ಪ್ರಚಲಿತ

ಸುಷ್ಮಾ ಸ್ವರಾಜ್‍ಗೆ ಬರೆದ ಆ ಒಂದು ಪತ್ರ ಮುಸ್ಲಿಂ ಮಹಿಳೆಯ ಬಾಳನ್ನೇ ಬದಲಾಯಿಸಿತು..! ಇಂಡಿಯಾ ಟು ಸೌಧಿಯಾ ರೋಚಕ ಕಹಾನಿ…

ದೇಶದ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಹೊರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಸದಾ ಸಿದ್ಧರಾಗಿರುವಂತಹ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಹೆಮ್ಮೆ ಇವರದ್ದು!! ಯಾವುದೇ ಸಮಯದಲ್ಲಾದ್ರೂ ಭಾರತೀಯರ ಅಳಲು ಆಲಿಸಿ ಸಹಾಯಮಾಡುವ ಕರುಣಾ ಹೃದಯಿಯಾಗಿ ಖ್ಯಾತಿ ಪಡೆದಿದ್ದಾರೆ ಸುಷ್ಮಾಜೀ… ಇದೀಗ ಮತ್ತೊಬ್ಬ ಭಾರತೀಯ ಮಹಿಳೆಯನ್ನು ರಕ್ಷಿಸಿ ಪ್ರಶಂಸೆಗೆ ಒಳಗಾಗಿದ್ದಾರೆ!!

Image result for sushma swaraj with modi

ಹೈದರ್‍ಬಾದ್‍ನ ಮಹಿಳೆಯನ್ನು ಸೌದಿ ಅರೇಬಿಯಾಕ್ಕೆ ಸಾಗಿಸುವ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿಸಿ ಭಾರತಕ್ಕೆ ಮರಳಿ ಕರೆತರಲಾಗಿದೆ!! ಅಝರ್ ಎಂಬ ಮಧ್ಯವರ್ತಿ ಉದ್ಯೋಗದ ಜೊತೆಗೆ ಒಳ್ಳೆಯ ಸಂಬಳ ನೀಡುವ ಸುಳ್ಳು ಭರವಸೆಯನ್ನು ನೀಡಿ ನನ್ನನ್ನು ಸೌದಿಗೆ ಕರೆದೊಯ್ಯುತ್ತಿದ್ದ ಎಂದ ಮಹಿಳೆ ಆರೋಪಿಸಿದ್ದಾಳೆ!! ದಮ್ಮಾದ್ ತಲುಪಿದ ನಂತರ ಮಹಿಳೆಯನ್ನು ಬಲವಂತಾಗಿ ಮನೆಗೆಲಸದವಳನ್ನಾಗಿ ಮಾಡಲಾಯಿತು!! ಒಳ್ಳೆಯ ಕೆಲಸ ಹಾಗೂ ಸಂಬಳ ನೀಡುವುದಾಗಿ ಹೇಳಿ ಕರೆದೊಯ್ದ ನಂತರ ಅಲ್ಲಿ ಮನೆಗೆಲಸ ಮಾಡಲು ಒತ್ತಾಯಿಸಿದರು!! ತದನಂತರ ಮೂರು ಮನೆಗಳಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಿದರು! ಇದಷ್ಟೇ ಅಲ್ಲದೆ ಕೆಲಸ ಮಾಡುತ್ತಿದ್ದ ಮನೆಯಲ್ಲಿ ನಮ್ಮನ್ನು ತುಂಬ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು!! ಎಂದ ಮಹಿಳೆ ದೂರಿದ್ದಾಳೆ !! ಮಹಿಳೆ ತನ್ನ ಕುಟುಂಬಕ್ಕೆ ಪತ್ರ ಬರೆದು ಅಲ್ಲಿನ ವಾಸ್ತವಿಕತೆಯ ಬಗ್ಗೆ ವಿವರಿಸಿದ್ದಾಳೆ!!

ಸುಷ್ಮಾ ಸ್ವರಾಜ್‍ಗೆ ಥ್ಯಾಂಕ್ಯೂ ಅಂದ ಮಹಿಳೆ!!

ಇದರ ಪ್ರತಿಯಾಗಿ ಕುಟುಂಬಸ್ಥರು ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಭಾರತೀಯ ದೂತವಾಸಕ್ಕೆ ಪತ್ರ ಬರೆದು ಅವರ ಸಹಾಯ ಕೇಳಿದರು!! ಭಾರತೀಯ ರಾಯಭಾರ ಅಧಿಕಾರ ನನ್ನನ್ನು ಮರಳಿ ಕರೆತುರವಂತೆ ಆ ಮಧ್ಯವರ್ತಿಯ ಮೇಲೆ ಒತ್ತಡ ಹೇರಿದರ ಪರಿಣಾಮವಾಗಿ ನಾನು ಇಂದು ಸುರಕ್ಷಿತವಾಗಿ ಭಾರತ ತಲುಪ್ಪಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದಳು!! ಇದೇ ಸಂದರ್ಭದಲ್ಲಿ ಮಹಿಳೆ ವಿದೇಶಾಂಗ ಸಚಿವೆ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ!!

Related image

ಇದೇ ಮೊದಲ್ಲದೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೂ ಕೂಡಲೆ ಸ್ಪಂದಿಸು ಮೋದಿ ಸರಕಾರದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಕೇವಲ ಅದೆಷ್ಟೋ ಭಾರತೀಯ ಪ್ರಜೆಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ..! ಆಫ್ರಿಕಾದಲ್ಲಿ ಅಪಾಯದಲ್ಲಿದ್ದ ಭಾರತೀಯರನ್ನು ರಕ್ಷಿಸುವ ಮೂಲಕ ಮತ್ತೆ ತಮ್ಮ ದೇಶದ ಪ್ರಜೆಗಳ ಸಹಾಯಕ್ಕೆ ಧಾವಿಸಿದ್ದರು.! ಪಶ್ಚಿಮ ಆಫ್ರಿಕಾದ ಬೆನಿನ್ ಕರಾವಳಿಯಿಂದ ಫೆಬ್ರವರಿ 1ರಂದು ಒಂದು ಹಡಗು ನಾಪತ್ತೆಯಾಗಿತ್ತು. ಈ ಹಡಗಿನಲ್ಲಿ ಸುಮಾರು 22 ಭಾರತೀಯರು ಇದ್ದರು. 13,500 ಟನ್ ಗ್ಯಾಸೋಲಿನ್ ಹೊಂದಿದ್ದ ಆಫ್ರಿಕಾದ ಹಡಗನ್ನು ಅಪಹರಣಕಾರರು ಬಂಧಿಸಿದ್ದರು. ಈ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವ ಹೊಂದಿತ್ತು. ಮೊದಲು ಹಡಗು ಅಪಹರಣವಾದ ಬಗ್ಗೆ ಸಂಶಯವಿದ್ದರೂ, ಕೊನೆಗೆ ಹಡಗು ಅಪಹರಣವಾದ ವಿಚಾರ ದೃಢಪಟ್ಟಿತ್ತು. ಹಡಗನ್ನು ಮತ್ತು ಹಡಗಿನಲ್ಲಿದ್ದ ಜನರನ್ನು ಪತ್ತೆಹಚ್ಚುವಂತೆ ಹಡಗು ಮಾಲೀಕರು ಮುಂಬೈನ ನೌಕಾ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆಗೂ ದೂರು ನೀಡಿದ್ದು ಕೂಡಲೇ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಶೋಧ ಕಾರ್ಯ ಆರಂಭಿಸಿತ್ತು.

Related image

ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶಿಗರೂ ಕೂಡ ತಮ್ಮ ಸಹಾಯಕ್ಕೆ ಸುಷ್ಮಾ ಸ್ವರಾಜ್ ರನ್ನು ಮನವಿ ಮಾಡುತ್ತಿದ್ದು ಎಲ್ಲರ ಪಾಲಿಗೂ ಧಾವಿಸುತ್ತಿದ್ದಾರೆ. ಭಾರತ ಪಾಕಿಸ್ತಾನದ ಸಂಬಂಧ ಹದಗೆಟ್ಟಿದ್ದರೂ ,ನೆರವಿಗಾಗಿ ಕೋರಿ ಅನೇಕ ಪಾಕಿಸ್ತಾನಿಯರು ಸುಷ್ಮಾಗೆ ಟ್ವಿಟ್ ಮಾಡುತ್ತಾರೆ. ಪಾಕಿಸ್ತಾನದ ವಿಶೇಷ ತಂತ್ರಜ್ಞಾನದ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗಳ ಕೊರತೆಯಿದ್ದು, ಚಿಕಿತ್ಸೆ ದುಬಾರಿಯಾಗಿರುವುದರಿಂದ ನೆರವು ಕೋರಿ ಪಾಕಿಸ್ತಾನದ ನಾಗರಿಕರೊಬ್ಬರು ಸುಷ್ಮಾ ಸ್ವರಾಜ್‍ಗೆ ಟ್ವಿಟ್ ಮಾಡಿದ್ದರು. ಅದಕ್ಕೆ ಕೂಡಲೆ ಪ್ರತಿಕ್ರಿಯಿಸಿದ್ದ ಸುಷ್ಮಾ ಸ್ವರಾಜ್ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಸಹಾಯ ಮಾಡಿದ್ದರು..! ಕಳೆದ ಬಾರಿ ಯೆಮನ್ ದೇಶದಲ್ಲಿ ಉಗ್ರರ ದಾಳಿ ನಡೆದಾಗ ಅಲ್ಲಿ ಸಿಲುಕಿಕೊಂಡಂತಹ ಭಾರತೀಯ ಮೂಲದ ನರ್ಸ್ ಗಳನ್ನು ಸುಷ್ಮಾ ಸ್ವರಾಜ್ ರವರ ನಿರ್ದೇಶನದಂತೆ ರಕ್ಷಿಸಲಾಗಿತ್ತು. ಯಾವುದೇ ದೇಶದಲ್ಲಿ ವಾಸವಿರುವ ಭಾರತೀಯರಿಗೆ ತೊಂದರೆಯಾದಾಗ ತಕ್ಷಣ ಸ್ಪಂದಿಸುವ ಸುಷ್ಮಾ ಸ್ವರಾಜ್ ತಮ್ಮ ಕರ್ತವ್ಯದಲ್ಲಿ ಸಮರ್ಥವಾಗಿ ನೆರವಾಗುತ್ತಿದ್ದಾರೆ..! ಅದೇ ರೀತಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಸಂಕಷ್ಟದಲ್ಲಿದ್ದ ಇಪ್ಪತ್ತ ಎರಡು ಭಾರತೀಯರ ರಕ್ಷಣೆಯಲ್ಲೂ ಸುಷ್ಮಾ ಸ್ವರಾಜ್ ಮಹತ್ತರವಾದ ಪಾತ್ರ ವಹಿಸಿದ್ದರು. ಭಾರತೀಯರ ಪಾಲಿಗೆ ಮಾತ್ರವಲ್ಲದೆ ವಿದೇಶಿಗರ ನೆರವಿಗೂ ಸ್ಪಂಧಿಸುವ ಸುಷ್ಮಾ ಕಾರ್ಯ ವೈಖರಿಯನ್ನು ಅನೇಕ ದೇಶದ ಮುಖಂಡರೂ ಶ್ಲಾಘಿಸಿದ್ದರು..!

ಹೀಗೆ ಮೋದಿಜೀಯಂತೆ ಭಾರತೀಯರು ಎಲ್ಲೇ ಹೋದರೂ ಸುಷ್ಮಾ ಸ್ವರಾಜ್ ಕೂಡಾ ಅವರ ಮೇಲೆ ಕಣ್ಣಿಟ್ಟು ಭಾರತೀರನ್ನು ರಕ್ಷಣೆ ಮಾಡುತ್ತಿದ್ದಾರೆ!! ನಿಜವಾಗಿಯೂ ಸುಷ್ಮಾ ಸ್ವರಾಜ್‍ಗೆ ಹ್ಯಾಟ್ಸ್‍ಆಪ್!!

source: news13.in

  • ಪವಿತ್ರ
Tags

Related Articles

Close