ಪ್ರಚಲಿತ

ಬಿಗ್ ಬ್ರೇಕಿಂಗ್: ಮಂಗಳೂರಿನಲ್ಲಿ ಮೋದಿ ಹತ್ಯೆಗೆ ಸ್ಕೆಚ್..? ಸಜೀವ ಗುಂಡುಗಳೊಂದಿಗೆ ಓರ್ವ ಅರೆಸ್ಟ್…!

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜೀವ ಬೆದರಿಕೆಗಳನ್ನು ಎದುರಿಸುವ ವ್ಯಕ್ತಿ ಇದ್ದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ. ಭಯೋತ್ಪಾದಕರ ಹುಟ್ಟಗಿಸುವ ಬಗ್ಗೆ ತಮ್ಮ ಖಡಕ್ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಿದ್ದೆಗೆಡಿಸಿದ್ದರು. ಹೀಗಾಗಿಯೇ ಅವರಿಗೆ ಅತಿಹೆಚ್ಚು ಜೀವಬೆದರಿಕೆ ಬರಲು ಕಾರಣ.

ಮಂಗಳೂರಿನಲ್ಲಿ ಪತ್ತೆಯಾಯಿತು ಸಜೀವ ಗುಂಡು..!

ಶಾಕ್… ಮೋದಿ ಒಂದೇ ದಿನದಲ್ಲಿ ಬರೋಬ್ಬರಿ 4 ಚುನಾವಣಾ ಭಾಷಣಗಳನ್ನು ಮಾಡಿದ್ದರು. ಬೆಳಗ್ಗೆ ತುಮಕೂರಿನಲ್ಲಿ ಭಾಷಣ ಮುಗಿಸಿ ನಂತರ ಅಲ್ಲಿಂದ ಗದಗ ಹಾಗೂ ಶಿವಮೊಗ್ಗದಲ್ಲಿ ಜಾಥಾ ನಡೆಸಿದ್ದರು. ಪ್ರಧಾನಿ ಮೋದಿಯವರ ದಿನದ ಕೊನೆಯ ಭಾಷಣ ಮಂಗಳೂರಿನಲ್ಲಿ ನಡೆದಿತ್ತು.

ಸಂಜೆ 7 ಗಂಟೆ ಅಷ್ಟೊತ್ತಿಗೆ ಮಂಗಳೂರು ತಲುಪಿದ ಪ್ರಧಾನಿ ಮೋದಿ ಬರೋಬ್ಬರಿ 2 ಲಕ್ಷಕ್ಕಿಂತಲೂ ಅಧಿಕ ಮಂದಿಯೊಂದಿಗೆ ಚುನಾವಣಾ ಭಾಷಣವನ್ನು ನಡೆಸಿದ್ದರು.

ಈ ಮಧ್ಯೆ ದೇಶವೇ ಬೆಚ್ಚಿ ಬೀಳುವಂತಹಾ ಸುದ್ಧಿಯೊಂದು ಸಂಚಲನವನ್ನೇ ಮೂಡಿಸಿದೆ. ಮೋದಿ ಮಂಗಳೂರಿಗೆ ಬರುವ ವೇಳೆಯೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡುಗಳು ಪತ್ತೆಯಾಗಿದೆ. ಶಿವಮೊಗ್ಗದಿಂದ ಪ್ರಧಾನಿ ಮೋದಿ ಆಗಮಿಸುತ್ತಲೇ ಓರ್ವ ವ್ಯಕ್ತಿಯ ಬ್ಯಾಗ್ ನಲ್ಲಿ ಸಜೀವ ಗುಂಡುಗಳು ಪತ್ತೆಯಾಗಿವೆ.

ಮೋದಿ ಆಗಮನದ ವೇಳೆ ತೀವ್ರ ತಪಾಸಣೆಯನ್ನು ನಡೆಸುತ್ತಿದ್ದ ಭದ್ರತಾ ಸಿಬ್ಬಂಧಿಗೆ ಈ ಗುಂಡುಗಳು ಪತ್ತೆಯಾಗಿದೆ. ಧಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ 66 ವರ್ಷದ ವ್ಯಕ್ತಿಯೋರ್ವ ಈ ಗುಂಡುಗಳನ್ನು ಇರಿಸಿಕೊಂಡಿದ್ದ. ಈ ವೇಳೆ ಆತನನ್ನು ಬಂಧಿಸಿದ ಸಿಬ್ಬಂಧಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹಾಗೂ ಪತ್ತೆಯಾದ ಗುಂಡುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈಗಾಗಲೇ ರಾಜ್ಯಕ್ಕೆ ಕಾಲಿಟ್ಟಿರುವ ಮೋದೀಜೀ ದಿನಕ್ಕೆ ಹಲವಾರು ಕಡೆಗಳಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದಾರೆ!! ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ ಹಲವಾರು ಕಡೆಗಳಿಂದ ಜೀವ ಬೆದರಿಕೆಯಿದ್ದರೂ ಇಲ್ಲಿಯವರೆಗೆ ತಮ್ಮ ಭದ್ರತೆಗೆಂದು ಭಾಷಣದ ವೇಳೆ ಬುಲೆಟ್ ಪ್ರೂಪ್ ಗ್ಲಾಸ್‍(bullet-proof shield )ಗಳನ್ನು ಹಾಕಿಲ್ಲ!! ಇಲ್ಲಿಯವರೆಗೂ ಎಲ್ಲಾ ಪ್ರಧಾನ ಮಂತ್ರಿಗಳೂ ತಮ್ಮ ಭಾಷಣದ ವೇಳೆ ತಮಗೆ ಬೇಕಾದಂತಹ ಭದ್ರತೆಗಳನ್ನು ಮಾಡುವುದಕ್ಕೋಸ್ಕರ ಬುಲೆಟ್ ಪ್ರೂಫ್ ಗ್ಲಾಸ್‍(bullet-proof shield )ಗಳನ್ನು ಉಪಯೋಗಿಸಿದ್ದರು!! ಅದರೆ ಪ್ರಧಾನಿ ನರೇಂದ್ರ ಮೋದೀಜೀ ಮಾತ್ರ ಇಲ್ಲಿಯವರೆಗೆ ಅದನ್ನು ಉಪಯೋಗಿಸಿಲ್ಲ ಯಾಕೆಂದರೆ ತಮಗೆ ನೀಡಿರುವ ಸೆಕ್ಯುರಿಟಿಗಳ ಮೇಲೆ ಅಷ್ಟು ನಂಬಿಕೆ ಇದೆ. ನನ್ನ ದೇಶದ ಸೈನಿಕರ ಹಾಗೂ ಭದ್ರತಾ ಸಿಬ್ಬಂಧಿಗಳ ಮೇಲೆ ನಂಬಿಕೆ ಇರುವಾಗ ನಾನ್ಯಾಕೆ ಗುಂಡುನಿರೋಧಕ ಗಾಜು ಬಳಸಬೇಕು ಎಂದು ಹೇಳಿದ್ದರು. ಸ್ವಾತಂತ್ರ್ಯ ದಿನಾಚರಣೆಯ ವೇಳೆಯೂ ಈ ಗಾಜನ್ನು ಬಳಸದೆನೇ ಕೆಂಪುಕೋಟೆಯಲ್ಲಿ ತಮ್ಮ 56 ಇಂಚಿನ ಎದೆಯ ತಾಕತ್ತು ಪ್ರದರ್ಶಿಸುತ್ತಾರೆ. ಹಾಗಾಗಿ ಅವರು ಯಾವುದೇ ಬುಲೆಟ್ ಪ್ರೂಫ್ ಗ್ಲಾಸ್‍ ಗಳನ್ನು ಹಾಕದೆ ಭಾಷಣ ಮಾಡುವಲ್ಲಿ ಇತರೆಲ್ಲಾ ನಾಯಕರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಆಗಮಿಸುವ ವೇಳೆಯೇ ಇಷ್ಟೊಂದು ದೊಡ್ಡ ಮಟ್ಟದ ಅವಘಡ ನಡೆಯಲು ಹೇಗೆ ಸಾಧ್ಯ ಎಂಹ ಪ್ರಶ್ನೆಯೂ ಮೂಡಿದೆ. ಬಂಧನಕ್ಕೊಳಗಾದ ವ್ಯಕ್ತಿ ಯಾರು ಹಾಗೂ ಆತ ಮೋದಿ ಆಗಮಿಸುವ ವೇಳೆಯೇ ಸಜೀವ ಗುಂಡುಗಳನ್ನು ಯಾಕೆ ಇಟ್ಟುಕೊಂಡಿದ್ದ ಅನ್ನೋದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಪ್ರಧಾನಿ ಮೋದಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದನಾ..! ನಕ್ಸಲರ ಹಾವಳಿ ಇರುವ ಬೆಳ್ತಂಗಡಿಯ ವ್ಯಕ್ತಿಯಾದ ಕಾರಣ ನಕ್ಸಲರ ಟಾರ್ಗೇಟ್ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಏನೇ ಇರಲಿ ಮೋದಿ ಸೇಫ್… ಇನ್ನಷ್ಟು ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅಗತ್ಯತೆಯೂ ಇದೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

-ಸುನಿಲ್ ಪಣಪಿಲ

Tags

Related Articles

Close