ಪ್ರಚಲಿತ

ಉದಯ ನಿಧಿಗೆ ಸಿಎಂ ಯೋಗಿ ಆದಿತ್ಯನಾಥ್ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?

ಕೆಲ ದಿನಗಳ ಹಿಂದಷ್ಟೇ ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಪುತ್ರ ಉದಯ ನಿಧಿ ನೀಡಿದ್ದ ಅವಹೇಳನಕಾರಿ ಹೇಳಿಕೆ ವಿವಾದ ಸೃಷ್ಟಿಸಿತ್ತು. ದೇಶದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಚರ್ಚೆ, ಉದಯ ನಿಧಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಸಹ ವ್ಯಕ್ತವಾಗಿತ್ತು.

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯ ನಿಧಿ, ಅದರ ನಾಶವಾದಲ್ಲಿ ‌ಮಾತ್ರ ಅಸ್ಪೃಶ್ಯತೆ ತೊಲಗುತ್ತದೆ ಎಂದು ಹೇಳಿದ್ದರು. ಜೊತೆಗೆ ಡಿಎಂಕೆ ಪಕ್ಷ ಸನಾತನ ಹಿಂದೂ ಧರ್ಮವನ್ನು ನಾಶ ಮಾಡುವುದಕ್ಕಾಗಿಯೇ ಕಟ್ಟಿದ ಪಕ್ಷ ಎನ್ನುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಶಾಂತಿ‌ ಸೃಷ್ಟಿಸಿ, ಸನಾತನಿಗಳ ಕೆಂಗಣ್ಣಿಗೆ ತುತ್ತಾಗಿದ್ದರು. ಈ ವಿಚಾರ ಎಲ್ಲರಿಗೂ ತಿಳಿದದ್ದೇ.

ಇನ್ನು ಈ ಮತಾಂಧನ ಹೇಳಿಕೆಯನ್ನು ಬೆಂಬಲಿಸಿ ಡಿಎಂಕೆ‌ಯ ಮತ್ತೊಬ್ಬ ನಾಯಕ ಎ. ರಾಜಾ, ಸನಾತನ ಧರ್ಮವನ್ನು ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಮಾರಕ ಎಂದು ಹೇಳಿದ್ದರು. ಅಲ್ಲದೆ ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಟ ರೋಗಕ್ಕೂ ಹೋಲಿಸುವ ಮೂಲಕ ಸನಾತನಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಜಾತಿ ಆಧಾರದಲ್ಲಿ ಜನರನ್ನು ವಿಭಜಿಸುವ ಕೆಲಸವಾಗುತ್ತಿದೆ. ಜಾತಿಗಳ ಹೆಸರಿನಲ್ಲಿ ಜಾಗತಿಕ ರೋಗಕ್ಕೆ ಭಾರತವೇ ಕಾರಣ. ವಿದೇಶಗಳಲ್ಲಿ ವಾಸಿಸುವ ಭಾರತೀಯರು ಸಹ ಜಾತಿ ಹೆಸರಿನಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಇಡೀ ವಿಶ್ವಕ್ಕೆ ಹಿಂದೂ ಧರ್ಮ ಅಪಾಯಕಾರಿಯಾಗಿದೆ ಎಂದು ರಾಜಾ ನಾಲಿಗೆ ಹರಿಯ ಬಿಟ್ಟಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.

ಉದಯ ನಿಧಿ ಎಂಬ ಅಪ್ರಬುದ್ದನ ಹೇಳಿಕೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ತಿರುಗೇಟು ನೀಡಿದ್ದಾರೆ.‌ಸನಾತನ ಧರ್ಮವೊಂದೇ ಧರ್ಮ. ಉಳಿದೆಲ್ಲವೂ ಪಂಥಗಳು ಅಥವಾ ಪೂಜಾ ವಿಧಾನಗಳು ಎನ್ನುವ ಮೂಲಕ ಉದಯ ನಿಧಿ ಸ್ಟ್ಯಾಲಿನ್‌ಗೆ ಟಾಂಗ್ ನೀಡಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ‘ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸನಾತನ ಧರ್ಮವೊಂದೇ ಧರ್ಮ. ಧರ್ಮದ ಹೆಸರು ಹೇಳಿಕೊಳ್ಳುತ್ತಿರುವ ಉಳಿದೆಲ್ಲವೂ ಪಂಗಡಗಳು ಅಥವಾ ಆರಾಧನಾ ವಿಧಾನಗಳಾಗಿವೆ. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಧರ್ಮದ ಮೇಲೆ ದಾಳಿ‌ ನಡೆಸಿದರೆ, ಜಗತ್ತಿನಾದ್ಯಂತ ಮಾನವೀಯತೆಯ ಬಿಕ್ಕಟ್ಟು ಬಂದೊದಗುವುದಾಗಿಯೂ ಅವರು ಎಚ್ಚರಿಸಿದ್ದಾರೆ.

Tags

Related Articles

Close