ಪ್ರಚಲಿತ

ಋಗ್ವೇದದ 402 ಋಷಿಗಳ ಪರಿಚಯವನ್ನು ಹೊಂದಿರುವ ಏಕೈಕ ಮುಸ್ಲಿಂ ರಾಷ್ಟ್ರದಲ್ಲಿ ರಾಮಾಯಣವನ್ನೂ ಆರಾಧಿಸುತ್ತಾರೆ!! ಹಾಗಾದರೆ ಆ ರಾಷ್ಟ್ರದ ಬಗ್ಗೆ ನಿಮಗೆಷ್ಟು ಗೊತ್ತು?

ಹಿಂದೂ ಧರ್ಮದ ಸೊಗಡನ್ನು ತುಂಬಿಕೊಂಡಿರುವ ಭಾರತದಲ್ಲಿ ಅದೆಷ್ಟೋ ಗ್ರಂಥಗಳ ಆಗರ ತುಂಬಿಕೊಂಡಿದೆ ಎಂದರೆ ಅದಕ್ಕೆ ಲೆಕ್ಕವೇ ಇಲ್ಲ ಎಂದು ಹೇಳಬಹುದು!! ಆದರೆ ಹಿಂದೂ ಧರ್ಮವನ್ನು ಆರಾಧಿಸುವ ರಾಷ್ಟ್ರ ಮತ್ತೊಂದಿದೆ ಎಂದು ತಿಳಿದಾಕ್ಷಣ ಅಚ್ಚರಿಯಾಗುವುದು ಸಹಜ. ಹಿಂದೂ ಧರ್ಮವನ್ನು ಭಾರತಕ್ಕಿಂತಲೂ ಮಿಗಿಲಾಗಿ ಆರಾಧಿಸುವ ಪುಣ್ಯಭೂಮಿ ಮತ್ತೊಂದಿದೆ ಎಂದರೆ ಅದು ಹೆಮ್ಮೆಯ ವಿಚಾರ!! ಅದೂ ಕೂಡ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ಧರ್ಮದ ಸೊಗಡು ತುಂಬಿ ತುಳುಕಾಡುತ್ತಿದೆ ಎಂದರೆ ಅದಕ್ಕಿಂತಲೂ ದೊಡ್ಡ ಅಚ್ಚರಿ ಬೇರೊಂದಿಲ್ಲ!!

ಇಸ್ಲಾಮಿಕ್ ರಾಷ್ಟ್ರ ಆದರೂ ಕೂಡಾ ಅದು ತುಂಬಾ ಶಾಂತತೆಯಿಂದ ಇದೆ!! ಯಾಕೆಂದರೆ ಅದರ ಮೂಲ ಧರ್ಮ ಹಿಂದೂ ಧರ್ಮ ಆಗಿರುವುದರಿಂದ!! ಹೌದು… ಜಗತ್ತಿನಲ್ಲಿ ಹಿಂದುಗಳಿಗೆ ಇರುವಂತಹದ್ದು ಭಾರತ ಒಂದೇ ಅಂತ ನಾವು ನೀವು ಕೇಳಲ್ಪಟ್ಟಿದ್ದೇವು. ಆದರೆ ಹಿಂದೂಗಳಿಗೆ ಸಂಬಂಧಿಸಿದ ಮತ್ತೊಂದು ರಾಷ್ಟ್ರ ಇದ್ದರೆ ಅದು ಇಂಡೋನಿಷ್ಯಾದ ಬಾಲಿಯಲ್ಲಿ ಮಾತ್ರ!!

ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾದ ಬಾಲಿ ಎನ್ನುವ ದ್ವೀಪವನ್ನು ಐಸ್ ಲ್ಯಾಂಡ್ ಆಫ್ ಗಾಡ್ (ದೇವರ ದ್ವೀಪ) ಎಂದೂ ಕರೆಯುತ್ತಾರೆ. ಭಾರತವನ್ನು ಬಿಟ್ಟರೆ ಹಿಂದೂಗಳ ನಾಡು, ಹಿಂದೂ ಸಂಸ್ಕøತಿಯ ತವರು ಎಂದು ಕರೆಯಲ್ಪಡುವ ಇಂಡೋನೇಷ್ಯಾದ ಪುಟ್ಟ ರಾಜ್ಯವೇ ಬಾಲಿ!! ಹಾಗಾಗಿ ಭಾರತವು ಇಂಡೋನೇಷ್ಯಾದ ಗುರುವಿದ್ದಂತೆ!!ಯಾಕೆಂದರೆ ಅವರ ಆಚರಣೆಗಳು, ನಮ್ಮ ಆಚರಣೆಗಳೊಂದಿಷ್ಟು ಒಂದೇ ತೆರನಾಗಿವೆ.

ಕೇವಲ 4.22 ಮಿಲಿಯನ್ ಹಿಂದೂಗಳಿರುವ ಈ ಚಿಕ್ಕ ರಾಜ್ಯದಲ್ಲಿ ಸುಮಾರು 800 ವರ್ಷಗಳ ಹಿಂದೆ ಈಡೀ ಇಂಡೋನೇಷ್ಯಾವನ್ನೇ ಇಸ್ಲಾಂ ಅತಿಕ್ರಮಿಸಿಕೊಂಡರು ಕೂಡ ಹೆದರದ ಬಾಲಿಯ ಜನತೆ ಕ್ಷಾತ್ರ ತೇಜವನ್ನು ಪ್ರದರ್ಶಿಸಿತ್ತು. ಯಾಕೆಂದರೆ ಅವರೆಲ್ಲಾ ಸಾಯಲು ಸಿದ್ದರಿದ್ದರೇ ಹೊರತು ಧರ್ಮವನ್ನು ಬಿಡಲು ಸಿದ್ದರಿರಲಿಲ್ಲ. ಹಾಗಾಗಿ ಮಹಪಾಹಿತ್ ಎನ್ನುವ ರಾಜ ಧರ್ಮಕ್ಕಾಗಿ ಬೆಂಕಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡಿದ್ದ. ಆದರೆ ಬಾಲಿಯಲ್ಲಿದ್ದ ಹಿಂದೂಗಳು ಪ್ರಾಣ ಬಿಟ್ಟರೆ ಹೊರತು ಧರ್ಮವನ್ನು ಬಿಡಲಿಲ್ಲ. ಹಾಗಾಗಿ ಇಂಡೋನಿಷಿಯಾದ ಬಾಲಿ ಎಂಬ ರಾಜ್ಯಕ್ಕೂ ಮತ್ತು ಭಾರತಕ್ಕೂ ಒಂದೇ ತೆರನಾದ ಸಾಮ್ಯತೆಗಳಿವೆ.

ಹಾಗಾಗಿ ನಮ್ಮ ಹಿಂದೂ ಪರಂಪರೆಯ ಹಿಂದುಗಳ ಪುನರುತ್ಥಾನಕ್ಕಾಗಿಯೇ ಶ್ರಮಿಸಿದ, ಇಡೀ ಜಗತ್ತಿನ ಮುಂದೆ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ಋಷಿಮುನಿಗಳಾದ ಭಾರಧ್ವಾಜ್, ಅಗಸ್ತ್ಯ ಮುನಿಗಳ, ಮಾರ್ಕಂಡೇಯ ಮುನಿಗಳ ಕುರಿತಾದ ವಿಸ್ತಾರವಾದ ಅಧ್ಯಾಯಗಳು ಇಂಡೋನೇಷಿಯಾದ ಪಠ್ಯಪುಸ್ತಗಳಲ್ಲಿವೆ ಎಂದರೆ ನಂಬ್ತೀರಾ?? ಆದರೆ ಇದನ್ನು ನಂಬಲೇಬೇಕಲ್ಲದೇ ಇದು ಅಚ್ಚರಿಯ ವಿಚಾರವೂ ಹೌದು!! ಯಾಕೆಂದರೆ ಇಂಡೋನೇಷಿಯಾದ ಪರಂಪರೆ ಹಾಗೂ ಸಂಸ್ಕೃತಿಯೂ ನಮ್ಮ ಋಷಿಮುನಿಗಳಿಂದಾಗಿದೆ ಎನ್ನುವುದನ್ನು ನಾವು ತಿಳಿದುಕೊಳ್ಳಲೇ ಬೇಕಾಗಿರುವ ಸತ್ಯ ಸಂಗತಿ.

ಮತ್ತೊಂದು ಅಚ್ಚರಿಯ ವಿಚಾರ ಏನಂದರೆ, ಭಾರತ ವೇದಗಳ ನಾಡು ಎಂದು ಕರೆಸಿಕೊಂಡರೂ ಕೂಡ, ನಮ್ಮಲ್ಲಿ ಬಹುತೇಕರಿಗೆ ವೇದಗಳ ಬಗ್ಗೆ ಪರಿಚಯವೇ ಇಲ್ಲ!! ಆದರೆ ಇಂಡೋನೇಷಿಯಾದ ಜನರಿಗೆ ಋಗ್ವೇದದ 402 ಋಷಿಗಳ ಪರಿಚಯವೂ ಅವರಿಗಿದೆ ಅನ್ನೋದೇ ಹೆಮ್ಮೆಯ ವಿಚಾರ.

ಇನ್ನು ಭಾರತೀಯರ ಸಂಸ್ಕøತಿ ವಿಶ್ವದೆಲ್ಲೆಡೆ ಬಿಂಬಿತವಾಗೋದು ಸೀರೆ, ಧೋತಿ, ಸನಾತನ ಸಂಸ್ಕೃತಿಯಿಂದಾಗಿ!! ಹಾಗಾಗಿ ಇಡೀ ಜಗತ್ತು ನಮ್ಮನ್ನು ಅದೇ ಉದ್ದೇಶದಿಂದಲೇ ಗೌರವಿಸುತ್ತದೆಯಲ್ಲದೇ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ವಿದೇಶಿಯರು ಆಚರಿಸಲು ಆಸೆ ಪಡುತ್ತಾರೆ. ಅಷ್ಟೇ ಅಲ್ಲದೇ ಅನುಕರಣೆಗಳು ನಡೆಯುತ್ತಿರುತ್ತವೆ. ಆದರೆ ಇಂಡೋನೆಷ್ಯಾದಲ್ಲಿ ಧೋತಿ ರಾಷ್ಟ್ರೀಯ ಉಡುಪು ಎಂದರೆ ನಂಬುತ್ತೀರಾ? ಆದರೆ ಅದನ್ನೂ ನೀವು ನಂಬಲೇಬೇಕು.

ಧೋತಿ ಇಂಡೋನೇಷ್ಯಾದ ಬಾಲಿಯ ಸಂಕೇತ!! ದೇವರ ನಾಡು ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಕೇರಳದ ಅನಂತಪದ್ಮನಾಭ ದೇವಸ್ಥಾಳದ ಒಳಗೆ ಪ್ರವೇಶಿಸಬೇಕೆಂದರೆ ಧೋತಿ ಅತೀ ಮುಖ್ಯ ಎನ್ನುವುದು ನಮಗೆ ತಿಳಿದಿದೆ. ಆದರೆ ಇಂಡೋನೇಷ್ಯಾದಲ್ಲೂ ಧೋತಿ ಹಾಕಿಕೊಳ್ಳದೇ ದೇವಸ್ಥಾನದೊಳಕ್ಕೆ ಪ್ರವೇಶವಿಲ್ಲ ಎಂದರೆ ಅದನ್ನು ನಾವು ಯೋಚಿಸಲೇಬೇಕಾದ ವಿಷಯ.

ಕಾಯಕವೇ ಕೈಲಾಸ, ಕರ್ತವ್ಯವೇ ದೇವರು ಹೀಗೆ ನಮ್ಮ ಋಷಿಮುನಿಗಳು ಬೋಧಿಸಿದ ಅನೇಕ ತತ್ವಗಳನ್ನು ಇಂಡೋನೇಷ್ಯಾದ ಬಾಲಿಯ ಜನ ಪಾಲಿಸುತ್ತಾರೆ. ಅದರಂತೆ ತಮ್ಮ ಕೆಲಸ, ಕಾರ್ಯಗಳನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಾರೆ. ಅದಕ್ಕಿಂತಲೂ ಇನ್ನೂ ಅಚ್ಚರಿ ಪಡುವ ವಿಷಯವೆಂದರೆ ಇಂಡೋನೆಷ್ಯಾದ ಬಾಲಿಯಲ್ಲಿ ಪ್ರತಿಯೊಂದು ಮಗು ದಿನಕ್ಕೆ 3 ಸಲ ಗಾಯಿತ್ರಿ ಮಂತ್ರವನ್ನು ಪಠಿಸುತ್ತದೆ. ಆದರೆ ಭಾರತದಲ್ಲಿ ಬಹುತೇಕರಿಗೆ ಗಾಯಿತ್ರಿ ಮಂತ್ರದ ಬಗ್ಗೆ ಅರಿವೇ ಇಲ್ಲ.

ಇಂಡೋನೇಷ್ಯಾದ ಬಾಲಿಯ ಶಿಕ್ಷಣ ವ್ಯವಸ್ಥೆ ತುಂಬಾ ಭಿನ್ನವಾಗಿದೆ!! ಯಾಕೆಂದರೆ, ಕಟ್ಟರ್ ಹಿಂದೂ ರಾಷ್ಟ್ರಗಳಲ್ಲಿಯೂ ಅಂತಹ ಶಿಕ್ಷಣ ವ್ಯವಸ್ಥೆ ಇಲ್ಲ. ಆದರೆ ರಾಮಾಯಣ ,ಮಹಾಭಾರತ , ಭಗವದ್ಗೀತೆಯ ಅನೇಕ ಅಧ್ಯಾಯಗಳನ್ನು ಇಂಡೋನೆಷ್ಯಾದ ಶಿಕ್ಷಣ ಪದ್ದತಿಯಲ್ಲಿ ಅಳವಡಿಸಿದ್ದಾರೆ. ಆದರೆ ಭಾರತದ ಪಠ್ಯಪುಸ್ತಕಗಳಲ್ಲಿ ಮಾತ್ರ ಮೊಘಲರ ಬಗ್ಗೆಯೇ ತಿಳಿದಿದ್ದು ಹೆಚ್ಚು!! ಅಷ್ಟೇ ಅಲ್ಲದೇ, ನಿಜವಾದ ಜಾತ್ಯಾತೀತವನ್ನು ಇಂಡೋನೆಷ್ಯಾದ ಬಾಲಿ ಪಾಲಿಸುತ್ತಿದ್ದು, ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ನಡೆಸುತ್ತಾರೆ. ಆ ಸಮ್ಮೇಳನದಲ್ಲಿ ಎಲ್ಲಾ ಧರ್ಮದ ಗುರುಗಳು ಒಂದೆಡೆ ಸೇರಿ ತತ್ವ ಸಿದ್ಧಾಂತಗಳನ್ನು ಬೋಧಿಸುತ್ತಾರೆ. ಅಲ್ಲಿ ಯಾವುದೇ ಕೋಮುಗಲಭೆಗಳು ನಡೆಯುವುದೇ ಇಲ್ಲ.

ಅಷ್ಟೇ ಅಲ್ಲದೇ, ಭಾರತದಲ್ಲಿ ಆಚರಿಸುವ ಎಲ್ಲಾ ಹಿಂದೂ ಧರ್ಮದ ಹಬ್ಬಗಳನ್ನು ಇಂಡೋನೆಷ್ಯಾದ ಬಾಲಿಯ ಜನ ಅತೀ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರ ಎಲ್ಲಾ ಹಬ್ಬಗಳಲ್ಲಿ ರಾಮಾಯಾಣ, ಮಹಾಭಾರತ, ಭಗವದ್ಗೀತೆಗಳನ್ನು ರಥದಲ್ಲಿ ಇಟ್ಟು ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ಮುಗಿದ ಮೇಲೆ ಗೀತೆಯ ಅಧ್ಯಾಯಗಳನ್ನು ಪಠಿಸುತ್ತಾರೆ. ಹಾಗಾಗಿ ಇಂಡೋನೇಷ್ಯಾದ ಜನ ಹಿಂದೂ ಧರ್ಮವನ್ನು ಅನುಸರಿಸುವುದರಿಂದಲೇ ತುಂಬಾ ಶಾಂತತೆಯಿಂದ, ಸೌಹಾರ್ದತೆಯಿಂದ ಇರುವುದನ್ನು ನಾವು ಕಾಣಬಹುದು.

ಇಂಡೋನೇಷ್ಯಾದ ಬಾಲಿಯ ಸರ್ಕಾರ ಎಷ್ಟು ಜಾತ್ಯಾತೀತವೆಂದರೆ ಪ್ರತಿವರ್ಷದ ಬಜೆಟ್ ನಲ್ಲಿ ಎಲ್ಲಾ ಧರ್ಮದವರಿಗೂ ಸಮಪಾಲು ಹಂಚುತ್ತದೆ. ಇದೇ ಅಲ್ವಾ ನಿಜವಾದ ಜಾತ್ಯಾತೀತ!! ಆದರೆ ಭಾರತದಲ್ಲಿ ಬಜೆಟ್ ಮಂಡನೆಯಾದರೆ ದೇವಸ್ಥಾನಕ್ಕೆ ಒಂದೇ ಒಂದು ಪಾಲು ಇರುವುದಿಲ್ಲ, ಅವೆಲ್ಲವೂ ಮಸೀದಿ ಮತ್ತು ಚರ್ಚಗಳಿಗೆ ಹಂಚಿಕೆಯಾಗುತ್ತದೆ. ಇನ್ನೂ ಮಾತೃಭೂಮಿಯ ವಿಷಯಕ್ಕೆ ಬಂದರೆ ಭಾರತದಲ್ಲಿ ಕೆಲವರು ಭೂಮಿಯನ್ನು ತಾಯಿ ಎನ್ನುವುದಿಲ್ಲ ಅದು ನಿಮ್ಮ ಕಲ್ಪನೆಯಷ್ಟೆ ಎಂದು ಹೇಳುತ್ತಾರೆ.

ಆದರೆ ಜಗತ್ತಿನಲ್ಲಿ ಅತೀ ಹೆಚ್ಚು ಅಕ್ಕಿ ಬೆಳೆಯುವವರ ಪೈಕಿ ಇಂಡೋನೇಷ್ಯಾ ಒಂದು ಎನ್ನುವುದು ನಮಗೆ ತಿಳಿದಿದೆ. ಆದರೆ ಇಂಡೊನೇಷ್ಯಾದ ಜನರಿಗೆ ಇದರ ಬಗ್ಗೆ ಕೇಳಿದಾಗ ಅವರು ಹೇಳಿದ ಪ್ರತ್ಯುತ್ತರ ನಿಜಕ್ಕೂ ಕೂಡ ಹೆಮ್ಮೆಯೆಂದೆನಿಸುತ್ತೆ!! ಅದೇನೆಂದರೆ, “ನಾವು ಇಷ್ಟು ಅಕ್ಕಿ ಬೆಳೆಯಲು ಕಾರಣ ಮಾತೃಭೂಮಿಯ ಕೃಪೆ ಎಂದು ಹೇಳುತ್ತಾರಲ್ಲದೇ, ನಮ್ಮ ಎಲ್ಲಾ ಬೆಳವಣಿಗೆಗೆ ತಳಹದಿ ಭಾರತೀಯ ಋಷಿಮುನಿಗಳು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಹಿಂದೂ ಧರ್ಮದ ಬಗ್ಗೆ ಭಾರತೀಯರು ಅದೆಷ್ಟು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ!! ಆದರೆ ಬಾಲಿಯ ಜನತೆಗೆ ತಿಳಿದಷ್ಟು ವೇದಗಳ ಬಗ್ಗೆಯಾಗಲಿ, ಋಷಿ ಮುನಿಗಳ ಬಗ್ಗೆಯಾಗಲಿ ನಾವುಗಳು ತಿಳಿದುಕೊಂಡಿಲ್ಲ ಅನ್ನುವುದೇ ಬೇಸರದ ವಿಚಾರ!!

– ಅಲೋಖಾ

Tags

Related Articles

Close