ಪ್ರಚಲಿತ

ತೆರಿಗೆ ಕಳ್ಳರಿಗೆ ಮೋದಿಯ ಮತ್ತೊಂದು ಅಸ್ತ್ರ..! ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಪ್ರಸ್ತಾಪ..!!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿಯನ್ನು ಹಿಡಿದ ನಂತರ ಇಡೀ ಪ್ರಪಂಚವೇ ಇವರತ್ತ ನೋಡುವ ರೀತಿಯಾಗಿದೆ!! ಲೈಂಗಿಕ ಅಪರಾಧಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವ ಮೂಲಕ ಇಡೀ ದೇಶವನ್ನೇ ತಲ್ಲಣ ಗೊಳಿಸಿದ ಮೋದಿ ಸರಕಾರದಿಂದ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ!! ಆರ್ಥಿಕ ಅಪರಾಧಗಳಿಗೆ ಮೂಗುದಾರ ಹಾಕುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಕುಣಿಕೆ ಹಾಕುವ ಹಾಗೂ ನೂರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗುವ ಆರ್ಥಿಕ ವಂಚಕರ ಕೈಗೆ ಕೋಳತೊಡಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿರುವ ಎರಡು ಮಹತ್ವದ ಸುಗ್ರೀವಾಜ್ಞೆಗಳಿಗೆ ಕೇಂದ್ರ ಸಂಪುಟ ಸಭೆ ನಿನ್ನೆ ಸಮ್ಮತಿಯ ಮುದ್ರೆಯೊತ್ತಿದೆ.

ಆರ್ಥಿಕ ಅಪರಾಧಿಗಳನ್ನು ಮುಟ್ಟುಗೋಲು ಹಾಕಲು ಕೇಂದ್ರ ಸಚಿವ ಸಂಪುಟ ಅಸ್ತು!!

ಆರ್ಥಿಕ ಅಪರಾಧ ಎಸಗಿ ಸುಸ್ತಿದಾರರಾಗಿ ವಿದೇಶಕ್ಕೆ ಪಲಾಯನ ಮಾಡಿರುವ ಘೋಷಿತ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಿದೆ . ಈ ಕಾಯ್ದೆ ಈಗಾಗಲೇ ಆರ್ಥಿಕ ಅಪರಾಧ ಎಸಗಿ ದೇಶಬಿಟ್ಟು ಹೋಗಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿಯಂತವರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಪ್ರಸ್ತಾಪಕ್ಕೆ ಅಂಕಿತ ಹಾಕಲಾಗಿದೆ..

Related image

ದೇಶದಲ್ಲಿ ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪಲಾಯನ ಮಾಡುವ ಸುಸ್ತಿದಾರರಿಗೆ ಸುಸ್ತು ಹೊಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ಅಂತಹ ಘೋಷಿತ ಅಪರಾಧಿಗಳ ಆಸ್ತಿ ಮುಟ್ಟುಗೋಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ ದೊರಕಿಸಿಕೊಟ್ಟಿದೆ. 100 ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ಅಪರಾಧ ಎಸಗಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದೂ ಸೇರಿದಂತೆ ಇತರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪಲಾಯನ ಮಾಡಿದ ಆರ್ಥಿಕ ವಂಚಕರ ವಿಧೇಯಕ ಮಾರ್ಚ್ 12ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತಾದರೂ ಪ್ರತಿಪಕ್ಷಗಳ ಧರಣಿ ಹಿನ್ನೆಲೆಯಲ್ಲಿ ಯಾವುದೇ ತೀರ್ಮಾನವಾಗಿರಲಿಲ್ಲ. ಇದೀಗ ಕೇಂದ್ರ ಸುಗ್ರೀವಾಜ್ಞೆಯ ಪ್ರತಿಯನ್ನು ರಾಷ್ಟ್ರಪತಿಗೆ ಕಳುಹಿಸಿದೆ. ಕೇಂದ್ರ ಸರ್ಕಾರ ಮಾರ್ಚ್ 12ರಂದು ಲೋಕಸಭೆಯಲ್ಲಿ ಮೊದಲ ಬಾರಿಗೆ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಮಸೂದೆ(2018)ಯನ್ನು ಮಂಡಿಸಿತ್ತು. ಆದರೆ ಕೋಲಾಹಲದ ಹಿನ್ನೆಲೆಯಲ್ಲಿ ಈ ಮಸೂದೆ ಪಾಸ್ ಆಗಿರಲಿಲ್ಲವಾಗಿತ್ತು.!!

ವಿಜಯ್ ಮಲ್ಯ ನೀರವ್ ಮೋದಿಗೆ ಸಂಕಷ್ಟ!!

ವಿಜಯ್ ಮಲ್ಯ ವಿವಿಧ ಬ್ಯಾಂಕ್ ಗಳಿಗೆ 8,500 ಕೋಟಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದರು!! ಅದಲ್ಲದೆ ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 12,700 ಕೋಟಿ ವಂಚಿಸಿದ್ದ ನೀರವ್ ಮೋದಿ ಕೂಡಾ ದೇಶ ಬಿಟ್ಟು ಪರಾರಿಯಾಗಿದ್ದರು!! ದೇಶದಲ್ಲಿ ಹಲವು ಕಾನೂನುಗಳಿದ್ದರೂ ಅವರನ್ನು ಶಿಕ್ಷಿಸಲು ಸಾಧ್ಯವಾಗುತ್ತಿಲ್ಲ. ಅವರ ಆಸ್ತಿ, ಪಾಸ್ತಿ ಜಪ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಸೂದೆ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು!! 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿ ದೇಶದಿಂದ ಓಡಿ ಹೋದವರನ್ನಷ್ಟೇ ಪಲಾಯನ ಮಾಡಿದ ಆರ್ಥಿಕ ವಂಚಕರ ಸುಗ್ರೀವಾಜ್ಞೆ ವ್ಯಾಪ್ತಿಗೆ ಸೇರಿಸಲಾಗಿದೆ. ದೇಶದ ಕಾನೂನಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ಈ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ ಸರ್ಕಾರಿ ನಕಲಿ ಸ್ಟ್ಯಾಂಪ್ ಅಥವಾ ನೋಟು, ಚೆಕ್ ಬೌನ್ಸ್, ಮನಿ ಲಾಂಡರಿಂಗ್, ಸಾಲ ಮರು ಪಾವತಿ ಅಕ್ರಮವನ್ನು ಸೇರಿಸಲಾಗಿದೆ.

Vijay Mallya (left) and Nirav Modi

ಸುಗ್ರೀವಾಜ್ಞೆಯಲ್ಲೇನಿದೆ?

* ಆರ್ಥಿಕ ವಂಚಕ ಅಥವಾ ಅಪರಾಧಿ ಎಂದು ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು.

* ಭಾರತದ, ವಿದೇಶದಲ್ಲಿನ ವಂಚಕರ ಆಸ್ತಿ ಹಾಗೂ ಬೇನಾಮಿ ಆಸ್ತಿ ಜಪ್ತಿ, ಕಾನೂನು ಕ್ರಮಕ್ಕೆ ಅವಕಾಶ.

* ಆರ್ಥಿಕ ವಂಚಕನಿಗೆ ನೋಟಿಸ್ ನೀಡಿ 6 ವಾರದೊಳಗೆ ಶರಣಾಗುವಂತೆ ಸೂಚನೆ.

* ಪಲಾಯನ ಮಾಡಿರುವ ಆರ್ಥಿಕ ವಂಚಕನಿಗೆ ಯಾವುದೇ ಆಸ್ತಿಯನ್ನು ಪಡೆಯಲು ಸಿವಿಲ್ ಹೋರಾಟಕ್ಕೆ ಅವಕಾಶವಿಲ್ಲ.

* ಆರ್ಥಿಕ ವಂಚಕ ಎಂಬ ತಲೆಬರಹದ ಬಳಿಕ ವಿದೇಶಿ ನ್ಯಾಯಾಲಯಗಳಲ್ಲಿಯೂ ಕಾನೂನು ಹೋರಾಟ ಮಾಡಲು ಅವಕಾಶ.

* ಕೋರ್ಟ್ ಅನುಮತಿಯಿಲ್ಲದೆ ಆಸ್ತಿ ಮುಟ್ಟುಗೋಲಿಗೆ ಅವಕಾಶ, ಆದರೆ ಮುಂದಿನ 30 ದಿನದೊಳಗೆ ಕೋರ್ಟ್‍ಗೆ ಮಾಹಿತಿ ಹಂಚಿಕೆ.

* ಹೈಕೋರ್ಟ್‍ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ.

* ಈ ಕಾಯ್ದೆಯ ನಿರ್ವಹಣೆ ಹಾಗೂ ಅನುಷ್ಠಾನಕ್ಕೆ ವಿಶೇಷ ಆಡಳಿತಾಧಿಕಾರಿ ನೇಮಕ.

* ಭಾರತಕ್ಕೆ ಅಪರಾಧಿಗಳನ್ನು ಕರೆ ತರಲು ಸಹಾಯಕ ಹಾಗೂ ಬ್ಯಾಂಕ್‍ಗಳು ಬಾಕಿ ಹಣ ಪಡೆಯಲು ಅವಕಾಶ.

ಆರ್ಥಿಕ ಅಪರಾಧ ನಡೆದಿರುವ ಬ್ಯಾಂಕ್ ಅಥವಾ ಇನ್ನಿತರ ಆರ್ಥಿಕ ಸಂಸ್ಥೆಗಳು ಕಾಯ್ದೆಯ ವ್ಯಾಪ್ತಿಯ ಆಡಳಿತಾಧಿಕಾರಿ ಮೂಲಕ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಆರೋಪಿಯ ದೇಶ ಹಾಗೂ ವಿದೇಶದಲ್ಲಿನ ಆಸ್ತಿ ವಿವರ, ಬೇನಾಮಿ ಆಸ್ತಿ ಮಾಹಿತಿ ಹಾಗೂ ಈ ಪ್ರಕರಣದಲ್ಲಿನ ಭಾಗಿಯಾದವರ ಇತರರ ವಿವರ ನೀಡಬೇಕು.

ಮಕ್ಕಳ ಮೇಲೆ ಅತ್ಯಾಚಾರವೆಸಗುವ ವಿಕೃತ ಕಾಮಿಗಳಿಗೆ ಮರಣದಂಡನೆ ವಿಧಿಸುವ ಕಠಿಣ ಕಾನೂನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ನಿನ್ನೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜತೆಗೆ 16 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಿಗಳಿಗೆ ಜೀವಿತಾವಧಿ ಹಾಗೂ ಇತರೆ ಅತ್ಯಾಚಾರ ಅಪರಾಧಿಗಳ ಕನಿಷ್ಠ ಶಿಕ್ಷೆಯನ್ನು 10 ವರ್ಷಕ್ಕೆ ಏರಿಸುವ ತಿದ್ದುಪಡಿ ಮಾಡಲಾಗಿದೆ. ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಂಕಿತ ಬಿದ್ದ ಬಳಿಕ ಆದೇಶ ಜಾರಿಯಾಗಲಿದೆ. ಆದರೆ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೆಹಲಿ ಎಂದರೆ ರೇಪ್ ಕ್ಯಾಪಿಟಲ್ ಎಂದೇ ಹೆಸರಲಾಗಿತ್ತು. ಇಂದಿಗೂ ದೆಹಲಿ ಅತ್ಯಾಚಾರ ಪ್ರಕರಣಗಳಿಗೆ ಸುದ್ದಿಯಾಗುತ್ತಿದೆ. ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರತವನ್ನು ವಿಶ್ವಮಟ್ಟದಲ್ಲಿ ಸಕಾರಾತ್ಮವಾಗಿ ಸುದ್ದಿಯಾಗುವಂತೆ ಮಾಡಿತು.

Related image

ಇಷ್ಟಾದರೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ತರಲು ಚಿಂತಿಸದ ಇದೇ ಕಾಂಗ್ರೆಸ್ ಮಾತ್ರ ಸೊಲ್ಲೆತ್ತಲಿಲ್ಲ. ಆದರೆ ಉನ್ನಾವೋ, ಕಠುವಾ ಪ್ರಕರಣ ಇಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಆದರೆ ನರೇಂದ್ರ ಮೋದಿ ಅವರು ಈಗ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯಿದೆ ತರಲು ಮುಂದಾಗಿದ್ದಾರೆ. ಒಬ್ಬ ನಾಯಕನ ವೇಗದ ನಿರ್ಧಾರ ಎಂದರೆ ಅದು ನರೇಂದ್ರ ಮೋದಿ ಅವರಿಂದ ಕಲಿಯಬೇಕು. ಅತ್ಯಾಚಾರ ಪ್ರಕರಣದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಆರ್ಥಿಕವಂಚಕರ ಸೊಕ್ಕನ್ನು ಮುರಿಯುವ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಅಭೂತ ಪೂರ್ವ ಇತಿಹಾಸ!! ಇನ್ನು ಮುಂದೆಯೂ ಇಂತಹ ಕೃತ್ಯಗಳು ನಡೆಯದಂತೆ ದೇಶವನ್ನು ಸುಭೀಕ್ಷತೆಯನ್ನು ಕಾಪಾಡಬೇಕಾದರೆ ಮುಂದಿನ ಚುನಾವಣೆಯಲ್ಲೂ ನಾವು ಮೋದಿಜೀಯನ್ನೇ ಗೆಲ್ಲಿಸುವಂತೆ ಮಾಡಬೇಕು!!

ಕೃಪೆ: ವಿಜಯವಾಣಿ

source: https://www.livemint.com/Politics/gsQrq8JkxHmH5NB5CyocFO/Union-cabinet-approves-Fugitive-Economic-Offenders-Ordinance.html

http://www.business-standard.com/article/current-affairs/cabinet-okays-new-law-to-put-brakes-on-nirav-modi-mallya-type-fugitives-118042100335_1.html

ಪವಿತ್ರ

Tags

Related Articles

Close