ಪ್ರಚಲಿತ

ಕನ್ನಡ ಭಾಷೆಗೆ ಸೆಡ್ಡು ಹೊಡೆದ ಉರ್ದು ನಾಮಫಲಕ!! ಹಿಂದಿ ಭಾಷೆಯ ನಾಮಫಲಕಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯನವರೇ ಈಗ ಎಲ್ಲಿದ್ದೀರಾ?!

ಕನ್ನಡ ಧ್ವಜದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಸಿಎಂ, ಮೆಟ್ರೋದಲ್ಲಿ ಹಿಂದಿ ಬಳಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕನ್ನಡ ಪ್ರೇಮವನ್ನು ತೋರಿದ್ದರು. ಆದರೆ ಇದೀಗ ರಾಜ್ಯ ಸರ್ಕಾರವು ಕನ್ನಡ ಪ್ರೇಮವನ್ನು ಬದಿಗೊತ್ತಿ ಉರ್ದು ಪ್ರೇಮವನ್ನು ತಳೆದಿದ್ದು, ಕರ್ನಾಟಕದಲ್ಲಿ “ಕನ್ನಡಕ್ಕೆ ಸೆಡ್ಡು ಹೊಡೆಯುತ್ತಿದೆಯೇ ಉರ್ದು” ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

ಈಗಾಗಲೇ ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ತೆರವಿಗೆ ನಿರ್ಧರಿಸಿರುವ ಸಿಎಂ, ಬಿಎಂಆರ್ಸಿಎಲ್ ಗೆ ಹಿಂದಿ ತೆರವಿಗೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಪತ್ರ ಬರೆದು, ಮೆಟ್ರೋದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವ ಹೆಚ್ಚಿದೆಯಲ್ಲದೇ ಕೇಂದ್ರದ ನೆರವಿದ್ದರೂ ಮೆಟ್ರೋದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದೆ. ಹೀಗಾಗಿ ಇಲ್ಲಿ ತ್ರಿಭಾಷಾ ಸೂತ್ರ ಅನ್ವಯ ಸರಿಯಲ್ಲ ಎಂದು ಬರೆದಿದುಕೊಂಡಿದ್ದರು.

ಅಷ್ಟೇ ಅಲ್ಲದೇ, ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ನಾಮಫಲಕ ತೆಗಿಸಿ ಸಿಎಂ ಸಿದ್ದರಾಮಯ್ಯ ಅಪ್ಪಟ ಕನ್ನಡಿಗ ಎನಿಸಿಕೊಂಡಿದ್ದರು. ಆದರೆ ಇದೀಗ ಅವರದೇ ಪಕ್ಷದ ಮುಖಂಡ ಸಿಎಂ ಗೇ ಸೆಡ್ಡು ಹೊಡೆದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ.

ಈಗಾಗಲೇ ಹಿಂದೂಗಳ ಮತ ಸೆಳೆಯಲು ದೇವಾಸ್ಥಾನಗಳಿಗೆ ಬೇಟಿ ನೀಡುತ್ತಿರುವ ರಾಹುಲ್ ಗಾಂಧಿ, ಗುಜರಾತ್ ನಲ್ಲಿ ತಾವು ಮಾಡಿರುವ ಗಿಮಿಕ್ಸ್ ಗಳನ್ನು ಕರ್ನಾಟಕದಲ್ಲೂ ಮುಂದುವರೆಸುತ್ತಿರುವಾಗ ಇತ್ತ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಮೇಲಿರುವ ಪ್ರೇಮವನ್ನು ಸಾಬೀತು ಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ರಾಜ್ಯ ಸರ್ಕಾರವು ಮುಸಲ್ಮಾನರಿಗೆ ನಾನಾ ತರದ ಸವಲತ್ತುಗಳನ್ನು ನೀಡುತ್ತಿರುವ ಜೊತೆಗೆ ಕೊಲೆಗಟುಕರನ್ನೂ ರಕ್ಷಿಸುತ್ತಲೇ ಬರುತ್ತಿದೆ.

ಇನ್ನು ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ರಾಜ್ಯ ಸರ್ಕಾರವು ಟಿಪ್ಪು ಜಯಂತಿಯನ್ನು ಎಲ್ಲೆಡೆ ಆಚರಿಸುವುದರೊಂದಿಗೆ ಕಲಬುರಗಿಯಲ್ಲಿ ಬಹುಮನಿ ಉತ್ಸವ ಮಾಡಲು ಮುಂದಾಗಿದ್ದರು. ಆದರೆ ಇದೀಗ ಅವರದೇ ಪಕ್ಷದ ಮುಖಂಡ ಹಾಗು ಎನ್‍ಇಕೆಎಸ್‍ಆರ್ಟಿಸಿ ನಿಗಮದ ಅಧ್ಯಕ್ಷ ಇಲಿಯಾಸ್ ಸೇಠ್ ಕಲಬುರಗಿಯ ಬಸ್ ನಿಲ್ದಾಣದ ಮೇಲೆ ಉರ್ದು ಭಾಷೆಯ ನಾಮಫಲಕ ಹಾಕಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾರ ಮತ ಬ್ಯಾಂಕ್ ಗಾಗಿ ಕೈ ಪಕ್ಷದ ನಾಯಕರು ಈ ನಾಮಫಲಕ ಹಾಕಿಸಿದ್ದಾರೆ ಎಂದು ಕಲಬುರಗಿ ಜಿಲ್ಲೆಯ ಜನ ಪ್ರಶ್ನೆ ಮಾಡುತ್ತಿದ್ದಾರೆ.

ಕಲಬುರಗಿಯ ಬಸ್ ನಿಲ್ದಾಣದಲ್ಲಿ ಈ ಹಿಂದೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಾಮಫಲಕವಿತ್ತು. ಆದರೆ ಯಾವಾಗ ಇಲಿಯಾಸ್ ಸೇಠ್ ಅವರನ್ನು ಈ ಮಂಡಳಿಯ ಅಧ್ಯಕ್ಷರಾಗಿ ಮಾಡಲಾಯಿತೋ ಆಗ ಅವರು ಅಧಿಕಾರಿಗಳ ವಿಶೇಷ ಸಭೆ ಕರೆದು ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ. ಈ ಕುರಿತು ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದರೆ ಮಾಧ್ಯಮದವರ ಕೈಗೆ ಆದೇಶ ಪ್ರತಿ ನೀಡಿ ನುಣಚಿಕೊಳ್ಳುತ್ತಿದ್ದಾರೆ.

ನಿರ್ದಿಷ್ಟ ಭಾಷಿಕರು ಹೆಚ್ಚು ಇರುವ ಕಡೆ ಆಯಾ ಭಾಷೆಯಲ್ಲಿ ನಾಮ ಫಲಕವನ್ನು ಬರೆಯಿಸುವುದು ಸೂಕ್ತವೆಂದು ಸದಸ್ಯರು ಅಭಿಪ್ರಾಯಪಟ್ಟರು. ಹೀಗಾಗಿ ಸಭೆಯಲ್ಲಿ ಇದಕ್ಕೆ ಒಮ್ಮತದ ಅಭಿಪ್ರಾಯ ಬಂದಿದ್ದು, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಜೊತೆಗೆ ಉರ್ದು ನಾಮಫಲಕ ಸಹ ಹಾಕಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಹೇಳಲಾಗಿದೆ.

ಆದರೆ ಈ ಹಿಂದೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಹಿಂದಿ ನಾಮಫಲಕವನ್ನು ವಿರೋಧಿ, “ಒಂದು ವಾರದೊಳಗೆ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯಲ್ಲಿ ಹಾಕಿರುವ ನಾಮಫಲಕಗಳನ್ನು ತೆಗೆಯಬೇಕು. ಇಲ್ಲದಿದ್ದಲ್ಲಿ ನಾವೇ ನಾಮಫಲಕಗಳನ್ನು ತೆರವುಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದ ಇವರಿಗೆ ಉರ್ದು ನಾಮಫಲಕಗಳು ಹಿತವೆನಿಸುತ್ತಿದೇಯೇ?

ಭಾರತದ ರಾಷ್ಟ್ರ ಭಾಷೆಯಾಗಿರುವ ಹಿಂದಿಯನ್ನು ಮೆಟ್ರೋದ ನಾಮಫಲಕದಲ್ಲಿ ತೆಗೆಯಬೇಕೆಂದು ಹೋರಾಡಿದ ಕನ್ನಡ ಪರ ಸಂಘಟನೆಗಳೇ… ಉರ್ದು ಭಾಷೆಗೆ ಮಸಿಯನ್ನು ಬಳಿಯಲು ನೀವು ಸಿದ್ದರಿದ್ದೀರೇ? ಇದರ ಬಗ್ಗೆ ಖಂಡಿಸಲು ನೀವು ತಯಾರಿದ್ದೀರೇ? ರಾಷ್ಟ್ರ ಭಾಷೆ ಕಹಿ ಎನಿಸುವ ನಿಮಗೆ ಉರ್ದು ಭಾಷೆ ಹಿತವೆನಿಸಿದ್ದು ಮಾತ್ರ ದೊಡ್ಡ ವಿಪರ್ಯಾಸ!!

– ಅಲೋಖಾ

Tags

Related Articles

Close