ಪ್ರಚಲಿತ

ಜನಧನ್ ಯೋಜನೆಗೆ ಹರಿದು ಬಂದ ಮೊತ್ತವೆಷ್ಟು ಗೊತ್ತಾ?! ಯಶಸ್ವಿಯಾಯಿತಾ ಮೋದಿಯ ಮಹತ್ವಾಕಾಂಕ್ಷಿ ಯೋಜನೆ!!

ಪ್ರಧಾನಿ ನರೇಂದ್ರ ಮೋದಿ ಸರಕಾರವು ಈಗಾಗಲೇ ಬಡ ಜನತೆಗಾಗಿ ಹಲವಾರು ಯೋಜನೆಗಳನ್ನು ತಂದಿದೆ.. ಅದರಲ್ಲಿ ಪ್ರಧಾನ ಮಂತ್ರಿ ಜನ ಧನ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ!! ಈ ಯೋಜನೆಯು ಜಾರಿಗೊಳಿಸಿರುವುದರಿಂದ ಹಣಕಾಸಿನ ಸೇವೆಗಳನ್ನು ಪಡೆಯಲು ಜನರಿಗೆ ಅತ್ಯಂತ ಸುಲಭಕರವಾಗಿದೆ!! ಗ್ರಾಮೀಣ ಮತ್ತು ಮಧ್ಯಮ ವರ್ಗದವರಿಗೆ ಇದು ವರದಾನವಾಗಿ ಕಾದಿದೆ!! ಈ ಯೋಜನೆಯಿಂದ ದೇಶದ ಕೋಟ್ಯಾಂತರ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ!! ಜನಧನ್ ಯೋಜನೆಯು ಯಾವ ರೀತಿ ಉಪಯೋಗವಾಗಿದೆ ಎಂದು ಹೇಳುವುದಕ್ಕೆ ಸಾಕ್ಷಿಯಾಗಿ 80,000 ಕೋಟಿ ಬ್ಯಾಂಕ್ ಬಾಲೆನ್ಸ್ ಹೊಂದಿದೆ!!

Data given on PMJDY official website, it is known, a total of 31.45 crore beneficiaries banked so far Rs 80,545.70 crore balance in Jan Dhan Account as on April 11, 2018. There are 1.26 lakh bank mitras delivering branchless banking services in sub-service areas.

ಪ್ರಧಾನ ಮಂತ್ರಿ ಜನಧನ್ ಯೋಜನೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ 31.45 ಕೋಟಿ ಫಲಾನುಭಿಗಳಿದ್ದು ಜನವರಿ 11, 2018ರವರೆಗೆ ಜನಧನ್ ಖಾತೆಯಲ್ಲಿ 80,545.70 ಕೋಟಿ ಹಣ ಹೂಡಿಕೆಯಾಗಿದೆ!! 1.26 ಶಾಖೆ ರಹಿತ ಬ್ಯಾಂಕ್‍ಗಳು ಸೇವೆಯನ್ನು ಒದಗಿಸುತ್ತದೆ!!

Image result for 80000 crore deposited in Jan dhan

ಯಾವಾಗ ನೋಟು ಅಪನಗಧೀಕರಣವಾಯಿತೋ ಇಡೀ ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆದರೂ ಜನರು ಮಾತ್ರ ಅದನ್ನು ಸ್ವಾಗಾತರ್ಹವಗಿ ಒಪ್ಪಿಕೊಂಡರು!! ಈ ನೋಟು ಅಪನಧೀಕರಣ ಜಾರಿಯಾದ ನಂತರ ಈ ಜನಧನ್ ಯೋಜನೆಯ ಮೂಲಕ ಬ್ಯಾಂಕ್‍ನಲ್ಲಿ ಅತೀ ಹೆಚ್ಚಿನ ಹಣ ಹೂಡಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ!!

ಜನಧನ ಯೋಜನೆ ಎಂದರೇನು?

ಯಾವುದೇ ಕನಿಷ್ಠ ಮೊತ್ತವಿಲ್ಲದೇ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬಹುದು. ಖಾತೆ ತೆರೆಯಲು ಯಾವುದೇ ಶುಲ್ಕವೂ ಇರುವುದಿಲ್ಲ. ಪ್ರತಿಯೊಬ್ಬರೂ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದು. ಬಡವರು ಲೇವಾದೇವಿ ಗಾರರಿಂದ ಸಾಲ ಪಡೆದು ಹೆಚ್ಚು ಬಡ್ಡಿ ನೀಡಿ ಬಡತನದಲ್ಲೇ ಬಳಲುವುದರಿಂದ, ಅಧಿಕ ಬಡ್ಡಿ ಸಾಲದ ಕೂಪದಿಂದ ಸುಲಭದಲ್ಲಿ ಬಿಡುಗಡೆ ಪಡೆ ಯಬಹುದು. ಮನೆಯಲ್ಲಿ ಅಸುರಕ್ಷಿತವಾಗಿ ಹಣ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಸುರಕ್ಷಿತವಾಗಿ ಬ್ಯಾಂಕ್‍ನಲ್ಲಿ ಇಡಬಹುದು. ಇಟ್ಟ ಹಣಕ್ಕೆ ಬಡ್ಡಿಯನ್ನೂ ಪಡೆಯಬಹುದು.

ಅನಕ್ಷರಸ್ಥರಿಗೆ ರೂಪೇ ಡೆಬಿಟ್ ಕಾರ್ಡ್ ವ್ಯವಹಾರ ಕಠಿಣವಾಗಿರುವುದರಿಂದ ಅದನ್ನು ನೀಡುವಾಗ ಅದರ ಸುರಕ್ಷತೆ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಮಾರ್ಗ ದರ್ಶನ ನೀಡುತ್ತಾರೆ. ಜನಧನ ಯೋಜನೆಯಲ್ಲಿ ಜಂಟಿ ಖಾತೆ ಸಹ ತೆರೆಯಬಹುದು. ಯಾವುದೇ ಶಾಖೆಯಲ್ಲಾದರೂ ಖಾತೆ ತೆರೆಯಬಹುದು. ಬ್ಯಾಂಕ್‍ನ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ದೇಶದ ಯಾವ ಬ್ಯಾಂಕ್ ಶಾಖೆಯ ಖಾತೆಗಾದರೂ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.10 ವರ್ಷ ಮೇಲ್ಪಟ್ಟ ವಯಸ್ಸಿನವರು ಜನಧನ ಯೋಜನೆ ಖಾತೆ ತೆರೆಯಬಹುದು.

ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಇರುವವರು ಹೊಸದಾತಿ ಜನಧನ ಖಾತೆ ತೆರೆ ಯವ ಅವಶ್ಯಕತೆ ಇರುವುದಿಲ್ಲ. ಇರುವ ಖಾತೆಗೆ ರೂಪೇ ಕಾರ್ಡ್, ವಿಮಾ ಸೌಲಭ್ಯ ವಿಸ್ತರಿಸಲಾಗು ತ್ತದೆ. ಅವರ ಬ್ಯಾಂಕ್ ವ್ಯವಹಾರ ತೃಪ್ತಿಕರವಾಗಿ ದ್ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಜನಧನ ಖಾತೆಗೆ ಚೆಕ್ ಸೌಲಭ್ಯ ಪಡೆಯಬಹುದು. ಆದರೆ ಖಾತೆಯಲ್ಲಿ ಕನಿಷ್ಠ ಮೊತ್ತ ಇರು ವಂತೆ ನೋಡಿಕೊಳ್ಳಬೇಕು. ಈ ಉಳಿತಾಯ ಖಾತೆ ಯಲ್ಲಿ ಇಡುವ ಹಣಕ್ಕೆ ವಾರ್ಷಿಕ ಶೇ 4ರ ಬಡ್ಡಿ ನೀಡಲಾಗುತ್ತದೆ. ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇ 12ರಷ್ಟು ಬಡ್ಡಿ ವಿಧಿಸಲಾಗುತ್ತದೆ.

Image result for jan dhan yojana

ಜನಧನ ಖಾತೆ ತೆರೆಯಲು ತೆರೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಬೇರಾವ ದಾಖಲೆಗಳ ಅವಶ್ಯಕತೆ ಇಲ್ಲ. ವಿಳಾಸ ಬದಲಾಗಿದ್ದಲ್ಲಿ ಸ್ವದೃಢೀಕರಣ ಸಾಕು. ಆಧಾರ್ ಕಾರ್ಡ್ ಇಲ್ಲದಿದ್ದರೆ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೆÇೀರ್ಟ್ ಆಗಬಹುದು. ಇವ್ಯಾ ವುವೂ ಇಲ್ಲದಿದ್ದರೆ ಸರ್ಕಾರ/ಸರ್ಕಾರಿ ಸಂಸ್ಥೆ ವಿತರಿಸಿದ ಗುರುತಿನ ಚೀಟಿ/ ಪೆÇೀಟೋ ಸಹಿತ ಪತ್ರಕ್ಕಾದರೆ ಗೆಜೆಟೆಡ್ ಅಧಿಕಾರಿ ದೃಢೀಕರಣ ಇರಬೇಕು.

ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿ. ಬ್ಯಾಂಕ್ ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಕಲ್ಪಿಸುವುದು ಯೋಜನೆಯ ಉದ್ದೇಶ. ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ ವಿಮೆ ಎಲ್ಲರಿಗೂ ಲಭ್ಯವಾಗುತ್ತದೆ. ರುಪೆ ಕಾರ್ಡ್ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಲಿದೆ. ಯೋಜನೆ ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಡೊಮೆಸ್ಟಿಕ್ ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು.

Image result for modi

ನರೇದ್ರ ಮೋದಿ ಕಲ್ಪನೆಯ ಡಿಜಿಟಲ್ ಭಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಯೋಜನೆ ಅಡಿಪಾಯ ಹಾಕಲಿದೆ.  ಅಪಘಾತ ವಿಮೆ, ಡೆಬಿಟ್ ಕಾರ್ಡ್ ನಿಂದ ಹಿಡಿದು ಅಪಘಾತ ವಿಮೆವರೆಗಿನ ಎಲ್ಲ ಬಗೆಯ ಬ್ಯಾಂಕಿಂಗ್ ಕ್ಷೇತ್ರದ ಮೂಲ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ. ಆಧಾರ್ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಓವರ್ ಡ್ರಾಪ್ಟ್ ಸೌಲಭ್ಯ ಕಲ್ಪಿಸಲಾಗುವುದು.

ಆರ್ಥಿಕ ಅಭಿವೃದ್ಧಿಯಲ್ಲಿ  ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಜನಧನ ಯೋಜನೆ ಪ್ರಮುಖ ಪಾತ್ರ ನಿರ್ವಹಿಸಲಿದೆ. ದೇಶದ ಬಡ ಮತ್ತು ಅತಿ ಬಡ ವರ್ಗದವರಿಗೆ ಜನಧನ ಯೋಜನೆ ಮುಖಾಂತರ ಬ್ಯಾಂಕ್ ಖಾತೆ ಹೊಂದಲು ಅವಕಾಶವಿದೆ. ದೇಶದ ಕೋಟ್ಯಂತರ ಕುಟುಂಬಗಳು ಮೊಬೈಲ್ ಹೊಂದಿವೆ. ಆದರೆ ಬ್ಯಾಂಕ್ ಖಾತೆ ಹೊಂದಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಗಾಗಿ ಇಂತಹ ಪರಿಸ್ಥಿತಿಯ ಬದಲಾವಣೆ ಮಾಡಬೇಕಾಗಿದೆ ಎಂದು ಮೋದಿ ಇಂತಹ ಯೋಜನೆಗಳನ್ನು ತರುವ ಮೂಲಕ ಕೋಟ್ಯಾಂತರ ಜನರಿಗೆ ಉಯೋಗಯೋಗವನ್ನು ಕಲ್ಪಿಸಿದ್ದಾರೆ!!

source: http://www.zeebiz.com/personal-finance/news-deposits-in-jan-dhan-account-clocks-rs-80000-crore-mark-heres-a-list-of-special-benefits-the-scheme-offers-43847

ಪವಿತ್ರ

Tags

Related Articles

Close