ಪ್ರಚಲಿತ

ಯೋಗಿಯಿಂದ ಭರ್ಜರಿ ಬಜೆಟ್!! ಮಹಾಸಂತನ ಚೊಚ್ಚಲ ಬಜೆಟ್‍ಗೆ ಸಿದ್ದರಾಮಯ್ಯನ 13 ನೇ ಬಜೆಟ್ ಮಖಾಡೆ ಮಲಗಿದ್ದು ಹೇಗೆ ಗೊತ್ತಾ?!

ಯಾವತ್ತೂ ಅಷ್ಟೇ! ಸೇವೆಗೆಂದು ನಿಂತವನಾಗಲಿ, ಕರ್ತವ್ಯ ಪಾಲನೆಗೆ ಬದ್ಧವನಾಗಿರಲಿ, ದೇಶವನ್ನು ಬದಲಾಯಿಸಬೇಕೆಂದು ಅಂದುಕೊಂಡವನಾಗಿರಲಿ! ಯುಕ್ತಿಯಿಂದಲೇ ತನ್ನೆಲ್ಲ ಕೆಲಸಗಳನ್ನೂ ಯಶಸ್ವಿಯಾಗಿಯೇ ಪೂರೈಸುವ ರಾಜಕೀಯ ಸಂತರಿಗೆ ಜ್ವಲಂತ ಉದಾಹರಣೆ ಯೋಗಿ ಆದಿತ್ಯನಾಥ್! ಯಾವುದೇ ಸಮಸ್ಯೆಯನ್ನಾದರೂ ತೆಗೆದುಕೊಳ್ಳಿ, ಉತ್ತರ ಪ್ರದೇಶ ಈ ಹಿಂದೆ ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದಷ್ಟು ಅಪರಾಧಗಳು! ಉತ್ತರ ಪ್ರದೇಶಕ್ಕೆ ಹೋಗುವುದೇ ದೊಡ್ಡ ಅಪಾಯ ಎನ್ನುವಂತಿದ್ದ ಪರಿಸ್ಥಿತಿಯನ್ನು ಬದಲು ಮಾಡಿದ್ದು ಯೋಗಿ ಆದಿತ್ಯನಾಥ್ ಸರಕಾರ!! ನಿರಾಶ್ರಿತರಿಗೆ ಸೂರನ್ನು ಮಾತ್ರವೇ ಕಲ್ಪಿಸಿಕೊಡದೇ ಜೊತೆಗೆ, ಉದ್ಯೋಗವನ್ನು ಕಲ್ಪಿಸಿದ ಯೋಗಿ ಸರಕಾರದ ಬಲದಿಂದ ಇವತ್ತು ಉತ್ತರ ಪ್ರದೇಶ ದಿನೇ ದಿನೇ ಅಪರಾಧ ರಹಿತವಾಗುತ್ತ ಹೋಗುತ್ತಿದೆ!!

ಫೈರ್ ಬ್ರಾಂಡ್ ಅಂತಾನೇ ಪ್ರಖ್ಯಾತಿಯನ್ನು ಹೊಂದಿರುವಂತಹ ಯೋಗಿ ಆದಿತ್ಯನಾಥರು ಒಬ್ಬ ಮಾಸ್ಟರ್ ಮೈಂಡ್ ಅಂತಾನೇ ಹೇಳಬಹುದು… ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಅಲ್ಲಿನ ಬದಲಾವಣೆಗಳು ಒಂದಾ ಎರಡಾ? ನಿನ್ನೆ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಮುಗಿಬಿದ್ದ ಜನಗಳು ಯೋಗಿ ಆದಿತ್ಯನಾಥರ ಬಜೆಟ್ ಮಂಡನೆ ಯಾರಿಗೂ ತಿಳಿದೇ ಇಲ್ಲವೇ ಅಂತನಿಸುತ್ತದೆ… ಯೋಗಿ ಆದಿತ್ಯನಾಥರ ಬಜೆಟ್ ಮಂಡಿಸುತ್ತಿದ್ದಂತೆಯೇ ಇಡೀ ಉತ್ತರ ಪ್ರದೇಶದ ಜನತೆಯ ಮುಖದಲ್ಲಿ ಸಂತಸದ ಅಲೆ ಎದ್ದು ಕಾಣುತ್ತಿತ್ತು.. ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನೇ ಪಾಲಿಸಿಕೊಂಡು ಬರುತ್ತಿರುವ ಯೋಗಿ ಆದಿತ್ಯನಾಥರ ಮೊದಲ ಬಜೆಟ್ ಇದಾಗಿದ್ದು ಈ ಬಾರಿಯ ಬಜೆಟ್ ಮೋಡಿ ಹೇಗಿತ್ತು ಗೊತ್ತಾ?

ಯೋಗಿ ಆದಿತ್ಯನಾಥ್ ಸರ್ಕಾರವು ಇತಿಹಾಸವನ್ನು ಸೃಷ್ಟಿಮಾಡಿದೆ ಅಂತಾ ಹೇಳಬಹುದು… ಇದು 2018-19 ರ ವರ್ಷಕ್ಕೆ ಗರಿಷ್ಠ ಬಜೆಟ್ ಇದಾಗಿದ್ದು 4, 28,384.52 ಕೋಟಿ ಬಜೆಟ್ ನೀಡಿದೆ. ಕಳೆದ ವರ್ಷಕ್ಕಿಂತ ಶೇಕಡಾ 11.4 ರಷ್ಟು ಈ ಬಾರಿ ಹೆಚ್ಚಾಗಿದೆ.. ಬಜೆಟ್‍ನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅದನ್ನು “ಪ್ರಗತಿ-ಆಧಾರಿತ ಬಜೆಟ್ ಎಂದು ವಿವರಿಸಿದರು.

ಲೋಕಸಭೆ ಚುನಾವಣೆಗೆ ಒಂದು ವರ್ಷ ಮುಂಚೆಯೇ ಯೋಗಿ ಸರ್ಕಾರದ ಬಜೆಟ್ ಮಂಡಿಸಿದ್ದು ಕೃಷಿ ವಲಯ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳಿಗೆ ಇಂತಹ ಅಭೂತಪೂರ್ವ ಯೋಜನೆಗಳೊಂದಿಗೆ ಬಜೆಟ್ ಮಂಡಿಸಿದ ಯೋಗಿ ಆದಿತ್ಯನಾಥರು ಇಡೀ ಭವಿಷ್ಯದ ಬಜೆಟ್ ಮಂಡನೆ ಇದಾಗಿತ್ತು.. 2019 ರಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಈ ಬಜೆಟ್ ಮಂಡನೆಯೇ ಸಾಕ್ಷಿಯಾಯಿತು..

ಯೋಗಿ ಆದಿತ್ಯನಾಥ ಸರಕಾರ ನಿನ್ನೆ 2018 ರ 4,28,384.52 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದು ಎಲ್ಲರೂ ಯೋಗಿಯ ಬಜೆಟ್ ಮಂಡನೆ ಕೇಳುತ್ತಿದ್ದಂತೆಯೇ ಇಡೀ ಉತ್ತರ ಪ್ರದೇಶದ ಜನರಲ್ಲಿ ಸಂತಸ ಉಕ್ಕಿಹರಿಯುತ್ತಿತ್ತು… ಇದು ಕಳೆದ ಆರ್ಥಿಕ ವರ್ಷಕ್ಕಿಂತ 11.45 ರಷ್ಟು ಹೆಚ್ಚಾಗಿದ್ದು ಯೋಗಿ ಸರಕಾರ ಅಭಿವೃದ್ಧಿಯ ಪಥ ಎದ್ದು ಕಾಣಿಸುತ್ತಿತ್ತು… ಅಸೆಂಬ್ಲಿಯಲ್ಲಿ ಬಜೆಟ್ ಮಂಡಿಸಿದ ಬಳಿಕ ಮಾತನಾಡಿದ ಹಣಕಾಸು ಸಚಿವ ರಾಜೇಶ್ ಅಗರ್ವಾಲ್, “2018-19ರ ಬಜೆಟ್ ಗಾತ್ರ 4,28,384,52 ಕೋಟಿ, ಇದು ಕಳೆದ ಆರ್ಥಿಕ ವರ್ಷಕ್ಕಿಂತ 11.4% ಹೆಚ್ಚಾಗಿದೆ” ಎಂದು ಹೇಳಿದರು.

ಯೋಗಿ ಬಜೆಟ್‍ನ ಮುಖ್ಯಾಂಶ ಈ ರೀತಿ ಇದೆ.

  • ಬುಂದೇಲ್ಖಂಡ್ ಎಕ್ಸ್‍ಪ್ರೆಸ್ ಯೋಜನೆಗೆ 650 ಕೋಟಿ ರೂ. ಗೋರಖ್‍ಪುರ ಲಿಂಕ್ ಎಕ್ಸ್‍ಪ್ರಸ್‍ಗೆ ಯೋಜನೆಗೆ ರೂ. 1,000 ಕೋಟಿ, ಪುರ್ವಂಚಲ್ ಎಕ್ಸ್‍ಪ್ರೆಸ್‍ಗೆ ರೂ. 1,000 ಕೋಟಿ, ಆಗ್ರ-ಲಕ್ನೋ ಎಕ್ಸ್‍ಪ್ರೆಸ್‍ಗೆ 500 ಕೋಟಿ ರೂ.
  • ಎಲ್ಲಾ ಸರಕಾರಿ ಕಚೇರಿಗಳಲ್ಲಿ ಇ-ಆಫೀಸ್ ಸಿಸ್ಟಮ್‍ಗಳಿಗಾಗಿ 30 ಕೋಟಿ ರೂಪಾಯಿ ಮತ್ತು ರೂ. 250 ಕೋಟಿಗಳ ಆರಂಭಿಕ ನಿಧಿಯನ್ನು ರಚಿಸಲಾಗಿದೆ.
  • ವಿದ್ಯುತ್ ಕ್ಷೇತ್ರದ ಯೋಜನೆಗಳಿಗೆ 29,883 ಕೋಟಿ ರೂ..
  • ಮೂಲಭೂತ ಶಿಕ್ಷಣ ಇಲಾಖೆಗೆ, 18,167 ಕೋಟಿ ರೂ. ಸರ್ವ ಶಿಕ್ಷಾ ಅಭಿಯಾನಕ್ಕೆ ರೂ. 76 ಕೋಟಿ ಮತ್ತು 40 ಕೋಟಿ ರೂ. ಅನುಕ್ರಮವಾಗಿ ಉಚಿತ ಪುಸ್ತಕಗಳು ಮತ್ತು 1ತರಗತಿಯಿಂದ 8 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತದೆ..
  • ಮಧ್ಯಾಹ್ನದ ಊಟಕ್ಕೆ 2,048 ಕೋಟಿ ರೂ. ಮತ್ತು 167 ಕೋಟಿ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಲು ಬಜೆಟ್‍ನಲ್ಲಿ ಹಂಚಿಕೆ ಮಾಡಲಾಗಿದೆ. ಮೂಲಭೂತ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ಶಾಲೆಗಳ ಪೀಠೋಪಕರಣ, ಕುಡಿಯುವ ನೀರು ಮತ್ತು ಗಡಿ ಗೋಡೆಗಳಿಗಾಗಿ ಯೋಗಿ ಸರ್ಕಾರ 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
  • ಪ್ರೌಢ ಶಿಕ್ಷಣವನ್ನು ಸುಧಾರಿಸಲು 480 ಕೋಟಿ ರೂ.ಗಳನ್ನು ನೀಡಲಾಗಿದ್ದು, ದೀನ್ ದಯಾಳ್ ಉಪಾಧ್ಯಾಯ ಸರ್ಕಾರಿ ಮಾದರಿ ಶಾಲೆಗಳಿಗೆ 26 ಕೋಟಿ ರೂಗಳನ್ನು ಮೀಸಲಿಡಲಾಗಿದೆ..

ಬಜೆಟ್ ಮಂಡಿಸಿದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇದು ಪ್ರಗತಿ ಆಧಾರಿತ ಬಜೆಟ್ ಎಂದು ವಿವರಿಸಿದರು ಮತ್ತು ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. ಪ್ರಸ್ತುತ ಯೋಜಿತ ಬೆಳವಣಿಗೆಯ ದರದಲ್ಲಿ, ಮುಖ್ಯಮಂತ್ರಿ ನಂತರ ಉತ್ತರ ಪ್ರದೇಶವು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾಗಿದೆ ಎಂದು ವರದಿಗಾರರಿಗೆ ತಿಳಿಸಿದರು. ಕಳೆದ ವರ್ಷ ರಾಜ್ಯ ಸರಕಾರವು ಬಜೆಟ್‍ನಲ್ಲಿ ಕೇವಲ ಸಾಲದ ಬಗ್ಗೆ ಮಾತ್ರ ಬಜೆಟ್ ವ್ಯಕ್ತಪಡಿಸಿದ್ದಲ್ಲದೆ ಈ ವರ್ಷ ಬಿಜೆಪಿ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗದ ಬಗ್ಗೆ ಒತ್ತು ನೀಡುತ್ತಿದೆ ಎಂದು ಯೋಗಿ ಆದಿತ್ಯನಾಥರು ಸ್ಪಷ್ಟನೆಯನ್ನು ನೀಡಿದರು…

ನಿನ್ನೆ ಯೋಗಿ ಬಜೆಟ್ ಮಂಡನೆ ಆರಂಭ ಮಾಡುತ್ತಿದ್ದಂತೆಯೇ ಸಿದ್ದರಾಮಯ್ಯ ಸರಕಾರ ಕೂಡಾ ಬಜೆಟ್ ಮಂಡನೆ ಆರಂಭಿಸಿತ್ತು… ಬಹುನಿರೀಕ್ಷಿತ ಸಿದ್ದರಾಮಯ್ಯರ ರಾಜ್ಯ ಕಾಂಗ್ರೆಸ್ ಸರ್ಕಾರದ ಕಡೇಯ ಬಜೆಟ್ ನಿನ್ನೆ ಮಂಡನೆಯಾಗಿತ್ತು… ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದ ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿಫಲ ಬಜೆಟ್‍ನ್ನು ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಡೇಯ ಬಜೆಟ್ ಆಗಿದ್ದ ಕಾರಣ ಭಾರೀ ನಿರೀಕ್ಷೆಗಳೂ ಏರ್ಪಟ್ಟಿದ್ದವು. ಆದರೆ ಕಡೆಗೂ ಕೋಟ್ಯಾಂತರ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಯ್ಯನವರು ಹುಸಿಗೊಳಿಸಿದ್ದಾರೆ.

ಸಿದ್ದರಾಮಯ್ಯ ಸರಕಾರದ ಬಜೆಟ್ ಮತ್ತು ಯೋಗಿ ಆದಿತ್ಯನಾಥರ ಬಜೆಟ್ ಮಂಡನೆಯನ್ನ ನಾವು ನೋಡುತ್ತಾ ಹೋದರೆ ಸಿದ್ದರಾಮಯ್ಯ ಸರಕಾರದ ಬಜೆಟ್‍ನಲ್ಲಿ ಯಾರ ಭವಿಷ್ಯದ ಬಜೆಟ್ ಮಂಡನೆ ಮಾಡಿದ್ದಾರೆ ಎಂದೇ ತಿಳಿಯುತ್ತಿಲ್ಲ… ಸಿದ್ದರಾಮಯ್ಯ ಸರಕಾರದ ಬಜೆಟ್ ಮಂಡನೆ ಕೇವಲ ಅಲ್ಪ ಸಂಖ್ಯಾತರ ಉದ್ಧಾರಕ್ಕೆ ಮಾತ್ರ ಸೀಮಿತವಾಗಿತ್ತು… ಹಿಂದೂಗಳ ದೇವಸ್ಥಾನಗಳಿಗೆ ಎಷ್ಟು ಹಣವನ್ನು ನೀಡಿದ್ದಾರೆ? ಬಜೆಟ್‍ನಲ್ಲಿ ಹಿಂದೂಗಳ ದೇವಸ್ಥಾನಕ್ಕೆ ಯಾವುದೇ ರೀತಿಯ ಸೌಲಭ್ಯವನ್ನು ನೀಡದೇ ಇರುವುದು ವಿಷಾದನೀಯ!! ಆದರೆ ಯೋಗಿ ಅದಿತ್ಯನಾಥರ ಬಜೆಟ್‍ನಲ್ಲಿ ದೇವಸ್ಥಾದ ವಿಷಯವಾಗಿ ಪ್ರಸ್ತಾಪವನ್ನು ಮಾಡಿದ್ದಾರೆ.. ಅದಲ್ಲದೆ ಅಲ್ಪಸಂಖ್ಯಾತರ ಉದ್ಧಾರಕ್ಕೂ ಪ್ರಸ್ತಾಪವನ್ನು ಮಾಡಿದ್ದಾರೆ…

ಸಿದ್ದರಾಮಯ್ಯ ಬಜೆಟ್ ಅನ್ನು ಗಮನಿಸಿದಾಗ ಪಕ್ಕಾ ಚುನಾವಣಾ ಬಜೆಟ್‍ನಂತೆ ಕಾಣಿಸುತ್ತಿತ್ತು….ಮಂದಿನ ಚುನಾವಣೆ ಹತ್ತಿರ ಬರುತಿದ್ದಂಂತೆಯೇ ಅಲ್ಪಸಂಖ್ಯಾತರ ವೋಟ್ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಪ್ರಾಧ್ಯಾನ್ಯತೆ ನೀಡಿದ್ದೇ ಜಾಸ್ತಿ!! ಆದರೆ ಯೋಗಿ ಆದಿತ್ಯನಾಥರ ಬಜೆಟ್ ಅನ್ನು ಗಮನಿಸಿದಾಗ ದೇಶದ ಭವಿಷ್ಯ ಮತ್ತು ದೇಶ ಪ್ರೇಮವನ್ನು ಎತ್ತಿ ತೋರಿಸುವ ಬಜೆಟ್ ಇದಾಗಿತ್ತು ಎಂಬುವುದು ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ…

ಸಿದ್ದರಾಮಯ್ಯ ಸರಕಾರದ 13ನೇ ಬಜೆಟ್ ಇದಾಗಿದ್ದು ಜನರು ಮೆಚ್ಚುವಂತಹ ಯಾವುದೇ ಬಜೆಟ್ ಇದಾಗಿರಲಿಲ್ಲ ಆದರೆ ಯೋಗಿ ಆದಿತ್ಯನಾಥರ ಮೊದಲ ಬಜೆಟ್ ಇದಾಗಿದ್ದು ದೇಶದ ಭವಿಷ್ಯ ಮತ್ತು ದೇಶಪ್ರೇಮದ ಬಜೆಟ್ ಇದಾಗಿತ್ತು…. ಯೋಗಿ ಒಬ್ಬ ಸಂಸದನಾಗಿ ಅಚಾನಕ್ ಆಗಿ ಮುಖ್ಯಮಂತ್ರಿಯಾದವರು.. ಆದರೆ ಸಿದ್ದರಾಮಯ್ಯನವರು ಒಬ್ಬ ಶಾಸಕನಾಗಿ ಉಪಮುಖ್ಯಮಂತ್ರಿಯಾಗಿ ವಿತ್ತ ಸಚಿವನಾಗಿ ಕಡೆಗೆ ಮುಖ್ಯ ಮಂತ್ರಿಯಾವರು..

ಇಷ್ಟೆಲ್ಲಾ ಮಂತ್ರಿ ಪದವಿಗಳನ್ನು ದಾಟಿ ಬಂದವರಿಗೆ ಇಷ್ಟು ದೊಡ್ಡ ಬಜೆಟ್ ಅನ್ನು ಕೇವಲ ಅಲ್ಪಸಂಖ್ಯಾತರ ಉದ್ಧಾರಕ್ಕೆಂದೇ ಮೀಸಲಿಟ್ಟಿರುವುದು ನಿಜವಾಗಿಯೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!! ಗೋಹತ್ಯೆಯಂತಹ ಚಟುವಟಿಕೆಗಳಿಗೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು ಸಿದ್ದರಾಮಯ್ಯ ಬಜೆಟ್ ಅಂತಾನೇ ಹೇಳಬಹುದು.. ಆದರೆ ಯೋಗಿ ಆದಿತ್ಯನಾಥರ ಬಜೆಟ್ ಹಿಂದೂಗಳಿಗೂ ಪ್ರಧಾನ್ಯತೆ ನೀಡಲಾಗಿತ್ತು ಅದಲ್ಲದೆ ಅಲ್ಪಸಂಖ್ಯಾತರಿಗೂ ಅಷ್ಟೇ ಪ್ರಾಧ್ಯಾನ್ಯತೆಯನ್ನು ನೀಡಲಾಗಿತ್ತು… ಗೋಹತ್ಯೆಯನ್ನು ಮಾಡದಂತೆ ಗೋವುಗಳ ರಕ್ಷಣೆ ಮಾಡುವಲ್ಲಿ ಧರ್ಮ ರಕ್ಷಣೆ ಮಾಡುವಲ್ಲಿ ಯೋಗಿ ಸರಕಾರ ಶ್ರಮಿಸುತ್ತಿದೆ ಎನ್ನುವುದೇ ಯೋಗಿ ಬಜೆಟ್ ಜ್ವಲಂತ ಉದಾಹರಣೆ!!

ಸಿದ್ದರಾಮಯ್ಯ ಸರಕಾರದ ಭಾರೀ ನಿರೀಕ್ಷೆಯಲ್ಲಿದ್ದ ಬಜೆಟ್ ಈ ಬಾರಿಯೂ ವಿಫಲತೆಯನ್ನು ಕಂಡಿದೆ ಅಂತಾನೇ ಹೇಳಬಹುದು…. ವಿತ್ತ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಸಿದ್ದರಾಮಯ್ಯ ಈ ಬಾರಿ ಮುಖ್ಯಮಂತ್ರಿಯಾಗಿ 13ನೇ ಬಜೆಟ್ ಮಂಡನೆ ಮಾಡಿದ್ದು ಈ ಬಾರಿ ಜನರ ನಂಬಿಕೆಯನ್ನು ಹುಸಿ ಮಾಡಿದ್ದಾರೆ… ರಾಜ್ಯ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜ್ಯದ ಜನತೆಗೆ ಒಳ್ಳೆಯ ರೀತಿಯಲ್ಲಿ ಬಜೆಟ್ ಮಂಡಣೆಯಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದರೆ ಇಡೀ ಜನತೆಗೆ ಸಿದ್ದರಾಮಯ್ಯ ಸರಕಾರ ನಿರಾಸೆಯನ್ನುಂಟು ಮಾಡಿದ್ದಾರೆ…ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಬಹುಸಂಖ್ಯಾತರ ಹಾಗೂ ರಾಜ್ಯದ ಕೋಟ್ಯಾಂತರ ರೈತರ ಭಾವನೆಗಳಿಗೆ ಕೊಡಲಿಯೇಟು ನೀಡಿದ್ದು, ದಲಿತರ ಹಾಗೂ ಅಲ್ಪ ಸಂಖ್ಯಾತರ ಮತಗಳನ್ನು ಓಲೈಸಲು ಮುಂದಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ಬಜೆಟ್ ಮಂಡಿಸಿದ್ದು ಎಲ್ಲಾ ಕ್ಷೇತ್ರಕ್ಕೂ ಗಣನೀಯ ಕೊಡುಗೆಯನ್ನು ನೀಡಿದ್ದು… ನಿರೀಕ್ಷೆಗೂ ಮೀರಿ ಬಜೆಟ್ ಅನ್ನು ಮಂಡಿಸಿದ್ದರು.. ಇದರಿಂದ ಇಡೀ ಜನತೆ ಮೋದಿ ಸರಕಾರವನ್ನು ಕೊಂಡಾಡಿತ್ತು… ಅದೇ ರೀತಿ ಈ ಬಾರಿ ಯೋಗಿಯ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಂತೆಯೇ ಯೋಗಿ ಸರಕಾರವನ್ನು ಇಡೀ ಜನತೆ ಕೊಂಡಾಡಿತ್ತು ..!!

ಪವಿತ್ರ

Tags

Related Articles

Close