ಪ್ರಚಲಿತ

ಧರ್ಮಸ್ಥಳಕ್ಕೆ ತೆರಳಿದ ರಾಹುಲ್ ಗಾಂಧಿಗೆ ಬಹಿರಂಗ ಪತ್ರ…! ಈ ಪ್ರಶ್ನೆಗೆ ಉತ್ತರಿಸಿ! ಯಾರ ಮಾನ ಕಳೆಯಲು ಹೋಗಿದ್ದೀರಿ ಪಪ್ಪೂ..?

ಕೊನೆಗೂ ಆ ಕಾಲ ಬಂದೇ ಬಿಟ್ಟಿತ್ತು. ಅಂದು ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಸನ್ನಿಧಾನಕ್ಕೆ ಅವಮಾನ ಮಾಡಿದ್ದರೋ ಇಂದು ಅದೇ ಸನ್ನಿಧಾನದ ಕದ ತಟ್ಟಲು ಮುಂದಾಗಿದ್ದೀರಿ. ಆದರೆ ಆ ಭಗವಂತ ಮಾತ್ರ ಕರುಣೆ ತೋರಿಸುತ್ತಾನೋ ಗೊತ್ತಿಲ್ಲ.

ಮುಂದಿನ ಪ್ರಧಾನ ಮಂತ್ರಿ ಆಗುತ್ತೇನೆ ಎಂದು ಕನಸನ್ನು ಹೊತ್ತು ತಿರುಗುತ್ತಿರುವ ಪಪ್ಪು ಎಂದೇ ಬಿರುದಾಂಕಿತರಾಗಿರುವ ರಾಹುಲ್ ಗಾಂಧಿಯವರೇ, ಇದೀಗ ನಿಮ್ಮ ರಾಜಕೀಯ ಭೇಟಿ ಕೋಟ್ಯಾಂತರ ಭಕ್ತರು ಆರಾಧಿಸುವ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಎಂದು ತಿಳಿದಾಗ ಒಂದು ಕಡೆಯಲ್ಲಿ ಸಂತೋಷವೂ ಆದರೂ ಮತ್ತೊಂದು ಕಡೆ ನಿಮ್ಮನ್ನು ಪ್ರಶ್ನಿಸಬೇಕೆಂದೆನಿಸಿತು.

ಹೌದು… ನಿಮಗೆ ಮಾತ್ರವಲ್ಲ ನಿಮ್ಮ ಸಂತಾನಕ್ಕೇ ವಿಶೇಷವಾದ ಕೊಡುಗೆಯನ್ನು ನೀಡಿತ್ತು ಧರ್ಮಸ್ಥಳದ ಶ್ರೀ ಮಂಜುನಾಥನ ಕ್ಷೇತ್ರ. ಆದರೆ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕುಟುಂಬಕ್ಕೆ ವರದಾನವಾಗಿದ್ದ ಧರ್ಮಸ್ಥಳ ಕ್ಷೇತ್ರಕ್ಕೆ ಭಾರೀ ಅವಮಾನವನ್ನೇ ಮಾಡಿದ್ದಾರೆ.

* ನಿಮ್ಮ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮುಯ್ಯನವರು ಧರ್ಮಸ್ಥಳಕ್ಕೆ ಆಗಮಿಸಿದ್ದಾಗ ಅವರ ಬಂಟರೊಂದಿಗೆ ಮೀನು ಊಟ ಮಾಡಿ ಕನಿಷ್ಟ ಪಕ್ಷ ಸ್ನಾನವೂ ಮಾಡದೆ ಕೋಟ್ಯಾಂತರ ಮಂದಿ ಆರಾಧಿಸುವ ಮಂಜುನಾಥನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಆದರೆ ನೀವು ಅವರನ್ನ ಯಾಕೆ ಪ್ರಶ್ನಿಸಲಿಲ್ಲ..?

* ಪ್ರತಿಭಟನೆ ನಡೆಸಿದರೂ, ಮಾಧ್ಯಮದಲ್ಲಿ ಭಾರೀ ಸುದ್ಧಿಯಾಗಿದ್ದರೂ ಮುಖ್ಯಮಂತ್ರಿ ಕನಿಷ್ಟ ಕ್ಷಮೆಯೂ ಕೇಳದೆ “ನಾನು ಮೀನು ಮಾತ್ರವಲ್ಲ ಕೋಳಿನೂ ತಿಂದಿದ್ದೇನೆ ಏನೀವಾಗ..? ಮೀನು ತಿಂದು ದೇವರ ಬಳಿ ಹೋಗಬಾರದಾ? ಹಾಗಂತ ದೇವರು ಹೇಳಿದ್ದಾರಾ?” ಎಂದು ಮಾಧ್ಯಮ ಮಿತ್ರರ ಬಳಿ ಅಹಂಕಾರದಿಂದಲೇ ವರ್ತಿಸಿದ್ದಾರೆ. ಆದರೆ ನೀವು ಅದನ್ನು ಪ್ರಶ್ನಿಸಿದ್ದೀರಾ..? ಮುಖ್ಯಮಂತ್ರಿಯ ಬಳಿ ಕನಿಷ್ಟ ಭಕ್ತರ ಬಳಿ ಕ್ಷಮೆ ಕೇಳುವಂತೆ ಯಾಕೆ ಸೂಚನೆ ನೀಡಿಲ್ಲ..?

* ನಿಮ್ಮ ಅಜ್ಜಿ ಇಂದಿರಾ ಗಾಂಧಿ ದೇಶದೆಲ್ಲೆಡೆ ಸೋಲನ್ನನುಭವಿಸುವ ಲಕ್ಷಣಗಳು ಗೋಚರಿಸಿದಾಗ ಇದೇ ಧರ್ಮಸ್ಥಳಕ್ಕೆ ಆಗಮಿಸಿ ಜನಾರ್ಧನ ಪೂಜಾರಿ ಬಳಿ ಕಾಡಿ ಬೇಡಿ ಬೆಳ್ತಂಗಡಿಯಲ್ಲಿ ಸ್ಪರ್ಧಿಸಿದ್ದರು. ನಿಮ್ಮ ಕುಟುಂಬಕ್ಕೆ ವರದಾನವಾದ ಕ್ಷೇತ್ರ ಧರ್ಮಸ್ಥಳ. ಆದರೆ ನಿಮ್ಮ ಮುಖ್ಯಮಂತ್ರಿಗಳು ಮಾತ್ರ ಶ್ರೀ ಕ್ಷೇತ್ರಕ್ಕೆ ಅವಮಾನವನ್ನೇ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ನಿಲುವೇನು?

Image result for rahul gandhi

* ಮಂಜುನಾಥ ನೆಲೆಯಾಗಿರುವ ಧರ್ಮಸ್ಥಳ ಕ್ಷೇತ್ರ ಸಹಿತ ಅನೇಕ ದೇವಾಲಯಗಳನ್ನು ಮುಜುರಾಯಿ ಇಲಾಖೆಗೆ ಸೇರಿಸಬೇಕೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಕಾಂಕ್ಷೆಗೆ ನಿಮ್ಮ ನಿಲುವೇನು..? ಕೋಟ್ಯಾಂತರ ಭಕ್ತರಿಗೆ ನಿತ್ಯಾನ್ನದಾಸೋಹ ನೀಡುತ್ತಿರುವ ಧರ್ಮಸ್ಥಳ ಸಹಿತ ಅನೇಕ ಧಾರ್ಮಿಕ ಸ್ಥಳಗಳನ್ನು ಮುಜುರಾಯಿ ಇಲಾಖೆಗೆ ಸೇರಿಸಲು ನಿಮ್ಮ ನಿಲುವೇನು ಎಂಬುವುದನ್ನು ನೀವು ಸ್ಪಷ್ಟಪಡಿಸಿ.!

* ಇದೀಗ ಮಾಜಿ ಸಚಿವ ಜನಾರ್ಧನ ಪೂಜಾರಿಯವರನ್ನು ಪಕ್ಕದಲ್ಲಿ ಕುಳ್ಳಿರಿಸಿ ಓಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದ್ದೀರಿ. ಅವರ ಕೈಯಿಂದಲೇ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದೀರಿ. ಆದರೆ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಂಟ ಅರಣ್ಯ ಸಚಿವ ರಮಾನಾಥ ರೈ ಅದೇ ಜನಾರ್ಧನ ಪೂಜಾರಿಯವರನ್ನು ಬೋ…ಮಗ, ಸೂ…ಮಗ ಎಂದು ನಿಂದಿಸಿದ್ದರು. ಆದರೆ ನೀವು ಎಂದಾದರೂ ಅವರ ವಿರುದ್ಧ ಧ್ವನಿ ಎತ್ತಿದ್ದೀರೇ..? ಕ್ಷಮೆ ಕೇಳುವಂತೆ ಸೂಚಿಸಿದ್ದೀರೇ..?

* ರಾಹುಲ್ ಜೀ… ನಿಮ್ಮ ಅಜ್ಜಿಯ ಸರ್ಕಾರದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದವರು ಮಾಜಿ ಸಚಿವ ಜನಾರ್ಧನ ಪೂಜಾರಿಯವರು. ನಿಮ್ಮ ತಂದೆ ಹಾಗೂ ತಾಯಿಯಿಂದಲೇ ಅವರು ನಿರ್ಮಿಸಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಉಧ್ಘಾಟನೆ ಮಾಡಿಸಿಕೊಂಡಿದ್ದರು. ಆ ಸಮಯದಲ್ಲಿ ನೀವಿನ್ನೂ ಚಿಕ್ಕವರು. ಇಂದಿಗೂ ಕುದ್ರೊಳ್ಳಿ ದೇವಸ್ಥಾನದ ಮುಂಭಾಗದಲ್ಲಿ ನಿಮ್ಮ ತಂದೆ ತಾಯಿಯ ಹೆಸರನ್ನು ದೊಡ್ಡದಾಗಿ ಬರೆಯಲಾಗಿದೆ. ಆದರೆ ನಿಮ್ಮ ಮುಖ್ಯಮಂತ್ರಿಗಳಿಗೆ ಆಹ್ವಾನವಿದ್ದರೂ, ಆಹ್ವಾನದಂದು ಮಂಗಳೂರಿಗೆ ಆಗಮಿಸಿದ್ದರೂ ಆ ದೇವಸ್ಥಾನಕ್ಕೆ ತೆರಳದೆ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಅವರ ಮನೆಯಲ್ಲಿ ಮಾಂಸಾಹಾರಿ ಊಟ ಮಾಡಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ವಾಪಾಸ್ ತೆರಳಿ ಜನಾರ್ಧನ ಪೂಜಾರಿಗೆ ಅವಮಾನ ಮಾಡಿದ್ರಲ್ಲಾ… ನೀವೇಕೆ ಅದನ್ನು ಪ್ರಶ್ನಿಸಿಲ್ಲ. ಇದರ ಬಗ್ಗೆ ನಿಮ್ಮ ನಿಲುವೇನು ರಾಹುಲ್ ಜೀ..?

Related image

* ನೀವು ದರ್ಶನ ಪಡೆದ ಧರ್ಮಸ್ಥಳ ಕ್ಷೇತ್ರವನ್ನು ಆವರಿಸಿಕೊಂಡಿರುವ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ವಸಂತ ಬಂಗೇರ ತಮ್ಮ ಜಾತಿಯ ಪರವಾಗಿ ಓಟು ಕೇಳುತ್ತಿದ್ದಾರೆ. ಆದರೆ ಅದೇ ಬಿಲ್ಲವ ಸಮಾಜದ ಆರ್.ಟಿ.ಐ ಕಾರ್ಯಕರ್ತ ವೆಂಕಪ್ಪ ಪೂಜಾರಿಗೆ ಶಾಸಕರ ಎದುರೇ ಮುಸ್ಲಿಂ ವ್ಯಕ್ತಿಯೋರ್ವ ಥಳಿಸಿದಾಗ ತನ್ನ ಜಾತಿಯವು ಎಂದೂ ನೋಡದೆ ಮುಸ್ಲಿಂ ಯುವಕನಿಗೆ ಬೆಂಬಲ ನೀಡಿ ಥಳಿಸಲು ಆದೇಶಿಸಿ ಗೂಂಡಾ ಪ್ರವೃತ್ತಿಯನ್ನು ತೋರಿಸಿದರು. ಆದರೆ ನೀವು ಯಾವ ಯೋಗ್ಯತೆಯ ಮೇಲೆ ಆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೀರಿ ಎಂದು ಸ್ಪಷ್ಟ ಪಡಿಸಿ.

* ನಿಮ್ಮ ಆಪ್ತೆ ಹಾಗೂ ಕಾಂಗ್ರೆಸ್ ನಾಯಕಿ ನಟಿ ರಮ್ಯಾ ಮಂಗಳೂರು ನರಕ ಎಂದು ಹಾಗೂ ಪಾಕಿಸ್ಥಾನ ಸ್ವರ್ಗ ಎಂದೂ ಬಹಿರಂಗ ಹೇಳಿಕೆ ನೀಡಿದ್ದರು. ಈ ದೇಶವಿರೋಧಿ ಹೇಳಿಕೆಗೆ ನಿಮ್ಮ ನಿಲುವೇನು..? ಅಂದು ರಮ್ಯಾ ನೀಡಿದ ಹೇಳಿಕೆಗೆ ನಿಮ್ಮ ಮಂಗಳೂರು ಭೇಟಿ ವೇಳೆ ಯಾಕೆ ಸಮಜಾಯಿಷಿ ನೀಡಲಿಲ್ಲ. ವಿರೋಧಿಸಿಯೂ ಇಲ್ಲವಲ್ಲ..!!! ಹಾಗಾದರೆ ನಿಮಗೆ ದೇಶಕ್ಕಿಂತ ಕಾಂಗ್ರೆಸ್ ಪಕ್ಷ ಹಾಗೂ ರಮ್ಯಾ ಸ್ನೇಹವೇ ಮುಖ್ಯವಾಯಿತೇ ರಾಹುಲ್ ಜೀ..?

* ರಾಜ್ಯದಲ್ಲೇ ಹೋರಾಟದ ಕಿಚ್ಚನ್ನು ಹಚ್ಚಿಸಿದ್ದ ನೇತ್ರಾವತಿ ತಿರುವು ಯೋಜನೆಯನ್ನು ಜನತೆ ತೀವ್ರವಾಗಿ ವಿರೋಧಿಸಿದ್ದರು. ಆದರೆ ಕಾಂಗ್ರೆಸ್ ಶಾಸಕರು ಮಾತ್ರ ಎಷ್ಟೇ ಪ್ರತಿಭಟನೆ ನಡೆಸಿದರೂ ನೇತ್ರಾವತಿ ತಿರುವು ಯೋಜನೆಗೆ ಬೆಂಬಲ ನೀಡಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕರಾವಳಿಯ ನೀರಿಗೆ ಸಂಚಕಾರ ತಂದು ರೈತರ ಬಾಳಿಗೆ ಕೊಳ್ಳಿ ಇಡುವಂತಹಾ ಯೋಜನೆಯನ್ನು ತಂದಂತಹ ಈ ಯೋಜನೆಯ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ..!

* ಧರ್ಮಸ್ಥಳದ ಆಸುಪಾಸಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರ ಗೋಳು ಕೇಳೋರಿಲ್ಲ. ಅವರಿಗೆ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಲ್ಲಿ ಬಿಜೆಪಿ ಮುಖಂಡ ಹರೀಶ್ ಪೂಂಜಾ ಉಪವಾಸ ಕುಳಿತು ಧ್ವನಿ ಎತ್ತಿದ್ದರು. ಆದರೆ ನಿಮ್ಮ ಕಾಂಗ್ರೆಸ್ ಶಾಸಕ ಸಹಿತ ಸರ್ಕಾರ ಈ ಬಗ್ಗೆ ಉದ್ಧಟತನವನ್ನು ಪ್ರದರ್ಶಿಸಿದೆ. ಈ ಬಗ್ಗೆ ನಿಮ್ಮ ನಿಲುವೇನು..? ಕ್ರಮವೇಕೆ ಇಲ್ಲ..?

ರಾಹುಲ್ ಜೀ… ನನಗೆ ಗೊತ್ತು. ನನ್ನ ಈ ಪ್ರಶ್ನೆಗೆ ನಿಮ್ಮಿಂದ ಖಂಡಿತವಾಗಿಯೂ ಉತ್ತರವಿಲ್ಲ ಎಂದು. ಅಂತೆಯೇ ತಿಪ್ಪರಲಾಗ ಹಾಕಿದ್ರೂ ಈ ಬಾರಿ ನೀವು ಗೆಲ್ಲೋದಿಲ್ಲ. ಮಂಜುನಾಥನಿಗೆ ನಮಿಸೋದು ಬಿಡಿ, ನೂರೊಂದು ರೂಪಾಯಿ ಹಾಕಿ ಉರುಳು ಸೇವೆ ಮಾಡಿದ್ರೂ ನೀವು ಗೆಲ್ಲೋದಿಲ್ಲ. ಮಂಜುನಾಥನಿಗೆ ಯಾರು ಹಿತವರು ಎಂದು ತಿಳಿಯದೆ..? ನೋಡುತ್ತಿರಿ. ಇದು ನಿಮ್ಮ ಕೊನೆಯ ಆಟ…

-ಸುನಿಲ್ ಪಣಪಿಲ

Tags

Related Articles

Close