ಪ್ರಚಲಿತ

ಉಗ್ರರ ‌ವಿರುದ್ಧ ನಿರ್ದಯ ‌ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

ಭಾರತ ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಭಯೋತ್ಪಾದನೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಭಯೋತ್ಪಾದನೆಯ ಕರಿಮುಷ್ಟಿಗೆ ನಲುಗಿ ಹೋಗಿದ್ದ ಭಾರತ, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ‌. ಪ್ರಧಾನಿ ಮೋದಿ ಅವರು ಉಗ್ರರ ವಿರುದ್ಧ ಕಠಿಣ ಕ್ರಮ, ನಮ್ಮ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬುವ ಮೂಲಕ ಭಯೋತ್ಪಾದನೆಯ ‌ನಿಗ್ರಹಕ್ಕೆ ಶ್ರಮಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‌ಐಎ ಆಯೋಜನೆ ಮಾಡಿದೇದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮಾವೇಶವನ್ನು ಉದ್ದೇಶಿಸಿ‌ಮಾತನಾಡಿದ್ದಾರೆ.

ನಮ್ಮ ದೇಶದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಬಗೆಯ ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ‌ಕೇಂದ್ರ ಮತ್ತು ಎಲ್ಲಾ ರಾಜ್ಯ ಏಜೆನ್ಸಿಗಳು ಯಶಸ್ವಿಯಾಗಿವೆ‌ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ಮಾದರಿ ಭಯೋತ್ಪಾದನಾ ನಿಗ್ರಹ ರಚನೆಯನ್ನು ಸ್ಥಾಪನೆ ಮಾಡಬೇಕು ಎಂಬುದಾಗಿಯೂ ಅವರು ಸಲಹೆ ನೀಡಿದ್ದಾರೆ.

ಜೊತೆಗೆ ಉಗ್ರಗಾಮಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಏಜೆನ್ಸಿ‌ಗಳ ನಡುವೆ ಸಮನ್ವಯತೆ ಮುಖ್ಯವಾಗುತ್ತದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಏಜೆನ್ಸಿ ಗಳ ನಡುವೆ ಉತ್ತ ಮ ಸಮನ್ವಯ ಸಾಧನೆಗಾಗಿ, ಎಲ್ಲಾ ರಾಜ್ಯ ಗಳಲ್ಲಿರುವ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳ ‌ಕ್ರಮಾನುಗತ ರಚನೆ, ತನಿಖೆಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯ ಚಟುವಟಿಕೆಗಳನ್ನು ಏಕಕೂಪಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಈಗಾಗಲೇ ಕಾರ್ಯ ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಿಗ್ರಹ ಮತ್ತು ಹೊಸ ಉಗ್ರ ಸಂಘಟನೆಗಳು ರಚನೆಯಾಗದ ಹಾಗೆ ನಿರ್ದಯ ಕ್ರಮಗಳನ್ನು ಕೈಗೊಳ್ಳುವ ಹಾಗೆಯೂ ಅವರು ತನಿಖಾ ಸಂಸ್ಥೆ, ಭಯೋತ್ಪಾದನೆ ನಿಗ್ರಹ ದಳಗಳಿಗೆ ಕಿವಿಮಾತು ಹೇಳಿದ್ದಾರೆ. ಇದರಿಂದ ಭಯೋತ್ಪಾದಕರ ಸಂಖ್ಯೆ ಇಳಿಕೆಯಾಗಬಹುದು ಎಂಬ ಅಭಿಪ್ರಾಯ‌ವನ್ನು ಅವರು ಹೇಳಿದ್ದಾರೆ.

ಭಯೋತ್ಪಾದನೆ, ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎನ್‌ಐ‌ಎ, ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯ ಪಡೆಗಳು ದಿಟ್ಟವಾಗಿ ಆಲೋಚಿಸಬೇಕು. ಜೊತೆಗೆ ವಿನೂತನ, ಹೊಸ ಕ್ರಮಗಳ ಮೂಲಕ ಉಗ್ರವಾದಕ್ಕೆ ‌ಮದ್ದರೆಯಬೇಕು ಎಂಬುದಾಗಿಯೂ ಕೇಂದ್ರ ಗೃಹ ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಭಾರತ ವು ಬಾಹ್ಯ ಮತ್ತು ಆಂತರಿಕ ಭಯೋತ್ಪಾದಕರ ಉಪಟಳದಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಅಮಿತ್ ಶಾ ಅವರ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close