ಪ್ರಚಲಿತ

ಶಾಂತಿನಗರ ಪ್ರವೇಶಿಸಲು ಇವನ ಅಪ್ಪಣೆ ಬೇಕಂತೆ..! ಶಾಸಕ ಹಾಗೂ ಪೋಲೀಸರ ಎದುರೇ ನಾಲಗೆ ಹರಿಬಿಟ್ಟ ನಲಪಾಡ್ ಬಂಟ!!

ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಕೊಟ್ಟರೆ ಯಾವ ರೀತಿಯಲ್ಲಿ ರಾಜ್ಯದ ಜನತೆ ನರಕ ಅನುಭವಿಸಬಹುದು ಎಂಬೂದಕ್ಕೆ ಕರ್ನಾಟಕವೇ ಸಾಕ್ಷಿ. ಯಾಕೆಂದರೆ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ನ ರಂಪಾಟಕ್ಕೆ ಇಡೀ ರಾಜ್ಯವೇ ಬೇಸತ್ತು ಹೋಗಿದೆ. ಕಾಂಗ್ರೆಸ್ ನ ಆಡಳಿತದಲ್ಲಿ ಶಾಂತಿ ಎಂಬೂದೇ ಮರಿಚಿಕೆಯಾಗಿದೆ. ಕಾಂಗ್ರೆಸ್ ನ ಪಾಪದ ಕೊಡ ತುಂಬಿದೆ, ಅಧಿಕಾರದ ಅವಧಿಯಲ್ಲಿ ಮಾಡಿದ ಅನಾಚರಗಳೆಲ್ಲವೂ ಚುನಾವಣೆ ಸಮೀಪಿಸುತ್ತಿದ್ದಂತೆ ಹೊರಬೀಳುತ್ತಿದೆ. ಕಾಂಗ್ರೆಸ್ ನಾಯಕರು ಮಾಡಿದ ಭ್ರಷ್ಟಾಚಾರ, ಕೊಲೆ, ಹಲ್ಲೆ , ದಬ್ಬಾಳಿಕೆ ಹೀಗೆ ಒಂದಲ್ಲಾ ಎರಡಲ್ಲ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಿಂದ ಇಡೀ ರಾಜ್ಯವೇ ಇಂದು ಅಶಾಂತಿಯಿಂದ ಬದುಕಬೇಕಾದ ಪರಿಸ್ಥಿತಿಯಲ್ಲಿದೆ.

ಕಳೆದ ಎಂಟು ದಿನಗಳ ಹಿಂದೆ ಇಡೀ ರಾಜ್ಯದಲ್ಲಿ ಸುದ್ದಿ ಹಬ್ಬಿಸಿದ್ದ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರ ಮಗ ಮಹಮ್ಮದ್ ನಲಪಾಡ್ ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅಮಾಯಕ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ವಿದ್ವತ್ ಎಂಬ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಆರೋಪಿ ಮಹಮ್ಮದ್ ನಲಪಾಡ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿ ರೌಡಿಸಂ ನಡೆಸಿ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಹಮ್ಮದ್ ನಲಪಾಡ್, ತನ್ನ ತಂದೆ ಕಾಂಗ್ರೆಸ್ ಶಾಸಕ ಎಂಬ ಕಾರಣಕ್ಕಾಗಿ ಅಹಂಕಾರದಿಂದಲೇ ವರ್ತಿಸುತ್ತಿದ್ದ. ರೆಸ್ಟೋರೆಂಟ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ನಲಪಾಡ್ ನಂತರದಲ್ಲಿ ತಲೆಮರೆಸಿಕೊಂಡಿದ್ದ. ಎರಡು ದಿನಗಳ ನಂತರ ತಂದೆ ಹ್ಯಾರಿಸ್ ನಲಪಾಡ್ ತನ್ನ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಮಗನನ್ನು ಪೋಲೀಸರ ಮುಂದೆ ಶರಣಾಗುವಂತೆ ಮಾಡಿ, ನಂತರದಲ್ಲಿ ಬಿಡಿಸಲು ಯತ್ನಿಸಿದ್ದರು. ಆದರೆ ‘ಉಪ್ಪು ತಿಂದವನು ನೀರು ಕುಡಿಯಲೇ ಬೇಕು’ ಎಂಬ ಮಾತಿನಂತೆ ನಲಪಾಡ್ ಗೆ ಸದ್ಯ ಜೈಲು ವಾಸವೇ ಗತಿಯಾಗಿದೆ.

ಕಣ್ಣೀರಿಟ್ಟ ನಲಪಾಡ್..!

ಹ್ಯಾರಿಸ್ ನಲಪಾಡ್ ತನ್ನ ಅಧಿಕಾರವನ್ನು ಬಳಸಿಕೊಂಡು ಗೂಂಡಾ ಮಗ ಮಾಡಿದ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಆದರೆ ಕೋರ್ಟ್ ಮುಂದೆ ಹಲ್ಲೆಗೊಳಗಾದ ವಿದ್ವತ್ ಪರ ವಾದ ಮಂಡಿಸಿದ್ದ ಶ್ಯಾಮ್ ಸುಂದರ್, ನಲಪಾಡ್ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ವಾದ ಮಂಡಿಸಿದ್ದರು. ಸತತ ಎರಡನೇ ಬಾರಿಯೂ ಜಾಮೀನಿಗಾಗಿ ಕಾದು ಕುಳಿತಿದ್ದ ಮಹಮ್ಮದ್ ನಲಪಾಡ್ ಗೆ ನಿರಾಸೆಯೇ ಎದುರಾಗಿತ್ತು. ನಲಪಾಡ್ ಪರ ಜಾಮೀನು ಅರ್ಜಿ ತಿರಸ್ಕರಿಸಿದ್ದ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಇದನ್ನು ಕಂಡ ನಲಪಾಡ್ ಜೈಲು ಅಧೀಕ್ಷಕರ ಕಛೇರಿಯಿಂದ ಹೊರ ನಡೆದಿದ್ದಾರೆ. ಜಾಮೀನಿಗಾಗಿ ಹರಸಾಹಸ ಪಡುತ್ತಿರುವ ನಲಪಾಡ್ ಕುಟುಂಬಕ್ಕೆ ಹಿನ್ನಡೆಯಾಗುತ್ತಲೇ ಇದೆ.

ಮಗ ಜೈಲಿನಲ್ಲಿ, ಅಪ್ಪ ಏಶಿಯಾದಲ್ಲಿ ರಂಪಾಟ..!

ಹಲ್ಲೆ ನಡೆಸಿ ಜೈಲು ಪಾಲಾಗಿದ್ದರೂ ಕೂಡ ನಲಪಾಡ್ ತನ್ನ ಅಹಂಕಾರದ ಬುದ್ದಿ ಬಿಡಲಿಲ್ಲ. ಜೈಲಿನಲ್ಲೂ ಸಂಗಡಿಗರ ಜೊತೆ ಜಗಳ ಮಾಡಿಕೊಂಡಿದ್ದ ನಲಪಾಡ್ ತನ್ನ ವಿರುದ್ಧ ಮಾತನಾಡಿದ ತನ್ನ ಸ್ನೇಹಿತನ ವಿರುದ್ದವೇ ಹಲ್ಲೆ ಮಾಡಲು ಪ್ರಯತ್ನಿಸಿದ್ದ. ಇತ್ತ ತಂದೆ ಹ್ಯಾರಿಸ್ ನಲಪಾಡ್ ಕೂಡಾ ಕಸರತ್ತು ನಡೆಸುತ್ತಿದ್ದು ತನ್ನ ಚೇಳಾಗಳನ್ನು ಬಳಸಿಕೊಂಡು ನಲಪಾಡ್ ಬಿಡುಗಡೆಗೆ ಪರದಾಡುತ್ತಿದ್ದಾರೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕನಾಗಿರುವುದರಿಂದ ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ಅಧಿಕಾರದ ಅಹಂನಲ್ಲಿ ತನ್ನ ಮಗ ಏನೇ ದಾಂಧಲೆ ನಡೆಸುತ್ತಿದ್ದರೂ ತನ್ನ ರಾಜಕೀಯ ಬಳಸಿಕೊಂಡು ಎಲ್ಲಾ ತಪ್ಪುಗಳಿಂದಲೂ ರಕ್ಷಿಸುತ್ತಿದ್ದರು.

ಪೋಲೀಸರ ಎದುರೇ ದರ್ಪ ಮೆರೆದ ಹ್ಯಾರಿಸ್ ಬಂಟ..!

ಯಾವುದೋ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಮತ್ತು ಆತನ ಕೆಲ ಬಂಟರು ಒಟ್ಟಾಗಿ ಕೂತು ಮಾತನಾಡುತ್ತಿದ್ದರು. ಹ್ಯಾರಿಸ್ ಪಕ್ಕದಲ್ಲೇ ಪೋಲೀಸರು ಕೂಡಾ ಕೂತಿದ್ದರು.‌ ಆದರೆ ಇದ್ಯಾವುದನ್ನೂ ಲೆಕ್ಕಿಸದ ಹ್ಯಾರಿಸ್ ಬಲಗೈ ಬಂಟ ಶಿವಕುಮಾರ್ ‘ಶಾಂತಿನಗರ ಕ್ಕೆ ಯಾರೇ ಎಂಟ್ರಿ ಕೊಡಬೇಕಿದ್ದರೂ ನಮ್ಮ ಅನುಮತಿ ಪಡೆಯಲೇಬೇಕು. ಮಹಮ್ಮದ್ ನಲಪಾಡ್ ಯಾವುದೇ ತಪ್ಪು ಮಾಡಿಲ್ಲ. ರೆಸ್ಟೋರೆಂಟ್ ನಲ್ಲಿ ಯಾವುದೇ ಗಲಾಟೆ ಕೂಡ ನಡೆದೇ ಇಲ್ಲ ಎಂದು ಬೊಗಳೆ ಬಿಟ್ಟಿದ್ದಾರೆ. ನಲಪಾಡ್ ಹಲ್ಲೆ ಮಾಡಿದ ಸಂದರ್ಭದಲ್ಲಿ ಶಿವಕುಮಾರ್ ಆ ಜಾಗದಲ್ಲಿ ಇರಲೇ ಇಲ್ಲ. ಆದರೂ ಕಣ್ಣಾರೆ ಕಂಡವರಂತೆ ಮಾತನಾಡಿದ ಶಿವಕುಮಾರ್ ತನ್ನ ಬಾಯಿಗೆ ಬಂದಂತೆ ನಾಲಗೆ ಹರಿಯಬಿಟ್ಟಿದ್ದರು. ಪಕ್ಕದಲ್ಲೇ ಪೋಲಿಸ್ ಅಧಿಕಾರಿಯೊಬ್ಬರು ಕೂತಿದ್ದರೂ ಕೂಡಾ ಗೂಂಡಾ ರಂತೆ ಮಾತನಾಡಿದ್ದ ಹ್ಯಾರಿಸ್ ಬಲಗೈ ಬಂಟ ಶಿವಕುಮಾರ್ ಮೇಲೂ ಇದೀಗ ಅನುಮಾನ ವ್ಯಕ್ತವಾಗಿದೆ.

ಯಾರೋ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ..!

ಪೋಲೀಸರ ಎದುರೇ ಗೂಂಡಾನಂತೆ ವರ್ತಿಸಿದ್ದ ಹ್ಯಾರಿಸ್ ನಲಪಾಡ್ ರ ಬಲಗೈ ಬಂಟ ಶಿವಕುಮಾರ್, ಹಲ್ಲೆ ಮಾಡಿರುವ ಮಹಮ್ಮದ್ ನಲಪಾಡ್ ಪರ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಂಗಾಲಾಗಿದ್ದ ಶಿವಕುಮಾರ್ ತಕ್ಷಣ ತನ್ನ ಹೇಳಿಕೆ ಬದಲಾಯಿಸಿದ್ದಾರೆ. ‘ನಾನು ಹಲ್ಲೆ ನಡೆಯುವ ಸಂದರ್ಭದಲ್ಲಿ ಫರ್ಜಿ ರೆಸ್ಟೋರೆಂಟ್ ನಲ್ಲಿ ಇರಲಿಲ್ಲ. ಅಲ್ಲಿ ನಡೆದ ಘಟನೆಯ ಬಗ್ಗೆ ನನಗೆ ಏನೂ ಸತ್ಯಾಂಶ ಗೊತ್ತಿಲ್ಲ, ಯಾರೋ ಹೇಳಿದ ಮಾತನ್ನು ನಾನು ಹೇಳಿಕೊಂಡಿದ್ದೇನೆ ಅಷ್ಟೇ’ ಎಂದು ಉಡಾಫೆಯಿಂದ ಹೇಳಿಕೆ ನೀಡಿದ್ದಾರೆ. ಶಾಂತಿನಗರದ ಗಡಿ ದಾಟಬೇಕಿದ್ದರೂ ನಮ್ಮ ಅನುಮತಿ ಪಡೆಯಬೇಕು ಎಂದು ಹೇಳಿಕೊಂಡಿದ್ದ ಶಿವಕುಮಾರ್ ಇದೀಗ ತನ್ನ ಹೇಳಿಕೆಯನ್ನು ತಿರುಚಿಕೊಂಡಿದ್ದಾರೆ.

ಅಧಿಕಾರ ಬಳಸಿಕೊಂಡು ಜಾಮೀನಿಗೆ ಪ್ರಯತ್ನ..!

ಕಾಂಗ್ರೆಸ್ ನಾಯಕರೇ ಹೀಗೆ, ಅಧಿಕಾರ ನಮ್ಮ ಕೈಯಲ್ಲಿದೆ ಎಂಬ ಅಹಂಕಾರದಿಂದ ಏನು ಬೇಕಾದರೂ ಮಾಡಲು ತಯಾರಾಗುತ್ತಾರೆ.ಸದ್ಯ ನಲಪಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವಿದ್ವತ್ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋರ್ಟ್ ನಲ್ಲಿ ವಾದ ಮಂಡನೆ ಮಾಡುವ ಸಮಯದಲ್ಲಿ ನ್ಯಾಯಾಧೀಶರು ಈ ಬಗ್ಗೆ ಪ್ರಶ್ನಿಸಿದ್ದರು. ಯಾಕೆಂದರೆ ಹಲ್ಲೆಗೊಳಗಾದ ವಿದ್ವತ್ ಇನ್ನೂ ಚೇತರಿಸಿಕೊಂಡಿಲ್ಲ, ಆದ್ದರಿಂದ ಜಾಮೀನು ಕೊಡಲು ನಿರಾಕರಿಸಿದ್ದರು. ಅದಕ್ಕಾಗಿಯೇ ಎರಡನೇ ಬಾರಿ ಕೋರ್ಟ್ ನಲ್ಲಿ ವಾದ ಮಂಡನೆಗೊಳ್ಳುವ ಮೊದಲೇ ಹ್ಯಾರಿಸ್ ತನ್ನ ಅಧಿಕಾರವನ್ನು ಬಳಸಿಕೊಂಡು ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ನನ್ನು ವಾರ್ಡ್ ಗೆ ಸ್ಥಳಾಂತರಿಸುವಂತೆ ಮಾಡಿದ್ದರು. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಕಾಂಗ್ರೆಸ್ ಅಮಾಯಕರವ ಜೀವನದಲ್ಲಿ ಆಟವಾಡುತ್ತಿದೆ ಎಂಬೂದಕ್ಕೆ ಮತ್ತೊಂದು ಉದಾಹರಣೆ..!

ಕಾಂಗ್ರೆಸ್ ನಾಯಕರು ಎಲ್ಲಾ ರೀತಿಯಲ್ಲೂ ರಾಜ್ಯದ ಜನತೆಗೆ ತೊಂದರೆಯನ್ನೇ ಕೊಡುತ್ತಿದ್ದಾರೆ. ಅಧಿಕಾರದ ಬಲದಿಂದ ಏನು ಬೇಕಾದರೂ ಮಾಡಬಹುದು ಎಂಬ ಅಮಲಿನಲ್ಲಿರುವ ಕಾಂಗ್ರೆಸ್ ಪದೇ ಪದೇ ಗೂಂಡಾಗಿರಿ ನಡೆಸಿ, ಕರ್ನಾಟಕದಲ್ಲಿ ಅಶಾಂತಿ ತಲೆದೋರುವಂತೆ ಮಾಡಿದೆ.

–ಅರ್ಜುನ್

Tags

Related Articles

Close