ಪ್ರಚಲಿತ

ಅಧಿಕಾರಕ್ಕೆ ಬಂದರೆ 25ನೇ ಗಂಟೆಯಲ್ಲಿ ರಾಜೀನಾಮೆ ಕೊಡ್ತೇನೆಂದ ಯಡಿಯೂರಪ್ಪ! ರಾಜ್ಯದ ಜನತೆ ಫುಲ್ ಖುಶ್..!

ರಾಜ್ಯದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷದ ಅಧಿಕಾರಕ್ಕೆ ಬರಲೇ ಬೇಕು ಎಂದು ಹಠ ಹಿಡಿದಿರುವ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಭಾರೀ ಆಶ್ವಾಸನೆಯನ್ನು ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕು, ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಹಠದಲ್ಲಿರುವ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ಕಮಲ ಅರಳಿಸಿಯೇ ಸಿದ್ದ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ.

25ನೇ ಗಂಟೆಗೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಿಎಂ..!

ನಾನು ಮುಖ್ಯಮಂತ್ರಿಯಾದರೆ 24 ಗಂಟೆಯ ಒಳಗೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇನೆ. ಒಂದು ವೇಳೆ ನಾನು ಈ ಮಾತನ್ನು ತಪ್ಪಿದರೆ 25ನೇ ಗಂಟೆಯ ಒಳಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರು ಪ್ರೆಸ್​ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಎರಡು ವರ್ಷದ ಹಿಂದೆ ಅಂಬೇಡ್ಕರ್ ಜನ್ಮದಿನದಂದು ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ, ಮೂರು ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಅದರ ಆಧಾರದಲ್ಲಿ ಅಭ್ಯರ್ಥಿ ಪಟ್ಟಿ ನೀಡಿದ್ದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೂರು ಸರ್ವೆ ಮಾಡಿದ್ದು, ನಾನು ಕೊಟ್ಟ ಅಭ್ಯರ್ಥಿಗಳ ಶೇ.95 ಭಾಗ ಹೊಂದಾಣಿಕೆ ಆದ ಕಾರಣ ಅಭ್ಯರ್ಥಿ ಆಯ್ಕೆ ಗೊಂದಲ ಆಗಲಿಲ್ಲ ಎಂದರು.

Image result for yeddyurappa

ಸಿಎಂ ಆದ ದಿನವೇ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ರೈತರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ, ಸಹಕಾರಿ ಬ್ಯಾಂಕ್ ಸಾಲ 1 ಲಕ್ಷದವರೆಗೆ ಮನ್ನಾಗೆ ವಿಸ್ತರಣೆ ಮಾಡುತ್ತೇನೆ. ಸುವರ್ಣ ಭೂಮಿ ಯೋಜನೆ ಇಪ್ಪತ್ತು ಲಕ್ಷ ರೈತರಿಗೆ ವಿಸ್ತರಣೆ ಮಾಡುತ್ತೇವೆ. ನೀರಾವರಿಗೆ 1.5 ಲಕ್ಷ ಕೋಟಿ ರೂ.ಮೀಸಲು, 2 ಲಕ್ಷ ರೂ.ವರೆಗೆ ಭಾಗ್ಯಲಕ್ಷ್ಮೀ ಯೋಜನೆ ಸವಲತ್ತು ವಿಸ್ತರಣೆ. ಸರ್ಕಾರಿ ಕಾಲೇಜು, ಶಾಲೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು, ಸ್ತ್ರೀಶಕ್ತಿ ಸ್ವಸಹಾಯ ಗುಂಪು ಬಲಪಡಿಸಲು 2 ಲಕ್ಷ ರೂ.ವರೆಗೆ ಶೇ. 3 ರ ಬಡ್ಡಿದರದ ಸಾಲ, ಬಡವರ ಮದುವೆಗೆ 25 ಸಾವಿರ ರೂ. ಹಾಗೂ ಮೂರು ಗ್ರಾಂ ಚಿನ್ನದ ತಾಳಿ ಸೌಲಭ್ಯ ಕೊಡುವ ಆಶ್ವಾಸನೆಯನ್ನು ಈಡೇರಿಸುವುದಾಗಿ ಹೇಳಿದರು.

ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದು, ಜೆಡಿಎಸ್ ಬೆಂಬಲದ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Image result for yeddyurappa pranalike

ದಲಿತ ಸಮುದಾಯಕ್ಕೆ ಅವಮಾನ ಮಾಡಿರುವುದು ಬಿಜೆಪಿಯಲ್ಲ, ಕಾಂಗ್ರೆಸ್. ಅಂಬೇಡ್ಕರ್ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ, ಅವರನ್ನೇ ಸೋಲಿಸಿದರು, ಜಗಜೀವನ್ ರಾಂ ಪ್ರಧಾನಿ ಮಾಡಲು ಅಡ್ಡಿಪಡಿಸಿದರು. ಇವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆದರೆ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಹೇಳಿಕೆ ಸರಿಯಲ್ಲ, ಅವರಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.

Image result for yeddyurappa

ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರಲು ಮುಂದಾಗಿದ್ದರು ಎಂಬ ಕುರಿತು ಪ್ರತಿಕ್ರಿಯಿಸಿ, 2006ರಲ್ಲಿ ಸಿದ್ದರಾಮಯ್ಯಗೆ ನಾವು ಆಹ್ವಾನ ನೀಡಿರಲಿಲ್ಲ. ಅವರು ಬಂದಿದ್ದರೂ ಸೇರಿಸುತ್ತಿರಲಿಲ್ಲ. ಅದರ ಬಗ್ಗೆ ನಾನು ಹೇಳಿಲ್ಲ, ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದರು.

ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯಲ್ಲಿ ಸಾಲಮನ್ನಾ ಯೋಜನೆಯನ್ನು ಹೇಳಿಕೊಂಡಿತ್ತು. ಆದರೆ ಅದು ಅಷ್ಟೊಂದು ವೇಗ ಪಡೆದುಕೊಳ್ಳುತ್ತೆ ಅಂತ ಸ್ವತಃ ಭಾರತೀಯ ಜನತಾ ಪಕ್ಷದ ನಾಯಕರಿಗೂ ಗೊತ್ತಿರಲಿಲ್ಲ. ಇದೀಗ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ಈ ಬಗ್ಗೆ ಅತ್ಯಂತ ಮಹತ್ವದ ಭರವಸೆಯನ್ನು ನೀಡಿದ್ದು ಈ ಬಾರಿ ಏನೇ ಆದರೂ ಬಿಜೆಪಿ ಗೆಲ್ಲಿಸೋದೇ ನಮ್ಮ ಗುರಿ ಎಂದಿದ್ದಾರೆ.

ಒಟ್ಟಾರೆ ಈ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆದುಕೊಂಡು ಅಧಿಕಾರದ ಗದ್ದುಗೆಯಲ್ಲಿ ಕೂರಲೇಬೇಕು ಎಂದು ಪಣತೊಟ್ಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂತಹಾ ಒಂದು ಮಹತ್ವದ ಭರವಸೆಗಳನ್ನು ನೀಡಿದ್ದು ರಾಜ್ಯದ ರೈತರಿಗೆ ಫುಲ್ ಖುಷ್ ಆಗಿದೆ. ಈ ಎಲ್ಲಾ ಬೆಳವಣಿಗಳನ್ನು ಗಮನಿಸುವಾಗ ಈ ಬಾರಿ ರಾಜ್ಯದಲ್ಲಿ ಕಮಲ ಅರಳುವುದು ನಿಶ್ಚಿತ ಎಂಬಂತೆ ಭಾಸವಾಗುತ್ತದೆ.

source: vijayavani

-ಸುನಿಲ್ ಪಣಪಿಲ

Tags

Related Articles

Close