ಪ್ರಚಲಿತ

ಪ್ರಪಂಚಕ್ಕೆ ಭಾರತದ ಮೇಲಿನ ನಂಬಿಕೆ ಹೆಚ್ಚಾಗಿದೆ: ಪ್ರಧಾನಿ ಮೋದಿ

ಪ್ರಪಂಚಕ್ಕೆ ಭಾರತದ ಮೇಲಿನ ನಂಬಿಕೆ ಹೆಚ್ಚಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಆಂತರಿಕ ಅಭಿವೃದ್ಧಿಯ ಜೊತೆಗೆ, ವಿಶ್ವದ ಹಲವು ಸಮಸ್ಯೆಗಳಿಗೂ ಪರಿಹಾರ ನೀಡುವಲ್ಲಿ ಯಶಸ್ಸು ಕಂಡಿದೆ. ಕಳೆದ ಹತ್ತು ವರ್ಷಗಳಿಗೂ ಮುನ್ನ ಭಾರತವನ್ನು ಕಂಡು ನಗುತ್ತಿದ್ದ ರಾಷ್ಟ್ರಗಳು, ಇಂದು ನಮಗೂ ಭಾರತದ ಸ್ನೇಹ ಹಸ್ತ ಸಿಕ್ಕಿದ್ದರೆ ಎಂದು ಬಯಸುತ್ತಿರುವುದು ಕಂಡುಬರುತ್ತಿದೆ. ಇದು ವಿಶ್ವ ಮಟ್ಟದಲ್ಲಿ ಭಾರತದ ಸ್ಥಾನಮಾನ ಎತ್ತರಕ್ಕೆ ಏರಿದೆ ಎನ್ನುವುದಕ್ಕೆ ಇರುವ ದಾಖಲೆ.

ನವದೆಹಲಿಯಲ್ಲಿ ಟೈಮ್ಸ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈಗ ಭಾರತದ ಸಮಯ. ವಿಶ್ವಕ್ಕೆ ಭಾರತದ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇರುವುದಾಗಿ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತವು ಸಕಾರಾತ್ಮಕವಾಗಿ ರೂಪುಗೊಂಡಿದೆ. ಇದನ್ನು ವಿಶ್ವದ ತಜ್ಞರುಗಳೇ ನಂಬಿದ್ದಾರೆ. ಭಾರತದೆಡೆಗೆ ದಾವೋಸ್‌ನಲ್ಲಿಯೂ ಅದ್ಬುತವಾದ ಉತ್ಸಾಹ ಕಾಣುತ್ತಿದೆ. ಪ್ರಸ್ತುತ ಪ್ರಪಂಚ ಭಾರತದ ಮೇಲೆ ನಂಬಿಕೆ ಇರಿಸಿಕೊಂಡಿದೆ. ಭಾರತದ ಸಾಮರ್ಥ್ಯದ ಬಗ್ಗೆ ಈ ಹಿಂದೆ ಎಂದೂ ಇಂತಹ ನಂಬಿಕೆಯ ಭಾವನೆಯನ್ನು ದೇಶ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಸರ್ಕಾರ ದೇಶದ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಕಾಲಮಿತಿಯಲ್ಲಿ ದೇಶದ ಅಭಿವೃದ್ಧಿಯ ಆಶಯದ ಜೊತೆಗೆ ಹಾಕಲಾದ ಯೋಜನೊಗಳನ್ನು ಮುಗಿಸಲಾಗುತ್ತದೆ ಎಂದೂ ಅವರು ನುಡಿದಿದ್ದಾರೆ.

ಭಾರತವು ಒಂದು ಕಡೆ ಇಪ್ಪತ್ತನೇ ಶತಮಾನದ ಸವಾಲುಗಳನ್ನು ಪರಿಹರಿಸುತ್ತಿದೆ. ಇನ್ನೊಂದು ಕಡೆಯಲ್ಲಿ ಇಪ್ಪತ್ತೊಂದನೇ ಶತಮಾನದ ಆಶಯಗಳನ್ನು ಸಹ ಈಡೇರಿಸಲಾಗುತ್ತಿದೆ. ಅಭಿವೃದ್ಧಿಯ ಪರವಾಗಿ ದೇಶದ ಎಲ್ಲಾ ಸಂದರ್ಭಗಳೂ ಇವೆ. ಇದನ್ನು ಉಪಯೋಗಿಸಿಕೊಂಡು ನಾವು ಮುಂದಿನ ಹಲವು ಶತಮಾನಗಳ ವರೆಗೆ ಭಾರತ ತನ್ನನ್ನು ತಾನು ಬಲಪಡಿಸಿಕೊಳ್ಳಲಿದೆ. ಆ ಸಮಯಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಸರ್ಕಾರದ ಧ್ಯೇಯ ನೀತಿ, ಸ್ಥಿರತೆ, ನಿರಂತರತೆಯೇ ಆಗಿದೆ ಎಂದಿದ್ದಾರೆ.

Tags

Related Articles

Close