ಪ್ರಚಲಿತ

ಭಾರತಕ್ಕೆ ಪ್ರಧಾನಿ ಮೋದಿ ಅವರಂತಹ ಸಮರ್ಥ ನಾಯಕತ್ವವೇ ಏಕೆ ಬೇಕು?

ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಜೊತೆಗೆ ಪ್ರಗತಿಯ ವೇಗ ಹೆಚ್ಚಾಗಿದೆ ಎನ್ನುವುದು ಸತ್ಯ ಸಂಗತಿ. ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಆ ಮೂಲಕ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತಾಗಿದೆ ಎಂದರೆ ತಪ್ಪಾಗಲಾರದು.

ಪ್ರಸ್ತುತ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಪರಿಶ್ರಮವನ್ನು ಕಾಣುವಂತಾಗಿದೆ. ಕಳೆದ ಹತ್ತು ವರ್ಷಗಳ ಭಾರತದ ಎಲ್ಲಾ ವಲಯಗಳ ಚಿತ್ರಣ ಸಕಾರಾತ್ಮಕ ವಾಗಿ ಬದಲಾವಣೆ ಕಂಡಿದೆ. ಭಾರತವನ್ನು ಕಳೆದ ಹತ್ತು ವರ್ಷಗಳ ಹಿಂದೆ ಅವಮಾನದಿಂದ ನೋಡುತ್ತಿದ್ದ ರಾಷ್ಟ್ರಗಳು ಇಂದು ಭಾರತದ ಸಾಮಾನ್ಯ ವ್ಯಕ್ತಿಯನ್ನು ಸಹ ಬೆರಗು ಕಣ್ಣುಗಳಿಂದ ನೋಡುವಷ್ಟರ ಮಟ್ಟಿಗೆ ಭಾರತ ಅಭಿವೃದ್ಧಿ ಕಂಡಿದೆ. ಭಾರತ ದೇಶವನ್ನು ಜಗತ್ತು ನೋಡುವ ದೃಷ್ಟಿಕೋನವೇ ಬದಲಾಗಿದೆ ಎನ್ನುವುದು ನಿಸ್ಸಂಶಯ.

ಈ ಹಿಂದೆ ಕೆಂಪು ಕೋಟೆಯಲ್ಲಿ ನಿಂತು ಭಾರತದ ಕುರಿತು ಮಾತನಾಡುತ್ತಿದ್ದರು. ಈ ದೇಶದ ಜನರನ್ನು ಸೋಮಾರಿಗಳು ಎಂಬ ಹಾಗೆ ನೋಡುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರಧಾನಿ ಮೋದಿ ಮತ್ತು ಅವರ ಸಮರ್ಥ ತಂಡದ ಶ್ರಮದ ಫಲವೋ ಎಂಬಂತೆ ಯಾವ ಜಗತ್ತು ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿತ್ತೋ, ಅದೇ ಜಗತ್ತು ಭಾರತದ ಸ್ನೇಹ ಬಯಸಿ ಬರುತ್ತಿದೆ. ಭಾರತದ ಜೊತೆಗೆ ವ್ಯವಹಾರ ನಡೆಸಲು ಆಸಕ್ತಿ ತೋರುತ್ತಿವೆ ಎಂದಾದರೆ ನಮ್ಮ ದೇಶದ ಶಕ್ತಿಯನ್ನು ಪ್ರಧಾನಿ ಮೋದಿ ಅವರು ಯಾವ ರೀತಿಯಲ್ಲಿ ವಿಶ್ವದೆದುರು ಪ್ರಸ್ತುತ ಪಡಿಸಿರಬಹುದು ಎಂದು ಯೋಚಿಸಿ. ಆಗ ನಮ್ಮ ದೇಶಕ್ಕೆ ಯಾತಕ್ಕಾಗಿ ‌ಪ್ರಧಾನಿ ಮೋದಿ ಅವರಂತಹ ಸಮರ್ಥ ನಾಯಕತ್ವದ ಅಗತ್ಯತೆ ಇದೆ ಎನ್ನುವುದಕ್ಕೆ ಉತ್ತರ ದೊರೆಯಬಹುದು.

ಕಳೆದ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಗಣನೀಯ ಚೇತರಿಕೆ ಕಂಡಿದೆ. ದೇಶದ ಪ್ರತಿಯೊಬ್ಬ ಜನರಿಗೂ ಮೂಲಸೌಕರ್ಯ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ ಸಫಲವಾಗಿದೆ. ಜನರ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಯ ಉದ್ದೇಶದಿಂದ ಹಲವಾರು ಜನಸ್ನೇಹಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಶಿಕ್ಷಣ, ಉದ್ಯಮ, ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಸಶಕ್ತರಾಗಿದ್ದೇವೆ, ಅಭಿವೃದ್ಧಿ ಹೊಂದಿದ್ದೇವೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಮುಂದಾಲೋಚನೆ, ದೂರದೃಷ್ಟಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಳೆದ ಹತ್ತು ವರ್ಷಗಳ ಹಿಂದಿನ ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡುವ ಬದಲು, ಕುಟುಂಬ ರಾಜಕಾರಣದಲ್ಲಿಯೇ ಮುಳುಗಿತ್ತು. ವಿಶ್ವದೆದುರು ಭಾರತವನ್ನು ಅವಮಾನಕರ ರೀತಿಯಲ್ಲಿ ಪ್ರದರ್ಶನ ಮಾಡುವ ಕೆಲಸವನ್ನು, ಭಾರತದಿಂದ ಏನೂ ಸಾಧ್ಯವಿಲ್ಲ ಎಂಬಂತೆ ಬಿಂಬಿಸುವ ಕೆಲಸವನ್ನು ಆಗಿನ ಸರ್ಕಾರ ಮಾಡಿತ್ತು‌‌. ಜೊತೆಗೆ ಜನರ ತೆರಿಗೆ ದುಡ್ಡು ಅಭಿವೃದ್ಧಿ ಕೆಲಸಗಳಿಗಂತೂ ಬಳಕೆಯಾಗುತ್ತಿರಲಿಲ್ಲ. ಜನರು ಬಡತನ, ಆಹಾರ ಸಮಸ್ಯೆ, ಮೂಲಭೂತ ಸೌಲಭ್ಯಗಳು, ಮೂಲ ಸೌಕರ್ಯಗಳ ಕೊರತೆಯಿಂದ ಪರಿತಪಿಸುವ ಹಾಗಿತ್ತು ಸ್ಥಿತಿ.

ಇಂತಹ ಹೀನಾಯ ಸ್ಥಿತಿಯಿಂದ ಭಾರತವನ್ನು ಜಗತ್ತೇ ಗೌರವಿಸುವ ಹಾಗೆ ಮತ್ತು ಜಗತ್ತಿಗೇ ಗುರುವಿನ ಹಾಗೆ ಬದಲಾಯಿಸಿ, ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಸರ್ಕಾರದ್ದು.

ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಅಮೂಲ್ಯ ಮತಗಳನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆ ನೀಡುವ ಮೂಲಕ ಅವರನ್ನು ಗೆಲ್ಲಿಸೋಣ‌. ಆ ಮೂಲಕ ಭಾರತದ ಅಭಿವೃದ್ಧಿಯ ಓಟಕ್ಕೆ ನಾವೂ ಎಂಜಿನ್‌ಗಳ ಹಾಗೆ ಶಕ್ತಿ ತುಂಬೋಣ. ಭಾರತ ವಿಶ್ವಗುರುವಾಗಲು ಪ್ರಧಾನಿ ಮೋದಿ ಅವರಿಗೆ ಬಲ ತುಂಬೋಣ.

Tags

Related Articles

Close