ಪ್ರಚಲಿತ

ಕಮಲ್ ಹಾಸನ್ ಹಾಗೂ ಮಣಿಶಂಕರ್ ಅಯ್ಯರ್ ಗೆ ಸಖತ್ತಾಗಿ ಟಾಂಗ್ ನೀಡಿದ ಬಿಜೆಪಿ ಫೈರ್ ಬ್ರ್ಯಾಂಡ್ ಸುಬ್ರಮಣಿಯನ್ ಸ್ವಾಮಿ!! ಅಷ್ಟಕ್ಕೂ ಸ್ವಾಮಿ ಹೇಳಿದ್ದೇನು ಗೊತ್ತೇ?

ಎಡಪಂಥೀಯರ ವಿಚಾರಧಾರೆಗಳೇ ಹಾಗೆ!! ಸದಾ ವಿವಾದವನ್ನು ಸೃಷ್ಟಿ ಮಾಡುತ್ತಾ, ರಾಷ್ಟ್ರದ್ರೋಹವನ್ನು ಎಸಗುವುದರಲ್ಲಿ ನಿಸ್ಸೀಮರು ಎಂದೂ ಕರೆಸಿಕೊಂಡಿದ್ದಾರೆ. ‘ದೇಶದಲ್ಲಿ ಹಿಂದೂ ಭಯೋತ್ಪಾದನೆ ಅಸ್ತಿತ್ವದಲ್ಲಿದೆ. ಬಲಪಂಥೀಯ ಸಂಘಟನೆಗಳು ಇದನ್ನು ನಿರಾಕರಿಸಲು ಸಾಧ್ಯವಿಲ್ಲ,” ಎಂದು ಖ್ಯಾತ ಚಿತ್ರ ನಟ ಕಮಲ ಹಾಸನ್ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಇವರಂತಹ ಕೆಲ ಗಂಜಿಗಿರಾಕಿಗಳು ಎಂದೆನಿಸಿಕೊಂಡವರಿಗೆ, ಸದಾ ವಿವಾದಗಳನ್ನು ಸೃಷ್ಟಿ ಮಾಡುತ್ತಿರುವವರಿಗೆ ಬಿಜೆಪಿ ನಾಯಕ, ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾದ ಸಂಸದ ಸುಬ್ರಮಣಿಯನ್ ಸ್ವಾಮಿ ಸಖತ್ತಾಗಿ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು 2014ರ ಲೋಕಸಭೆ ಚುನಾವಣೆಯ ವೇಳೆ ನರೇಂದ್ರ ಮೋದಿ ಅವರನ್ನು ಚಾಯ್ ವಾಲಾ ಎಂದು ಹೀಯ್ಯಾಳಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಇನ್ನು, ತೀರಾ ಇತ್ತೀಚೆಗಷ್ಟೇ ಮೋದಿ ನೀಚ ಜಾತಿಗೆ ಸೇರಿದ ವ್ಯಕ್ತಿ ಎಂದು ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದ ಮಣಿಶಂಕರ್ ಮತ್ತೆ ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, “ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದರು.

ಇನ್ನು, ಖ್ಯಾತ ಖಳನಟ ಪ್ರಕಾಶ್ ರೈ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿ ಮಾಡುತ್ತ ಸುದ್ದಿಯಾಗುತ್ತಿರುವ ಇವರು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ವಿವಾದ ಭುಗಿಲೆದಿದ್ದ ಸಂದರ್ಭದಲ್ಲಿ ಫಿಲಂ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದು, ಖಾಸಗಿ ಚಾನೆಲ್ ಒಂದಕ್ಕೆ ತನ್ನ ಸಿನಿಮಾದ ಕುರಿತು ಸಂದರ್ಶನ ಕೊಡಬೇಕಾಗಿತ್ತು. ಈ ಸಂದರ್ಭದಲ್ಲಿ ” ಸರ್ ನೀವು ಈ ಕಾವೇರಿ ವಿಚಾರದ ಬಗ್ಗೆ ಏನಂತೀರ?” ಎಂದು ಟಿವಿ ಆ್ಯಂಕರ್ ಕೇಳಿದ್ದ ಪ್ರಶ್ನೆಗೆ ಕೆಂಡಾಮಂಡಲವಾದ ಖಳನಟ ಆ್ಯಕ್ಟಿಂಗ್ ಮಾಡುವಷ್ಟೇ ದೊಡ್ಡ ಆ್ಯಕ್ಟ್ ಮಾಡಿ ಟಿವಿ ಆ್ಯಂಕರ್‍ನ ವಿರುದ್ಧ ತಿರುಗಿ ಬಿದ್ದು ಟಿವಿ ಚಾನಲ್ ಮೈಕ್ ಎಸೆದು ಓಡಿದ್ದರು!

ಹೀಗೆ ಪ್ರಕಾಶ್ ರೈಗೆ ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಎಂದರೆ, ಟಿವಿ ಚಾನಲ್ ಮೈಕ್ ಎಸೆದು ಓಡುತ್ತಾರೆ. ಕಮಲ್ ಹಾಸನ್ ಸಹ ರಾಜಕೀಯ ಬೇಳೆ ಬೇಯಿಸಿಕೊಳ್ಳು ಈಗ ಕಾವೇರಿ ವಿಚಾರದಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಉಚ್ಚಾಟಿತ ನಾಯಕ ಮಣಿಶಂಕರ್ ಅಯ್ಯರ್ ಅವರಂತೂ “ಐ ಲವ್ ಪಾಕಿಸ್ತಾನ” ಎಂದು ಹೇಳಿದ್ದಾರೆ!! ಇವರ ಈ ಇಬ್ಬಂದಿತನಕ್ಕೆ ಬಿಜೆಪಿ ನಾಯಕ, ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾದ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸರಿಯಾಗಿಯೇ ಟಾಂಗ್ ನೀಡಿದ್ದು, “ಕಮಲ್ ಹಾಸನ್ ಹಾಗೂ ಮಣಿಶಂಕರ್ ಅಯ್ಯರ್ ಅವರು ಮುಸ್ಲಿಮರ ಅಡಿಯಾಳುಗಳು” ಎಂದಿದ್ದಾರೆ.

“ಇವರಿಬ್ಬರು ಹೆಸರಿಗಷ್ಟೇ ಹಿಂದೂಗಳು, ಅವರ ಹೆಸರಲ್ಲಿ ಮಾತ್ರ ಹಿಂದುತ್ವವಿದೆ. ಆದರೆ ಅವರ್ಯಾರೂ ಹಿಂದೂಗಳಲ್ಲ, ಇಬ್ಬರೂ ಮುಸ್ಲಿಮರ ಜೀತದಾಳುಗಳು” ಎಂದು ಸುಬ್ರಮಣಿಯನ್ ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನೀಚ ಆದ್ಮಿ’ ಎಂದು ಕರೆದಿದ್ದ ಕಾಂಗ್ರೆಸ್ ನಿಂದ ಅಮಾನತುಗೊಂಡಿರುವ ಮಣಿಶಂಕರ್ ಅಯ್ಯರ್ ಬಗ್ಗೆ ಮಾತಾನಾಡಿರುವ ಮೋದಿ, “ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿಯನ್ನು ಮುಗಿಸಿ ಬಿಡಿ. ಆಮೇಲೆ ನೋಡಿ ಭಾರತ-ಪಾಕಿಸ್ತಾನ ನಡುವೆ ಯಾವ ರೀತಿಯ ಶಾಂತಿ ಸ್ಥಾಪನೆ ಆಗುತ್ತದೆ ಎಂದು ಹೇಳಿದ್ದರು. ನಾನು ಮಾಡಿರುವ ತಪ್ಪಾದರೂ ಏನು?” ಎಂದು ಪ್ರಧಾನಿ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೇ, “ನಾನು ಕೇವಲ ಬಡತನದಿಂದ ಬಂದಿದ್ದೇನೆ. ಚಹಾ ಮಾರುತ್ತಿದ್ದೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ”. ಎಂದು ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇನ್ನು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಬೇಕಾದರೆ ಏನು ಮಾಡಬೇಕು ಎಂದು ಪಾಕಿಸ್ತಾನದ ಚಾನೆಲ್‍ವೊಂದು ಮಣಿಶಂಕರ್ ಅಯ್ಯರ್ ಅವರನ್ನು ಕೇಳಿತ್ತು. ಅದಕ್ಕೆ ಮೊದಲು ಮೋದಿಯನ್ನು ಸರಿಸಿ. ನಂತರ ನಾವು ಮಾತನಾಡಬಹುದು ಎಂದಿದ್ದರು ಎಂದು ಪ್ರಧಾನಿ ಆರೋಪಿಸಿದ್ದರು!! ಆದರೆ ಪದೇ ಪದೇ ವಿವಾದವನ್ನು ಸೃಷ್ಟಿಸಿರುವ ಅಯ್ಯರ್ ಇದೀಗ “ಈ ಲವ್ ಪಾಕಿಸ್ತಾನ್” ಎಂದು ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಬಗ್ಗೆ ಸಖತ್ತಾಗಿ ಟಾಂಗ್ ನೀಡಿರುವ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾದ ಸಂಸದ ಸುಬ್ರಮಣಿಯನ್ ಸ್ವಾಮಿ ಸಂದರ್ಶನದ ವೇಳೆ ಕಮಲ್ ಹಾಸನ್ ಹಾಗೂ ಮಣಿಶಂಕರ್ ಅಯ್ಯರ್ ಅವರಿಗೆ ಮುಸ್ಲಿಮರ ಜೀತದಾಳುಗಳು ಎಂದು ಕರೆದಿದ್ದಾರೆ!!

ಇನ್ನು, ಈಗಾಗಲೇ ಟೆಂಪಲ್ ರನ್ ಮೂಲಕ ಸುದ್ದಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುಜರಾತ್ ನಲ್ಲಿ ಟೆಂಪಲ್ ರನ್ ಎನ್ನುವ ತಂತ್ರವನ್ನು ಬಳಸಿ ಕೊಂಚಮಟ್ಟಿಗೆ ಯಶಸ್ಸನ್ನು ಕಂಡಿದ್ದರು. ಆದರೆ ಇದೀಗ ಕರ್ನಾಟಕದಲ್ಲೂ ಇದೇ ಮಾದರಿಯನ್ನು ಅನುಸರಿಸುತ್ತಿರುವ ರಾಹುಲ್ ಗಾಂಧಿಯವರ ಬಗ್ಗೆಯೂ ಸುಬ್ರಮಣಿಯನ್ ಸ್ವಾಮಿ ಟಾಂಗ್ ನೀಡಿದ್ದಾರೆ. ಹೌದು… “ರಾಹುಲ್ ಗಾಂಧಿಯವರು ಚುನಾವಣೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಹಿಂದುತ್ವದ ಸಿದ್ಧಾಂತ ಬಿಡಿ, ಅವರಿಗೆ ಹಿಂದುತ್ವದ ನುಡಿಗಟ್ಟು ಸಹ ಗೊತ್ತಿಲ್ಲ. ಹಾಗಾಗಿ ಕಾಂಗ್ರೆಸ್ ದೇಶಿ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದು ಸುಬ್ರಮಣಿಯನ್ ಸಲಹೆ ಸಹ ನೀಡಿದ್ದಾರೆ.

ಅಷ್ಟೇ ಅಲ್ಲದೇ, “ಮುಸ್ಲಿಮರು ಹಿಂದೂಗಳು ಎಂದು ಒಡೆದಿದ್ದೇ ಕಾಂಗ್ರೆಸ್. ಆದರೆ ಬಿಜೆಪಿ ಎಂದಿಗೂ ಹಾಗೆ ಸಮುದಾಯ ಒಡೆಯುವ ಕೆಲಸ ಮಾಡಿಲ್ಲ. ಇದೇ ದಿಸೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಹೊರಟಿದ್ದೇವೆ. ಆ ಮೂಲಕ ಮಹಿಳೆಯರಿಗೆ ನೆಮ್ಮದಿಯ ಜೀವನ ಸಾಗಿಸಲು ಅನುವು ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಹಲವು ಸುಧಾರಣೆಗಳಾಗಲಿದ್ದು, ಮುಸ್ಲಿಮರು ದೀರ್ಘಕಾಲದವರೆಗೆ ಬಿಜೆಪಿಗೆ ಮತ ಹಾಕುತ್ತಾರೆ” ಎಂದು ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಡಪಂಥೀಯ ವಿಚಾರಧಾರೆಗಳೇ ಹಾಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ, ಪದೇ ಪದೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಪಾಕಿಸ್ತಾನಿಗಳಿಗೆ ಬೆಂಬಲವನ್ನು ನೀಡುತ್ತಾ ಹಿಂದೂಗಳನ್ನು ತೇಜೋವಧೆ ಮಾಡುವುದು!! ಆದರೆ ಕಿಂಚಿತ್ತೂ ದೇಶಪ್ರೇಮವನ್ನೇ ಮೈಗೂಡಿಸದ ಇಂಥವರು “ಐ ಲವ್ ಪಾಕಿಸ್ತಾನ್” ಎಂದು ಹೇಳದೆ ಮತ್ತೇನೂ ಹೇಳುತ್ತಾರೆ?? ಅಲ್ವೇ!!

– ಅಲೋಖಾ

Tags

Related Articles

Close