ಪ್ರಚಲಿತ

ಪ್ರಭು ಶ್ರೀರಾಮನಿಗೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಲು ಮುಂದಾದ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಮಹತ್ವದ ಸಕಾರಾತ್ಮಕ ಬದಲಾವಣೆಗಳು ಭಾರತದಲ್ಲಿ ಘಟಿಸಿವೆ. ಇದರಲ್ಲಿ ಭಾರತದಲ್ಲಿ ಸ್ವಚ್ಛತೆಯ ಬಗ್ಗೆ ಮೂಡಿರುವ ಅರಿವು ಸಹ ಒಂದು.

ಅದಕ್ಕೂ ಮೊದಲು ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆಯಲು, ಬಹಿರ್ದೆಸೆ ಮುಗಿಸಲು, ಮೂತ್ರ ವಿಸರ್ಜನೆ ಇಂತಹ ಹಲವಾರು ಸಂಗತಿಗಳು ಸಾರ್ವಜನಿಕವಾಗಿ ನಡೆಯುತ್ತಿದ್ದ ಕಾಲ ಇತ್ತು. ಇವೆಲ್ಲವೂ ಸ್ವಚ್ಛತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದವು.‌ ಸಾರ್ವಜನಿಕ ವಲಯದ ಸ್ವಸ್ಥತೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಇದರ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಡೆಸಿದ ಅಭಿಯಾನ ಸಾಕಷ್ಟು ಬದಲಾವಣೆಗೆ, ಜನರಲ್ಲಿ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿತ್ತು ಎನ್ನುವುದು ಸತ್ಯ.

ಸದ್ಯ ಬಿಜೆಪಿ ಮತ್ತೊಂದು ಮಹತ್ವದ ಅಭಿಯಾನಕ್ಕೆ ಶುರುವಿಟ್ಟುಕೊಂಡಿದೆ. ಪ್ರಧಾನಿ ಮೋದಿ ಅವರ ನಿರ್ದೇಶನದ ಅನ್ವಯ ಬಿಜೆಪಿ ಮಕರ ಸಂಕ್ರಮಣದ ದಿನದಿಂದ ಅಯೋಧ್ಯೆಯಲ್ಲಿನ ನೂತನ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ವರೆಗೆ ದೇಶದ ವಿವಿಧ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ನಡೆಸಲು ಮುಂದಾಗಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ದೆಹಲಿಯ ಗುರು ದಾಸ್ ಮಂದಿರದಲ್ಲಿ ಈ ಒಂದು ವಾರಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ವರೆಗೆ ದೇಶದ ವಿವಿಧ ದೇಗುಲಗಳು, ಪ್ರಾರ್ಥನಾ ಸ್ಥಳಗಳಲ್ಲಿ ಬಿಜೆಪಿ ಸ್ವಚ್ಛತಾ ಅಭಿಯಾನ ನಡೆಸಲಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಶ್ರೀರಾಮ ಮಂದಿರದ ಆವರಣವನ್ನು ಸ್ವಚ್ಛಗೊಳಿಸಿದರು. ಈ ಅಭಿಯಾನವು ಭಗವಾನ್ ಶ್ರೀರಾಮನಿಗೆ ಸಲ್ಲಿಸುವ ಗೌರವವಾಗಿದೆ ಎಂದೂ ತಿಳಿಸಿದ್ದಾರೆ. ಹಾಗೆಯೇ ಸ್ವಚ್ಛ ಭಾರತ ಅಭಿಯಾನದ ರೂವಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಯೋಗೀಜಿ ಇದೇ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ದೇಶವನ್ನು ಸ್ವಚ್ಛ ಮತ್ತು ಸ್ವಸ್ಥವಾಗಿ ಇಡುವಲ್ಲಿ ಪ್ರಧಾನಿ ಮೋದಿ ಅವರ ಬಿಜೆಪಿ ಸರ್ಕಾರದ ಅಭಿಯಾನ ಇಂದು ಬಹುಪಾಲು ಜನರಲ್ಲಿ ಸ್ವಚ್ಛತೆಯ ಜಾಗೃತಿಯನ್ನು ಉಂಟುಮಾಡಿದೆ. ಈ ಹಿಂದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದವರು ಇಂದು ಕಸ, ತ್ಯಾಜ್ಯವನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವಂತಾಗಿದೆ ಎನ್ನುವುದು ಸಂತಸದ ವಿಷಯ. ಇಂತಹ ಸ್ವಚ್ಛತಾ ಅರಿವು ಮೂಡಿಸಿದ ಬಿಜೆಪಿ ಸರ್ಕಾರ ನಿಜಕ್ಕೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close