ಪ್ರಚಲಿತ

ಬಲಾತ್ಕಾರದಂತಹ ಹೀನ ಕೃತ್ಯದಲ್ಲೂ ರಾಜಕಾರಣ ಮಾಡುವ ಜಾತ್ಯಾತೀತ ಬುದ್ದಿವಂತರೇ ಹಿಂದೂಗಳ ಕರುಳಿನ ಕೂಗು ನಿಮಗೆ ಕೇಳುವುದೇ?

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ರಾಗ. ಎಂಟು ವರ್ಷದ ಬಾಲೆಯನ್ನು “ಮಂದಿರ”ದೊಳಗೆ ಶೋಷಿಸಲಾಯಿತು, ಭಾಜಪಾ ಶಾಸಿತ ರಾಜ್ಯಗಳು ಮಹಿಳೆಯರಿಗೆ ಸುರಕ್ಷಿತವಲ್ಲ, ಹಿಂದೂಗಳೆಲ್ಲರೂ ಬಲಾತ್ಕಾರಿಗಳು…. ಅಬ್ಬಾ… ಬಲಾತ್ಕಾರದಂತಹ ಹೀನ ಕೃತ್ಯಗಳಲ್ಲೂ ಮಂದಿರ-ಧರ್ಮ ಹುಡುಕುವ ಈ ಮತಿವಿಕಲ ಮಾಧ್ಯಮ ಮತ್ತು ತಥಾಕಥಿತ ಜಾತ್ಯಾತೀತ ಜನ ಮತ್ತು ಮೂರೂ ಬಿಟ್ಟ ರಾಜಕಾರಣಿಗಳಿಗೆ “ಅಲ್ಪ”ರಿಂದ ಹಿಂದೂ ಹೆಣ್ಣು ಮಕ್ಕಳ ಮೇಲಾದ ಶೋಷಣೆ ಕಾಣುವುದೇ ಇಲ್ಲ. ಸ್ವತಃ ಕಾಂಗ್ರೆಸಿನ ರಾಜ್ಯಭಾರದ ಕರ್ನಾಟಕದಲ್ಲಿ ಒಬ್ಬ ಹಿಂದೂ ಮಹಿಳೆಯನ್ನು ಒಂಬತ್ತು ಮುಸ್ಲಿಮರು, ಒಂಭತ್ತು ದಿನಗಳವರೆಗೆ ಶೋಷಿಸಿದ್ದು, ದೊಡ್ಡ ವಿಷಯ ಎಂದೆನಿಸುತ್ತಿಲ್ಲ.

ಯಾವುದೇ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪುರುಷರಿಂದ ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆಸಲಾಗುವ ಬರ್ಬರ ಕೃತ್ಯಕ್ಕೆ ನ್ಯಾಯ ಸಿಗುವುದೇ ಇಲ್ಲ. ಹಿಂದೂಗಳ ದೇಶದಲ್ಲಿ ಹಿಂದೂಗಳಿಗೇ ನ್ಯಾಯವಿಲ್ಲ, ಇದೆಂಥಾ ದೌರ್ಭಾಗ್ಯ? ಇವತ್ತು ಎಗರಿ ಎಗರಿ ಮಂದಿರವನ್ನು ಮತ್ತು ಹಿಂದೂಗಳನ್ನು ಗುರಿಯಾಗಿಸಿ ಬೊಬ್ಬೆ ಹೊಡೆಯುವ ಕಾಂಗ್ರೆಸ್ ಎಂಬ ಪರಿವಾರ ಪಾರ್ಟಿ, ತನ್ನ ಯುವರಾಜನ ಮೇಲೆಯೂ ಇಂತಹದೇ ಒಂದು ಆರೋಪ ದಾಖಲಾಗಿದೆ ಎನ್ನುವುದನ್ನು ಮರೆತೇ ಬಿಟ್ಟಂತಿದೆ!! ಅದು ಹೋಗಲಿ ರಾಜಸ್ತಾನದಲ್ಲಿ ಇವರದೇ ಶಾಸನ ಇರುವ ಕಾಲದಲ್ಲಿ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಅಜ್ಮೇರ್ ದರ್ಗಾದ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ಅನುಯಾಯಿಯ ವಂಶಜರು, ಕಾಂಗ್ರೆಸಿನ ನಾಯಕರು ಅಲ್ಲಿಯ ಹಿಂದೂಗಳ ಮೇಲೆ ಸಾಮೂಹಿಕ ಬಲಾತ್ಕಾರದಂತಹ ಹೇಯ ಕೃತ್ಯ ಮಾಡಿದ್ದನ್ನಾದರೂ ಹೇಳುತ್ತಾರಾ? ಇಲ್ಲ.

1992 ರಲ್ಲಿ ಇಡಿಯ ಅಜ್ಮೇರಿನ ಶಾಲಾ-ಕಾಲೇಜಿನ ಹಿಂದೂ ಹೆಣ್ಣು ಮಕ್ಕಳನ್ನು ತಮ್ಮ ಅನೈತಿಕ ಕಾರ್ಯಗಳಿಗೆ ಬಳಸಿಕೊಂಡು ನೂರಾರು ಹಿಂದೂ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ ಕಥೆ ಮಾಧ್ಯಮಗಳಲ್ಲಿ ಸುದ್ದಿ ಆಗುವುದೇ ಇಲ್ಲ. 1992 ರಲ್ಲಿ ‘ನವಜ್ಯೋತಿ’ ಎನ್ನುವ ಪತ್ರಿಕೆಯು ಈ ಇಡಿಯ ಬಲಾತ್ಕಾರ ಕಾಂಡವನ್ನು ಮೊತ್ತ ಮೊದಲ ಬಾರಿಗೆ ದೇಶದ ಮುಂದೆ ಬಿಚ್ಚಿಟ್ಟಿತ್ತು. ಆಗ ಇಡಿಯ ದೇಶವೇ ಹೌಹಾರಿತ್ತು. ಒಂದಲ್ಲ, ಎರಡಲ್ಲ, ನೂರಕ್ಕಿಂತಲೂ ಹೆಚ್ಚು ಹಿಂದೂ ಹೆಣ್ಣು ಮಕ್ಕಳನ್ನು ಅಜ್ಮೇರ್ ದರ್ಗಾದ “ಖಾದಿಮರು” ತಮ್ಮ ಕಾಮ ತೃಷೆಗೆ ಬಳಸಿಕೊಂಡಿದ್ದರು. ದೀನ ಬಂಧು ಚೌಧರಿಯೆಂಬ ಸಿಂಹದ ಗುಂಡಿಯ ಪತ್ರಿಕೆಯ ಸಂಪಾದಕ ಈ ಸತ್ಯವನ್ನು ಪ್ರಕಾಶಿಸುವ ಧೈರ್ಯ ತೆಗೆದುಕೊಂಡಿದ್ದರು. ಇನ್ನೊಂದು ಹೇಯ ವಿಚಾರವೆಂದರೆ ಸ್ಥಳೀಯ ಅಧಿಕಾರಿಗಳಿಗೆ ಈ ಹೀನ ಕೃತ್ಯ ನಡೆಯುವುದು ತಿಳಿದಿದ್ದೂ ಸುಮ್ಮನಿದ್ದರು.

ಯಾವಾಗ ಈ ವಿಷಯ ಪತ್ರಿಕೆಯಲ್ಲಿ ಬಂತೋ ಜನರು ದರ್ಗಾದ ವಿರುದ್ದ ಆದೋಂಳನ ಮಾಡುತ್ತಾ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಆದರೆ ವಿಪರ್ಯಾಸ ನೋಡಿ, ಈ ವಿಷಯವನ್ನು ಅಲ್ಲಿಗಲ್ಲಿಗೇ ಮುಚ್ಚಿ ಬಿಡುವ ಹುನ್ನಾರ ಮಾಡಲಾಯಿತು. ಏಕೆ ಗೊತ್ತೆ? ಈ ವಿಷಯ ಬೆಳಕಿಗೆ ಬಂದರೆ ದೇಶದಲ್ಲಿ ಸಾಂಪ್ರದಾಯಿಕ ದಂಗೆ ಹೆಚ್ಚಾಗುವುದಂತೆ, ಅಜ್ಮೇರ್ ದರ್ಗಾ “ಪವಿತ್ರ” ಸ್ಥಳವಂತೆ, ಅದರ ಬಗ್ಗೆ ಹಿಂದೂಗಳಿಗೆ ಗೌರವವಿದೆಯಂತೆ, ಈ ವಿಷಯ ಹೊರ ಜಗತ್ತಿಗೆ ತಿಳಿದರೆ ದರ್ಗಾದ ಗೌರವ ಕುಂದಿ ಅಲ್ಲಿಗೆ ಬರುವ “ಹಿಂದೂ”ಗಳ ಸಂಖ್ಯೆ ಕಡಿಮೆಯಾಗುವುದಂತೆ!! ಛೆ, ನಮ್ಮ ಹಿಂದೂಗಳಿಗೆ ಯಾವಾಗ ಬುದ್ದಿ ಬರುತ್ತೊ ತಿಳಿಯದು. ಪೃಥ್ವಿರಾಜ ಚೌಹಾನನ ಹೆಂಡತಿ ಸಂಯೋಗಿತಾಳನ್ನು ಆಕೆಯ ಗಂಡನೆದುರೇ ಬಲಾತ್ಕರಿಸಲು ಕುಮ್ಮಕ್ಕು ಕೊಟ್ಟ ಮೊಯಿನುದ್ದೀನ್ ಚಿಶ್ತಿಯೆಂಬ ಧೂರ್ತನ ದರ್ಗಾಕ್ಕೆ ಹೋಗಿ ಅಡ್ಡ ಬೀಳುತ್ತಾರಲ್ಲ ಏನನ್ನಬೇಕು ಇದಕ್ಕೆ.

ಇದೇ ಚಿಶ್ತಿಯ ಅನುಯಾಯಿಯ ವಂಶಜರೇ ಆ ದರ್ಗಾವನ್ನು ನೋಡಿಕೊಳ್ಳುತ್ತಿರುವುದು. ಇವರನ್ನೇ ಖಾದಿಮರೆನ್ನುವುದು. ತಡವಾಗಿಯಾದರೂ ವಿಷಯ ಬೆಳಕಿಗೆ ಬಂದು ಜನರ ಆಕ್ರೋಶ ಮೇರೆ ಮೀರಿದಾಗ ತನಿಖೆ ಕೈಗೊಳ್ಳಲಾಗುತ್ತದೆ. 18 ಜನರ ಸಮೂಹ ಈ ಕಾಂಡದಲ್ಲಿ ಭಾಗಿಯಾಗಿತ್ತು ಅದರಲ್ಲೂ ದರ್ಗಾದ ಖಾದಿಮರು “ಕಾಂಗ್ರೆಸಿನ ಯುವಾ ನೇತಾರರಾಗಿದ್ದರು” ಎಂಬುದು ಸಾಬೀತಾಗುತ್ತದೆ. ಮುಖ್ಯ ಆರೋಪಿ ಫಾರೂಕ್ ಚಿಶ್ತಿ ಯುವ ಕಾಂಗ್ರೆಸ್ ನಾಯಕ ಹಾಗೂ ನಫೀಸ್ ಚಿಶ್ತಿ ಮತ್ತು ಅನ್ವರ್ ಚಿಶ್ತಿ ಯುವಾ ಕಾಂಗ್ರೆಸಿನ ಉಪಾಧ್ಯಕ್ಷರಾಗಿದ್ದರು. ಸುಹೈಲ್ ಚಿಶ್ತಿ ಎಂಬ ಇನ್ನೊಬ್ಬ ಅರೋಪಿ ಪರಾರಿಯಾಗಿದ್ದ ಆದರೆ ರಾಜಸ್ತಾನ ಪೋಲಿಸರು ಅವನನ್ನು ಇದೇ ವರ್ಷ ಬಂಧಿಸಿದ್ದಾರೆ. 1998 ರಲ್ಲಿ ಆರೋಪಿಗಳ ಮೇಲೆ ಕೇಸ್ ನಡೆಸಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ನೀಡಲಾಯಿತು. ಆದರೆ 2001-2012ರ ಅವಧಿಯಲ್ಲಿ ಮತ್ತೆ ಕೇಸ್ ನಡೆಸಿ, ನಾಲ್ಕು ಜನರನ್ನು ಬಿಡುಗಡೆಗೊಳಿಸಿ ಉಳಿದವರ ಶಿಕ್ಷೆಯನ್ನು ಕಡಿತಗೊಳಿಸಿ ಕೇವಲ ಹತ್ತು ವರ್ಷದ ಸಜೆ ನೀಡಲಾಯಿತು!! ಈ ಅವಧಿಯಲ್ಲಿ ಕೇಂದ್ರದಲ್ಲಿ ಯಾರ ಸರ್ಕಾರ ಇತ್ತೆನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಒಬ್ಬ ಆರೋಪಿ ಈಗಲೂ ತಲೆಮರೆಸಿಕೊಂಡು ಅಮೇರಿಕಾದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇಡಿಯ ದೇಶವೇ ನಾಚಿ ತಲೆ ತಗ್ಗಿಸುವಂತಹ ವಿಚಾರ ಇದು. ಕಾಂಗ್ರೆಸಿನ ಧೂರ್ತ, ಅದರಲ್ಲೂ ಪವಿತ್ರ ಸ್ಥಳವಾದ ಅಜ್ಮೇರ್ ದರ್ಗಾದ ಖಾದಿಮರಿಂದಲೇ ನೂರಾರು ಹಿಂದೂ ಹೆಣ್ಣು ಮಕ್ಕಳ ಸಾಮೂಹಿಕ ಬಲತ್ಕಾರ ನಡೆಸಲಾಯಿತು. ಹೆಣ್ಣು ಮಕ್ಕಳಿಗೆ ಬೆದರಿಕೆ ಹಾಕಿ ಅವರನ್ನು ಶೋಷಿಸಲಾಯಿತು. ಎಷ್ಟೋ ಹೆಣ್ಣು ಮಕ್ಕಳು ಕಿರಿಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು. ವಿಷಯ ಬೆಳಕಿಗೆ ಬಂದ ನಂತರ ಹೆಣ್ಣು ಮಕ್ಕಳ ಬದುಕು ಇನ್ನೂ ನರಕವಾಯಿತು. ಇಡಿಯ ಊರಿಗೆ ಊರೆ ಈ ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಲು ಶುರುವಿಟ್ಟು ಕೊಂಡಿತು. ಬೇರೆ ಪತ್ರಿಕೆಯ ಸಂಪಾದಕು ಹೆಣ್ಣು ಮಕ್ಕಳಿಗೆ ಅವರ ಫೋಟೋ ಪ್ರಕಟಿಸಿವುದಾಗಿ ಬೆದರಿಕೆ ಒಡ್ಡಿ ಹಣ ಪೀಕಲು ಶುರುವಿಟ್ಟುಕೊಂಡರು. ಈ ಇಡೀ ಹಳ್ಳಿಯ ಹೆಣ್ಣು ಮಕ್ಕಳಿಗೆ ಮದುವೆಯ ಪ್ರಸ್ತಾಪವೇ ಬರುತ್ತಿರಲಿಲ್ಲ, ಬಂದರೂ ಪತ್ರಿಕೆ ಆಫೀಸಿಗೆ ಫೋನ್ ಮಾಡಿ ಆಕೆ ಬಲತ್ಕಾರ ಪೀಡಿತಳೇ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರಂತೆ. ತಾವು ಮಾಡದ ತಪ್ಪಿಗೆ ಎಂತಹ ಶಿಕ್ಷೆ ಈ ಹೆಣ್ಣು ಮಕ್ಕಳಿಗೆ. ಅವರ ನೋವಿಗೆ, ಅವರ ಮೇಲಾದ ಅಮಾನವೀಯ ಕೃತ್ಯಕ್ಕೆ ಬೆಲೆಯೇ ಇಲ್ಲವೇ?

ಇವತ್ತು ಹಾದಿ ಬೀದಿಯಲ್ಲಿ ಹಾರಾಡುವ, ಎಗರಾಡುವ, ಕ್ಯಾಂಡಲ್ ಮಾರ್ಚ್ ಮಾಡುವ ಜಾತ್ಯಾತೀತ ಬುದ್ದಿವಂತರೆಲ್ಲ ಆಗ ಸತ್ತೇ ಹೋಗಿದ್ದರು. ಸ್ವತಃ ಕಾಂಗ್ರೆಸಿಗರಾದ ಚಿಶ್ತಿಗಳೇ ಈ ಕಾರ್ಯದಲ್ಲಿ ಭಾಗಿಯಾಗಿದ್ದದ್ದು ತಿಳಿದಿದ್ದರೂ ಮಾಧ್ಯಮಗಳದ್ದು ಜಾಣ ಕಿವುಡು-ಕುರುಡು. ತನ್ನ ಅಧಿಕಾರದ ಅವಧಿಯಲ್ಲಿ ತನ್ನದೇ ಯುವ ನೇತಾರರಿಂದ ಇಂತಹ ಹೀನ ಕೃತ್ಯ ನಡೆದು, ಸಾಲದೆಂಬಂತೆ ಕೇಂದ್ರದಲ್ಲಿ ತನ್ನ ಅಧಿಕಾರ ಬಂದಾಗ ಆರೋಪಿಗಳನ್ನು ಬಿಡುಗಡೆಗೊಳಿಸಿದ ಕಾಂಗ್ರೆಸಿಗೆ ಈಗ ಮಾತನಾಡುವ ನೈತಿಕತೆ ಇದೆಯೇ? ಇದು ತುಂಬಾ ಹಿಂದಿನ ವಿಚಾರವೆಂದು ಬದಿಗಿಟ್ಟರೂ, ಈಗ ಇವರದೇ ಆಳ್ವಿಕೆಯ ಕರ್ನಾಟಕದಲ್ಲಿ ಮೊನ್ನೆ ಮೊನ್ನೆಯಷ್ಟೇ ಒಂಭತ್ತು ಮಂದಿಯಿಂದ ಹಿಂದೂ ಹೆಣ್ಣು ಮಗಳ ಮೇಲೆ ಅಮಾನವೀಯ ಕೃತ್ಯ ನಡೆಯಿತಲ್ಲ, ಅದಕ್ಕಾದರೂ ಇವರ ಬಳಿ ಉತ್ತರವಿದೆಯೇ?

ಬಲಾತ್ಕಾರದಂತಹ ನೀಚ ಕೃತ್ಯದಲ್ಲಿ ರಾಜಕಾರಣ ಸಲ್ಲದು. ಆದರೆ ಈ ದೇಶದಲ್ಲಿ ಹಿಂದೂಗಳಿಗೊಂದು ನ್ಯಾಯ, ಮುಸಲ್ಮಾನರಿಗೊಂದು ನ್ಯಾಯ. ಏಕೆ ಹೀಗೆ? ಹಾಗಾದರೆ ಹಿಂದೂಗಳಿಗೆ ನ್ಯಾಯ ಒದಗಿಸುವವರು ಯಾರು? ಮಾಧ್ಯಮ, ಕಾರ್ಯಾಂಗ, ಶಾಸಕಾಂಗ ಕೊನೆಗೆ ನ್ಯಾಯಾಂಗದಿಂದಲೂ ಎರಡನೆ ದರ್ಜೆಯ ನಾಗರಿಕರಂತೆ ಕಾಣಲ್ಪಡುವ ಹಿಂದೂಗಳು ನ್ಯಾಯಕ್ಕಾಗಿ ಯಾರ ಬಾಗಿಲು ತಟ್ಟಬೇಕು. ಜಾತ್ಯಾತೀತ ಬುದ್ದಿವಂತರೆ ದಯವಿಟ್ಟು ತಿಳಿಸಿ……

ಮೂಲ: https://www.hindupost.in/news/indias-rotherham-90s-ajmer-rape-blackmail-saga-5-lessons-havent-learnt/

ಮೂಲ:https://en.wikipedia.org/wiki/Ajmer_rape_case

-ಶಾರ್ವರಿ

Tags

Related Articles

Close