ಪ್ರಚಲಿತ

ಯುಎಸ್‌ಗೂ ಬೇಕಂತೆ ಪ್ರಧಾನಿ ಮೋದಿ ಅವರಂತಹ ರಾಜಕೀಯ ನಾಯಕ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇವಲ ಭಾರತೀಯರಿಗೆ ಮಾತ್ರ ಇಷ್ಟವಲ್ಲ. ಅವರನ್ನು ಪ್ರೀತಿಸುವ ಅಭಿಮಾನಿಗಳು ವಿಶ್ವದೆಲ್ಲೆಡೆ ಇದ್ದಾರೆ. ಅವರು ತೆಗೆದುಕೊಳ್ಳುವ ನಿಲುವುಗಳಿಗೆ ವಿಶ್ವ ಮನ್ನಣೆ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯುಎಸ್‌ಐಎಸ್‌‌ಪಿಎಫ್ (ಯುಎಸ್ – ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಮ್) ನ ಅಧ್ಯಕ್ಷ ಜಾನ್ ಚೇಂಬರ್ಸ್ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚಿ ನುಡಿದಿದ್ದು, ಅವರೋರ್ವ ವಿಶ್ವದ ಅತ್ಯುತ್ತಮ ನಾಯಕ ಎಂಬುದಾಗಿ ಬಣ್ಣಿಸಿದ್ದಾರೆ.

ಜಾನ್ ಚೇಂಬರ್ಸ್ ಅವರು ಮಾಜಿ ಟೆಕ್ ಟೈಟಾನ್ ಆಗಿದ್ದು, ಅವರು ಪ್ರಧಾನಿ ಮೋದಿ ಅವರ ಗಮನಾರ್ಹವಾದ 76% ಅನುಮೋದನೆ ರೇಟಿಂಗ್ ಮತ್ತು ನಂಬಿಕೆಯನ್ನು ಬೆಳೆಸುವಲ್ಲಿ ಅವರ ಪ್ರಯತ್ನ, ಸಾಮರ್ಥ್ಯ ಮೊದಲಾದ ವಿಷಯಗಳನ್ನು ಕೊಂಡಾಡಿದ್ದಾರೆ. ತಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ ಎಂದು ಸಂಶಯವಿಲ್ಲದೆ ಹೇಳುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತದ ಪ್ರಧಾನಿ ಮೋದಿ ಅವರು ಜಗತ್ತಿನ ಅತ್ಯುತ್ತಮ ನಾಯಕ ಎನ್ನುವುದು ನನ್ನ ಅಭಿಪ್ರಾಯ. ಅಂತಹ ಓರ್ವ ದಿಟ್ಟ ನಾಯಕನನ್ನು ಯುಎಸ್ ಸಹ ಹೊಂದಬೇಕು ಎಂಬುದಾಗಿ ನಾನು ಬಯಸುತ್ತೇನೆ. ನಮಗೆ ಐವತ್ತು ಶೇಕಡಾ ಗಿಂತ ಹೆಚ್ಚಿನ ರೇಟ್ಂಗ್ಸ್ ದೊರೆತಿರುವ ರಾಜಕೀಯ ನಾಯಕ ಈ ವರೆಗೆ ಸಿಕ್ಕಿಲ್ಲ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎಪ್ಪತ್ತಾರು ಶೇಕಡಾ ಅನುನೋದನಾ ರೇಟಿಂಗ್ಸ್ ಹೊಂದಿದ್ದಾರೆ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಚೇಂಬರ್ಸ್ ಮೆಚ್ಚಿ ನುಡಿದಿರುವುದಾಗಿದೆ. ನೀವು ನಾಯಕನ ಬಗ್ಗೆ ಆಲೋಚನೆ ಮಾಡಿದರೆ ಅದು ಅವರು ಆ‌ವರೆಗೆ ಮಾಡಿದ ದಾಖಲೆಯ ಬಗ್ಗೆ, ಅವರ ಸಂಬಂಧಗಳು ಮತ್ತು ನಂಬಿಕೆಯ ಬಗೆಗೂ ಇರುತ್ತದೆ. ಅಮೆರಿಕಾದ ಪ್ರತಿಯೋರ್ವ ರಾಜಕೀಯ ನಾಯಕರ ಜೊತೆಗೆ ಭಾರತದ ಪ್ರಧಾನಿ ಮೋದಿ ಅವರು ಸಂಬಂಧ, ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

Tags

Related Articles

Close