರ ನೀತಿಯನ್ನೇ ಪ್ರಶ್ನಿಸುವಂತೆ ಮಾಡಿದೆ. ಹಲವಾರು ಸರ್ಕಾರಿ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈ ಆದೇಶ ಛಾಟಿ ಏಟು ನೀಡಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close