ಪ್ರಚಲಿತ

ಎಲ್ಲಾ ಸಂಸದರನ್ನು ಪಕ್ಕಕ್ಕಿಟ್ಟು ಶ್ರೀ ರಾಮುಲುಗೆ ಬಿಗ್ ಆಫರ್ ನೀಡಿದ್ದು ಯಾಕೆ ಗೊತ್ತಾ? ಹೈ-ಕ ಜುಗಲ್ ಬಂದಿ!!!

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಸ್ಟಾಟರ್ಜಿಯೇ ಡಿಫರೆಂಟ್. ಎಲ್ಲಿ ಯಾವ ಬಾಣ ಹೂಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಚುನಾವಣೆಯ ತಂತ್ರಗಾರಿಕೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಅಮಿತ್ ಶಾ. ಈ ಕಾರಣಕ್ಕಾಗಿಯೇ ಅವರನ್ನು ಭಾರತೀಯ ಜನತಾ ಪಕ್ಷದ ಚುನಾವಣಾ ಚಾಣಾಕ್ಯ ಎಂದು ಕರೆಯೋದು. ಈ ಕಾರಣಕ್ಕಾಗಿಯೇ ದೇಶದ ೨೨ರಾಜ್ಯಗಳಲ್ಲಿ ಕಮಲವನ್ನು ಅರಳಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿ ಮಿಂಚಿರೋದು. ‌

ಇದೀಗ ಶಾ ಧೃಷ್ಟಿ ನೆಟ್ಟಿರುವುದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ. ಕಳೆದ ೫ ವರ್ಷಗಳಿಂದ ರಾಜ್ಯದಲ್ಲಿ ಹಿಟ್ಲರ್ ಅಧಿಕಾರ ನಡೆಸಿಕೊಂಡು ಬರುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ಮಾಡಿರುವ ಅಮಿತ್ ಶಾ ಇದೀಗ ಕರ್ನಾಟಕ ರಾಜ್ಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾಗಬೇಕಾದರೆ ಕರ್ಣಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಥವಾ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬರಬೇಕು. ಹೀಗಾದರೆ ಮಾತ್ರ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕಾಂಗ್ರೆಸ್ ಮುಕ್ತ ಭಾರತದ ಕನಸು ಈಡೇರುವುದು.

ಸಂಸದರಿಗಿಲ್ಲ ಅಂಸ್ಸೆಂಬ್ಲಿ ಟಿಕೆಟ್..!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬಹುದು. ಹೀಗಾಗಿ ಟಿಕೆಟ್‌ ಸಿಕ್ಕಿ ಸ್ಪರ್ಧಿಸಿ ದರೆ ಮುಂದಿನ ಸರ್ಕಾರದಲ್ಲಿ ಮಂತ್ರಿಯಾಗಬಹುದು ಎಂದು ಕನಸು ಕಾಣುತ್ತಿದ್ದ ರಾಜ್ಯದ ಭಾರತೀಯ ಜನತಾ ಪಕ್ಷದ ಸಂಸದರಿಗೆ ಅಮಿತ್ ಶಾ ಆರಂಭದಲ್ಲೇ ಶಾಕ್ ನೀಡಿದ್ದರು. ಆರಂಭದಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ನವರಿಗೂ ವಿಧಾನಸಭಾ ಟಿಕೆಟ್‌ ಇಲ್ಲ ಎಂದೇ ಹೇಳಲಾಗುತ್ತಿತ್ತಾದರೂ ಬದಲಾದ ಚುನಾವಣಾ ಸ್ಟಾಟರ್ಜಿಯಲ್ಲಿ ಬಿ.ಎಸ್.ವೈ.ಗೆ ಟಿಕೆಟ್‌ ಒಲಿದು ಬಂದಿತ್ತು. ಆದರೆ ಈ ಮೊದಲೇ ಹೇಳಿದಂತೆ ಉಳಿದ ಸಂಸದರಿಗೆ ಟಿಕೆಟ್‌ ಕನಸಿನ ಮಾತಾಗಿತ್ತು.

ಬಳ್ಳಾರಿ ಕುವರನಿಗೆ ಒಲಿದು ಬಂತು ಟಿಕೆಟ್‌ ಭಾಗ್ಯ..!

ಎಸ್… ಯಾವ ಸಂಸದನಿಗೂ ಟಿಕೆಟ್‌ ಇಲ್ಲ ಎಂದೇ ಹೇಳಲಾಗುತ್ತಿದ್ದ ಹೈಕಮಾಂಡ್ ಬಳ್ಳಾರಿ ಕುವರ ಸಂಸದ ಶ್ರೀ ರಾಮುಲು ಗೆ ಟಿಕೆಟ್‌ ನಿಡಿ ಅಚ್ಚರಿ ಮೂಡಿಸಿತ್ತು. ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಶ್ರೀ ರಾಮುಲುಗೆ ಆಫರ್ ನೀಡಿತ್ತು. ಈ ಆಫರ್ ನೋಡಿ ಸ್ವತಃ ಶ್ರೀ ರಾಮುಲು ಅವರೇ ದಂಗಾಗಿ ಹೋಗಿದ್ದರು.

ತಾನು ಬಳ್ಳಾರಿ ಕ್ಷೇತ್ರದವನಾಗಿದ್ದರೂ ಕೂಡಾ ಚಿತ್ರದುರ್ಗ ದಲ್ಲಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ. ಇದರ ಹಿಂದೆ ಚಾಣಾಕ್ಯನ ಪಕ್ಕಾ ಮಾಸ್ಟರ್ ಮೈಂಡ್ ಅಡಗಿದೆ. ಹೈದರ್ ಬಾದ್ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ನಾಯಕನೆಂದೇ ಗುರುತಿಸಿಕೊಂಡಿರುವ ಶ್ರೀ ರಾಮುಲು ಆ ಭಾಗದ ಪ್ರಭಾವ ಶಾಲಿ ರಾಜಕಾರಣಿ. ವಾಲ್ಮೀಕಿ ಸಮಾಜದಲ್ಲಿ ಜನಿಸಿರುವ ಶ್ರೀ ರಾಮುಲು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ವಿಶ್ವಾಸ ಹೈಕಮಾಂಡ್ ಗೆ ಇದೆ. ಈ ಕಾರಣಕ್ಕಾಗಿಯೇ ಅವರನ್ನು ಸ್ವಕ್ಷೇತ್ರ ಬಳ್ಳಾರಿ ಬಿಟ್ಟು ಚಿತ್ರದುರ್ಗದಲ್ಲಿ ಟಿಕೆಟ್ ಖಾತ್ರಿಪಡಿಸಲಾಗಿದೆ.

ಬಳ್ಳಾರಿ ಹಾಗೂ ಚಿತ್ರದುರ್ಗದ ಒಟ್ಟು ೧೫ಕ್ಷೇತ್ರಗಳನ್ನು ಗೆಲ್ಲಬಲ್ಲ ಸಾಮಾರ್ಥ್ಯವನ್ನು ಹೊಂದಿರುವ ಶ್ರೀ ರಾಮುಲುಗೆ ಚಿತ್ರದುರ್ಗದ ಮೊಲಕಾಳ್ಮೂರು ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಸ್ವಕ್ಷೇತ್ರ ಬಳ್ಳಾರಿ ಹಾಗು ಪಕ್ಕದ ಚಿತ್ರದುರ್ಗ ವನ್ನು ಗೆಲ್ಲುವ ಜವಾಬ್ಧಾರಿಯನ್ನು ಶ್ರೀ ರಾಮುಲು ಅವರ ಹೆಗಲಿಗೆ ಹೊರಲಾಗಿದೆ.

ರೆಡ್ಡಿ ಕಮ್ ಬ್ಯಾಕ್ ಗೆ ಮಾಸ್ಟರ್ ಪ್ಲಾನ್..?

ಗಣಿ ಧನಿ ಜನಾರ್ದನ ರೆಡ್ಡಿಯವರ ಕೇಸ್ ಇನ್ನೂ ನಡಿತಾ ಇದೆ. ಸಿಬಿಐ ಷರತ್ತಿನ ಅನ್ವಯ ಬಳ್ಳಾರಿ ಜಿಲ್ಲೆಗೆ ಕಾಲಿಡುವಂತಿಲ್ಲ. ಹೀಗಾಗಿ ಶ್ರೀ ರಾಮುಲು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧಿಸಿದರೆ ಶ್ರೀ ರಾಮುಲು ಆಪ್ತಮಿತ್ರ ಜನಾರ್ದನ ರೆಡ್ಡಿಯವರಿಗೆ ಸ್ನೇಹಿತನ ಪರ ಪ್ರಚಾರ ಮಾಡಲು ಅವಕಾಶ ಸಿಗೋದಿಲ್ಲ. ಈ ಕಾರಣ ಶ್ರೀ ರಾಮುಲುಗೆ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿಕೆಟ್‌ ನೀಡಿ ಅಲ್ಲಿಗೆ ಜನಾರ್ದನ ರೆಡ್ಡಿ ಅವರನ್ನು ಕರೆತರಂದು ಪ್ರಚಾರ ಮಾಡಿಸಿಕೊಳ್ಳಲು ಸಖತ್ ಪ್ಲಾನ್ ಒಂದನ್ನು ಬಿಜೆಪಿ ನಡೆಸಿದೆ ಎನ್ನಲಾಗಿದೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧೆ..?

ಈಗಾಗಲೇ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಶ್ರೀ ರಾಮುಲುಗೆ ಟಿಕೆಟ್ ನೀಡಿದ್ದು ಮತ್ತೊಂದು ಕ್ಷೇತ್ರದಲ್ಲೂ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಗುಸುಗುಸು ಹಬ್ಬಿದೊಡನೆ ಆ ಕ್ಷೇತ್ರಕ್ಕೆ ಶ್ರೀ ರಾಮುಲು ಅವರನ್ನು ಕಣಕ್ಕಿಳಿಸಲು ತಂತ್ರ ಹೂಡಲಾಗಿದೆ. ಈ ಮೂಲಕ ಎರಡು ಕ್ಷೇತ್ರದಲ್ಲೂ ಶ್ರೀ ರಾಮುಲು ಅವರ ಮ್ಯಾಜಿಕ್ ನಡೆಯಲಿದೆ.

ಎಲ್ಲವೂ ಅಂದುಕೊಂಡಂತೆಯೇ ಆದರೆ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಶ್ರೀ ರಾಮುಲುಗೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ. ಯಾವ ಸಂಸದರಿಗೂ ಇಲ್ಲದ ವಿಧಾನಸಭಾ ಚುನಾವಣೆಯ ಟಿಕೆಟ್‌ ಭಾಗ್ಯ ಬಳ್ಳಾರಿ ದಿಗ್ಗಜ ಶ್ರೀ ರಾಮುಲುಗೆ ನೀಡಿ ಬಿಗ್ ಆಫರ್ ನೀಡಿದೆ. ಇದನ್ನು ಶ್ರೀ ರಾಮುಲು ಯಾವ ರೀತಿ ನಿಭಾಯಿಸುತ್ತಾರೆ! ಕಾದು ನೋಡಬೇಕಾಗಿದೆ…

-ಸುನಿಲ್ ಪಣಪಿಲ

Tags

Related Articles

Close