ಪ್ರಚಲಿತ

ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗೋದು ಈ ಮೂವರಿಗೆ ಇಷ್ಟ ವಿಲ್ಲ..! ಬಿಜೆಪಿಗೆ ಹಿಂಬಾಗಿಲಲ್ಲಿ ಬೆಂಬಲ ಕೊಡುತ್ತಿರುವ ಆ 3 ನಾಯಕರಾರು..?

ಕಾಂಗ್ರೆಸ್ ಸರ್ಕಾರ ಬಿದ್ದೋಗಿದೆ. ಭಾರತೀಯ ಜನತಾ ದಳ ಅತ್ಯಧಿಕ ಸಂಖ್ಯೆಗಳೊಂದಿಗೆ ರಾಜ್ಯ ವಿಧಾನ ಸಭೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಬಹುಮತದ ಸಂಖ್ಯೆ ಕಡಿಮೆ ಇರುವ ಕಾರಣ ವಿರೋಧ ಪಕ್ಷಗಳು ಸರ್ಕಾರ ರಚಿಸದಂತೆ ಅಡ್ಡಕಾಲಿಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜನತಾ ದಳ ಒಟ್ಟಾಗಿ ಸರ್ಕಾರ ನಡೆಸಲು ಮುಂದಾಗಿತ್ತು. ಆದರೆ ಈ ಅವಕಾಶವನ್ನು ಭಾರತೀಯ ಜನತಾ ಪಕ್ಷ ತನ್ನ ಜಾಣ್ಮೆಯಿಂದ ತಡೆದು ತಾನೇ ಅಧಿಕಾರದ ಗದ್ದುಗೆಗೆ ಏರಿ ಕುಂತಿದೆ.

ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಾಭೀತುಪಡಿಸಲು ಒಟ್ಟು 113 ಶಾಸಕರ ಸಂಖ್ಯೆ ಅಗತ್ಯ ಇದೆ. ಆದರೆ ಇದೀಗ ಪಕ್ಷದ ಬಳಿ 104 ಶಾಸಕರು ಇರುವುದರಿಂದ ಇನ್ನೂ 9 ಶಾಸಕರ ಅಗತ್ಯ ಇದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜನತಾ ದಳದಿಂದ ಶಾಸಕರು ಭಾರತೀಯ ಜನತಾ ಪಕ್ಷದತ್ತ ಆಗಮಿಸುತ್ತಿದ್ದಾರೆ. ಈ ಮೈತ್ರಿಯಲ್ಲಿ ಹುಟ್ಟಿದ ಜನತಾ ದಳದ ಶಾಸಕಾಂಗ ಪಕ್ಷದ ನಾಯಕ ಕುಮಾರ ಸ್ವಾಮಿಯನ್ನು ಮುಂದಿನ ಮುಖ್ಯಮಂತ್ರಿ ಮಾಡೋದು ಇವರ ಗುರಿ.

ಆದರೆ ನಿಜವಾಗಿಯೂ ಕಾಂಗ್ರೆಸ್‍ನಿಂದ ಕೆಲ ಶಾಸಕರು ಕೈತಪ್ಪಲು ಕಾರಣವೇನು ಗೊತ್ತಾ..? ನಿಜವಾಗಿಯೂ ಕಾಂಗ್ರೆಸ್‍ಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಈಗಾಗಲೇ ಮುಂದಿನ ಮುಖ್ಯಮಂತ್ರಿಯಾಗಿ ಜನತಾ ದಳದ ಕುಮಾರ ಸ್ವಾಮಿ ಎಂದು ಘೋಷಿಸಲಾಗಿದೆ. ಆದರೆ ಇದು ಕಾಂಗ್ರೆಸ್‍ನ ಮೂವರು ನಾಯಕರಿಗೆ ಇಷ್ಟವಿಲ್ಲ. ವಿವಿಧ ಕಾರಣಗಳಿಂದ ಜನತಾ ದಳ ಹಾಗೂ ಕುಮಾರ ಸ್ವಾಮಿಯವರನ್ನು ಧ್ವೇಷಿಸುತ್ತಿರುವ ಈ ಮೂವರು ನಾಯಕರಿಗೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗೋದು ಇಷ್ಟವಿಲ್ಲ.

ನಂಬರ್ ವನ್-ಸಿದ್ದರಾಮಯ್ಯ…!

ಕುಮಾರ ಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಇಷ್ಟವಿಲ್ಲದ ಪಟ್ಟಿಯಲ್ಲಿರುವ ಮೊದಲ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ದೇವೇಗೌಡರ ಕುಟುಂಬ ಹಾಗೂ ಸಿದ್ದರಾಮಯ್ಯರೆಂದರೆ ಅದು ಹಾವು ಮುಂಗುಸಿಯಂತಿರುವ ವೈರತ್ವ. ಜನತಾ ದಳವನ್ನು ತೊರೆದು ಕಾಂಗ್ರೆಸ್ ಸೇರಿದ ನಂತರ ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರುತ್ತಲೇ ಇದ್ದರು. ದೇವೇಗೌಡರ ವಿರುದ್ಧ ಸಿದ್ದರಾಮಯ್ಯರಿಗೆ ಎಷ್ಟೊಂದು ಧ್ವೇಷ ಇದೆಯೆಂದರೆ, ವಿಧಾನ ಸಭೆಯಲ್ಲಿ ಇರಿಸಿದ್ದಂತಹ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರವನ್ನೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕಿತ್ತು ಬಿಸಾಕಿದ್ದರು.

Image result for siddaramaiah

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯ ಹ್ಯೂಬ್ಲೋಟ್ ವಾಚ್ ಹಗರಣವನ್ನು ಮೊದಲು ಬಯಲಿಗೆಳೆದಿದ್ದೇ ಕುಮಾರ ಸ್ವಾಮಿ. ಈ ವಿಚಾರವೇ ಸಿದ್ದರಾಮಯ್ಯರನ್ನು ಕೊನೇ ವರೆಗೂ ಕಿತ್ತು ತಿನ್ನುತ್ತಿತ್ತು. ಹೀಗಾಗಿ ಕುಮಾರಸ್ವಾಮಿಯ ವಿರುದ್ಧ ಸಿದ್ದರಾಮಯ್ಯ ಕೆಂಡ ಕಾರುತ್ತಲೇ ಇದ್ದರು.

ಶತಾಯ ಗತಾಯ ದೇವೇಗೌಡರ ಕುಟುಂಬವನ್ನು ಸೋಲಿಸಲೇಬೇಕೆಂಬ ಹಠ ಹೊಂದಿದ್ದ ಸಿದ್ದರಾಮಯ್ಯ ತನ್ನ ಆಪ್ತ ಸರ್ಕಾರಿ ಉಧ್ಯೋಗಿಯೋರ್ವನ ಬಳಿ ಕೆಲಸ ಮಾಡಿದ್ದು ಸಾಕು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದ್ದರು. ಅಲ್ಲಿ ದೇವೇಗೌಡರ ಮಕ್ಕಳೇ ಗೆದ್ದಿದ್ದು ಸಾಕು, ನೀನು ಕೆಲಸ ಬಿಟ್ಟು ಚುನಾವಣೆಗೆ ಧುಮುಕು. ಅವರ ಕುಟುಂಬವನ್ನು ತಲೆ ಎತ್ತದಂತೆ ಮಾಡಬೇಕು ಎಂದು ಹೇಳಿದ್ದರು. ಮಾತ್ರವಲ್ಲದೆ ಕುಮಾರ ಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದು ಹೇಳಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದಎರಾಮಯ್ಯ ಹಾಗೂ ದೇವೇಗೌಡರ ಮುನಿಸು ಬಹಳ ಹಿಂದಿನ ಕಥೆಯಾಗಿದೆ. ಈ ಕಾರಣಕ್ಕಾಗಿಯೇ ಜನತಾ ದಳದ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡೋದು ಸಿದ್ದರಾಮಯ್ಯರಿಗೆ ಇಷ್ಟವಿಲ್ಲ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿಯವರನ್ನು ಮುಂದಕ್ಕೆ ಬಿಟ್ಟು ಮುಖ್ಯಮಂತ್ರಿ ಸಿಎಂ ಆಗೋದನ್ನು ತಪ್ಪಿಸಲು ಪ್ರಯತ್ನ ಪಡುತ್ತಿದ್ದಾರೆ.

ನಂಬರ್ 2-ಡಿಕೆ ಶಿವಕುಮಾರ್..!

ಎಸ್. ಇದನ್ನು ನಂಬಲು ಕೊಂಚ ಕಷ್ಟವೇ. ಆದರೂ ಸತ್ಯ. ಮಾಜಿ ಸಚಿವ ಡಿಕೆಶಿಗೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗೋದು ಸುತರಾಮ್ ಇಷ್ಟವಿಲ್ಲ. ಇದಕ್ಕೆ ಕಾರಣ ಜಾತಿ ರಾಜಕೀಯ. ಎಸ್.ಎಂ.ಕೃಷ್ಣ ನಂತಹ ರಾಜ್ಯದಲ್ಲಿ ಒಕ್ಕಲಿಗ ಪ್ರಮುಖ ನಾಯಕ ಅಂತಿದ್ದರೆ ಅದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬ. ಇದು ನಿಜವಾಗಿಯೂ ಡಿಕೆ ಶಿವಕುಮಾರ್‍ಗೆ ಕಗ್ಗಂಟಾಗಿದ್ದು. ಯಾಕೆಂದರೆ ತಾನು ರಾಜ್ಯದ ಅತಿದೊಡ್ಡ ಒಕ್ಕಲಿಗ ನಾಯಕನಾಗಬೇಕೆಂಬುವುದು ಡಿಕೆ ಶಿವಕುಮಾರ್ ಅವರ ಬಯಕೆ. ಆದರೆ ಒಕ್ಕಲಿಗರ ಪ್ರಾಬಲ್ಯವುಳ್ಳ ಮೈಸೂರು ಕರ್ನಾಟಕ ಭಾಗದಲ್ಲಿ ದೇವೇಗೌಡರಿಗೆ ಪ್ರಾಬಲ್ಯ ಹೆಚ್ಚು. ಇದೀಗ ಕುಮಾರ ಸ್ವಾಮಿ ಮತ್ತೆ ಮುಖ್ಯಮಂತ್ರಿ ಆದರೆ ನಂತರ ಅವರನ್ನು ಮೀರಿಸೋದು ಡಿಕೆಶಿಗೆ ಕಷ್ಟದ ಕೆಲಸ. ಯಾಕೆಂದರೆ ಒಮ್ಮೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೆ ನಂತರದ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವನ್ನು ಬಳಸಿಕೊಂಡು 50 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂಬುವುದು ಡಿಕೆಶಿಯ ಲೆಕ್ಕಾಚಾರ ಹಾಗೂ ಭಯ. ಹೀಗಾಗಿಯೇ ತನ್ನ ಬಳಿ ಇದ್ದ ಕೈ ಶಾಸಕರನ್ನು ಭಾರತೀಯ ಜನತಾ ಪಕ್ಷದ ಜೊತೆಗೆ ಕಳಿಸಲು ಡಿಕೆಶಿ ಒಳಗೊಳಗೇ ತಂತ್ರ ರೂಪಿಸುತ್ತಿದ್ದಾರೆ.

Image result for dk shivakumar

ನಂಬರ್ 3-ಡಾ.ಜಿ.ಪರಮೇಶ್ವರ್..!

ಇನ್ನು ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್. ಅನೇಕ ಬಾರಿ ಅತಿದೊಡ್ಡ ಸ್ಥಾನದಿಂದ ವಂಚಿತರಾದ ನಾಯಕರಿವರು. ಇವರಿಗೂ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗೋದು ಇಷ್ಟವಿಲ್ಲ. ಯಾಕೆಂದರೆ ಕುಮಾರ ಸ್ವಾಮಿ ಪ್ರತಿನಿಧಿಸುವ ರಾಜಕೀಯ ಪಕ್ಷ ಅದು ಪ್ರಾದೇಶಿಕ ಪಕ್ಷ. ಪ್ರಾದೇಶಿಕ ಪಕ್ಷವೊಂದು ಅಧಿಕಾರ ಹಿಡಿದರೆ ಮತ್ತೆ ಆ ರಜ್ಯದಲ್ಲಿ ಕಾಂಗ್ರೆಸ್ ತಲೆಯೆತ್ತಿ ನಿಂತ ಉದಾಹರಣೆಗಳು ತುಂಬಾನೇ ಕಡಿಮೆ. ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ, ಆಂದ್ರ ಪ್ರದೇಶ, ಪಶ್ಚಿಮ ಬಂಗಾಳ ಸಹಿತ ಅನೇಕ ಕಡೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಬೆಳೆದಿದ್ದರಿಂದ ಕಾಂಗ್ರೆಸ್ ನಶಿಸಿ ಹೋಗಿದೆ. ಈ ಕಾರಣಕ್ಕಾಗಿಯೇ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗೋದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಗೆ ಇಷ್ಟವಿಲ್ಲ. ಒಂದೊಮ್ಮೆ ಕುಮಾರ ಸ್ವಾಮಿಗೆ ಈ ಬಾರಿ ಮುಖ್ಯಮಂತ್ರಿ ಆಗುವ ಅವಕಾಶವನ್ನು ನೀಡಿದ್ದೇ ಆದಲ್ಲಿ ಮತ್ತೆ ಜನತಾ ದಳ ಬೆಳೆಯುತ್ತೆ, ಕಾಂಗ್ರೆಸ್ ಪಕ್ಷ ಜನತಾ ದಳದ ಹಿಂದೆಯಿಂದ ತೆರಳಬೇಕಾಗುತ್ತದೆ. ಇದಕ್ಕೆ ಉಳಿದ ರಾಜ್ಯಗಳೇ ಸಾಕ್ಷಿ.

Related image

ಈ ಎಲ್ಲಾ ಕಾರಣಗಳಿಂದಲೇ ಈ ಮೂವರು ನಾಯಕರು ಬಹಿರಂಗವಾಗಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ತಮ್ಮ ವಾದವನ್ನು ಪ್ರತಿಪಾದಿಸಿದರೂ ಒಳಗಿಂದೊಳಗೆ ಯಾವೊಬ್ಬನಿಗೂ ಕುಮಾರ ಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗೋದು ಇಷ್ಟವಿಲ್ಲ. ಈ ಕಾರಣಕ್ಕಾಗಿಯೇ ಅವರು ತಮ್ಮ ಪಕ್ಷದ ಶಾಸಕರನ್ನು ತೆರೆಮರೆಯಲ್ಲಿ ಹಿಂಬಾಗಿಲ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಕಳಿಸುತ್ತಿದ್ದಾರೆ ಎನ್ನುವುದು ಧೃಢ.

ರಾಜಕೀಯ ಅಂದ್ರೇನೇ ಹಾಗೆ. ಯಾವಾಗ ಯಾವ ರೀತಿ ಇರುತ್ತೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಕಟ್ಟರ್ ಶತ್ರುವಾಗಿದ್ದವನು ನಂತರ ಮಿತ್ರನಾಗುತ್ತಾನೆ, ಉತ್ತಮ ಮಿತ್ರನಾಗಿದ್ದವನು ಶತ್ರುವಾಗುತ್ತಾನೆ. ಇದು ರಾಜಕೀಯ ಚದುರಂಗದಾಟ. ಇದೀಗ ಆಗುತ್ತಿರುವುದೂ ಅದೇ.

-ಸುನಿಲ್ ಪಣಪಿಲ

Tags

Related Articles

Close