ಪ್ರಚಲಿತ

ಇಸ್ರೋ ವಿಜ್ಞಾನಿಗಳನ್ನೇ ಅವಮಾನಿಸಿದ ಪ್ರಗತಿಪರರ ದುರ್ಗತಿ

ನಮ್ಮ ದೇಶದ ಪ್ರಗತಿ ಪರ ಚಿಂತಕರು ಎನಿಸಿಕೊಂಡವರು ಅದ್ಯಾವ ಮಟ್ಟಿನ ದುರ್ಗತಿಗೆ ತಲುಪಿದ್ದಾರೆ ಎಂದರೆ, ಅವರಿಗೆ ಈ ದೇಶದಲ್ಲಿ ಏನೇ ಸಕಾರಾತ್ಮಕ ವಿಚಾರಗಳು ಸದ್ದು ಮಾಡಲಿ, ಅವುಗಳಲ್ಲಿ ಏನಾದರೊಂದು ತಕರಾರು ತೆಗೆದು ತಮ್ಮ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಎನ್ನುವುದರಲ್ಲೇ ಮಗ್ನರಾಗಿರುತ್ತಾರೆ.

ಕರ್ನಾಟಕದ ಪ್ರಗತಿ(ದುರ್ಗತಿ) ಪರ ಚಿಂತಕರೂ ಇದಕ್ಕೆ ಹೊರತಲ್ಲ. ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಒಂದು ಮಹತ್ಕಾರ್ಯವನ್ನೇ ಸಾಧಿಸಲು ಹೊರಟಿದೆ. ಈ ಹಿಂದೊಮ್ಮೆ ಚಂದ್ರಯಾನ ನಡೆಸಲು ಹೊರಟು ಸ್ವಲ್ಪ ದರದಲ್ಲೇ ಅದರಲ್ಲಿ ವೈಫಲ್ಯ ಕಂಡಿದ್ದ ಇಸ್ರೋ, ತನ್ನ ಪ್ರಯತ್ನ ಬಿಡದೆ, ‘ಮರಳಿ ಯತ್ನವ ಮಾಡು, ತೊರೆಯದಿರು ಕೆಲಸ ಕೈಗೂಡದಿರಲು’ ಎಂಬಂತೆ ಇದೀಗ ಇಂದು ಮತ್ತೆ ಚಂದ್ರನ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವ ಸಾಧನೆಗೆ ಮುಂದಾಗಿದೆ. ಇದು ಇಡೀ ದೇಶವೇ ಸಂಭ್ರಮ ಪಡುವ ಸುದ್ದಿ.

ಯಾವುದೇ ಮಹತ್ವದ ಕಾರ್ಯ ನಡೆಸುವ ಮೊದಲು ಈ ಕಾರ್ಯ ಯಶಸ್ವಿಯಾಗಲಿ, ಸುಗಮವಾಗಿ ನೆರವೇರಲಿ ಎಂದು ದೇವರ ಆಶೀರ್ವಾದ ಪಡೆಯುವುದು, ದೇವರಿಗೆ ಪೂಜೆ ಸಲ್ಲಿಸುವುದು ಭಾರತೀಯರ ಪರಂಪರೆ. ಅದರಂತೆ ಇಸ್ರೋ ವಿಜ್ಞಾನಿಗಳು ಸಹ ಇಂದಿನ ಚಂದ್ರನಲ್ಲಿಗೆ ಉಪಗ್ರಹ ಕಳಿಸುವ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಎಂಬ ಉದ್ದೇಶದಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ಮೂಲಕ ನಮ್ಮ ಕಾಯಕಕ್ಕೆ ದೇವರ ಅನುಗ್ರಹ, ಆಶೀರ್ವಾದವೂ ಇರಲಿ ಎಂದು ಉಡಾವಣೆಯ ಹಿಂದಿನ ದಿನ ದೇವರಿಗೆ ಪೂಜೆ‌ ಸಲ್ಲಿಸಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಇಸ್ರೋದ ಮಹತ್ಕಾರ್ಯ ಕೈಗೂಡಲಿ ಎನ್ನುವ ದೃಷ್ಟಿಯಿಂದ ಹಲವಾರು ಭಾರತೀಯ ಜನಸಾಮಾನ್ಯರು ಸಹ ದೇವರಲ್ಲಿ ಬೇಡಿಕೊಂಡರು. ಜೊತೆಗೆ ಇಸ್ರೋ ಸಂಸ್ಥೆ ತಿರುಪತಿಯ ಬಾಲಾಜಿಗೆ ಪೂಜೆ ಸಲ್ಲಿಸಿದ ವೈಖರಿಯನ್ನು ಸಹ ಮನಸಾರೆ ಮೆಚ್ಚಿಕೊಂಡಿದ್ದರು.

ಆದರೆ ಈ ದುರ್ಗತಿಪರ ಲದ್ದಿಜೀವಿಗಳಿಗೆ ಮಾತ್ರ ಇಸ್ರೋ‌ದ ಭಾರತದ ಹೆಮ್ಮೆಯ ವಿಜ್ಞಾನಿಗಳು ಚಂದ್ರಯಾನಕ್ಕೂ ಮುನ್ನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು ಹಿತ ಎನಿಸಿಲ್ಲ. ‘ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು’ ಎಂಬಂತೆ ಈ ದುರ್ಗತಿಪರರು ವಿಜ್ಞಾನಿಗಳು ದೇವಾಲಯಕ್ಕೆ ತೆರಳಿ ಈ ಯೋಜನೆಯ ಯಶಸ್ಸಿಗಾಗಿ ‌ಪ್ರಾರ್ಥನೆ ಸಲ್ಲಿಸಿದ್ದನ್ನು ಮೂದಲಿಸುವ ಕೆಲಸ ಮಾಡಿದ್ದಾರೆ. ಇಸ್ರೋದ ಈ ನಡೆ ಜನರ ದಿಕ್ಕು ತಪ್ಪಿಸುವಂತದ್ದು ಎನ್ನುವ ಮೂಲಕ ಈ ಚಿಂತಕರೆನಿಸಿಕೊಂಡವರು ತಮ್ಮ ನೈತಿಕತೆ ಎಷ್ಟು ಕೆಳಮಟ್ಟದ್ದು ಎನ್ನುವುದನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ಆ ಮೂಲಕ ಕೋಟ್ಯಂತರ ಭಾರತೀಯರ, ಇಸ್ರೋ‌ ಅಭಿಮಾನಿಗಳ, ದೈವ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನುವುದು ಸತ್ಯ.

ದೇವರ ಮೊರೆ ಹೋಗಿರುವ ವಿಜ್ಞಾನಿಗಳ ಶ್ರಮವನ್ನೇ ಪ್ರಶ್ನೆ ಮಾಡಿರುವ ಈ ಲದ್ದಿ ಜೀವಿಗಳು, ವಿಜ್ಞಾನಿಗಳಿಗೆ ತಮ್ಮ ಕೆಲಸ, ಶ್ರಮದ ಮೇಲೆ ನಂಬಿಕೆ ಇಲ್ಲ ಎನ್ನುವುದನ್ನು ದೇವಾಲಯ ಭೇಟಿಯ ಮೂಲಕ ಸಾಬೀತು ಮಾಡಿದ್ದಾರೆ. ಇದು ಆತ್ಮಸ್ಥೈರ್ಯ ಮತ್ತು ಸಂಶೋಧನೆಗಳ ಮೇಲಿನ ಅಪನಂಬಿಕೆಯಾಗಿದೆ. ಇದು ಖಂಡನಾರ್ಹ ಎಂದು ಲದ್ದಿ ಜೀವಿಗಳು ವಿಜ್ಞಾನಿಗಳ ಶ್ರಮವನ್ನೇ ಅವಮಾನಿಸುವ ಕೆಲಸಕ್ಕೆ ಇಳಿದಿದ್ದು ದುರಂತ. ಇನ್ನು ವಿಜ್ಞಾನಿಗಳ ದೇವಾಲಯ ಭೇಟಿಯು ಒಪ್ಪತಕ್ಕ ವಿಷಯವಲ್ಲ. ಇದು ಸಂಸ್ಥೆಯ ಸಂವಿಧಾನ ವಿರೋಧಿ ಮನಸ್ಥಿತಿಯಾಗಿದ್ದು, ಇದಕ್ಕೆ ಕಾರಣರಾದವರಿಗೆ ಸರಿಯಾದ ಸಲಹೆ ನೀಡುವುದು ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಹೆಗಾರರ ಕರ್ತವ್ಯ ಎಂಬುದಾಗಿ ದುರ್ಗತಿಪರರು ಹೇಳಿದ್ದಾರೆ.

ಈ ನಾಲಾಯಕುಗಳಿಗೆ ದೇವರ ಮೇಲೆ, ದೇಶದ ಮೇಲೆ ಗೌರವ ಇಲ್ಲದೇ ಹೋಗಿದ್ದಕ್ಕೆ, ಈ ದೇಶದ ಹೆಮ್ಮೆಯ ಸಂಸ್ಥೆ ಇಸ್ರೋ, ಹೆಮ್ಮೆಯ ವಿಜ್ಞಾನಿಗಳ ಮೇಲೆ ನಂಬಿಕೆ ಇಲ್ಲವಾಗಿರುವುದಕ್ಕೆ ಯಾರೇನೂ ಮಾಡಲಾಗದು. ಈ ದುರ್ಗತಿಪರರ ಚಿಂತನೆಗಳಿಗೆ ಬೆಂಬಲಿಸುವವರು ಇಲ್ಲದೇ ಹೋದಾಗ, ತಮ್ಮನ್ನು ತಾವು ಮುನ್ನೆಲೆಗೆ ತಂದುಕೊಳ್ಳಲು ಇಂತಹ ಹೀನ ಕೃತ್ಯಗಳಲ್ಲಿ ತೊಡಗುವವರಿಗೆ ಏನೆನ್ನುವುದು?

ಅಂದ ಹಾಗೆ ಈ ಸಾಹಿತಿಗಳೆಂಬ ಬುದ್ಧಿ ಜೀವಿಗಳಿಗೆ ಇಸ್ರೋ ಇಂದು ಎಲ್ಲಿಗೆ, ಯಾವ ಉಪಗ್ರಹವನ್ನು ಕಳಿಹಿಸುತ್ತಿದೆ ಎನ್ನುವುದರ ಅರಿವೂ ಇಲ್ಲ. ಮಂಗಳಯಾನ-೩ ಎಂದು ಈ ಚಂದ್ರಯಾನವನ್ನು ಹೇಳಿರುವ ಎಡಚರ ಸಾಹಿತಿಗಳು ಮಾಹಿತಿ ಕೊರತೆಯಿಂದ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಅವರೆಲ್ಲರಿಗೂ ಪ್ರಬುದ್ಧತೆ ಇದೆಯೇ?, ಅವರೆಲ್ಲರೂ ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿಸಿದೆ ಎನ್ನುವುದು ಸ್ಪಷ್ಟ.

Tags

Related Articles

Close