ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ! ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್..! ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಸಂಚು ರೂಪಿಸಿದ ಮಾವೋವಾದಿಗಳು..!

ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರ ಹಿಟ್ ಲಿಸ್ಟ್‌ನಲ್ಲಿ ನಂ ೧ ಸ್ಥಾನದಲ್ಲಿರುವ ವಿಚಾರ ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಇದೀಗ ದೇಶದೊಳಗಿಂದಲೇ ಪ್ರಧಾನಿ ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದರೆ ಇಡೀ ದೇಶವೇ ಬೆಚ್ಚಿಬೀಳುವ ಸಂಗತಿ ಇದು. ಯಾಕೆಂದರೆ ಮೋದಯಿವರು ಪ್ರಧಾನಿ ಆದ ದಿನದಿಂದಲೇ ಬೆದರಿಕೆಗಳು ಬರುತ್ತಲೇ ಇದೆ. ದೇಶದ ಗಡಿಯಲ್ಲಿ ಪಾಕ್ ಉಗ್ರರು ನಡೆಸುತ್ತಿರುವ ಸಂಚು ಒಂದೆಡೆಯಾದರೆ, ಇತ್ತ ದೇಶದ ಒಳಗಿಂದಲೇ ಪ್ರಧಾನಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ. ಅದೆಷ್ಟೇ ಬೆದರಿಕೆಗಳಿದ್ದರೂ ದೇಶದ ಸೈನಿಕರ ಮತ್ತು ತಮ್ಮ ಬೆಂಗಾವಲು ಪಡೆಯನ್ನು ನಂಬಿರುವ ಮೋದಿಜೀ ಯಾವ ಸಮಾವೇಶದಲ್ಲೂ ಬುಲೆಟ್ ಪ್ರೋಫ್ ಗ್ಲಾಸ್ ಬಳಸದೆ ನೇರವಾಗಿ ಮಾತನಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಕೂಡ ಕ್ಯಾರೇ ಅನ್ನದ ನಮ್ಮ ಪ್ರಧಾನಿ ಕೆಂಪುಕೋಟೆಯ ಮೇಲೆ ನಿಂತು ಯಾವುದೇ ಬುಲೆಟ್ ಪ್ರೋಫ್ ಗ್ಲಾಸ್ ಬಳಸದೆ ಘರ್ಜಿಸಿದ್ದರು‌. ಉಗ್ರರು ಎಷ್ಟೇ ಬೆದರಿಕೆ ಒಡ್ಡಿದರೂ ಲೆಕ್ಕಿಸದ ಪ್ರಧಾನಿ ಮೋದಿಗೆ ಇದೀಗ ದೇಶದ ಒಳಗಿನವರಿಂದಲೇ ಬೆದರಿಕೆ ಬಂದಿದೆ.!

ಮಾವೋವಾದಿಗಳಿಂದ ಮೋದಿ ಹತ್ಯೆಗೆ ಸ್ಕೆಚ್..!

ಪ್ರಧಾನಿ ನರೇಂದ್ರ ಅವರ ದಿಟ್ಟ ನಿರ್ಧಾರದಿಂದ ದೇಶದೊಳಗೆ ಯಾವುದೇ ಉಗ್ರರು ಬರಲಾಗುತ್ತಿಲ್ಲ, ಭಾರತದಲ್ಲಿ ದುಶ್ಕೃತ್ಯ ಎಸಗಲು ಪದೇ ಪದೇ ಪ್ರಯತ್ನಿಸುತ್ತಿರುವ ಉಗ್ರರನ್ನು ಮಟ್ಟ ಹಾಕುತ್ತಲೇ ಬಂದಿರುವ ನಮ್ಮ ಸೈನಿಕರು ದೇಶದಲ್ಲಿ ಯಾವುದೇ ಉಗ್ರ ಚಟುವಟಿಕೆ ನಡೆಯದಂತೆ ನೋಡಿಕೊಂಡಿದ್ದಾರೆ. ಆದ್ದರಿಂದಲೇ ಕಂಗಾಲಾಗಿರುವ ಮೋದಿ ವಿರೋಧಿಗಳು ಇದೀಗ ದೇಶದೊಳಗಿರುವ ಮಾವೋವಾದಿಗಳನ್ನು ಬಳಸಿಕೊಂಡು ಪ್ರಧಾನಿ ಮೋದಿಯವರನ್ನು ಮುಗಿಸಲು ಪ್ಲಾನ್ ಹೂಡಿದ್ದಾರೆ.

ದೇಶದೊಳಗೆ ದುಶ್ಕೃತ್ಯ ಎಸಗುವ ನಕ್ಸಲರನ್ನು ಹೆಡೆಮುರಿ ಕಟ್ಟಿದ ಮೋದಿ ಸರಕಾರ ಸತತವಾಗಿ ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾ ಬಂದಿದ್ದಾರೆ. ಆದ್ದರಿಂದಲೇ ನಕ್ಸಲರ ಕೆಂಗಣ್ಟಿಗೆ ಕಾರಣರಾದ ಮೋದಿ ಇದೀಗ ಮಾವೋವಾದಿಗಳ ಹಿಟ್ ಲಿಸ್ಟ್ ಸೇರಿದ್ದಾರೆ. ನರೇಂದ್ರ ಮೋದಿಯವರು ಹೀಗೇ ತಮ್ಮ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ ಹೋದರೆ ದೇಶದಲ್ಲಿ ನಕ್ಸಲರು ನಿರ್ನಮವಾಗುವುದು ಖಂಡಿತ. ಆದ್ದರಿಂದಲೇ ನರೇಂದ್ರ ಮೋದಿಯವರನ್ನೇ ಕೊಲ್ಲಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ..!

ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಸಂಚು..!

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕೊಂದ ಮಾವೋವಾದಿಗಳು ಇದೀಗ ಅದೇ ರೀತಿ ಪ್ರಧಾನಿ ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಮುಂಬೈ ಗುಪ್ತಚರ ಇಲಾಖೆಯ ಪೊಲೀಸರು ಎಚ್ಚರಿಸಿದ್ದಾರೆ. ಮಾವೋವಾದಿಗಳ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿಯವರ ಹೆಸರು ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು, ನರೇಂದ್ರ ಮೋದಿಯವರು ಪಾಲ್ಗೊಳ್ಳುವ ರೋಡ್ ಶೋಗಳಲ್ಲಿ ಕೊಲ್ಲುವ ಪ್ಲಾನ್ ಹೂಡಿದ್ದಾರೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಾಜೀವ್ ಗಾಂಧಿ ಅವರನ್ನು ದೇಶದಲ್ಲೇ ಮಾವೋವಾದಿಗಳು ಸಂಚು ರೂಪಿಸಿ ಹತ್ಯೆ ಮಾಡಿದ್ದರು, ಇದೀಗ ಪ್ರಧಾನಿ ಮೋದಿಯವರನ್ನೂ ಅದೇ ರೀತಿ ಹತ್ಯೆ ಮಾಡಲು ಮಾವೋವಾದಿಗಳು ತಯಾರಿ ನಡೆಸಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.!

ಭೀಮಾ-ಕೊರೇಂಗಾವ್ ಗಲಭೆಯಲ್ಲೂ ನಕ್ಸಲರ ಕೈವಾಡ..?

ದೇಶದಲ್ಲಿ ಉಗ್ರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಮೋದಿ ಸರಕಾರ, ಯಾವುದೇ ಕಾರಣಕ್ಕೂ ಉಗ್ರರು ಭಾರತದ ಗಡಿ ದಾಟದಂತೆ ಸೈನಿಕರಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದಲೇ ಗಡಿಯಲ್ಲಿ ಪದೇ ಪದೇ ಉಗ್ರರು ಒಳನುಸುಳುವ ಪ್ರಯತ್ನ ಮಾಡುತ್ತಿದ್ದರೂ ಕೂಡ , ನಮ್ಮ ಸೈನಿಕರು ಅಲ್ಲೇ ಹೊಡೆದುರುಳಿಸುತ್ತಿದ್ದಾರೆ. ಆದರೆ ಇದೀಗ ಗುಪ್ತಚರ ಇಲಾಖೆ ನೀಡಿದ ವರದಿಯ ಪ್ರಕಾರ , ಮಹಾರಾಷ್ಟ್ರದಲ್ಲಿ ನಡೆದ ಭೀಮಾ-ಕೋರೆಂಗಾವ್ ಗಲಭೆಯಲ್ಲೂ ನಕ್ಸಲರ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಕಾಂಗ್ರೆಸ್ ಈ ಗಲಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೈವಾಡವಿದೆ ಎಂದು ಸುಳ್ಳು ಆರೋಪ ಮಾಡುತ್ತಲೇ ಬಂದಿದ್ದು, ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಆರೋಪಿಸಿತ್ತು. ಆದರೆ ಇದೀಗ ಮುಂಬೈ ಗುಪ್ತಚರ ಇಲಾಖೆಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಗಲಭೆ ನಡೆಯುವ ಸಂದರ್ಭದಲ್ಲಿ ನಕ್ಸಲರ ಕೈವಾಡ ಹೆಚ್ಚಾಗಿ ಇತ್ತು ಎಂದು ಹೇಳಿಕೊಂಡಿದ್ದಾರೆ..!

ಲ್ಯಾಪ್‌ಟಾಪ್, ಪತ್ರದಲ್ಲಿ ಹೆಸರು ಉಲ್ಲೇಖ..!

ಈಗಾಗಲೇ ಪೊಲೀಸರು ಬಂಧಿಸಿರುವ ರೋಣಾ ಜಾಕೋಬ್ ಎಂಬ ಮಾವೋವಾದಿಯನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಬಂಧಿತನಿಂದ ಲ್ಯಾಪ್‌ಟಾಪ್ ಮತ್ತು ಕಿಶಾನ್ ಎಂಬಾತ ಬರೆದ ಪತ್ರ ಪತ್ತೆಯಾಗಿದೆ. ಈ ಪತ್ರದಲ್ಲಿ ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಸಂಚು ರೂಪಿಸಿ ಹತ್ಯೆ ಮಾಡುವ ಬಗ್ಗೆ ಉಲ್ಲೇಖಿಸಿದ್ದು, ಪೊಲೀಸರ ವರದಿಯ ಬೆನ್ನಲ್ಲೇ ಪ್ರಧಾನಿ ಭದ್ರತೆಯ ಬಗ್ಗೆ ಹೈ ಅಲರ್ಟ್ ವಹಿಸಲಾಗಿದೆ.!

ಮೋದಿ ಕೊಲ್ಲಲು ಕೈಜೋಡಿಸಿದ ಎಡಪಂಥೀಯರು..?

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉಳಿದೆಲ್ಲಾ ಪಕ್ಷಗಳು ಒಟ್ಟಾಗಿ ವಿರೋಧಿಸಲು ಆರಂಭಿಸಿದ್ದವು. ಆದ್ದರಿಂದಲೇ ಮೋದಿಯವರ ಬಗ್ಗೆ ಪದೇ ಪದೇ ಕೆಂಡಕಾರುತ್ತಿರುವ ವಿರೋಧಿ ಪಡೆಗಳೂ ಕೂಡ ಮಾವೋವಾದಿಗಳ ಜೊಗತೆ ಕೈಜೋಡಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಯಾಕೆಂದರೆ ಪೊಲೀಸರು ವಶಪಡಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಪತ್ರದಲ್ಲಿ ಜಿಗ್ನೇಶ್ ಮೇವಾನಿ, ಉಮರ್ ಖಲೀದ್ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಹೆಸರು ಉಲ್ಲೇಖವಾಗಿದೆ. ಇವರು ಪದೇ ಪದೇ ಮೋದಿ ವಿಚಾರದಲ್ಲಿ ವಿರೋಧಿಸಯತ್ತಲೇ ಬಂದಿರುವವರಾಗಿದ್ದರಿಂದ ಇದೀಗ ಈ ಮೂವರ ಹೆಸರು ಮಾವೋವಾದಿಗಳ ಕೈಯಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಯಾಕೆಂದರೆ ಕಾಂಗ್ರೆಸ್ ಮತ್ತು ಈನ್ನಿತರ ಎಡಪಂಥೀಯ ಪಕ್ಷಗಳು ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಗಿಸಲು ಸಂಚು ರೂಪಿಸಿರುವ ಬಗ್ಗೆ ಸ್ವತಃ ಪೊಲೀಸರೇ ಹೇಳಿಕೊಂಡಿರುವುದರಿಂದ ಭಾರೀ ಸಂಶಯ ವ್ಯಕ್ತವಾಗಿದೆ..!

ಅದೇನೆ ಆದರೂ ಪ್ರಧಾನಿ ಮೋದಿಯವರಿಗಿರುವ ಭದ್ರತೆಯನ್ನು ಮತ್ತಷ್ಟು ಬಲಗೊಳಿಸಿದರೆ ಮುಂದಾಗುವ ಅಪಾಯವನ್ನು ತಡೆಯಬಹುದು. ದೇಶದಲ್ಲೇ ಮೋದಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂದರೆ ವಿರೋಧಿಗಳು ಅದ್ಯಾವ ಕೀಳು ಮಟ್ಟಕ್ಕೆ ಇಳಿಯಲು ತಯಾರಾಗಿದ್ದಾರೆ ಎಂಬುದು ತಿಳಿಯುತ್ತದೆ.!

–ಸಾರ್ಥಕ್

Tags

Related Articles

Close