ಪ್ರಚಲಿತ

ರಕ್ಷಣಾ ಪಡೆಗಳ ಎನ್‌ಕೌಂಟರ್: ಓರ್ವ ಉಗ್ರ ಹತ

ಭಾರತ ಬಹಳ ಹಿಂದಿನಿಂದಲೇ ಅನುಭವಿಸಿಕೊಂಡು ಬರುತ್ತಿರುವ ಒಂದು ಮಹಾ ಪಿಡುಗು ಎಂದರೆ ಅದು ಭಯೋತ್ಪಾದನೆ. ನೆರೆಯ ದೇಶ, ಭಾರತದ ಆಜನ್ಮ ಶತ್ರು ಎಂದೇ ಕುಖ್ಯಾತಿ ಪಡೆದ ಪಾಕಿಸ್ತಾನ ಭಾರತದ ವಿರುದ್ಧ ಉಗ್ರಗಾಮಿಗಳನ್ನು ಪೋಷಿಸುವ ಕೆಲಸ ಮಾಡುತ್ತಿದ್ದರೆ, ಇತ್ತ ದೇಶದೊಳಗೆಯೇ ಇದ್ದುಕೊಂಡು ಆಂತರಿಕ ಭಯೋತ್ಪಾದನೆಯ ಮೂಲಕ ದೇಶದ ಸ್ವಾಸ್ಥ್ಯ ಕೊಡುವ ಉಗ್ರರದ್ದು ‌ಮತ್ತೊಂದು ಸಮಸ್ಯೆ.

ಈ ಹಿಂದೆ ಉಗ್ರರಿಂದ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದ ಭಾರತ, ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಉಗ್ರರನ್ನು ಸಮರ್ಥವಾಗಿ ಎದುರಿಸಲು ಬೇಕಾದ ಎಲ್ಲಾ ರೀತಿಯ‌ ಸ್ವಾತಂತ್ರ್ಯದ ಜೊತೆಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ನಮ್ಮ ರಕ್ಷಣಾ ವ್ಯವಸ್ಥೆಗೆ ಒದಗಿಸುವ ಕಾರ್ಯವನ್ನು ಪ್ರಧಾನಿ ಮೋದಿ ಅವರ ಸರ್ಕಾರ ಮಾಡಿದೆ.‌ ಭಾರತದ ಆಡಳಿತ ಚುಕ್ಕಾಣಿಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಹಿಸಿಕೊಂಡ ಮೇಲೆ ನಮ್ಮ ರಕ್ಷಣಾ ವಲಯ, ಸೇನೆ ಸಾಕಷ್ಟು ಸಬಲ, ಸುಸಜ್ಜಿತವಾಗಿದೆ‌. ಉಗ್ರರನ್ನು ಸಮರ್ಥವಾಗಿ ಸದೆಬಡಿಯುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ.

ಇಂದು ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಥೋಹಾಲನ್ ಪ್ರದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ ನ ಜೊತೆಗೆ ನಂಟಿರಿಸಿಕೊಂಡಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಮಣ್ಣು ಮುಕ್ಕಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆ ಮಾಡಲಾದ ಉಗ್ರನಿಂದ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು, ಜೊತೆಗೆ ದೋಷಾರೋಪಣೆಯ ವಸ್ತುಗ. ಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನಿಷೇಧಿತ‌ ಉಗ್ರ ಸಂಘಟನೆಯಾದ ಟಿ ಆರ್‌ ಎಫ್ ನ ಜೊತೆಗೆ ಸಂಬಂಧ ಹೊಂದಿದ್ದ ಒಬ್ಬ ಉಗ್ರಗಾಮಿಯನ್ನು ಹತ್ಯೆ ಮಾಡಲಾಗಿದೆ. ಆತನಿಂದ ಅಕ್ರಮ ವಸ್ತುಗಳು, ಮದ್ದು ಗುಂಡುಗಳು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಉಗ್ರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ, ಅದು ಬೆಳಕಿಗೆ ಬರುವ ಪ್ರಮಾಣ ಕಡಿಮೆ ಇತ್ತು. ಆದರೆ ಕಳೆದ ಒಂಬತ್ತು ವರ್ಷಗಳ ಅಮೋಘ ಬದಲಾವಣೆ ಎಂಬಂತೆ ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಜೋರಾಗಿದ್ದು, ರಕ್ಷಣಾ ಪಡೆಗಳು ಉಗ್ರ ರನ್ನು ನಿಗ್ರಹ ಮಾಡುವಲ್ಲಿ ಹೆಚ್ಚು ಸಬಲರಾಗಿದ್ದಾರೆ. ಅವರಿಗೆ ಉಗ್ರ ದಮನಕ್ಕೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎನ್ನುವುದು ಸತ್ಯ.

Tags

Related Articles

Close