ಪ್ರಚಲಿತರಾಜ್ಯ

ಸಾವಿರ ಕೋಟಿ ವಂಚಕ ನೀರವ್ ಮೋದಿಗೆ ಕೇಂದ್ರದಿಂದ ಬಿಗ್ ಶಾಕ್!! ಕೆಲಸಗಾರರಿಗೆ ನೀರವ್ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?

ಈ ಹಿಂದೆ ನರೇಂದ್ರ ಮೋದಿಯನ್ನು ಸ್ವಚ್ಛತೆ, ಭ್ರಷ್ಟಾಚಾರ, ಬಡತನ, ಕೋಮುವಾದ, ಜಾತೀಯತೆ ಮತ್ತು ಭಯೋತ್ಪಾದನೆ ಭಾರತಕ್ಕೆ ಭಾದಿಸಿರುವ ಆರು ಖಾಯಿಲೆಗಳು ಇದರ ವಿರುದ್ಧ ಪ್ರಧಾನಿ ನಿರಂತರ ಹೋರಾಡುತ್ತಿದ್ದಾರೆ. ಹಾಗಾಗಿ ಅವರೊಬ್ಬ “ಅತ್ಯುತ್ತಮ ವೈದ್ಯರು” ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅಭಿಪ್ರಾಯಪಟ್ಟಿದ್ದಂತೂ ಅಕ್ಷರಶಃ ನಿಜ ಎಂದೆನಿಸುತ್ತೆ!! ಯಾಕೆಂದರೆ ಇದೀಗ ನಿರವ್ ಮೋದಿ ವಿಚಾರದಲ್ಲೂ ಖಡಕ್ ಕ್ರಮ ಕೈಗೊಂಡಿರುವ ನರೇಂದ್ರ ಮೋದಿ ಸಾವಿರಾರು ಕೋಟಿ ರೂಪಾಯಿಯನ್ನು ಮುಲಾಜಿಲ್ಲದೆ ವಶಪಡಿಸಿಕೊಂಡಿದ್ದಾರೆ.

ಹೌದು… “ನರೇಂದ್ರ ಮೋದಿಯವರು ಎಂ.ಬಿ.ಬಿ.ಎಸ್. ಪದವಿ ಹೊಂದಿಲ್ಲದೇ ಇರಬಹುದು ಆದರೆ ದೇಶಕ್ಕೆ ಭಾದಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ಅವರೊಂದು ಅತ್ಯುತ್ತಮ ವೈದ್ಯರಾಗಿದ್ದಾರೆ” ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿರುವ ಮಾತು ನಿಜ!! ಯಾಕೆಂದರೆ ಈಗಾಗಲೇ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಡೆಸುತ್ತಿರುವ ಇವರು ದೇಶದಲ್ಲಿ ಅಂಟಿರುವ ಭ್ರಷ್ಟಾಚಾರ ಎನ್ನುವ ಕೊಳೆಯನ್ನು ಒಂದೊಂದಾಗಿಯೇ ಕಿತ್ತೊಗೆಯುತ್ತಿದ್ದು ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ದೇಶಬಿಟ್ಟು ಪರಾರಿಯಾದ ನೀರವ್ ಗೆ ಸೇರಿದ ಬರೋಬ್ಬರಿ 56740000000 ರುಪಾಯಿ ಮುಲಾಜಿಲ್ಲದೆ ವಶಪಡಿಸಿಕೊಂಡಿದ್ದಾರೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ಪಂಜಾಬ್ ನ್ಯಾಷನಲ್ ಬ್ಯಾಂಕಿನ ನಿವೃತ್ತ ಉಪ ಮ್ಯಾನೇಜರ್ ಗೋಕುಲ್ ನಾಥ್ ಶೆಟ್ಟಿ ಮತ್ತು ಇನ್ನಿತರ ಆರೋಪಿಗಳನ್ನು ಬಹು ಕೋಟಿ ಬ್ಯಾಂಕ್ ವಂಚನೆಯ ಪ್ರಕರಣದಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸಿಬಿಐಗೆ ಶೆಟ್ಟಿ, ಸಿಂಗಲ್ ವಿಂಡೋ ಆಪರೇಟರ್ ಮನೋಜ್ ಖರತ್ ಜೊತೆಗೆ ನಿರಾವ್ ಮೋದಿ ಗ್ರೂಪ್ ನ ಅಧಿಕೃತ ಸಹಿ ಇದೆ ಎಂದು ಸಿಬಿಐ ಅಧಿಕಾರಿ ಹೇಮಂತ್ ಭಟ್ ತಿಳಿಸಿದ್ದಾರೆ.

ಸಿಬಿಐ ಎಫ್ ಐಆರ್ ನಲ್ಲಿ ಮೂರು ಖಾಸಗಿ ಸಂಸ್ಥೆಗಳ 10 ನಿರ್ದೇಶಕರ ವಿರುದ್ದ ಪ್ರಕರಣ ದಾಖಲು!!

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಸಂಬಂಧ 11400 ಕೋಟಿ ನಾಮ ಹಾಕಿ ದೇಶ ಬಿಟ್ಟು ಪರಾರಿ ಆದ ನಿರವ್ ಮೋದಿ ಮತ್ತು ಇನ್ನಿತರರ ಮೇಲೆ ಮನಿ ಲಾಂಡರಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕುರ್ಲಾದಲ್ಲಿನ ನೀರವ್ ಮೋದಿ ನಿವಾಸ, ಕಾಲಾ ಘೋಡಾ ಪ್ರದೇಶದಲ್ಲಿನ ಆಭರಣ ಮಳಿಗೆ, ಬಾಂದ್ರಾ, ಗುಜರಾತ್‍ನ ಸೂರತ್, ಚಾಣಕ್ಯಪುರಿ ಹಾಗೂ ದೆಹಲಿಯಲ್ಲಿರುವ ಮಳಿಗೆ ಹಾಗೂ ಸಂಸ್ಥೆಗಳಲ್ಲಿ ಶೋಧ ಕಾರ್ಯ ನಡೆಸಿ 5100 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದು ಈ ಹಿಂದೆ ವರದಿ ಆಗಿದೆ .

ಅಷ್ಟೇ ಅಲ್ಲದೇ, ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ (ಪಿಎನ್‍ಬಿ) 11400 ಕೋಟಿಗಳಷ್ಟು ವಂಚನೆ ಎಸಗಿರುವುದನ್ನು ಬ್ಯಾಂಕ್ ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿತ್ತು!! ಇನ್ನು, 280.70 ಕೋಟಿಗಳಷ್ಟು ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ಹತ್ತು ಕಡೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿತ್ತು.

ಆದರೆ ಇದೀಗ, ಸಿಬಿಐ ಎಫ್ ಐಆರ್ ನಲ್ಲಿ ಮೂರು ಖಾಸಗಿ ಸಂಸ್ಥೆಗಳ 10 ನಿರ್ದೇಶಕರುಗಳಾದ ಕೃಷ್ಣನ್ ಸಂಗಮೇಶ್ವರನ್, ನಜುರಾ ಯಶ್ಜನೇಯ್, ಗೋಪಾಲ್ ದಾಸ್ ಭಾಟಿಯಾ, ಆನಿಯತ್ ಶಿವರಾಮನ್, ಧನೇಶ್ ವಿಜ್ಲಾಲ್ ಶೆತ್, ಜ್ಯೋತಿ ಭಾರತ್ ವೋರಾ, ಅನಿಲ್ ಉಮೇಶ್ ಹಲ್ದಿಪುರ, ಚಂದ್ರಕಾಂತ್ ಕನು ಕರ್ಕರೆ , ಪಂಕುರಿ ಅಭಿಜೀತ್ ವರಂಜ್ ಮತ್ತು ಮಿಹಿರ್ ಭಾಸ್ಕರ್ ಜೋಶಿ ವಿರುದ್ದ ಪ್ರಖರಣ ದಾಖಲಾಗಿದೆ.

ಗೀತಾಂಜಲಿ , ಗಿಲಿ ಇಂಡಿಯಾ ಲಿಮಿಟೆಡ್ ಮತ್ತು ನಟದ್ರ್ರಾ ಬ್ರಾಂಡ್ ಲಿಮಿಟೆಡ್ ಬ್ಯಾಂಕ್ ಗೆ 4,886.72 ಕೋಟಿ ರೂಪಾಯಿ ನಷ್ಟ ತಂದಿದ್ದಾರೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ದೂರು ನೀಡಿದೆ ಎಂದು ಎಫ್‍ಐಆರ್ ಹೇಳಿದೆ. ಈ ಎಲ್ಲಾ ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಸಿಬಿಐ ನ ಕಠಿಣ ಕ್ರಮ ಕೇಂದ್ರ ಸರ್ಕಾರದ ಹಗರಣ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ಬಗೆಗಿನ ಸ್ಪಷ್ಟ ಸಂದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಕಂಪನಿಯ ಉದ್ಯೋಗಿಗಳಿಗೆ ಬೇರೆ ಕೆಲಸ ಹುಡುಕಿಕೊಳ್ಳುವಂತೆ ಪತ್ರ ಬರೆದ ನಿರಾವ್!!

ಹೌದು…. ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ದೇಶ ತೊರೆದಿರುವ ಉದ್ಯಮಿ ನೀರವ್ ಮೋದಿ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಬೇರೆ ಕೆಲಸ ಹುಡುಕಿಕೊಳ್ಳುವಂತೆ ಪತ್ರ ಬರೆದಿದ್ದಾರೆ. “ನಮ್ಮ ಕಂಪನಿಯ ಭವಿಷ್ಯ ಡೋಲಾಯಮಾನವಾಗಿದ್ದು, ಸಿಬಿಐ ಮತ್ತು ಜಾರಿ ನಿದೇಶನಾಲಯ ನಮ್ಮ ಕಂಪನಿ ಮತ್ತು ಶೋರೂಂಗಳಿದ್ದ ದಾಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಆದಾಯ ತೆರಿಗೆ ಇಲಾಖೆ ನಮ್ಮ ಕಂಪನಿಯ ಬ್ಯಾಂಕ್ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೆ ಸಂಬಳ ನೀಡಲು ಸಾಧ್ಯವಿಲ್ಲ. ನೀವು ಬೇರೆ ಕೆಲಸ ಹುಡುಕಿಕೊಳ್ಳುವುದು ಸೂಕ್ತ” ಎಂದು ನೀರವ್ ಮೋದಿ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ತನಿಖೆ ಸಾಗುತ್ತಿರುವ ಹಾದಿ ಮತ್ತು ವೇಗವನ್ನು ನೋಡಿದರೆ ನಿಷ್ಟಪಕ್ಷಪಾತ ತನಿಖೆ ನಡೆಯುವ ವಿಶ್ವಾಸವಿಲ್ಲ ಎಂದು ನೀರವ್ ಪತ್ರದಲ್ಲಿ ತಮ್ಮ ಆತಂಕವನ್ನು ಹೊರಹಾಕಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11,400 ಕೋಟಿ ರೂಪಾಯಿ ವಂಚಿಸಿ ದೇಶ ತೊರೆದಿದ್ದ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀರವ್ ಸೇರಿದ ಕಂಪನಿಗಳು ಮತ್ತು ಶೋರೂಂ ಗಳ ಮೇಲೆ ದಾಳಿ ನಡೆಸಿ ಸುಮಾರು 5,700 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಹರಳುಗಳೂ ಮತ್ತು ಇತರ ಬೆಲೆಬಾಳುವ ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ಮೋದಿ ತೆಗೆದುಕೊಂಡ ನೋಟ್ ಬ್ಯಾನ್ ಹಾಗೂ ಪರಿಣಾಮಕಾರಿ ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಪ್ರಧಾನಿ ಮೋದಿಯ ಎದೆಗಾರಿಕೆಯ ನಿರ್ಧಾರವೆಂದು ಬಣ್ಣಿಸಿದ್ದರು. ಅಂತೂ….. ಸಾವಿರಾರು ಕೊಟಿ ವಂಚಿಸಿ ದೇಶಬಿಟ್ಟು ಪರಾರಿಯಾದ ನಿರಾವ್ ಮೋದಿ ಸದ್ಯದಲ್ಲಿ ಜೈಲು ಪರಾಗಲಿರುವುದಂತೂ ಗ್ಯಾರೆಂಟಿ ಎಂದನಿಸುತ್ತದೆ!!

– ಅಲೋಖಾ

Tags

Related Articles

Close