ಪ್ರಚಲಿತ

ಈ ಕ್ಷೇತ್ರದಲ್ಲಿ ದಲಿತರೇ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಬಿತ್ತಿ ಪತ್ರ ಹಂಚುತ್ತಿದ್ದಾರೆ ಯಾಕೆಂದರೆ…?

ಓಟಿಗಾಗಿ ಒಡೆದು ಆಳವಾದ ನೀತಿಯನ್ನು ರಾಜಕೀಯ ಪಕ್ಷಗಳು ಅನುಸರಿಸಿಕೊಂಡು ಬಂದಿರುವುದು ಸಮಾಜಕ್ಕೆ ಗೊತ್ತಿರುವ ಸಂಗತಿಯೇ ಆಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಸಿದ್ದಾಂತವೇ ಒಡೆದು ಆಳುವ ನೀತಿ. ಇದೀಗ ದಲಿತರನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ನಡೆಸಿ ಬಂದಿದ್ದಾರೆ ಎನ್ನುವ ಬತ್ತಿ ಪಾತ್ರ ವ್ಯಾಪಕವಾಗಿ ಹರಡಿದ್ದು ಕಾಂಗ್ರೆಸ್‍ನ ನಾಯಕರ ಮುಖವಾಡಗಳು ಬಹಿರಂಗಗೊಂಡಿದೆ.

ಮಹದೇವಪುರದಲ್ಲಿ ದಲಿತ ದೌರ್ಜನ್ಯ

ಬೆಂಗಳೂರಿನ ಮಹದೇವಪುರದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದಲಿತರ ಮೇಲೆ ಕಾಂಗ್ರೆಸ್ ನಡೆಸಿರುವ ದೌರ್ಜನ್ಯ ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ನಡೆಸಿದ್ದ ಈ ದೌರ್ಜನ್ಯ ವನ್ನು ಖಂಡಿಸಿ ಸ್ವತಃ ದಲಿತ ಸಂಘಟನೆಗಳೇ ಕರಪತ್ರ ಹಂಚುವ ಮೂಲಕ ಆಕ್ರೋಶ ವನ್ನು ವ್ಯಕ್ತಪಡಿಸಿದೆ.

1.ಬೆಂಗಳೂರು ಉತ್ತರ ತಾಲೂಕು ಯಲಹಂಕ ಹೋಬಳಿ, ದಿಬ್ಬೂರು ಗ್ರಾಮದ ಅನಕ್ಷರಸ್ಥ, ದಲಿತರಿಗೆ ಸೇರಿದ ಕೋಟ್ಯಾಂತರ ರೂ. ಬೆಲೆಬಾಳುವ ಭೂಬಳಕೆ ಹುನ್ನಾರ ಆರೋಪ.

2. ಇವರು ಸ್ವಗ್ರಾಮ, ಚೊಕ್ಕನಹಳ್ಳಿಯಲಿ  ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಆಂಜನೇಯ ದೇವಸ್ಥಾನ ಇನಾಂಗೆ ಒಳಪಟ್ಟ ಸರ್ವೆ ನಂ 106ರಲ್ಲಿ 1.28 ಎಕರೆ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸುಸಜ್ಜಿತ ಮನೆ ಕಟ್ಟಿಕೊಂಡು ವಾಸ, ತಲತಲಮಾರುಗಳಿಂದ ಆ ದೇವಸ್ಥಾನದ ಧಾರ್ಮಿಕ ಕಾಯಕ ಮಾಡಿಕೊಂಡು ಭೂಮಿ ಉಳಿಸಿಕೊಂಡವರು, ಬೀದಿಪಾಲು, ಈ ಸಂಬಂಧ ಮಾನ್ಯ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ದಾಖಲಾಗಿ ತನಿಖೆಯಲ್ಲಿದೆ.

3. ಹಾಲನಾಯಕನಹಳ್ಳಿ ಸರ್ವೆ ನಂ 42 ಸರ್ಕಾರಿ ಗೋಮಳ 4 ಎಕರೆ ನಕಲಿ ದಾಖಲೆ ಸೃಷ್ಠಿ ಪ್ರಯತ್ನ!!

4. ಚಿಕ್ಕನಾಯಕನಹಳ್ಳಿ ಸರ್ವೆ ನಂ 41 ಸರ್ಕಾರಿ ಗೋಮಳ 4 ಎಕರೆ ನಕಲಿ ದಾಖಲೆ ಸೃಷ್ಠಿ ಆರೋಪ.

5. ಕೊಡತಿ ಗ್ರಾಮ ಸರ್ವೆ ನಂ 91ರಲ್ಲಿ 3 ಎಕರೆ ಸರ್ಕಾರಿ ಗೋಮಳ ನಕಲಿ ದಾಖಲೆ ಸೃಷ್ಠಿ ಆರೋಪ

6. ಸಿಗ್ಗೇನಹಳ್ಳಿ ಸರ್ವೇ ನಂ 165ರಲ್ಲಿ 8 ಎಕರೆ ಗುಳುಂ ಹುನ್ನಾರ ಆರೋಪ

7. ಬದರಹಳ್ಳಿ ಹೋ. ಆದೂರು ಗ್ರಾಮ ಸರ್ವೇ ನಂ 74ರಲ್ಲಿ 40 ಎಕರೆ ನಕಲಿ ಸಾಗುವಳಿದಾರರನ್ನು ಸೃಷ್ಠಿಸಿ ದಾಖಲೆಗಳನ್ನು ತಿರುಚಿ ಕಬಳಿಕೆ ಯತ್ನ

8. ಅಕ್ರಮಕ್ಕೆ ಸಹಕರಿಸಿದ ನಿಷ್ಠಾವಂತ ಅಧಿಕಾರಿಗಳನ್ನು ಅಧಿಕಾರ ಬಳಸಿ ವರ್ಗಾವಣೆ!!

ಇದೀಗ ಓಟಿವಾಗಿ ನಾಟಕವಾಡುತ್ತಿರುವ ಕಾಂಗ್ರೆಸ್ಸ್ ಪಕ್ಷದ ಹುನ್ನಾರ ಇದೀಗ ದಲಿತರ ಎದುರೇ ಬಟಾಬಯಲಾಗಿದೆ!! ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರವಿಂದ ಲಿಂಬಾವಳಿ ಸ್ಪರ್ಧಿಸುತ್ತಿದ್ದು ಅರವಿಂದ ಲಿಂಬಾಳಿಗೆ ಸುಲಭ ಜಯವಾಗಲಿದೆ.. ಈ ಹಿಂದೆ ಕೂಡಾ ಅರವಿಂದ ಲಿಂಬಾವಳಿ ದಲಿತರಿಗೆ ಹೆಚ್ಚಿನ ಆಧ್ಯತೆ ನೀಡಿದ್ದರು!! ಹಾಗಾಗಿ ಈ ಬಾರಿ ಅರವಿಂದ ಲಿಂಬಾವಳಿ ಜಯಗಳಿಸುವುದು ಖಂಡಿತ!!

ಈ ಬಾರಿ ಮತ್ತೆ ಅಧಿಕಾರ ಹಿಡಿಯಬೇಕೆನ್ನುವ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಡೆಸಿದ ಹಲ್ಲೆ ವಿಚಾರ ಭಾರೀ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ.

  • ಪವಿತ್ರ
Tags

Related Articles

Close