ಪ್ರಚಲಿತ

ಕಾಂಗ್ರೆಸ್ ಅವಧಿಯಲ್ಲಿ ಪಾಕಿಸ್ತಾನ ಭಾರತಕ್ಕೆ ಬಂದು ಬಾಂಬ್ ಹಾಕುವ ಸ್ಥಿತಿ ಇತ್ತು: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಹತ್ತು ವರ್ಷಗಳ ಕೇಂದ್ರ ಸರ್ಕಾರದ ಆಡಳಿತದಲ್ಲಿ ತಾನು ನೀಡಿದ ಮಹತ್ವದ, ಭಾರತದಲ್ಲಿ ಈ ಕಾರ್ಯಗಳು ನಡೆಯಲು ಅಸಾಧ್ಯ ಎಂದೇ ಭಾವಿಸಲಾಗಿದ್ದ ಹಲವಾರು ಭರವಸೆಗಳನ್ನು ಈಡೇರಿಸಿದೆ. ಆ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದೆ ಎನ್ನಬಹುದು.

ಅಂತಹ ಮಹತ್ವದ ಭರವಸೆಗಳಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಪ್ರಭು ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ, ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೆ ಇದ್ದ ಆರ್ಟಿಕಲ್ 370 ರದ್ಧತಿ, ತ್ರಿವಳಿ ತಲಾಖ್ ರದ್ಧತಿ ಮೊದಲಾದ ಅತ್ಯಂತ ರಿಸ್ಕಿ ಭರವಸೆಗಳನ್ನು ಈಡೇರಿಸುವ ಮೂಲಕ ಶಹಬ್ಬಾಸ್‌ಗಿರಿಯನ್ನು ಪ್ರಧಾನಿ ಮೋದಿ ಸರ್ಕಾರ ಗಿಟ್ಟಿಸಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಯೋಧ್ಯೆಯಲ್ಲಿ ದೇಶ ವಿದೇಶಗಳು ಶ್ರೀರಾಮ ಮಂದಿರ ಲೋಕಾರ್ಪಣೆ ಸಂಭ್ರಮಿಸಿದ್ದರೆ, ದೇಶದೊಳಗೆಯೇ ಇರುವ ಕಾಂಗ್ರೆಸ್ ಮಾತ್ರ ಈ ಸಂಭ್ರಮವನ್ನು ಅನುಭವಿಸಲಿಲ್ಲ. ಬದಲಾಗಿ ಇದನ್ನು ರಾಜಕೀಯಗೊಳಿಸಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡುವುದರಲ್ಲೇ ತಲ್ಲೀನವಾಗಿತ್ತು‌.

ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಮತ ಬ್ಯಾಂಕ್ ತಿರುಗಿ ಬೀಳುವ ಭಯಕ್ಕೆ ರಾಮ ಲಲ್ಲಾನ ಪ್ರತಿಷ್ಠಾಪನೆಗೂ ಕಾಂಗ್ರೆಸ್ ನಾಯಕರು ಬಂದಿರಲಿಲ್ಲ ಎಂದು ಹೇಳಿದ್ದಾರೆ.

ರಾಮ ಮಂದಿರ ಲೋಕಾರ್ಪಣೆ ಆಮಂತ್ರಣವನ್ನು ನಾವು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಇನ್ನೂ ಹಲವು ಕಾಂಗ್ರೆಸ್ ನಾಯಕರಿಗೆ ನೀಡಿದ್ದೆವು. ಆದರೆ ಅವರ್ಯಾರೂ ಈ ರಾಷ್ಟ್ರದ ಕಾರ್ಯಕ್ರಮಕ್ಕೆ ಆಗನಿಸಲಿಲ್ಲ. ಮತ ಬ್ಯಾಂಕ್ ಕೈ ತಪ್ಪಿ ಹೋಗುವ ಭಯದಿಂದ ಕಾಂಗ್ರೆಸ್ ಸಮಾರಂಭವನ್ನು ತಪ್ಪಿಸಿತ್ತು.

ದೇಶದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಬಾಂಬ್ ಹಾಕಿ ಹೋಗುವ ಸ್ಥಿತಿ ಇತ್ತು‌. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೌನವಾಗಿ ಇರುತ್ತಿದ್ದರು. ಆಗ ಏನಾಗಿತ್ತು ಎಂದು ಕರ್ನಾಟಕ ಸಿ ಎಂ ಸಿದ್ದರಾಮಯ್ಯ ಉತ್ತರಿಸಲಿ ಎಂದು ಅವರು ಹೇಳಿದ್ದಾರೆ.

ಈಗ ಕಾಶ್ಮೀರದಲ್ಲಿ ಸಣ್ಣ ಕಲ್ಲು ಹೊಡೆಯುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನ ಭಾರತದೊಳಕ್ಕೆ ಬಂದು ಬಾಂಬ್ ಹಾಕಿದ್ದಾಗಲೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೌನವಾಗಿದ್ದರು. ಆದರೆ, ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಒಳಗೇ ಹೋಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು ಎಂದು ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

Tags

Related Articles

Close