ಪ್ರಚಲಿತ

ತುರ್ತು ಪರಿಸ್ಥಿಯ ಕಾಲದಲ್ಲಿ ಪ್ರಾಜಾಪ್ರಭುತ್ವ ರಕ್ಷಿಸಲು ಇಂದಿರಾಗಾಂಧಿ ವಿರುದ್ದ ಹೋರಾಡಿದವರಿಗೆ ಪಿಂಚಣಿ ಘೋಷಿಸಿ ಕಾಂಗ್ರೆಸ್ ಗೆ ಛಾಟಿ ಏಟು ಬೀಸಿದ ಮಹಾರಾಷ್ಟ್ರದ ಫಡ್ನವೀಸ್ ಸರಕಾರ!!

ಇದಪ್ಪಾ ತಾಕತ್ತು!! ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ದ ಹೋರಾಡಿ ಜೈಲು ಪಾಲಾದ ನಾಯಕರೆಲ್ಲರಿಗೂ ಮಾಸಿಕ 10 ಸಾವಿರ ರುಪಾಯಿಗಳ ಪಿಂಚಣಿ ನೀಡಲು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿರ್ಧರಿಸಿದ್ದಾರೆ ಎಂದು ದ ಹಿಂದೂ ವರದಿ ಮಾಡಿದೆ. ಇದರಿಂದ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿ, “ಪ್ರಜಾತಂತ್ರದ ಕಗ್ಗೊಲೆ” ನಡೆಸಿದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಒಂದು ತಿಂಗಳಿಗಿಂತ ಹೆಚ್ಚು ಸಮಯದವರೆಗೆ ಜೈಲುವಾಸ ಅನುಭವಿಸಿದ್ದರೆ ಅಂತಹವರು ಮಾಸಿಕ 10 ಸಾವಿರ ಹಾಗೂ ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಕಾಲ ಜೈಲುವಾಸ ಅನುಭವಿಸಿದ್ದರೆ ಅಂತಹವರು ರೂ 5,000 ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ವರದಿ ತಿಳಿಸಿದೆ.

ಜೊತೆಗೆ ಹೆಚ್ಚುವರಿಯಾಗಿ, ಒಂದು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದವರ ವಿಧವೆ ಪತ್ನಿಯರೂ 5,000 ರೂಪಾಯಿಗಳನ್ನು ಪಡೆಯುತ್ತಾರೆ ಮತ್ತು ಬೇರೆ ಪ್ರಕರಣದಲ್ಲಿ ಅವರಿಗೆ 2,500 ರೂಪಾಯಿಗಳನ್ನು ನೀಡಲಾಗುವುದು ಎಂದು ಪಿಟಿಐ ವರದಿ ಹೇಳಿದೆ. 1975 ರಿಂದ 1977 ರವರೆಗೆ 21 ತಿಂಗಳ ಅವಧಿಯಲ್ಲಿ ಜೈಲಿನಲ್ಲಿದ್ದವರ ವಿಧವೆಯರಿಗೂ ಸಹ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಇಂದು ಸಂವಿಧಾನ ಅಪಾಯದಲ್ಲಿದೆ, ಲೋಕತಂತ್ರ ಅಪಾಯದಲ್ಲಿದೆ ಎಂದು ಲಬೋ ಲಬೋ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ಇಂದಿರಾ ಗಾಂಧಿ ನಡೆಸಿದ ಸಂವಿಧಾನದ ಕಗ್ಗೊಲೆಯನ್ನು ನೆನಪಿಸಿ ಛಾಟಿ ಏಟು ಬೀಸಿದೆ ಫಡ್ನವೀಸ್ ಸರಕಾರ!

ರಾಜ್ಯದಲ್ಲಿ “ಭಗವಾ ಧ್ವಜ” ಹಾರಾಡುತ್ತಿರಬೇಕು ಎಂದು ಅದಕ್ಕೆ ಹೇಳುವುದು. ಇಂಥ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇವಲ ಬಿ.ಜೆ.ಪಿ ನಾಯಕರಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ವ್ಯಕ್ತಿಗಳನ್ನು ಗೌರವಿಸುವ ಸೂಚಕವಾಗಿ ಅವರಿಗೆ ಪಿಂಚಣಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಪಡೆದ ಮೂರು ಮಂತ್ರಿಗಳ ಗುಂಪಿನ ಅನುಮೋದನೆಯ ನಂತರ ಈ ಪ್ರಕಟಣೆಯನ್ನು ಮಾಡಲಾಗಿದೆ. ಕಳೆದ ತಿಂಗಳಿನಲ್ಲಿ ಈ ಯೋಜನೆಗೆ ಕ್ಯಾಬಿನೆಟ್ ಹಸಿರು ನಿಶಾನೆ ತೋರಿಸಿ ಅನುಮೋದನೆ ನೀಡಿತ್ತು.

ಅರ್ಹ ವ್ಯಕ್ತಿಗಳು ಪಿಂಚಣಿ ಪಡೆಯಲು ಸರಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ ಮತ್ತು ಶೀಘ್ರದಲ್ಲೇ ಈ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಇದೆ ರೀತಿ ಉತ್ತರಾಖಂಡ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢ್ ಮುಂತಾದ ಬಿ.ಜೆ.ಪಿ ಆಡಳಿತದ ರಾಜ್ಯಗಳು ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಹೋರಾಡಿದವರಿಗೆ ಗೌರವಸೂಚಕವಾಗಿ 25 ಸಾವಿರ ರುಪಾಯಿ ಮಾಸಿಕ ಪಿಂಚಣಿ ನೀಡುತ್ತಿವೆ. ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ವಿರುದ್ದ ಯಥಾಪ್ರಕಾರ ಖ್ಯಾತೆ ತೆಗೆದಿರುವ ಕಾಂಗ್ರೆಸ್ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದವರಿಗೆ ಸ್ವಾಂತಂತ್ರ್ಯ ಹೋರಾಟಗಾರರಷ್ಟೆ ಸ್ಥಾನಮಾನ ಮತ್ತು ಗೌರವವನ್ನು ನೀಡಿದರೆ ಅದು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ ಹಾಗೆ ಎಂದು ಆರೋಪ ಮಾಡುತ್ತಿದೆ.

ನೋಡಿ ಭಾಜಪಾ ಆಡಳಿತಕ್ಕೂ ಭಾಜಪೇತರ ಆಡಳಿತಕ್ಕೂ ಎಷ್ಟು ವ್ಯತ್ಯಾಸ ಇದೆ ಎನ್ನುವುದನ್ನು. ಉಳಿದವರು ಮುಸ್ಲಿಮರಿಗೆ ಆರು ಮೊಟ್ಟೆ, ಹಿಂದುಳಿದವರಿಗೆ ಮೂರು ಮೊಟ್ಟೆ, ಸಾಮಾನ್ಯರಿಗೆ ಒಂದು ಮೊಟ್ಟೆ, ಅಲ್ಪರಿಗೆ ಅಹೋ ಭಾಗ್ಯ, ಬಹುಜನರಿಗೆ ಮರಣ ಭಾಗ್ಯ, ಹಿಂದುಳಿದವರಿಗೆ ಬಸ್ ಪಾಸ್ ಉಚಿತ, ಮುಂದಿರುವವರಿಗೆ ಶ್ಮಶಾನ ಯಾತ್ರೆ ಖಚಿತ ಎನ್ನುವಂತ ಲಡಕಾಸಿ ಯೋಜನೆಗಳನ್ನು ಜಾರಿಗೊಳಿಸಿ ಬಹುಸಂಖ್ಯಾತರ ಕಿಸೆ ಮತ್ತು ಮನಸ್ಸಿನ ಮೇಲೆ ಬರೆ ಎಳೆಯುತ್ತಾರೆ. ಆದರೆ ಬಿ.ಜೆ.ಪಿ ಸರಕಾರಗಳು ಜಾತಿ ಭೇಧ ಮಾಡದೆ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದ “ಪ್ರತಿಯೊಬ್ಬರಿಗೂ” ಪಿಂಚಣಿ ನೀಡಿ ಗೌರವಿಸುವಂತಹ ಯೋಜನೆಗಳನ್ನು ಕೈಗೊಳ್ಳುತ್ತವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಇದುವೆ.

-ಶಾರ್ವರಿ

Tags

Related Articles

Close